ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿ: ಇನ್ನೂ ಅಂಗೀಕರಿಸದ ಡೊನಾಲ್ಡ್ ಟ್ರಂಪ್

US-Iran Ceasefire Agreement: ಅಮೆರಿಕ ಮತ್ತು ಇರಾನ್ 60 ದಿನಗಳ ಕದನ ವಿರಾಮ ವಿಸ್ತರಣೆ ಒಪ್ಪಂದಕ್ಕೆ ಒಪ್ಪಿಕೊಂಡಿವೆ. ಆದರೆ ಈ ಒಪ್ಪಂದದ ಮನವಿಪತ್ರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಅಂಗೀಕರಿಸಿಲ್ಲ. ಒಪ್ಪಂದಕ್ಕೆ ಎರಡೂ ದೇಶಗಳು ಸಮ್ಮತಿ ಸೂಚಿಸಿವೆ ಎಂದು ಹೇಳಲಾಗಿದೆ. ಆದರೆ ಇನ್ನೂ ಅನುಮೋದನೆ ಸಿಗಬೇಕಾಗಿದೆ.

ಕದನ ವಿರಾಮ ಒಪ್ಪಂದ: ಇನ್ನೂ ಅಂಗೀಕರಿಸದ ಡೊನಾಲ್ಡ್ ಟ್ರಂಪ್

ಸಾಂದರ್ಭಿಕ ಚಿತ್ರ -

Priyanka P
Priyanka P May 29, 2026 1:18 PM

ವಾಷಿಂಗ್ಟನ್, ಮೇ 29: ಅಮೆರಿಕ ಮತ್ತು ಇರಾನ್ 60 ದಿನಗಳ ಕದನ ವಿರಾಮ ವಿಸ್ತರಣೆ ಒಪ್ಪಂದಕ್ಕೆ ಒಪ್ಪಿಕೊಂಡಿವೆ. ಆದರೆ ಈ ಒಪ್ಪಂದದ ಮನವಿಪತ್ರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಇನ್ನೂ ಅಂಗೀಕರಿಸಿಲ್ಲ. ಕದನ ವಿರಾಮವನ್ನು ವಿಸ್ತರಿಸುವ ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳನ್ನು ಪ್ರಾರಂಭಿಸುವ ಬಗ್ಗೆ ಎರಡೂ ರಾಷ್ಟ್ರಗಳು ಒಪ್ಪಂದಕ್ಕೆ ಬಂದಿವೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಇರಾನ್ (Iran) ಕೂಡ ಈ ಒಪ್ಪಂದಕ್ಕೆ ಇನ್ನೂ ಒಪ್ಪಿಗೆ ಸೂಚಿಸಿಲ್ಲ.

ಮಂಗಳವಾರ (ಮೇ 26) ರ ವೇಳೆಗೆ ಒಪ್ಪಂದ ಬಹುತೇಕ ಅಂತಿಮಗೊಂಡಿದ್ದರೂ, ಅದಕ್ಕೆ ಎರಡೂ ಪಕ್ಷಗಳ ಉನ್ನತ ನಾಯಕತ್ವದ ಅನುಮೋದನೆ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಪ್ಪಂದಕ್ಕೆ ಎರಡೂ ದೇಶಗಳು ಸಮ್ಮತಿ ಸೂಚಿಸಿವೆ ಎಂದು ಹೇಳಲಾಗಿದೆ. ಆದರೆ ಇನ್ನೂ ಅನುಮೋದನೆ ಸಿಗಬೇಕಾಗಿದೆ. ಒಪ್ಪಂದದ ಬಗ್ಗೆ ವಿವರಗಳ ಬಗ್ಗೆ ಟ್ರಂಪ್‌ಗೆ ತಿಳಿಸಲಾಗಿದ್ದರೂ, ಅವರು ತಕ್ಷಣ ಅದಕ್ಕೆ ಸಹಿ ಹಾಕಲಿಲ್ಲ. ಇದರ ಬಗ್ಗೆ ಒಂದೆರಡು ದಿನ ಯೋಚಿಸುವುದಾಗಿ ಹೇಳಿದ್ದಾರೆ.

ಒಪ್ಪಂದದಲ್ಲಿ ಏನಿದೆ?

60 ದಿನಗಳ ಒಪ್ಪಂದದಲ್ಲಿ ಹೊರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಅಂಶವೂ ಸೇರಿದೆ. ಈ ಪ್ರಮುಖ ಜಲಮಾರ್ಗದ ಮೂಲಕ ಸಾಗುವ ಹಡಗುಗಳಿಂದ ಇಸ್ಲಾಮಿಕ್ ರಿಪಬ್ಲಿಕ್ ಯಾವುದೇ ಟೋಲ್ ಶುಲ್ಕ ವಿಧಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಜಲಸಂಧಿಯಲ್ಲಿ ಯಾವುದೇ ಉದ್ವಿಗ್ನ ಪರಿಸ್ಥಿತಿ ಇರುವುದಿಲ್ಲ. ಹಾಗೆಯೇ 30 ದಿನಗಳೊಳಗೆ ಜಲಮಾರ್ಗದಲ್ಲಿರುವ ಎಲ್ಲಾ ಮೈನ್‌ಗಳನ್ನು ತೆರವುಗೊಳಿಸುವ ಜವಾಬ್ದಾರಿಯೂ ಇರಾನ್ ಮೇಲೆ ಇರಲಿದೆ.

ಕುತೂಹಲ ಕೆರಳಿಸಿದ ಡೊನಾಲ್ಡ್‌ ಟ್ರಂಪ್ ಹಂಚಿಕೊಂಡ ಅಮೆರಿಕ ಧ್ವಜವಿರುವ ಗಲ್ಫ್ ನಕ್ಷೆ: ಮಧ್ಯಪ್ರಾಚ್ಯದಲ್ಲಿ ಹೆಚ್ಚಾಯ್ತು ಯುದ್ಧದ ಭೀತಿ

ಹೊರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳ ಸಂಚಾರ ಎಷ್ಟು ಮಟ್ಟಿಗೆ ಮತ್ತೆ ಪುನರಾಂರಭವಾಗುತ್ತದೆಯೋ, ಅದಕ್ಕೆ ಅನುಗುಣವಾಗಿ ಅಮೆರಿಕ ತನ್ನ ನೌಕಾ ನಿರ್ಬಂಧವನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳಲಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಪ್ಪಂದದ ಮತ್ತೊಂದು ಪ್ರಮುಖ ಅಂಶವೆಂದರೆ ನಿರ್ಬಂಧಗಳು. ಇರಾನ್‌ಗೆ ತೈಲವನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕೆಲವು ನಿರ್ಬಂಧ ವಿನಾಯಿತಿಗಳನ್ನು ನೀಡಲು ಅಮೆರಿಕ ಸಿದ್ಧವಾಗಿದೆ.

ವರದಿ ಪ್ರಕಾರ, ಈ ಒಪ್ಪಂದದಲ್ಲಿ ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸದಿರಲು ಬದ್ಧವಾಗಿರುವ ಅಂಶವೂ ಸೇರಿದೆ. 60 ದಿನಗಳ ಕದನ ವಿರಾಮ ಅವಧಿಯಲ್ಲಿ, ಇರಾನ್ ಹೊಂದಿರುವ ಹೆಚ್ಚಿನ ಮಟ್ಟ ಸಂವರ್ಧಿತ ಯುರೇನಿಯಂ ಅನ್ನು ಹೇಗೆ ವಿಲೇವಾರಿ ಮಾಡುವುದು ಹಾಗೂ ಯುರೇನಿಯಂ ಸಂವರ್ಧನೆಗೆ ಸಂಬಂಧಿಸಿದ ಮುಂದಿನ ಕ್ರಮಗಳ ಬಗ್ಗೆ ಎರಡೂ ದೇಶಗಳು ಮಾತುಕತೆ ನಡೆಸಲಿವೆ.

ಅಮೆರಿಕ ಮತ್ತು ಇರಾನ್ ಪರಸ್ಪರ ಗುಂಡಿನ ದಾಳಿ ನಡೆಸುತ್ತಿದೆ. ಜೊತೆಗೆ ಕದನ ವಿರಾಮ ಉಲ್ಲಂಘನೆಯ ಆರೋಪಗಳನ್ನು ಸಹ ಮಾಡುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿ ಈಗಾಗಲೇ ಮೂರು ತಿಂಗಳು ಕಳೆದಿವೆ.

ಅಮೆರಿಕ ವಾಯುನೆಲೆ ಮೇಲೆ ಇರಾನ್ ಭೀಕರ ಪ್ರತಿಪ್ರಹಾರ

ದಕ್ಷಿಣ ಇರಾನ್‌ನಲ್ಲಿ ಅಮೆರಿಕ ಸೈನಿಕರು ನಡೆಸಿದ ವಾಯುದಾಳಿಗೆ ಪ್ರತೀಕಾರವಾಗಿ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಗುರುವಾರ (ಮೇ 28) ಅಮೆರಿಕದ ಪ್ರಮುಖ ವಾಯುನೆಲೆಯೊಂದರ ಮೇಲೆ ಭೀಕರ ದಾಳಿ ನಡೆಸಿರುವುದಾಗಿ ಹೇಳಿತ್ತು.. ಇರಾನ್‌ನ ಸರ್ಕಾರಿ ಮಾಧ್ಯಮವಾದ ಐಆರ್‌ಐಬಿ (IRIB) ಈ ಪ್ರಮುಖ ಬೆಳವಣಿಗೆಯನ್ನು ಖಚಿತಪಡಿಸಿತ್ತು.

ಬಂದರ್ ಅಬ್ಬಾಸ್ ವಿಮಾನ ನಿಲ್ದಾಣದ ಹೊರವಲಯದಲ್ಲಿ ಅಮೆರಿಕ ಮಿಲಿಟರಿ ನಡೆಸಿದ ಆಕ್ರಮಣಕ್ಕೆ ಪ್ರತಿಯಾಗಿ, ಈ ದಾಳಿಗೆ ಮೂಲವಾಗಿದ್ದ ಅಮೆರಿಕದ ವಾಯುನೆಲೆಯನ್ನು ಮುಂಜಾನೆ 4:50 ಕ್ಕೆ ಸರಿಯಾಗಿ ಗುರಿಪಡಿಸಿ ಧ್ವಂಸಗೊಳಿಸಲಾಗಿದೆ ಎಂದು ಇರಾನ್ ಸೇನೆ ತಿಳಿಸಿತ್ತು.