Health Tips: ಉತ್ತಮ ಮಾನಸಿಕ ಆರೋಗ್ಯ, ನೆಮ್ಮದಿ ನಿಮ್ಮದಾಗಲೂ ಗಾರ್ಡನಿಂಗ್ ಮಾಡಿ
Gardening Therapy: ಕೈತೋಟ ಮಾಡಲು ಎಕರೆಗಟ್ಟಲೆ ಭೂಮಿ ಬೇಡ. ನಿಮ್ಮ ಮನೆಯ ಮುಂ ದೆಯೇ ಒಂದಷ್ಟು ಗಿಡಗಳನ್ನು ನೆಟ್ಟರೆ ಸಾಕು. ಮನೆಯ ಹಿಂಭಾಗದಲ್ಲಿ ಜಾಗವಿದ್ದರೆ ಅಲ್ಲಿಯೂ ಗಾರ್ಡನಿಂಗ್ ಮಾಡಬಹುದು. ಹೀಗೆ ಮನೆಯ ಸುತ್ತಮುತ್ತ ಕೈತೋಟ ಮಾಡುವುದರಿಂದ ಕೇವಲ ಮನೆಯ ಅಂದ ಹೆಚ್ಚುವುದಲ್ಲದೇ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಗಿಡಮರಗಳ ಆರೈಕೆ ಮಾಡಿದರೆ ಮನಸ್ಸಿಗೆ ಉಲ್ಲಾಸ ಸಿಗುತ್ತದೆ.
ಮಾನಸಿಕ ಒತ್ತಡಕ್ಕೆ ಗಾರ್ಡನಿಂಗ್ ಮದ್ದು(ಸಾಂದರ್ಭಿಕ ಚಿತ್ರ) -
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಎದುರಿಸುತ್ತಿರುವ ಸಮಸ್ಯೆ ಎಂದರೆ ಒತ್ತಡ (Stress). ಆಧುನಿಕ ಜೀವನ ಶೈಲಿಯ(Modern Life Style) ಪರಿಣಾಮವೋ ಏನೋ ಸ್ಕೂಲ್ ಗೆ ಹೋಗೋ ಮಕ್ಕಳಿಂದ ಹಿಡಿದು ಪ್ರತಿಯೋರ್ವರು ಈ ಮಾನಸಿಕ ತೊಳಲಾಟದಿಂದ ಬಳಲುತ್ತಿದ್ದು, ಒತ್ತಡ, ಕಿರಿಕಿರಿ, ಆಯಾಸ ಮತ್ತು ಆತಂಕದ(Anxiety) ವಾತಾವರಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಇಂದಿನ ಯುವಜನತೆಯಂತೂ ಸಣ್ಣಪುಟ್ಟ ವಿಷಯಗಳನ್ನು ಹೆಚ್ಚು ತಲೆಗೆ ತೆಗೆದುಕೊಳ್ಳುತ್ತಾರೆ. ಈ ಆತಂಕ ಹಾಗೂ ಒತ್ತಡದಲ್ಲಿ ಜೀವನ ನಡೆಸುವುದು ಅನಿವಾರ್ಯ ಅನ್ನುವ ಮಟ್ಟಿಗೆ ಮನಸ್ಥಿತಿ ಬದಲಾಗಿದೆ. ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಬೆರೆಸಿ ಎರಡನ್ನು ಬ್ಯಾಲೆನ್ಸ್ ಮಾಡಲಾಗದ ಪರಿಸ್ಥಿತಿಯಲ್ಲಿದ್ದೇವೆ.
ಅದರಲ್ಲೂ ವೃತ್ತಿ ಜೀವನದಲ್ಲಿ ಅತಿಯಾದ ಒತ್ತಡದಿಂದಾಗಿ ಕೆಲವರು ತಮ್ಮ ವೈಯಕ್ತಿಕ ಜೀವನವನ್ನೇ ಹಾಳು ಮಾಡಿಕೊಳ್ಳುವಂತಹ ಮಟ್ಟಕ್ಕೆ ಬಂದು ಬಿಡುತ್ತಾರೆ. ಈ ಅತಿಯಾದ ಒತ್ತಡ ಹಾಗೂ ಆತಂಕವು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಈ ಅತಿಯಾದ ಒತ್ತಡದಿಂದ ಖಿನ್ನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಇದನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಅತ್ಯಗತ್ಯ. ಇಲ್ಲವಾದಲ್ಲಿ ಒತ್ತಡವು ಹೀಗೆ ಮುಂದುವರಿದರೆ ಅದರಿಂದ ಜೀವಿತಾವಧಿ ಮೇಲೆ ಕೂಡ ಪರಿಣಾಮ ಬೀರುತ್ತದೆ. ಜೊತೆಗೆ ಡಿಪ್ರೆಶನ್ ಗೆ ಒಳಗಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇದಕ್ಕಾಗಿ ಔಷಧಿ ಹಾಗೂ ಮಾತ್ರೆಗಳನ್ನು ಸೇವಿಸುವಂತಹ ಪರಿಸ್ಥಿತಿಯು ಬರಬಹುದು. ಇದು ಖಿನ್ನತೆ ಕಡಿಮೆ ಮಾಡಬಹುದಾದರೂ ಬೇರೆ ರೀತಿಯಲ್ಲಿ ಅಡ್ಡ ಪರಿಣಾಮ ಬೀರಬಹುದು.
ಈ ಸುದ್ದಿಯನ್ನು ಓದಿ: Viral Video: ನಡುರಸ್ತೆಯಲ್ಲಿ ಆಟೋ ಚಾಲಕನ ಜೊತೆ ಯೂಟ್ಯೂಬರ್ ಸಹೋದರಿಯರ ಬಿಗ್ ಫೈಟಿಂಗ್!
ಹಾಗಿದ್ದರೆ ಈ ಒತ್ತಡವನ್ನು ನಿಯಂತ್ರಿಸುವುದೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು..? ಚಿಂತೆ ಬೇಡ ಅದಕ್ಕೂ ಉತ್ತರ ಹೇಳಿದ್ದು, ನಿಮ್ಮ ಮನೆಯ ಗಾರ್ಡನ್ ಅಥವಾ ಕೈತೋಟ ಇದಕ್ಕೆ ಮದ್ದಾಗಲಿದೆ. ಹೇಗೆ ದೈನಂದಿನ ಜೀವನದಲ್ಲಿ ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದೋ. ಅದೇ ರೀತಿ ದಿನದಲ್ಲಿ ಕನಿಷ್ಠ ಒಂದು ಗಂಟೆ ಗಾರ್ಡನ್ ಅಥವಾ ಕೈತೋಟದಲ್ಲಿ ಸಮಯ ಕಳೆದ್ದರೆ ಮಾನಸಿಕ ಶಾಂತಿಯನ್ನು ಪಡೆಯಬಹುದಾಗಿದೆ. ಹಾಗಾದ್ರೆ ಬನ್ನಿ ಗಾರ್ಡನ್(Gardening) ಹೇಗೆ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂಬುದನ್ನು ನೋಡೋಣಾ.
ಒತ್ತಡ ಮತ್ತು ಆತಂಕ ಕಡಿಮೆಮಾಡುತ್ತದೆ:
ಒತ್ತಡವನ್ನು ಕಡಿಮೆ ಮಾಡಿ ಮನಸ್ಥಿತಿಯನ್ನು ಸುಧಾರಿಸಲು ಗಾರ್ಡನಿಂಗ್ ತುಂಬಾ ಪರಿಣಾಮಕಾರಿ ವಿಧಾನವಾಗಿದ್ದು, ಇದು ಒತ್ತಡ ಮತ್ತು ಆತಂಕ ಎರಡನ್ನೂ ಕಡಿಮೆ ಮಾಡುತ್ತದೆ.
ಮನ:ಶಾಂತಿಯನ್ನು ನೀಡುತ್ತದೆ
ಪ್ರತಿ ದಿನ ಒಂದಷ್ಟು ಸಮಯ ನೀವು ಗಿಡಗಳ ಮಧ್ಯೆ ಕಳೆಯುವದರಿಂದ ಮನ:ಶಾಂತಿ ದೊರೆಯಲಿದ್ದು, ಪ್ರಕೃತಿ ಸ್ಪರ್ಶ, ತೃಪ್ತಿಯ ಭಾವನೆ ಸಿಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಲಿದ್ದು, ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ.
ಸಕಾರಾತ್ಮಕತೆ ಹೆಚ್ಚುತ್ತದೆ
ತೋಟಗಾರಿಕೆಯ ಮತ್ತೊಂದು ವಿಶೇಷತೆ ಎಂದರೆ ಇದು ಸುತ್ತಲಿನ ವಾತಾವರಣವನ್ನು ಶುದ್ಧ ಮಾಡುತ್ತದೆ. ಶುದ್ಧ ಗಾಳಿಯನ್ನು ನೀಡುತ್ತದೆ. ದೇಹಕ್ಕೆ ಶುದ್ಧ ಗಾಳಿ ಸಿಕ್ಕಿದರೆ ಮನಸ್ಸು ಶಾಂತವಾಗುತ್ತದೆ. ಜೊತೆಗೆ ಸಸಿಗಳನ್ನು ಮನೆಯ ಸುತ್ತ ನೆಡವುದರಿಂದ ಸಕಾರಾತ್ಮಕತೆ ನೆಲೆಸುತ್ತದೆ.
ಏಕಾಂತ ದೂರ ಮಾಡುತ್ತದೆ
ಗಿಡಮರಗಳ ಆರೈಕೆ ಮಾಡಿದರೆ ಮಾನಸಿಕ ಉಲ್ಲಾಸ ಸಿಗುವುದರ ಜೊತೆ ಏಕಾಂತದ ಭಾವ ದೂರಾಗುತ್ತದೆ. ಗಿಡ ಮರಗಳ ಒಡನಾಟ ಏಕಾಂತವನ್ನು ದೂರ ಮಾಡುವುದಲ್ಲದೆ ನಮ್ಮಲ್ಲಿನ ಏಕತಾನತೆಯನ್ನೂ ಹೋಗಲಾಡಿಸುತ್ತದೆ.
ಖುಷಿಯನ್ನು ನೀಡುತ್ತದೆ
ಸಸಿಗಳನ್ನು ನೆಟ್ಟು ಅವುಗಳಿಗೆ ನೀರು, ಗೊಬ್ಬರ ಹಾಕಿ ಬೆಳಸುವುದರಿಂದ ಮನಸ್ಸಿಗೆ ಒಂದು ತರಹದ ಖುಷಿಯ ಅನುಭವ ದೊರೆಯಲ್ಲಿದ್ದು, . ಅವು ಬೆಳೆದಂತೆ ಅದನ್ನು ನೋಡಿ ಖುಷಿ ಪಡುವುದು. ಹೂವು ಹಣ್ಣು ಬಿಟ್ಟಾಗ ನಾವು ನೆಟ್ಟ ಗಿಡದಲ್ಲಿ ಫಲ ಬಂತು ಎಂಬ ನೆಮ್ಮದಿ ಹಾಗೂ ಸಂತೃಪ್ತಿಯನ್ನು ನೀಡುತ್ತದೆ. ಇನ್ನು ತೋಟಗಾರಿಕೆ ಅಥವಾ ಗಾರ್ಡನಿಂಗ್ ಹವ್ಯಾಸ ಬೆಳಸಿಕೊಳ್ಳುವುದರಿಂದ ಪ್ರಕೃತಿ ಜೊತೆ ಕನೆಕ್ಟ್ ಆಗಬಹುದಾಗಿದ್ದು, ಇದು ಸಂವಹನ ಕಲೆಯನ್ನು ಹೆಚ್ಚಿಸುತ್ತದೆ.