ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೇಸಿಗೆಯಲ್ಲಿ ಕಿತ್ತಳೆ ರಸ ಅಥವಾ ಬಿಸಿ ಕಾಫಿ: ಯಾವುದು ಆರೋಗ್ಯಕ್ಕೆ ಉತ್ತಮ?

Health Tips: ಬೇಸಿಗೆ ಧಗೆಯನ್ನು ಕಡಿಮೆಕೊಳ್ಳಲು ತಂಪಾದ ಪಾನೀಯದ ಬಳಕೆ ಅಗತ್ಯ..ಆದರೆ ಬೇಸಿಗೆಯ ಸುಸ್ತನ್ನು ನೀಗಿಸಲು ಹೆಚ್ಚಿನವರು ಕಿತ್ತಲೆ ಜ್ಯೂಸ್ ಮತ್ತು ಬಿಸಿ ಕಾಫಿಗೆ ಆದ್ಯತೆ ನೀಡುತ್ತಾರೆ. ಕಿತ್ತಳೆ ರಸ ಮತ್ತು ಬಿಸಿ ಕಾಫಿ ಎರಡೂ ತನ್ನದೇ ಆದ ವಿಶಿಷ್ಟ ಪ್ರಯೋಜನಗಳನ್ನು ಹೊಂದಿದ್ದು ಇವೆರಡರಲ್ಲಿ ಯಾವುದು ಸೇವನೆ ಮಾಡಿದರೆ ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಕಿತ್ತಳೆ ರಸ ಅಥವಾ ಬಿಸಿ ಕಾಫಿ: ಯಾವುದು ಉತ್ತಮ?

ಸಂಗ್ರಹ ಚಿತ್ರ -

Profile
Pushpa Kumari Apr 15, 2026 7:00 AM

ನವದೆಹಲಿ,ಎ.14: ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಬೇಸಿಗೆ ಧಗೆಯನ್ನು ಕಡಿಮೆಕೊಳ್ಳಲು ತಂಪಾದ ಪಾನೀಯದ ಬಳಕೆ ಅಗತ್ಯ. ಆದರೆ ಬೇಸಿಗೆಯ ಸುಸ್ತನ್ನು ನೀಗಿಸಲು ಹೆಚ್ಚಿನವರು ಕಿತ್ತಲೆ ಜ್ಯೂಸ್ (Orange Juice) ಮತ್ತು ಬಿಸಿ ಕಾಫಿಗೆ (Hot Coffee) ಆದ್ಯತೆ ನೀಡುತ್ತಾರೆ. ಕಿತ್ತಳೆ ರಸ ಮತ್ತು ಬಿಸಿ ಕಾಫಿ ಎರಡೂ ತನ್ನದೇ ಆದ ವಿಶಿಷ್ಟ ಪ್ರಯೋಜನ ಗಳನ್ನು ಹೊಂದಿದ್ದು ಇವೆರಡರಲ್ಲಿ ಯಾವುದು ಸೇವನೆ ಮಾಡಿದರೆ ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಕಿತ್ತಳೆ ರಸದ ಪ್ರಯೋಜನ ಏನು?

ಕಿತ್ತಳೆ ರಸವು ಜಲಸಂಚಯನಕ್ಕೆ ಸಹಾಯ ಮಾಡಲಿದ್ದು ಅಗತ್ಯ ಜೀವಸತ್ವಗಳನ್ನು ನೀಡುತ್ತದೆ. ಇದರಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ದೇಹದ ತೇವಾಂಶವನ್ನು ಕಾಪಾಡಲು ಪ್ರಯೋಜನಕಾರಿಯಾಗಿದೆ. ಇದು ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡಲಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.ಅದರಲ್ಲೂ ಫ್ರಿಜ್‌ನಲ್ಲಿಟ್ಟ ಕಿತ್ತಳೆ ರಸವನ್ನು ಸೇವನೆ ಮಾಡಿದಾಗ ದೇಹದ ಉಷ್ಣತೆ ತಕ್ಷಣವೇ ಕಡಿಮೆಯಾಗುತ್ತದೆ.

Health Tips: ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯೇ? ಇದಕ್ಕೆ ಕಾರಣವೇನು?

ಬಿಸಿ ಕಾಫಿಯ ವಿಶೇಷತೆ

ಬಿಸಿ ಕಾಫಿ ಯೂ ಬೆವರುವಿಕೆಯ ಮೂಲಕ ಪರೋಕ್ಷವಾಗಿ ನಿಮ್ಮನ್ನು ತಂಪು ಮಾಡುತ್ತದೆ. ಬೆವರು ಆವಿಯಾದಾಗ ದೇಹವು ಸ್ವಾಭಾವಿಕವಾಗಿ ತಂಪಾಗುತ್ತದೆ.ಲಬೇಸಿಗೆಯ ಸುಸ್ತನ್ನು ನೀಗಿಸಿ ಮೆದುಳನ್ನು ಚುರುಕು ಮಾಡಲು ಕಾಫಿಯಲ್ಲಿರುವ ಕೆಫೀನ್ ಸಹಾಯ ಮಾಡುತ್ತದೆ.

ಯಾವುದು ದೇಹಕ್ಕೆ ಉತ್ತಮ?

ನಿಮಗೆ ಕೆಫೀನ್ ಕಿಕ್ ಅಗತ್ಯವಿದ್ದರೆ ಕಾಫಿಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಕಿತ್ತಳೆ ರಸವು ವಿಶೇಷವಾಗಿ ಅದು ತಾಜಾವಾಗಿದ್ದಾಗ ಸೇವಿಸಿದರೆ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶ ಗಳನ್ನು ನೀಡುತ್ತದೆ. ನೀವು ಮಾನಸಿಕವಾಗಿ ಕೆಫೀನ್ ಇಲ್ಲದೆ ನಿಮ್ಮ ದಿನವನ್ನು ಪ್ರಾರಂಭಿಸಲು ಸಾಧ್ಯ ವಾಗದಿದ್ದರೆ, ಬೇಸಿಗೆಯಲ್ಲಿಯೂ ಸಹ ಕಾಫಿಗೆ ಸ್ಥಾನವಿದೆ. ನೀವು ಸಾಕಷ್ಟು ನೀರಿನ ಸೇವನೆಯೊಂದಿಗೆ ಅದನ್ನು ಸಮತೋಲನಗೊಳಿಸಬಹುದು.