ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Work Stress: ಕೆಲಸದ ಒತ್ತಡದಿಂದ ರಿಲ್ಯಾಕ್ಸ್ ಆಗಲು ಇಲ್ಲಿದೆ ಸಿಂಪಲ್ ಟ್ರಿಕ್ಸ್

Health Tips: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒತ್ತಡವು ಸಹಜವಾಗಿ ನಮ್ಮ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಅಲ್ಲದೆ ಕೆಲಸದ ಮೇಲಿನ ಪ್ರೇರಣೆ ಕೂಡ ಕಡಿಮೆಯಾಗುತ್ತದೆ. ಹಾಗಾಗಿ ಕೆಲಸಕ್ಕೆ ಸಂಬಂಧಿಸಿದ ದೀರ್ಘಕಾಲದ ಒತ್ತಡದಿಂದ ಹೊರಬರುವುದು ಬಹಳ ಮುಖ್ಯ. ಅದಕ್ಕೇನು ನೀವು ಮಾಡಬಹುದು ಎನ್ನುವ ಟಿಪ್ಸ್‌ ಇಲ್ಲಿದೆ.

ಉದ್ಯೋಗ ಸ್ಥಳದ ಒತ್ತಡ ನಿವಾರಣೆಗೆ ಇಲ್ಲಿದೆ ಪರಿಹಾರ

ಸಾಂದರ್ಭಿಕ ಚಿತ್ರ.

Profile Pushpa Kumari Mar 19, 2025 7:00 AM

ನವದೆಹಲಿ: ಮನೆ, ಆಫೀಸ್ ಕೆಲಸ ಎಂಬ ಬ್ಯುಸಿಯಾಗಿರುವ ಬಹುತೇಕರು ಒತ್ತಡದಿಂದ ಬಳಲುತ್ತಿದ್ದಾರೆ. ಇದರಿಂದ ಮಾನಸಿಕ ಸಮಸ್ಯೆಗಳಷ್ಟೇ ಅಲ್ಲ ಜೀವನ ಶೈಲಿಗೆ ಸಂಬಂಧಿಸಿದ ಅನೇಕ ದೈಹಿಕ ಸಮಸ್ಯೆಗಳು ಎದುರಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒತ್ತಡವು ಸಹಜವಾಗಿ ನಮ್ಮ ಸಾಮರ್ಥ್ಯ ವನ್ನು ಕುಗ್ಗಿಸಿ, ಕೆಲಸದ ಪ್ರೇರಣೆ ಕೂಡ ಕಡಿಮೆ ಮಾಡುತ್ತದೆ. ಹಾಗಾಗಿ ಕೆಲಸಕ್ಕೆ ಸಂಬಂಧಿಸಿದ ದೀರ್ಘ ಕಾಲದ ಒತ್ತಡದಿಂದ ಹೊರ ಬರುವುದು ಬಹಳ ಮುಖ್ಯ. ಇಂತಹ ಸಂದರ್ಭ ದಲ್ಲಿ ಒತ್ತಡ ನಿರ್ವಹಣೆಯ ಮಾರ್ಗವನ್ನು ಕಂಡುಕೊಳ್ಳುವುದು ಅನಿವಾರ್ಯ ಎನಿಸಿಕೊಂಡಿದೆ. ಅತಿಯಾಗಿ ಯೋಚಿಸಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವ ಬದಲು ಒತ್ತಡ ನಿವಾರಣೆ ಕುರಿತು ಕೆಲವು ಸ್ವಆರೈಕೆ ಮಾಡುವುದು ಅಗತ್ಯ. ಹಾಗಾದರೆ ಉದ್ಯೋಗ ಸ್ಥಳದಲ್ಲಿನ ಒತ್ತಡ ನಿವಾರಿಸಲು ಏನೆಲ್ಲ‌ ಮಾಡಬಹುದು ಎಂಬ ವಿವರಣೆ ಇಲ್ಲಿದೆ (Self-Care Tips). ಇದನ್ನು ಅಭ್ಯಾಸ ಮಾಡಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡದೆ ಸದಾ ಲವಲವಿಕೆಯಿಂದ ಇರಬಹುದು.

ಪೌಷ್ಟಿಕ ಆಹಾರ ಸೇವನೆ

ದೈಹಿಕ ಮತ್ತು ಮಾನಸಿಕ ಒತ್ತಡ ನಿಭಾಯಿಸಲು ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ಹಣ್ಣು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಪೌಷ್ಟಿಕ ಆಹಾರ ಸೇವಿಸಿದರೆ ನಿಮ್ಮ ಒತ್ತಡ 4%ದಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನ ಒಂದರಲ್ಲಿ ಉಲ್ಲೇಖಿಸಲಾಗಿದೆ. ತಾಜಾ ಹಣ್ಣು ಹಾಗೂ ತರಕಾರಿಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ ಸತ್ವಗಳು ಹೇರಳವಾಗಿದ್ದು ಒತ್ತಡ ಮಟ್ಟವನ್ನು ನಿಯಂತ್ರಿಸುತ್ತದೆ. ಮೆಗ್ನೀಸಿಯಂ ಹಾಗೂ ಕ್ಯಾಲ್ಸಿಯಂಯುಕ್ತ ಆಹಾರ ಸೇವಿಸುವುದರಿಂದ ಆರೋಗ್ಯಕರ ಪ್ರಯೋಜನೆ ಸಿಗುವ ಜತೆಗೆ ಒತ್ತಡದಿಂದ ಹೊರಬರಬಹುದು.

ಚೆನ್ನಾಗಿ ನಿದ್ರಿಸಿ

ಕೆಲಸದ ಒತ್ತಡ ಇರುವವರಿಗೆ ನಿದ್ರಾಹೀನತೆ ಬಹುದೊಡ್ಡ ಸಮಸ್ಯೆ. ಅಸಮರ್ಪಕ ನಿದ್ರೆ ಮಾಡುವುದರಿಂದ ಮಾನಸಿಕ ಕಿರಿಕಿರಿ, ಇತರ ಸಮಸ್ಯೆ ಬಾಧಿಸುತ್ತದೆ. ನಿಮ್ಮ ಮೆದುಳಿಗೆ ಸಾಕಷ್ಟು ವಿಶ್ರಾಂತಿ ಅಗತ್ಯವಿದ್ದು ನೀವು ಚೆನ್ನಾಗಿ ನಿದ್ರಿಸಿದಾಗ ಸ್ಮರಣಾ ಶಕ್ತಿ ಕೂಡ ಬಲಗೊಳ್ಳುತ್ತದೆ. ಪ್ರತಿ ದಿನ 7-8 ಗಂಟೆಯಾದರೂ ನಿದ್ರಿಸಬೇಕು. ನಿದ್ರಾಹೀನತೆ ಇದ್ದಾಗ ಕೆಲಸದಲ್ಲಿ ಮರೆವು ಕಾಡಲಿದೆ. ಕ್ರಮೇಣ ಕೆಲಸದ ಮೇಲಿನ ಗಮನ, ಸ್ಮರಣೆ ಎಲ್ಲ ದುರ್ಬಲವಾಗುತ್ತದೆ.

ವ್ಯಾಯಾಮ ಮಾಡಿ

ವ್ಯಾಯಾಮ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಕೆಲಸದ ಒತ್ತಡ ಸಮಸ್ಯೆ, ಆತಂಕದ ಸಮಸ್ಯೆ ಸಹ ನಿವಾರಣೆಯಾಗುತ್ತದೆ. ಕೆಲಸದ ಸ್ಥಳದಲ್ಲಿ ಕಾಡುವ ಆಲಸ್ಯತನ, ಉದಾಸೀನತೆ ಎಲ್ಲದಕ್ಕೂ ನಿತ್ಯ ವ್ಯಾಯಾಮ ಮಾಡುವ ಹವ್ಯಾಸ ಬೆಳೆಸಿಕೊಳ್ಳುವುದು ಬಹಳ ಒಳ್ಳೆಯದು. ವ್ಯಾಯಾಮಗಳನ್ನು ನಿತ್ಯ ಮಾಡಿದರೆ ಒತ್ತಡ ರಹಿತವಾಗಿ ಕೆಲಸ ಮಾಡುವ ಜತೆಗೆ ನಿಮ್ಮಲ್ಲಿ ಇರುವ ಭಯ, ಹಿಂಜರಿಕೆ, ಅಳುಕು ಎಲ್ಲ ಕಡಿಮೆ ಆಗಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ.

ಇದನ್ನು ಓದಿ:Summer Health Tips: ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಇಲ್ಲಿವೆ ತಜ್ಞರ ಸಲಹೆ!

ಉತ್ತಮ ಹವ್ಯಾಸ ಇರಲಿ

ಒತ್ತಡದ ನೆಪ ಹೇಳಿ ಧೂಮಪಾನ, ಮದ್ಯಪಾನ ಮಾಡಿದರೆ ಆರೋಗ್ಯ ಕೆಡಲಿದೆ. ಬದಲಿಗೆ ಪುಸ್ತಕ ಓದುವುದು, ಟ್ರಕ್ಕಿಂಗ್ ಮಾಡುವುದು, ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದು, ಸಿನೆಮಾ ವೀಕ್ಷಿಸುವುದು, ಸಂಗೀತ ಕೇಳುವುದು, ಕರಕುಶಲ ಕಲಿಕೆ ಇತರ ಉತ್ತಮ ಹವ್ಯಾಸದಲ್ಲಿ ಮಗ್ನರಾದಾಗ ಒತ್ತಡ ಸಮಸ್ಯೆ ಕಾಡಲಾರದು. ಸ್ನೇಹಿತರ ಜತೆ, ಕುಟುಂಬದ ಜತೆ ಕಾಲ ಕಳೆದರೆ ಕೂಡ ಆತಂಕ, ಒತ್ತಡ ಎಲ್ಲವೂ ದೂರಾಗುತ್ತದೆ. ಒಟ್ಟಿನಲ್ಲಿ ಸಮಸ್ಯೆ ಯಾವುದಿದ್ದರೂ ಸರಿಯಾಗಿ ಪರಮರ್ಶಿಸಿದರೆ ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ ಎನ್ನುತ್ತಾರೆ ತಜ್ಞರು.