ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇವಲ ಒಗ್ಗರಣೆಗೆ ಮಾತ್ರವಲ್ಲ! ನಿಮ್ಮ ಆಹಾರದಲ್ಲಿ ಕರಿಬೇವು ಯಾಕೆ ಅಗತ್ಯ?

Health Tips: ಭಾರತೀಯ ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸಲಾಗುವ ಆಹಾರ ಪದಾರ್ಥಗಳಲ್ಲಿ ಕರಿಬೇವು ಕೂಡ ಒಂದಾಗಿದೆ. ನೀವು ಬೇಯಿಸಿದ ಆಹಾರದ ರುಚಿ ಹೆಚ್ಚು ಮಾಡುವುದಲ್ಲದೆ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ವಿಟಮಿನ್ ಸಿ ಮುಂತಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಚರ್ಮದ ಆರೈಕೆಯಿಂದ ಹಿಡಿದು ಜೀರ್ಣಕ್ರಿಯೆವರೆಗೆ ಹಲವಾರು ರೀತಿಯ ಆರೋಗ್ಯ ಲಾಭವನ್ನು ಕರಿಬೇವು ನೀಡುತ್ತದೆ‌

ಕರಿಬೇವಿನ ಎಲೆಗಳ ಆರೋಗ್ಯ ಪ್ರಯೋಜನಗಳು!

ಸಂಗ್ರಹ ಚಿತ್ರ -

Profile
Pushpa Kumari Sep 16, 2026 7:01 AM

ನವದೆಹಲಿ,ಸೆ.15: ಭಾರತೀಯ ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸಲಾಗುವ ಆಹಾರ ಪದಾರ್ಥಗಳಲ್ಲಿ ಕರಿಬೇವು (Curry Leaves) ಕೂಡ ಒಂದಾಗಿದೆ. ನೀವು ಬೇಯಿಸಿದ ಆಹಾರದ ರುಚಿ ಹೆಚ್ಚು ಮಾಡುವುದಲ್ಲದೆ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ವಿಟಮಿನ್ ಸಿ ಮುಂತಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಚರ್ಮದ ಆರೈಕೆಯಿಂದ ಹಿಡಿದು ಜೀರ್ಣಕ್ರಿಯೆವರೆಗೆ ಹಲವಾರು ರೀತಿಯ ಆರೋಗ್ಯ ಲಾಭವನ್ನು ಕರಿಬೇವು ನೀಡುತ್ತದೆ‌. ಹಾಗಾಗಿ ನಿಮ್ಮ ದಿನ ನಿತ್ಯದ ಆಹಾರದಲ್ಲಿ ಕರಿಬೇವು ಸೇರಿಸಿಕೊಳ್ಳುವ ಹಲವಾರು ಲಾಭ ಪಡೆಯಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

​ರಕ್ತದಲ್ಲಿನ ಸಕ್ಕರೆ ನಿಯಂತ್ರಣ:

ಈ ಎಲೆಗಳು ಇನ್ಸುಲಿನ್ ಕಾರ್ಯವನ್ನು ಸುಧಾರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ಮಹಾನಿಂಬಿನ್ ಎಂಬ ಆಂಶವು ಇನ್ಸುಲಿನ್ ಕ್ಷಮತೆಯನ್ನು ಹೆಚ್ಚು ಮಾಡಿ ಮಧುಮೇಹವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಕಣ್ಣುಗಳ ಆರೋಗ್ಯ ರಕ್ಷಿಸುತ್ತದೆ;

ಕರಿಬೇವಿನ ಎಲೆಗಳಲ್ಲಿ ಪೋಷಕಾಂಶಗಳು ಅಧಿಕವಾಗಿದೆ. ಇದರಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಹೆಚ್ಚಿಸಿ ಕಣ್ಣುಗಳ ಆರೋಗ್ಯ ಬೆಂಬಲಿಸುತ್ತದೆ‌.

ಜೀರ್ಣಕ್ರಿಯೆಗೆ ಸಹಕಾರಿ:

ಜೀರ್ಣಕ್ರಿಯೆ, ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಕರಿಬೇವನ್ನು ಸೇವನೆ ಮಾಡಬಹುದು. ಕರಿಬೇವಿನ ಎಲೆಗಳಲ್ಲಿ ಕಂಡುಬರುವ ನೈಸರ್ಗಿಕ ನಾರುಗಳು ಮತ್ತು ಸಂಯುಕ್ತಗಳು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತವೆ, ಇವು ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗೆ ಪರಿಹಾರವನ್ನು ನೀಡುತ್ತವೆ.

Health Tips: ಎಬಿಸಿ ಜ್ಯೂಸ್ ಬಗ್ಗೆ ಗೊತ್ತೆ? ತೂಕ ಇಳಿಕೆಗೆ ಇದೇ ರಾಮ ಬಾಣ; ತಯಾರಿಸುವ ವಿಧಾನ ಇಲ್ಲಿದೆ

ಕೂದಲಿನ ಆರೈಕೆ:

ಕೂದಲಿನ ಬೆಳವಣೆಗೆ ಹೆಚ್ಚಿಸಬೇಕು ಎಂದು ಇದ್ದವರು ಕರಿಬೇವು ಸೇವನೆಗೆ ಆಧ್ಯತೆ ನೀಡಿ.ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಮತ್ತು ಫೋಲಿಕ್ ಆಸಿಡ್ ಇರುವುದರಿಂದ ಇದು ಕೂದಲು ಉದುರುವುದನ್ನು ತಡೆಯುತ್ತದೆ.

ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ:

ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಇದರಲ್ಲಿದ್ದು ಚರ್ಮವನ್ನು ಸೋಂಕುಗಳಿಂದ ರಕ್ಷಿಸಲು ಮತ್ತು ಅದರ ನೈಸರ್ಗಿಕ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರಕ್ತಹೀನತೆ ತಡೆಗಟ್ಟುವಿಕೆ:

ಕಬ್ಬಿಣಾಂಶ ಮತ್ತು ಫೋಲಿಕ್ ಆಸಿಡ್ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಿ, ಯಾವುದೇ ಆರೋಗ್ಯ ಸಮಸ್ಯೆ ಬರದಂತೆ ಕಾಪಾಡುತ್ತದೆ.

ಬಳಸುವ ವಿಧಾನಗಳು:

*​ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5-8 ಹಸಿ ಕರಿಬೇವಿನ ಎಲೆಗಳನ್ನು ಅಗಿದು ತಿನ್ನಿರಿ.

​*ಎಲೆಗಳನ್ನು ನೀರಿನಲ್ಲಿ ಕುದಿಸಿ,ಕುಡಿಯಬಹುದು.

​*ಉಪ್ಪಿಟ್ಟು, ಚಿತ್ರಾನ್ನ ಮತ್ತು ಪಲ್ಯಗಳಿಗೆ ಒಗ್ಗರಣೆ ಕೊಡುವಾಗ ಕರಿಬೇವು ಬಳಸಬಹುದು.

​*ಎಲೆಗಳನ್ನು ಪುಡಿ ಮಾಡಿ ಅನ್ನ ಚಟ್ನಿ ಜೊತೆ ಬಳಸಿ.