Holi Hair Care: ಹೋಳಿ ಆಚರಣೆ ವೇಳೆ ನಿಮ್ಮ ಕೂದಲನ್ನು ರಕ್ಷಿಸಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್
Holi Hair Care: ಹೋಳಿ ಆಚರಣೆ ಬಣ್ಣ ನಿಮ್ಮ ಚರ್ಮ ಮತ್ತು ಕೂದಲಿಗೆ ಹಾನಿಯನ್ನುಂಟು ಮಾಡಬಹುದು. ಅದರಲ್ಲೂ ಕೂದಲಿನ ಆರೈಕೆಗೆ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಹೋಳಿ ಆಚರಣೆಯ ವೇಳೆ ರಾಸಾಯನಿಕ ಬಣ್ಣಗಳು ನಿಮ್ಮ ಕೂದಲಿಗೆ ಹಾನಿಯನ್ನುಂಟು ಮಾಡದಿರಲು ಈ ಟಿಪ್ಸ್ ಬಳಸಿ.

ಸಾಂದರ್ಭಿಕ ಚಿತ್ರ.

ನವದೆಹಲಿ: ಹೋಳಿ ಎಂದರೆ ಬಣ್ಣಗಳ ಹಬ್ಬ. ಹೋಳಿ ಹಬ್ಬಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಇದ್ದು ಇದಕ್ಕಾಗಿ ಸಿದ್ದತೆ ನಡೆಸಲಾಗುತ್ತಿದೆ (Holi 2025). ಒಬ್ಬರಿಗೊಬ್ಬರು ಮೈಗೆ ಬಣ್ಣವನ್ನು ಹಚ್ಚಿ ಈ ಹಬ್ಬ ಆಚರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಬಣ್ಣ ನಿಮ್ಮ ಚರ್ಮ ಮತ್ತು ಕೂದಲಿಗೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಇದೆ. ಅದರಲ್ಲೂ ಕೂದಲಿನ ಆರೈಕೆಗೆ ಮೊದಲೇ ಎಚ್ಚರಿಕಾ ಕ್ರಮ ಕೈಗೊಂಡರೆ ಯಾವುದೇ ಸಮಸ್ಯೆಗಳಿಲ್ಲದೆ ಬಣ್ಣದೋಕುಳಿಯಲ್ಲಿ ಮಿಂದೇಳಬಹುದು (Holi Hair Care). ಹೋಳಿ ಆಚರಣೆಯ ವೇಳೆ ರಾಸಾಯನಿಕ ಬಣ್ಣಗಳು ನಿಮ್ಮ ಕೂದಲಿಗೆ ತಾಗಿ ಹಾನಿಯನ್ನುಂಟು ಮಾಡದಿರಲು ಈ ಟಿಪ್ಸ್ ಬಳಸಿ.
ನಿಮ್ಮ ಕೂದಲನ್ನು ಬಿಚ್ಚಿಡಬೇಡಿ
ಹೋಳಿ ಆಡುವ ಸಂದರ್ಭದಲ್ಲಿ ಕೂದಲನ್ನು ಫ್ರೀ ಬಿಟ್ಟು ಬಿಡಬೇಡಿ. ಕೆಲವೊಮ್ಮೆ ಅನೇಕರು ತಮ್ಮ ಕೂದಲನ್ನು ಬಿಚ್ಚಿ ಇಡುತ್ತಾರೆ. ಆದರೆ ರಾಸಾಯನಿಕ ಬಣ್ಣಗಳು ನಿಮ್ಮ ಕೂದಲಿಗೆ ತಾಗಿದರೆ ಹೆಚ್ಚಿನ ಹಾನಿಯಾಗಲಿದೆ. ಹಾಗಾಗಿ ಹೋಳಿ ಆಡುವಾಗ ನಿಮ್ಮ ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ರಾಸಾಯನಿಕ ಬಣ್ಣಗಳಿಂದ ಸುರಕ್ಷಿತವಾಗಿರುತ್ತದೆ.
ಎಣ್ಣೆ ಹಚ್ಚಿ
ಹೋಳಿ ಆಡುವ ಮೊದಲೇ ನಿಮ್ಮ ಕೂದಲಿಗೆ ಎಣ್ಣೆ ಹಚ್ಚಿ ಜಡೆ ಕಟ್ಟಿಕೊಳ್ಳಬಹುದು. ಜತೆಗೆ ನಿಮ್ಮ ಕೂದಲಿನ ಸಂರಕ್ಷಣೆಗೆ ನಿಂಬೆ ರಸವನ್ನು ಎಣ್ಣೆಯೊಂದಿಗೆ ಬೆರೆಸಿ ಹಚ್ಚಬಹುದು. ಇದಕ್ಕಾಗಿ ಸಾಸಿವೆ, ಬಾದಾಮಿ, ಆಲಿವ್ ಎಣ್ಣೆಯನ್ನು ಬಳಸಬಹುದು. ಇಲ್ಲದಿದ್ದರೆ ತೆಂಗಿನ ಅಥವಾ ಅರ್ಗಾನ್ ಎಣ್ಣೆಯಂತಹ ನೈಸರ್ಗಿಕ ಪದಾರ್ಥಗಳಿಂದ ಸಮೃದ್ಧವಾಗಿರುವ ಬಿಸಿ ಎಣ್ಣೆ ಹಚ್ಚಿ ಕನಿಷ್ಠ 20-30 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಇದರಿಂದ ಕೂದಲು ಮೃದುವಾಗುತ್ತದೆ.
ಕಂಡೀಷನರ್ ಅಥವಾ ಹೇರ್ ಮಾಸ್ಕ್
ಹೋಳಿ ಆಡಿದ ನಂತರ ನಿಮ್ಮ ಕೂದಲನ್ನು ಕಂಡಿಷನರ್ ಬಳಸಿ ಸ್ವಚ್ಛಗೊಳಿಸಿ. ಇದು ಕೂದಲಿನ ತೇವಾಂಶವನ್ನು ಹೆಚ್ಚಿಸಲು ಸಹಕಾರಿ. ಜತೆಗೆ ನೀವು ಮನೆಯಲ್ಲಿಯೇ ಹೇರ್ ಮಾಸ್ಕ್ ತಯಾರಿಸ ಬಹುದು. ಹೋಳಿ ಆಡಿದ ನಂತರ, ನಿಮ್ಮ ಕೂದಲನ್ನು ನೀರಿನಿಂದ ತೊಳೆದು ನೀವು ತಯಾರಿಸಿದ ಹೇರ್ ಮಾಸ್ಕ್ ಹಚ್ಚಿ. ಇದು ರಾಸಾಯನಿಕ ಬಣ್ಣವು ನಿಮ್ಮ ಕೂದಲಿನ ಮೇಲೆ ಪರಿಣಾಮ ಬೀರುವುದನ್ನು ತಡೆಯುತ್ತದೆ.
ಕೂದಲನ್ನು ಕವರ್ ಮಾಡಿಕೊಳ್ಳಿ
ಹೋಳಿ ಹಬ್ಬದ ದಿನ ನಿಮ್ಮ ಕೂದಲನ್ನು ಕವರ್ ಮಾಡಿಕೊಳ್ಳಲು ಮರೆಯದಿರಿ. ನೀವು ಕೂದಲಿನ ರಕ್ಷಣೆಗಾಗಿ ಕ್ಯಾಪ್ ಧರಿಸಬಹುದು ಅಥವಾ ಶಾಲನ್ನು ತಲೆಗೆ ಸುತ್ತಿಕೊಳ್ಳಬಹುದು. ಈ ರೀತಿಯ ಮುನ್ನೆಚ್ಚರಿಕೆಯನ್ನು ಮೊದಲೇ ತೆಗೆದುಕೊಳ್ಳುವುದರಿಂದ ನಿಮ್ಮ ಕೂದಲಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಕೂದಲನ್ನು ಸರಿಯಾಗಿ ಬಾಚಿಕೊಳ್ಳಿ
ಹೋಳಿ ಆಡಿದ ಬಳಿಕ ಶಾಂಪೂ ಮತ್ತು ಕಂಡೀಷನರ್ ಹಚ್ಚಿ ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಏಕೆಂದರೆ ಇದು ಕೂದಲಿನ ಮೇಲಿನ ಬಣ್ಣದ ಪದರಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸ್ನಾನದ ನಂತರ ನಿಮ್ಮ ಕೂದಲನ್ನು ಬಾಚಿಕೊಳ್ಳಿ. ಇದರಿಂದ ಬಣ್ಣ ಕೂದಲಿನಲ್ಲಿ ಉಳಿದುಕೊಳ್ಳುವುದಿಲ್ಲ.
ಇದನ್ನು ಓದಿ: Holi Skincare Tips: ಹೋಳಿ ಆಡಲು ಇಷ್ಟ: ತ್ವಚೆಗೆ ಕಷ್ಟವೇ? ಇಲ್ಲಿದೆ ಟಿಪ್ಸ್
ಮಸಾಜ್ ಮಾಡಿ
ಅಲೋವೆರಾ ಜೆಲ್ ಅಥವಾ ಮೊಸರು ಕಂಡೀಷನರ್ ಹಾಕಿ ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿ. ಬಳಿಕ 10 ನಿಮಿಷಗಳ ನಂತರ ಶುದ್ಧ ನೀರಿನಿಂದ ನಿಮ್ಮ ಕೂದಲನ್ನು ತೊಳೆದರೆ ಹೋಳಿ ಬಣ್ಣಗಳಿಂದ ನಿಮ್ಮ ಕೂದಲನ್ನು ರಕ್ಷಿಸಬಹುದು. ಬಣ್ಣಗಳಿಂದ ಕೂದಲು ಒಣಗಿದ್ದರೆ, ಕೂದಲಿಗೆ ಅನುಗುಣವಾಗಿ ಹಣ್ಣಿನ ಪ್ಯಾಕ್, ಮೊಸರು ನಿಂಬೆ ಪ್ಯಾಕ್ ಅಥವಾ ಇನ್ನಾವುದೇ ಪ್ಯಾಕ್ ಅನ್ನು ಹಚ್ಚಿ.