Donald Trump: ಉಕ್ರೇನ್‌ಗೆ ಶಾಕ್ ಕೊಟ್ಟ ಟ್ರಂಪ್; ಅಮೆರಿಕದಿಂದ ಮಿಲಿಟರಿ ನೆರವು ಸ್ಥಗಿತ
ಉಕ್ರೇನ್‌ಗೆ ನೀಡಲಾಗುವ ಎಲ್ಲಾ ಮಿಲಿಟರಿ ನೆರವನ್ನು ಸ್ಥಗಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಆದೇಶಿಸಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯೊಂದಿಗಿನ ಓವಲ್ ಕಚೇರಿಯಲ್ಲಿ ನಡೆದ ಜಟಾಪಟಿಯ ನಂತರ ಟ್ರಂಪ್ ಈ ಆದೇಶವನ್ನು ಹೊರಡಿಸಿದ್ದಾರೆ.

ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಉಕ್ರೇನ್‌ಗೆ ನೀಡಲಾಗುವ ಎಲ್ಲಾ ಮಿಲಿಟರಿ ನೆರವನ್ನು ಸ್ಥಗಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೋಮವಾರ ಆದೇಶಿಸಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯೊಂದಿಗಿನ (Volodymyr Zelenskyy) ಓವಲ್ ಕಚೇರಿಯಲ್ಲಿ ನಡೆದ ಜಟಾಪಟಿಯ ನಂತರ ಟ್ರಂಪ್ ಈ ಆದೇಶವನ್ನು ಹೊರಡಿಸಿದ್ದಾರೆ. ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಒಪ್ಪಿಕೊಳ್ಳಲು ಉಕ್ರೇನ್ ಮೇಲೆ ಒತ್ತಡ ಹಾಕುತ್ತಿರುವ ಟ್ರಂಪ್ ಅವರ ಈ ನಡೆಯನ್ನು ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ವಿರೋಧಿಸಿದ್ದಾರೆ. ಅಮೆರಿಕದ ಈ ನಿರ್ಧಾರವು ಉಕ್ರೇನ್‌ಗೆ ಸಂಕಷ್ಟ ತಂದೊಡ್ಡಿದೆ.
ಇತ್ತೀಚೆಗೆ ಶ್ವೇತಭವನ ಓವೆಲ್ ಕಚೇರಿಯಲ್ಲಿ ಉಭಯ ನಾಯಕರು ಚರ್ಚೆ ನಡೆಸಿದ್ದರು. ಈ ವೇಳೆ ಟ್ರಂಪ್ ಉಕ್ರೇನ್ ಅಧ್ಯಕ್ಷರಿಗೆ ರಷ್ಯಾ ಜೊತೆಯಲ್ಲಿ ಮಾತುಕತೆ ನಡೆಸಿ ಕದನ ವಿರಾಮ ಘೋಷಿಸುವಂತೆ ಒತ್ತಾಯಿಸಿದ್ದರು. ಆದರೆ ಝೆಲೆನ್ಸ್ಕಿ ಇದನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಟ್ರಂಪ್ ಮಾಧ್ಯಮಗಳ ಎದುರೇ ಝೆಲೆನ್ಸ್ಕಿ, ನೀವು ಲಕ್ಷಾಂತರ ಜೀವಗಳ ಜೊತೆ ಆಟವಾಡುತ್ತಿದ್ದೀರಿ. ನಿಮ್ಮ ದೇಶ ಅಪಾಯದಲ್ಲಿದೆ ಆದರೆ ನಿಮಗೆ ಅರ್ಥವಾಗುತ್ತಿಲ್ಲ. ನೀವು ರಾಜಿ ಮಾಡಿಕೊಳ್ಳಲೇ ಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ರಷ್ಯಾದೊಂದಿಗೆ ಯಾವುದೇ ಕದನ ವಿರಾಮವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದರು. ಈ ಹಿಂದೆ 25 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅಮೆರಿಕ ರಷ್ಯಾದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಹೇಳಿದ್ದರು. ಇವರ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ನಂತರ ಝೆಲೆನ್ಸ್ಕಿ ಶ್ವೇತಭವನದಿಂದ ಹೊರನಡೆದಿದ್ದರು. ವರದಿಯ ಪ್ರಕಾರ, ಪ್ರಸ್ತುತ ಅಮೆರಿಕ ಉಕ್ರೇನ್‌ಗೆ ನೀಡುತ್ತಿರುವ ಎಲ್ಲಾ ಮಿಲಿಟರಿ ನೆರವನ್ನು ಸ್ಥಗಿತಗೊಳಿಸಿದೆ. ಅದರಲ್ಲಿ ವಿಮಾನಗಳು ಮತ್ತು ಶಸ್ತ್ರಾಸ್ತಗಳು ಸೇರಿವೆ.
ಓವಲ್ ಆಫೀಸ್ನಲ್ಲಿ ಮಾತಿನ ಚಕಮಕಿಯ ನಂತರ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆಗಿನ ಮಾತುಕತೆಯನ್ನ ಟ್ರಂಪ್ ಮೊಟಕುಗೊಳಿಸಿದರು. ಇಷ್ಟಾದರೂ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಶಾಂತಿಗೆ ಸಿದ್ಧರಾದಾಗ ಮತ್ತೆ ಬರಬಹುದು ಎಂದು ಝೆಲೆನ್ಸ್ಕಿಗೆ ಪರೋಕ್ಷ ಆಹ್ವಾನ ನೀಡಿದ್ದರು.
ಈ ಸುದ್ದಿಯನ್ನೂ ಓದಿ: Trump-Zelenskyy: ಜನರ ಜೀವನದ ಜೊತೆ ಆಟ ಆಡಬೇಡ, ಝೆಲೆನ್ಸ್ಕಿಗೆ ಟ್ರಂಪ್ ಬಿಗ್ ವಾರ್ನಿಂಗ್
ಇಸ್ರೇಲ್ ಮತ್ತು ಈಜಿಪ್ಟ್‌ಗೆ ನೀಡಲಾಗುವ ವಿದೇಶಿ ನೆರವು ಅನುದಾನಗಳನ್ನು ಹೊರತುಪಡಿಸಿ ಬೇರೆ ದೇಶಗಳಿಗೆ ನೆರವು ಅನುದಾನವನ್ನು ಸ್ಥಗಿತಗೊಳಿಸುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಜನವರಿಯಲ್ಲಿ ಘೋಷಿಸಿದ್ದರು.