ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Poor Sleep: ಒಬ್ಬ ವ್ಯಕ್ತಿ ಮೂರು ದಿನವರೆಗೆ ನಿದ್ದೆ ಮಾಡದೇ ಇದ್ದಲ್ಲಿ ಈ ಸಮಸ್ಯೆ ಕಾಡಲಿದೆ

ನಿದ್ರೆ ಎನ್ನುವುದು ಪ್ರತಿಯೊಂದು ಮನುಷ್ಯನಿಗೂ ತುಂಬಾನೇ ಮುಖ್ಯವಾದದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಕೂಡ ನಿದ್ರೆಯಲ್ಲಿ ಅಡಗಿದ್ದು ಕಡಿಮೆ ನಿದ್ರೆಯು ಮೆದುಳಿಗೆ ಹಾನಿ ಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ನಿದ್ರೆಯು ಸರಿಯಾಗಿ ಆಗಿದ್ದರೆ, ಆಗ ಇದರಿಂದ ರಕ್ತದೊತ್ತಡವು ಹೆಚ್ಚಾಗಬಹುದು.

ಒಬ್ಬ ವ್ಯಕ್ತಿ ಮೂರು ದಿನ ಸರಿಯಾಗಿ ನಿದ್ದೆ ಮಾಡದಿದ್ದರೆ ಏನಾಗುತ್ತೆ ಗೊತ್ತಾ?

Profile Pushpa Kumari Mar 17, 2025 7:00 AM

ನವದೆಹಲಿ: ನಿದ್ರಾಹೀನತೆ(Poor Sleep) ಎನ್ನುವುದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಇತ್ತೀಚಿನ ಆಧುನಿಕ ಜೀವನ ಶೈಲಿ‌ ಅತಿಯಾದ ಒತ್ತಡ ಮತ್ತು ಮಾನಸಿಕ ಸಮಸ್ಯೆಗಳಿಂದ ಕೆಲವರಿಗೆ ಸರಿಯಾದ ನಿದ್ದೆ ಇಲ್ಲದಂತಾಗಿದೆ. ನಿದ್ದೆಯ ಕೊರತೆ ದಿನಾ ಮುಂದುವರಿಸಿದರೆ ಕೆಲವೇ ದಿನಗಳಲ್ಲಿ ಆರೋಗ್ಯಕ್ಕೆ ಬಹಳಷ್ಟು ಹಾನಿಯಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಒಬ್ಬ ವ್ಯಕ್ತಿಗೆ 7-8 ಗಂಟೆಗಳ ನಿದ್ರೆ ಅಗತ್ಯವಾಗಿದ್ದು, ಕೆಲವು ಸಂದರ್ಭದಲ್ಲಿ ಆಫೀಸಿನ ಕೆಲಸ ಮನೆಯ ಕೆಲಸ ಅಂತ ಹೀಗೆ ಅನೇಕ ಕಾರಣಗಳಿಂದಾಗಿ ನಿದ್ರೆಯ ಕೊರತೆ ಉಂಟಾತ್ತದೆ. ಹಾಗಾದರೆ ಒಬ್ಬ ವ್ಯಕ್ತಿ ಮೂರು ದಿನ‌ ಅಥವಾ ಒಂದು ವಾರದವರೆಗೆ ನಿದ್ರಾ ಹೀನತೆಯ ಸಮಸ್ಯೆ ಎದುರಿಸುತ್ತಿದ್ದರೆ ಯಾವೆಲ್ಲಾ ತೊಂದರೆಗಳು ಉಂಟಾಗುತ್ತದೆ ಎಂಬುದನ್ನು ತಜ್ಞರು ಎಚ್ಚರಿಕೆ ‌ನೀಡಿದ್ದಾರೆ.

ನಿದ್ರೆ ಎನ್ನುವುದು ಪ್ರತಿಯೊಂದು ಮನುಷ್ಯನಿಗೂ ತುಂಬಾನೇ ಮುಖ್ಯವಾದದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಕೂಡ ನಿದ್ರೆಯಲ್ಲಿ ಅಡಗಿದ್ದು ಕಡಿಮೆ ನಿದ್ರೆಯು ಮೆದುಳಿಗೆ ಹಾನಿ ಮಾಡುತ್ತದೆ ಎಂದು ಇತ್ತೀ ಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ನಿದ್ರೆಯು ಸರಿ ಯಾಗಿಲ್ಲ ವಾದರೆ, ಆಗ ಇದರಿಂದ ರಕ್ತದೊತ್ತಡವು ಹೆಚ್ಚಾಗಬಹುದು. ಅಮೆರಿಕದ ಕಾರ್ಡಿಯಾಲಜಿ ಕಾಲೇಜ್ ನಡೆಸಿರುವ ಅಧ್ಯಯನ ವರದಿಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿದ್ದು ರಾತ್ರಿ ವೇಳೆ ಏಳೆಂಟು ಗಂಟೆ ನಿದ್ರೆ ಮಾಡಲು ಸಾಧ್ಯವಾಗದೆ ಇರುವುದು. ಇದರಿಂದ ಆರೋಗ್ಯದ ಮೇಲೆ ತೀವ್ರ ರೀತಿಯ ಪರಿಣಾಮ ಬೀರುವುದು ಮಾತ್ರವಲ್ಲದೆ, ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರಲಿದೆ.

ಮೂರು ದಿನ ನಿದ್ದೆ ಮಾಡದಿದ್ದರೆ ಏನಾಗುತ್ತೆ?

ಮೂರು ದಿನಕ್ಕಿಂತ ಹೆಚ್ಚು ನಿದ್ದೆಯಿಲ್ಲದಿದ್ದರೆ ಇದ್ದಲ್ಲಿ‌ ಅಂತಹವರಲ್ಲಿ ಮೆದುಳು ತೀವ್ರ ಒತ್ತಡಕ್ಕೆ ಒಳಗಾಗಿ ಆರೋಗ್ಯಕ್ಕೆ ಬಹಳಷ್ಟು ಹಾನಿ ಯಾಗುವ ಸಾಧ್ಯತೆ ಇರಲಿದೆ. ಇದು ತೀವ್ರವಾದ ದಣಿವು,ಕಿರಿಕಿರಿ, ಒತ್ತಡಕ್ಕೆ ಒಳಗಾಗಿ ವ್ಯಕ್ತಿಯು ಭ್ರಮೆಯಿಂದ ಬಳಲುತ್ತಾನೆ ಇದರಿಂದ ಚರ್ಮವು ಸುಕ್ಕಗಟ್ಟುತ್ತದೆ, ದೃಷ್ಟಿ ಮಂಜಾಗುತ್ತದೆ. ಕಣ್ಣುಗಳು ನೋಯುತ್ತವೆ ಮತ್ತು ಸ್ನಾಯುಗಳು ಸಂಕುಚಿತಗೊಂಡಂತೆ ಭಾಸ ವಾಗಲಿದೆ. ಇನ್ನು ಆರೋಗ್ಯ ತಜ್ಞರ ಪ್ರಕಾರ ಇದು ಹೃದಯದ ಬಡಿತ ಮತ್ತು ರಕ್ತದೊತ್ತಡ ವನ್ನು ಹೆಚ್ಚಿಸಬಹುದು ಮತ್ತು ಹೃದಯ ಸಂಬಂಧಿ ಖಾಯಿಲೆಗಳು ಕೂಡ ಹೆಚ್ಚಾಗಬಹುದು ಎಂದಿದ್ದಾರೆ.

ಈ ಸಮಸ್ಯೆ ಉಂಟಾಗಬಹುದು

​ಹೃದಯರಕ್ತನಾಳದ ಕಾಯಿಲೆ​:ರಾತ್ರಿ ಸರಿಯಾದ ನಿದ್ದೆ ಬಾರದೇ ಇದ್ದಲ್ಲಿ ರಕ್ತದೊತ್ತಡ ಹೆಚ್ಚಾಗಲಿದೆ. ಇದರಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆಯು ಬರಬಹುದು. ದೀರ್ಘ ಕಾಲಕ್ಕೆ ನಿದ್ರೆಗೆ ತೊಂದರೆ ಇದರಿಂದ ನರವ್ಯವಸ್ಥೆ ಕಾರ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಇದರಿಂದ ಕಾರ್ಟಿ ಸೋಲ್ ನಂತಹ ಹಾರ್ಮೋನ್ ಮಟ್ಟವು ಏರಿಕೆ ಆಗಿ ಹೃದಯದ ಸಮಸ್ಯೆಗಳು ಹೆಚ್ಚಾಗಲಿವೆ.

​ಖಿನ್ನತೆ ಮತ್ತು ಆತಂಕ​:ನಿದ್ದೆ ಸರಿಯಾಗಿ ಬಾರದೇ ಇದ್ದಲ್ಲಿ ಖಿನ್ನತೆ ಹೆಚ್ಚಾಗಲಿದೆ. ಇದರಿಂದ ಮೆದುಳಿನಲ್ಲಿ ಇರುವ ನರಗಳ ಮೇಲೆ ಪರಿಣಾಮ ಬೀರಿ ಮಾನಸಿಕ ಕಿರಿ ಕಿರಿ ಉಂಟಾ ಗಲಿದೆ.‌ ಇನ್ನು ಕೆಟ್ಟ ನಿದ್ರೆಯಿಂದಾಗಿ ಒತ್ತಡವು ಹೆಚ್ಚಾಗುವುದು ಮತ್ತು ಆತಂಕ ಹಾಗೂ ಖಿನ್ನತೆಯು ಕಾಡ ಬಹುದು.ಇದರಿಂದ ನಿಮ್ಮ ದೇಹ ದಿನ ನಿತ್ಯದಲ್ಲಿ ಸಕ್ರಿಯವಾಗಿರಲು ಸಮಸ್ಯೆ ಉಂಟಾಗಬಹುದು.

ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ:ಸರಿಯಾಗಿ ನಿದ್ದೆ ಬಾರದೇ ಇದ್ಸಲ್ಲಿ ನಿಮಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುವ ಜೊತೆಗೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಇದರಿಂದ ಪದೇ ಪದೇ ಅನಾರೋಗ್ಯ ಸಮಸ್ಯೆ ‌ಉಂಟಾಗಲಿದೆ. ಹಾಗಾಗಿ ಸರಿಯಾದ ನಿದ್ರೆ ಕ್ರಮವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಚರ್ಮದ ಸಮಸ್ಯೆ: ನಿದ್ದೆಯ ಸಮಸ್ಯೆಯಿಂದ ಚರ್ಮದ ಸಮಸ್ಯೆಗಳು ಕೂಡ ಹೆಚ್ಚಾ ಗಲಿದೆ. ಇದರಿಂದ ಚರ್ಮ ಮಂದವಾಗುವುದು, ಕಪ್ಪು ಕಲೆಗಳು ಉಂಟಾಗಿ ಚರ್ಮದ ಅಂದ ಕಡಿಮೆ ಆಗಲಿದೆ. ಹಾಗೆಯೇ ಮೊಡವೆ ಮತ್ತು ಬೇಗನೆ ವಯಸ್ಸಾದಂತೆ ಕಾಣುವುದು ಇಂತಹ ಸಮಸ್ಯೆಗಳು ಎದುರಾಗಬಹುದು.

ತೂಕ ಹೆಚ್ಚಾಗಲಿದೆ: ರಾತ್ರಿಯ ನಿದ್ದೆಯ ಅಸಮತೋಲನವು ಅನಾರೋಗ್ಯಕರ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅತೀಯಾದ ನಿದ್ದೆಯ ಕೊರತೆಯು ಬೊಜ್ಜು, ಮಧು ಮೇಹ ಮತ್ತು ಹೃದಯರ ಕ್ತನಾಳದ ಕಾಯಿಲೆಗಳಂತಹ ಅಪಾಯವನ್ನು ಹೆಚ್ಚಿಸಿ ಅನಾರೋಗ್ಯಕರ ಸಮಸ್ಯೆ ಹೆಚ್ಚಿಸುತ್ತದೆ.

ಇದನ್ನು ಓದಿ: Health Tips: ಮೊಳಕೆ ಬಂದ ಆಲೂಗಡ್ಡೆಯನ್ನು ಬಳಸಬಹುದೇ?

ಎಷ್ಟು ನಿದ್ದೆ ಅಗತ್ಯ?

ಹೆಲ್ತ್‌ಲೈನ್ ವರದಿಯ ಪ್ರಕಾರ, ವಯಸ್ಕರು ಪ್ರತಿದಿನ ಏಳು ಗಂಟೆಗಳ ಕಾಲ ನಿದ್ದೆ ಮಾಡಬೇಕು.ಇನ್ನು 3 ತಿಂಗಳ ವಯಸ್ಸಿನ ಮಕ್ಕಳು 14 ರಿಂದ 17 ಗಂಟೆಗಳ ಕಾಲ ನಿದ್ರಿಸಬೇಕು.4 ರಿಂದ 12 ತಿಂಗಳು ವಯಸ್ಸಿನ ಮಕ್ಕಳು 12 ರಿಂದ 16 ಗಂಟೆಗಳ ಸಮಯ,3 ರಿಂದ 5 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 10 ರಿಂದ 13 ಗಂಟೆಗಳ ಕಾಲ ಮಲಗಬೇಕು.ಹಾಗೆಯೇ 18-60 ವರ್ಷ ವಯಸ್ಸಿನ ವಯಸ್ಕರಿಗೆ ದಿನಕ್ಕೆ 7 ಗಂಟೆಗಳ ನಿದ್ರೆ ಬೇಕಾಗುತ್ತದೆ. 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರು ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಸಮಯ ನಿದ್ದೆ ಮಾಡಬೇಕು.