ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Belly Fat: ಹೊಟ್ಟೆಯ ಬೊಜ್ಜು ನಿಯಂತ್ರಣ ಮಾಡಲು ಆಹಾರಕ್ರಮದಲ್ಲಿ ಏನು ಬದಲಾವಣೆ ಅಗತ್ಯ?

Health Tips: ಅನಾರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯ ಬೊಜ್ಜಿಗೆ ಕಾರಣ ವಾಗುತ್ತಿದೆ. ಅತೀಯಾದ ಹೊರಗಿನ ಆಹಾರ, ಕರಿದ ಆಹಾರ ತಿನ್ನುವುದರಿಂದ ಪೌಷ್ಟಿಕಾಂಶದ ಸಮ ತೋಲನವನ್ನು ಹಾಳುಮಾಡುತ್ತದೆ. ಇದರಿಂದ ಕರುಳಿನ ಆರೋಗ್ಯ ಕೆಟ್ಟು ಹೊಟ್ಟೆಯ ಭಾಗದ ಸ್ನಾಯುಗಳ ಸುತ್ತಲೂ 'ವಿಸರಲ್ ಫ್ಯಾಟ್' ಸಂಗ್ರಹ ವಾಗುತ್ತದೆ.

ಹೊಟ್ಟೆಯ ಬೊಜ್ಜು ನಿಯಂತ್ರಣ ಹೇಗೆ?

ಸಂಗ್ರಹ ಚಿತ್ರ -

Profile
Pushpa Kumari Sep 7, 2026 7:02 AM

ನವದೆಹಲಿ,ಸೆ.6: ಇತ್ತೀಚೆಗೆ ಬೊಜ್ಜು ಇಳಿಸಿಕೊಳ್ಳಲು (Reduce Upper Belly Fat) ಕೆಲವರು ನಾನಾ ರೀತಿಯ ಸಾಹಸ ಮಾಡುತ್ತಲೇ ಇರುತ್ತಾರೆ. ದಿನನಿತ್ಯ ಊಟ ಬಿಡುವುದು,ಜಿಮ್ ವರ್ಕೌಟ್ ಎಂದು ಇದಕ್ಕಾಗಿಯೇ ಸಮಯ ಮೀಸಲಿಡುತ್ತಾರೆ. ಅದರಲ್ಲಿ ಮೇಲ್ಪೊಟ್ಟೆಯ ಬೊಜ್ಜು ಬಹು ದೊಡ್ಡ ಸಮಸ್ಯೆಯಾಗಿದ್ದು ಕೇವಲ ಬಾಹ್ಯ ಸೌಂದರ್ಯಕ್ಕೆ ಪರಿಣಾಮ ಬೀರದೇ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗೆ ಕಾರಣವಾಗುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ 2019-2020 ರ ದತ್ತಾಂಶದಲ್ಲಿ 57.7% ರಷ್ಟು ಜನರು ಬೊಜ್ಜಿನಿಂದ ಬಳಲುತ್ತಿದ್ದಾರೆ‌. ಹಾಗಿದ್ರೆ ಇದಕ್ಕೆ ಕಾರಣವೇನು?

ಕರಿದ ಆಹಾರ ಸೇವನೆ

ಅನಾರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತಿದೆ. ಅತೀಯಾದ ಹೊರಗಿನ ಆಹಾರ, ಕರಿದ ಆಹಾರ ತಿನ್ನುವುದರಿಂದ ಪೌಷ್ಟಿಕಾಂಶದ ಸಮ ತೋಲನವನ್ನು ಹಾಳುಮಾಡುತ್ತದೆ. ಇದರಿಂದ ಕರುಳಿನ ಆರೋಗ್ಯ ಕೆಟ್ಟು ಹೊಟ್ಟೆಯ ಭಾಗದ ಸ್ನಾಯುಗಳ ಸುತ್ತಲೂ 'ವಿಸರಲ್ ಫ್ಯಾಟ್' ಸಂಗ್ರಹವಾಗುತ್ತದೆ.

Vishwavani Health: ಜಿರಳೆಗಳೆಂದು ಒಪ್ಪಿಕೊಂಡು ತಪ್ಪು ಮಾಡಿದ್ರಾ ಜೆನ್ ಝೀಗಳು?

ಅತೀಯಾದ ​ಸಕ್ಕರೆ ಸೇವನೆ:

ಹೆಚ್ಚಿನ ಪ್ರಮಾಣದ ಸಕ್ಕರೆ ಹಾಗೂ ಸಂಸ್ಕರಿಸಿದ ಹಿಟ್ಟಿನ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆಯ ಮೇಲ್ಭಾಗದಲ್ಲಿ ಬೇಗನೆ ಕೊಬ್ಬು ಶೇಖರಣೆಯಾಗುತ್ತದೆ.

ಒತ್ತಡ:

ಒತ್ತಡದ ಮಟ್ಟ ಹೆಚ್ಚಾದಾಗ ಕೊಬ್ಬಿನ ಶೇಖರಣೆಗೆ ಕಾರಣವಾಗುವ ಸಾಮರ್ಥ್ಯ ಹೆಚ್ಷಿಸುತ್ತದೆ‌‌. ಒತ್ತಡದ ಹಾರ್ಮೋನ್ ಕಾರ್ಟಿಸೋಲ್‌ನ ಹೆಚ್ಚುವರಿ ಪ್ರಮಾಣವು ಇದಕ್ಕೆ ಕಾರಣವಾಗಬಹುದು.

ಅಸಮರ್ಪಕವಾದ ‌ನಿದ್ರೆಯ ಅಭ್ಯಾಸ:

ಕಳಪೆ ನಿದ್ರೆಯೂ ಹೊಟ್ಟೆಯ ಕೊಬ್ಬಿನೊಂದಿಗೆ ಸಂಬಂಧ ಹೊಂದಿದೆ. ಇದರಿಂದ ಹಸಿವನ್ನು ನಿಯಂತ್ರಿಸುವ ಮತ್ತು ಗ್ಲೂಕೋಸ್ ಮೆಟಬಾಲಿಸಂ ನಿರ್ವಹಿಸುವ ಹಾರ್ಮೋನ್‌ಗಳ ಸಮತೋಲನ ತಪ್ಪಬಹುದು

ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ:

ಈ ಆಹಾರವನ್ನು ಸಮತೋಲಿತವಾಗಿ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ. ಮೊಟ್ಟೆಗಳು,ಮೀನು, ಗ್ರೀಕ್ ಮೊಸರು ಜೊತೆಗೆ ಸೂಕ್ತ ದೈಹಿಕ ವ್ಯಾಯಾಮವೂ ಅತ್ಯಗತ್ಯ. ​ಸಕ್ಕರೆಯುಕ್ತ ಪಾನೀಯಗಳು, ​ಮೈದಾ ಉತ್ಪನ್ನಗಳು,​ಕರಿದ ಮತ್ತು ಎಣ್ಣೆಯುಕ್ತ ತಿಂಡಿಗಳು ಹಾಗೂ ಮದ್ಯಪಾನ ತಪ್ಪಿಸಿ.