ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಮೊಳಕೆ ಕಾಳುಗಳ ಸದ್ಗುಣದ ಬಗ್ಗೆ ನಿಮಗೆಷ್ಟು ಗೊತ್ತು?

ಇಂದು ಬೇಳೆ-ಕಾಳುಗಳನ್ನು ಆಹಾರದ ಮುಖ್ಯ ಭಾಗವಾಗಿ ಸ್ವೀಕರಿಸಿದವರ ಸಂಖ್ಯೆ ಹೆಚ್ಚಿದೆ. ಕಡಿಮೆ ಖರ್ಚಿನಲ್ಲಿ ಎಲ್ಲರ ಕೈಗೆಟುವುವಂಥ ಪೌಷ್ಟಿಕ ಆಹಾರಗಳಿವು. ಯಾವುದೇ ಕಿಸೆಗೆ ಭಾರವಾಗದ ರೀತಿಯಲ್ಲಿ ಇವುಗಳನ್ನು ಕೊಂಡು ಸೇವಿಸಬಹುದು. ಇವನ್ನು ಇಡಿ ಧಾನ್ಯಗಳ ಜೊತೆಗೆ ಸೇರಿಸಿಕೊಂಡರೆ, ಆಹಾರವನ್ನು ಇನ್ನಷ್ಟು ಸತ್ವಯುತವಾಗಿಸಬಹುದು. ಹಾಗಾದರೆ ಬೇಳೆ-ಕಾಳುಗಳನ್ನು ತಿನ್ನುವುದರಿಂದ ಏನೆಲ್ಲ ಲಾಭಗಳಿವೆ?

ಮೊಳಕೆ ಕಾಳು ಸೇವನೆಯಿಂದ ಸಿಗುವ ಆರೋಗ್ಯ ಲಾಭಗಳೇನು?

sprouted grains

Profile Pushpa Kumari Feb 14, 2025 6:00 AM

ನವದೆಹಲಿ: ಆರೋಗ್ಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುವವರಂತೆಯೇ ಅತೀವ ಕಾಳಜಿ ತೋರುವವರೂ ಇದ್ದಾರೆ. ಹಾಗಾಗಿ ಸಸ್ಯಜನ್ಯ ಪ್ರೊಟೀನ್‌ಗಳು ಮುನ್ನೆಲೆಗೆ ಬರುತ್ತಿವೆ(Health Tips). ಇದರ ಮುಖ್ಯವಾದ ಲಾಭ, ಪ್ರಾಣಿಜನ್ಯ ಪ್ರೊಟೀನ್‌ನಲ್ಲಿ ದೇಹ ಸೇರುವಂಥ ಅಧಿಕ ಕೊಬ್ಬಿನಂಶ ಸಸ್ಯಮೂಲದ ಪ್ರೊಟೀನ್‌ನಲ್ಲಿ ಇರುವುದಿಲ್ಲ ಎನ್ನುವುದು. ಹಾಗಾಗಿಯೇ ಇಂದು ಬೇಳೆ-ಕಾಳುಗಳನ್ನು ಆಹಾರದ ಮುಖ್ಯ ಭಾಗವಾಗಿ ಸ್ವೀಕರಿಸಿ ದವರ ಸಂಖ್ಯೆ ಹೆಚ್ಚಿದೆ. ಕಡಿಮೆ ಖರ್ಚಿನಲ್ಲಿ ಎಲ್ಲರ ಕೈಗೆಟುವು ವಂಥ ಪೌಷ್ಟಿಕ ಆಹಾರಗಳಿವು. ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ವರರೆಗೆ ಯಾವುದೇ ಕಿಸೆಗೂ ಭಾರವಾಗದ ರೀತಿಯಲ್ಲಿ ಇವುಗಳನ್ನು ಕೊಂಡು ಸೇವಿಸಬಹುದು. ಇವನ್ನು ಇಡಿ ಧಾನ್ಯಗಳ ಜೊತೆಗೆ ಸೇರಿಸಿಕೊಂಡರೆ, ಆಹಾರವನ್ನು ಇನ್ನಷ್ಟು ಸತ್ವಯುತವಾಗಿಸಬಹುದು. ಹಾಗಾದರೆ ಏನೆಲ್ಲ ಲಾಭಗಳಿವೆ ಬೇಳೆ-ಕಾಳುಗಳನ್ನು ತಿನ್ನುವುದರಿಂದ?

ಸತ್ವಶಾಲಿ: ಇಡಿ ಧಾನ್ಯಗಳ ಪಟ್ಟಿಯಲ್ಲಿ ಕಾಳುಗಳನ್ನು ಸೇರಿಸಬಹುದು. ನಾರು, ಪ್ರೊಟೀನ್‌, ಸಂಕೀರ್ಣ ಪಿಷ್ಟಗಳು, ಫೋಲೇಟ್‌, ಕಬ್ಬಿಣ, ಪೊಟಾ ಶಿಯಂ, ಮ್ಯಾಂಗನೀಸ್ ಮುಂತಾದ ಖನಿಜಗಳು, ಜೀವಸತ್ವಗಳು ಸೇರಿದಂತೆ ಮಹತ್ವದ ಪೋಷಕಾಂಶಗಳನ್ನು ಬೇಳೆ-ಕಾಳುಗಳು ಹೊಂದಿರುತ್ತವೆ. ಬೇಳೆಗಳ ರೂಪದಲ್ಲಿ, ಕಾಳುಗಳ ಸ್ವರೂಪದಲ್ಲಿ, ಮೊಳಕೆ ತರಿಸಿಕೊಂಡು- ಹೀಗೆ ಯಾವುದೇ ರೂಪದಲ್ಲಿ ಇವುಗಳನ್ನು ಸೇವಿಸಿದರೂ ಆರೋಗ್ಯಕ್ಕೆ ಪುಷ್ಟಿಯನ್ನು ನೀಡುವಂಥವು.

ಹೃದಯಕ್ಕೆ ಪೂರಕ: ಕೊಬ್ಬು ಕಡಿಮೆ ಇದ್ದುಕೊಂಡು, ನಾರು ಮತ್ತು ಪ್ರೊಟೀನ್‌ ಹೆಚ್ಚಿರುವ ಈ ಆಹಾರವು ಹೃದಯಕ್ಕೆ ಸ್ನೇಹಿತನೆಂದೇ ಅಧ್ಯಯನಗಳು ಬಿಂಬಿಸುತ್ತವೆ. ಇದರಲ್ಲಿರುವ ಕರಗಬಲ್ಲ ನಾರುಗಳು ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್‌ನಂಥ ಕೆಟ್ಟ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಜೊತೆಗೆ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಂಥ ಸಮಸ್ಯೆಗಳನ್ನೂ ದೂರ ಮಾಡಲು ಸಹಾಯ ಮಾಡುತ್ತವೆ.

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ: ಮಲಬದ್ಧತೆಯಂಥ ಸಮಸ್ಯೆಗಳು ಜೀರ್ಣಾಂಗಗಳ ತೊಂದರೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ ಅಥವಾ ಜೀರ್ಣಾಂಗಗಳ ತೊಂದರೆಯೇ ಮಲಬದ್ಧತೆಗೂ ಕಾರಣವಾಗಬಹುದು. ಹಾಗಾಗಿ ಆಹಾರದಲ್ಲಿ ನಾರಿನಂಶ ಇರಬೇಕಾದದ್ದು ಮೂಲಭೂತ ಅಗತ್ಯಗಳಲ್ಲಿ ಒಂದು. ಇದು ಜೀರ್ಣಾಂಗಗಳ ಕ್ಷೇಮವನ್ನು ಮಾತ್ರವೇ ಅಲ್ಲ, ಕರುಳಿನ ಬ್ಯಾಕ್ಟೀರಿಯಗಳ ಸಂಖ್ಯೆಯನ್ನೂ ಸಮತೋಲನದಲ್ಲಿ ಇರಿಸುತ್ತದೆ. ಜೊತೆಗೆ, ಕಾಳುಗಳಲ್ಲಿರುವ ನಾರು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ.

ಸಸ್ಯಜನ್ಯ ಪ್ರೊಟೀನ್‌: ಪ್ರೊಟೀನ್‌ ಎನ್ನುತ್ತಿದ್ದಂತೆ ಚಿಕನ್‌, ಮೀನು ಮುಂತಾದ ಮಾಂಸಾಹಾರಗಳಿಗೇ ಪ್ರಾಧಾನ್ಯತೆ ಇದೆ. ಆದರ ಕೆಲವು ಆರೋಗ್ಯಕರ ಪ್ರೊಟೀನ್‌ ಮೂಲಗಳಲ್ಲಿ ಕಾಳುಗಳೂ ಒಂದು. ಯಾವುದೇ ಕೊಬ್ಬಿಲ್ಲದಂತೆ ಕೇವಲ ಪ್ರೊಟೀನ್‌ ಮಾತ್ರ ದೇಹಕ್ಕೆ ದೊರೆಯ ಬೇಕೆಂ ದರೆ ಇಂಥ ಆಹಾರಗಳೇ ಅಗತ್ಯ. ಸ್ನಾಯುಗಳ ಬೆಳವಣಿಗೆ, ದುರಸ್ತಿ ಮತ್ತು ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಅಗತ್ಯ ಆಹಾರವೆಂದು ಬೇಳೆ-ಕಾಳುಗಳನ್ನು ಪರಿಗಣಿಸಲಾಗಿದೆ.

ತೂಕ ಇಳಿಕೆಗೆ ಬೇಕು: ಮೊಳಕೆ ಕಾಳುಗಳು ತೂಕ ಇಳಿಸುವವರಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಅಧಿಕ ಪ್ರಮಾಣದಲ್ಲಿ ನಾರು ಮತ್ತು ಪ್ರೊಟೀನ್‌ ಒದಗಿಸಿ, ದೀರ್ಘ ಕಾಲದವರೆಗೆ ಹಸಿವನ್ನು ತಣಿಸುತ್ತವೆ, ತಿಂದ ಆಹಾರಕ್ಕೆ ಪೂರಕವಾದ ತೃಪ್ತಿಯನ್ನು ನೀಡುತ್ತವೆ. ಇದರಿಂದ ದೇಹ ಬಳಲದಂತೆ ಕಾಪಾಡಿಕೊಂಡು ತೂಕ ಇಳಿಸಲು, ಶರೀರದಲ್ಲಿನ ಕೊಬ್ಬನ್ನು ಕರಗಿಸಿ, ಸ್ನಾಯುಗಳನ್ನು ಬೆಳೆಸಲು ಖಂಡಿತ ಸಾಧ್ಯವಿದೆ.

ಇದನ್ನು ಓದಿ:Health Tips: ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಸಿಗಲಿದೆ ಇಷ್ಟೆಲ್ಲ ಆರೋಗ್ಯ ಭಾಗ್ಯ

ಅಡುಗೆಗಳು ಸುಲಭ: ಕಾಳು-ಬೇಳೆಗಳನ್ನು ಬಳಸಿ ಅಡುಗೆ ಮಾಡುವುದು ಕಷ್ಟವಲ್ಲ. ಯಾವುದೇ ದೇಶಗಳ, ಸಂಸ್ಕೃತಿಗಳ ಅಡುಗೆಗಳಲ್ಲೂ ಸುಲಭವಾಗಿ ಸ್ಥಾನ ಪಡೆಯಬಹುದಾದಂಥ ರುಚಿ ಮತ್ತು ಗುಣ ಇವುಗಳದ್ದು. ಸೂಪ್‌, ಸಲಾಡ್‌ಗಳಿಂದ ತೊಡಗಿ, ಸಿಹಿ ತಿಂಡಿಗಳವರೆಗೆ ಎಂಥ ಅಡುಗೆಗೂ ಬೇಳೆ-ಕಾಳುಗಳು ಒಗ್ಗಿಕೊಳ್ಳುತ್ತವೆ. ಮೊಳಕೆ ಕಟ್ಟಿದ ಕಾಳುಗಳು ಆಧುನಿಕ ತಿನಿಸುಗಳಿಂದ ಹಿಡಿದು ಪರಂಪರಾಗತ ಅಡುಗೆಗಳವರೆಗೆ ಎಲ್ಲವಕ್ಕೂ ಜೊತೆಯಾಗಬಲ್ಲವು. ಕಾಳುಗಳಿಂದ ತಯಾರಿಸಿದ ಕಟ್ಲೆಟ್‌, ಪ್ಯಾಟಿಗಳು ಮಕ್ಕಳ ಮೆಚ್ಚಿನ ಬರ್ಗರ್‌, ರ್ಯಾಪ್‌ ಮತ್ತು ಸ್ಯಾಂಡ್‌ವಿಚ್‌ಗಳನ್ನು ಸಹ ಪೌಷ್ಟಿಕವನ್ನಾಗಿಸಬಲ್ಲವು.