ಮತ್ತೆ ಹಾರ್ಮೊಜ್ ಬಂದ್ ಮಾಡಿದ ಇರಾನ್; ಅಮೆರಿಕದಿಂದ ಮೂರನೇ ಬಾರಿಗೆ ಕ್ಷಿಪಣಿ ದಾಳಿ
ಇರಾನ್ ಮತ್ತು ಅಮೆರಿಕಾದ ಮಧ್ಯೆ ಮತ್ತೆ ಸಂಘರ್ಷ ಏರ್ಪಟ್ಟಿದೆ. ಶಾಂತಿ ಒಪ್ಪಂದದ ಬಳಿಕ ಕೆಲ ಕಾಲ ತಟಸ್ಥವಾಗಿದ್ದ ಉಭಯ ದೇಶಗಳು ಮತ್ತೆ ದಾಳಿಯನ್ನು ಪ್ರಾರಂಭಿಸಿವೆ. ಹಾರ್ಮೊಜ್ ಜಲಸಂಧಿಯ ಮೂಲಕ ಹಾದುಹೋಗುವ ಸೈಪ್ರಸ್ ಧ್ವಜ ಹೊಂದಿರುವ ಕಂಟೇನರ್ ಹಡಗಿನ ಮೇಲೆ ದಾಳಿ ಮಾಡಿದ ನಂತರ ಅಮೆರಿಕ ಮತ್ತೆ ಇರಾನ್ ಮೇಲೆ ದಾಳಿ ಮಾಡಿದೆ.
ಸಂಗ್ರಹ ಚಿತ್ರ -
ಟೆಹರಾನ್: ಇರಾನ್ ಮತ್ತು ಅಮೆರಿಕಾದ (Iran- America) ಮಧ್ಯೆ ಮತ್ತೆ ಸಂಘರ್ಷ ಏರ್ಪಟ್ಟಿದೆ. ಶಾಂತಿ ಒಪ್ಪಂದದ ಬಳಿಕ ಕೆಲ ಕಾಲ ತಟಸ್ಥವಾಗಿದ್ದ ಉಭಯ ದೇಶಗಳು ಮತ್ತೆ ದಾಳಿಯನ್ನು ಪ್ರಾರಂಭಿಸಿವೆ. ಹಾರ್ಮೊಜ್ ಜಲಸಂಧಿಯ (Strait of Hormuz) ಮೂಲಕ ಹಾದುಹೋಗುವ ಸೈಪ್ರಸ್ ಧ್ವಜ ಹೊಂದಿರುವ ಕಂಟೇನರ್ ಹಡಗಿನ ಮೇಲೆ ದಾಳಿ ಮಾಡಿದ ನಂತರ ಅಮೆರಿಕ ಮತ್ತೆ ಇರಾನ್ ಮೇಲೆ ದಾಳಿ ಮಾಡಿದೆ. ಇದರಿಂದ ಇರಾನ್ ಹಾರ್ಮೊಜ್ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದೆ.
ಅಮೆರಿಕದ ಇತ್ತೀಚಿನ ಮಿಲಿಟರಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಇರಾನಿನ ಮಾಧ್ಯಮಗಳು ಬಂದರ್ ಅಬ್ಬಾಸ್, ಸಿರಿಕ್ ಮತ್ತು ಚಬಹಾರ್‌ನಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ವರದಿ ಮಾಡಿದೆ. ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಪ್ರಕಾರ, ವಾಷಿಂಗ್ಟನ್ ಕಾಲಮಾನ ಸಂಜೆ 7.15 ಕ್ಕೆ (2315 GMT) ದಾಳಿಗಳು ಪ್ರಾರಂಭವಾದವು. ಟೆಹ್ರಾನ್‌ನ ವಾಣಿಜ್ಯ ಹಡಗು ಘಟನೆಯ ನಂತರ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೊಮ್ಮೆ ಮುಚ್ಚಿದೆ ಎಂದು ಘೋಷಿಸಿದ್ದು, ಶನಿವಾರ ತಡರಾತ್ರಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿದೆ. ಕೆಲವು ಗಂಟೆಗಳಲ್ಲಿ ಅಮೆರಿಕವು ಇರಾನ್ ಮೇಲೆ ಮೂರನೇ ಸುತ್ತಿನ ಮಿಲಿಟರಿ ದಾಳಿ ಪ್ರಾರಂಭಿಸಿದೆ.
ಅಮೆರಿಕದ ಕೇಂದ್ರೀಯ ಕಮಾಂಡ್ (CENTCOM) ತನ್ನ ಪಡೆಗಳು ಇರಾನ್‌ನ ಗುರಿಗಳ ಮೇಲೆ ಮೂರನೇ ಸುತ್ತಿನ ದಾಳಿ ಆರಂಭಿಸಿವೆ ಎಂದು ತಿಳಿಸಿತು. ‘ನಾಗರಿಕ ನಾವಿಕರು ಮತ್ತು ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಿರಂತರ ದಾಳಿ ಮಾಡುವ ಸಾಮರ್ಥ್ಯವನ್ನು ಕುಗ್ಗಿಸುತ್ತಿದ್ದೇವೆ’ ಎಂದು ಅಮೆರಿಕ ಸೇನೆ ಹೇಳಿದೆ. ಈ ದಾಳಿಯಲ್ಲಿ ಸೈಪ್ರಸ್ ಧ್ವಜ ಹೊತ್ತ ಕಂಟೇನರ್ ಹಡಗಿನ ಎಂಜಿನ್ ಕೋಣೆಗೆ ಗಮನಾರ್ಹ ಹಾನಿಯಾಗಿದೆ ಮತ್ತು ಒಬ್ಬ ನಾಗರಿಕ ಸಿಬ್ಬಂದಿ ನಾಪತ್ತೆಯಾಗಿದ್ದಾನೆ ಎಂದು ಅಮೆರಿಕ ತಿಳಿಸಿದೆ.
ಇರಾನ್-ಇಸ್ರೇಲ್ ಯುದ್ಧ: ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್ ದಾಳಿ
ಇರಾನ್ ಮತ್ತು ಅಮೆರಿಕಾದ ಮಧ್ಯೆ ಮತ್ತೆ ಸಂಘರ್ಷ ಏರ್ಪಟ್ಟಿದೆ. ಶಾಂತಿ ಒಪ್ಪಂದದ ಬಳಿಕ ಕೆಲ ಕಾಲ ತಟಸ್ಥವಾಗಿದ್ದ ಉಭಯ ದೇಶಗಳು ಮತ್ತೆ ದಾಳಿಯನ್ನು ಪ್ರಾರಂಭಿಸಿವೆ. ಹಾರ್ಮೊಜ್ ಜಲಸಂಧಿಯ ಮೂಲಕ ಹಾದುಹೋಗುವ ಸೈಪ್ರಸ್ ಧ್ವಜ ಹೊಂದಿರುವ ಕಂಟೇನರ್ ಹಡಗಿನ ಮೇಲೆ ದಾಳಿ ಮಾಡಿದ ನಂತರ ಅಮೆರಿಕ ಮತ್ತೆ ಇರಾನ್ ಮೇಲೆ ದಾಳಿ ಮಾಡಿದೆ. ಇದರಿಂದ ಇರಾನ್ ಹಾರ್ಮೊಜ್ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದೆ.