ದೇಹದಿಂದ ರಕ್ತ ಸುರಿಯುತ್ತಿದ್ದರೂ ಕಾಕ್‌ಪಿಟ್ ಓಪನ್ ಮಾಡಿದ ಸ್ಮಿತ್; ವಿಮಾನದೊಳಗಿನ ಭಯಾನಕ ವಿಡಿಯೋ ವೈರಲ್
ದುಬೈನಿಂದ ಟೆಲ್ ಅವೀವ್‌ಗೆ (ಇಸ್ರೇಲ್) ಹೊರಟಿದ್ದ ಫ್ಲೈ ದುಬೈ ಫ್ಲೈಟ್ 1073 ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆಯ ವಿಡಿಯೋಗಳು ಮತ್ತು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಕಾಕ್‌ಪಿಟ್ ಬಳಿ ಪ್ರಯಾಣಿಕರು ಮತ್ತು ಗಗನಸಖಿಯರು ಒಟ್ಟುಗೂಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿರುವುದು ಕಾಣಿಸುತ್ತದೆ.
ಪ್ಲೈಟ್ ದುಬೈ ವಿಮಾನದೊಳಗಿನ ಭಯಾನಕ ವಿಡಿಯೋ ವೈರಲ್ -
ರಿಹಾದ್: ದುಬೈನಿಂದ ಟೆಲ್ ಅವೀವ್‌ಗೆ (ಇಸ್ರೇಲ್) ಹೊರಟಿದ್ದ ಫ್ಲೈ ದುಬೈ (Flydubai) ಫ್ಲೈಟ್ 1073 ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆಯ ವಿಡಿಯೋಗಳು ಮತ್ತು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ವಿಮಾನದ ಕಾಕ್‌ಪಿಟ್ ಒಳಗೆ ಸಹ-ಪೈಲಟ್ (ಕೋ-ಪೈಲಟ್) ನಡೆಸಿದ ಹಲ್ಲೆ ಮತ್ತು ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಘಟನೆಯ ನಂತರ (Viral Video) ವಿಡಿಯೋಗಳು ಇವಾಗಿವೆ.
ವೀಡಿಯೊದಲ್ಲಿ, ಜನರು ಇಂಗ್ಲಿಷ್ ಮತ್ತು ಹೀಬ್ರೂ ಭಾಷೆಗಳಲ್ಲಿ ಕೂಗುತ್ತಿರುವುದನ್ನು ತೋರಿಸಲಾಗಿದೆ, ಒಬ್ಬ ವ್ಯಕ್ತಿ "ಅವನು ವಿಮಾನವನ್ನು ಅಪಘಾತಕ್ಕೀಡುಮಾಡಲು ಪ್ರಯತ್ನಿಸಿದನು ಎಂದಯ ಕೂಗುತ್ತಿರುವುದನ್ನು ಕೇಳಬಹುದು. ಕಾಕ್‌ಪಿಟ್ ಬಳಿ ಪ್ರಯಾಣಿಕರು ಮತ್ತು ಗಗನಸಖಿಯರು ಒಟ್ಟುಗೂಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿರುವುದು ಕಾಣಿಸುತ್ತದೆ. ಗಾಯಗೊಂಡಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಹೇಗೋ ಕಾಕ್‌ಪಿಟ್ ಬಾಗಿಲು ತೆರೆದು ಸಹಾಯಕ್ಕಾಗಿ ಕೂಗಿದಾಗ, ಪ್ರಯಾಣಿಕರು ಒಳ ನುಗ್ಗಿ ಹೆಡ್‌ಸೆಟ್ ವೈರ್‌ಗಳ ಮೂಲಕ ಆಕ್ರಮಣಕೋರ ಸಹ-ಪೈಲಟ್‌ನನ್ನು ಕಟ್ಟಿಹಾಕಿದ್ದಾರೆ.
ವಿಡಿಯೋ ನೋಡಿ
Exclusive Footage Released
— SNN Finland (@snnfinalnd) October 1, 2026
New footage from the FlyDubai flight has been released, showing the dramatic moments during the incident, including the suspect being subdued, the struggle both inside and outside the cockpit, and the search for additional pilots amid the chaos on… pic.twitter.com/Gvaj46FhaH
ತಬೂಕ್ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ಡೈವರ್ಟ್ ಮಾಡಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಲಾಗಿದೆ. ವಿಮಾನ ಲ್ಯಾಂಡ್ ಆದ ತಕ್ಷಣ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟು ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ ವಿಡಿಯೋ ಕೂಡ ವೈರಲ್ ಆಗಿದೆ.
ಘಟನೆ ಕುರಿತು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದು, "ಭಾರತೀಯ ಮೂಲದ ಕ್ಯಾಪ್ಟನ್ ತೀವ್ರವಾಗಿ ಗಾಯಗೊಂಡು, ರಕ್ತಸಿಕ್ತವಾಗಿದ್ದರೂ ಹೇಗೋ ಹೋರಾಡಿ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಅವರು ಸಹಾಯಕ್ಕಾಗಿ ಹೊರಬರುತ್ತಿದ್ದಂತೆ ಆಕ್ರಮಣಕೋರ ಸಹ-ಪೈಲಟ್ ಅವರ ಮೇಲೆಯೇ ಇದ್ದು ಚಾಕುವಿನಿಂದ ಇರಿಯುತ್ತಿದ್ದ" ಎಂದು ಕೆಲ ಪ್ರಯಾಣಿಕರು ಹೇಳಿದ್ದಾರೆ. ಇನ್ನು ಸಹ ಪೈಲಟ್ ಕುರಿತು ಮಾತನಾಡಿ, ದಾಳಿಕೋರನನ್ನು ಕಟ್ಟಿಹಾಕಿದ ನಂತರ ಅವನು ಉಗ್ರಗಾಮಿ ಸಿದ್ಧಾಂತದಿಂದ ಪ್ರೇರಿತನಾದವನಂತೆ ವರ್ತಿಸುತ್ತಿದ್ದ ಹಾಗೂ "ನನ್ನನ್ನು ಕೊಂದುಬಿಡಿ, ನನ್ನನ್ನು ಕೊಂದುಬಿಡಿ! ಎಂದು ಕೂಗುತ್ತಿದ್ದ ಎಂದು ಹೇಳಿದ್ದಾರೆ.
ಇಸ್ರೇಲಿ ಮಾಧ್ಯಮಗಳ ವರದಿಯ ಪ್ರಕಾರ, ಆರೋಪಿ ಸಹ-ಪೈಲಟ್ ತೀವ್ರ ಧಾರ್ಮಿಕ ಮೂಲಭೂತವಾದಿ ನಡವಳಿಕೆ ಹೊಂದಿದ್ದ ಹಾಗೂ ಮಹಿಳೆಯರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸುತ್ತಿದ್ದ ಎಂದು ಆತನ ಸಹೋದ್ಯೋಗಿಯೊಬ್ಬರು ಬಹಿರಂಗಪಡಿಸಿದ್ದಾರೆ. ಸಹ-ಪೈಲಟ್‌ನ ಹೆಸರನ್ನು ಈ ವರೆಗೆ ಬಹಿರಂಗಪಡಿಸಲಾಗಿಲ್ಲ. ಸೌದಿ ಅರೇಬಿಯಾದಿಂದ ಅಬುಧಾಬಿಗೆ ಸ್ಥಳಾಂತರಿಸಕಲಾಗಿದ್ದು, ಅಲ್ಲಿ ಆತನನ್ನು ಬಂಧಿಸಲಾಗಿದೆ. ಸದ್ಯ ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.