ಹೃದಯದ ವೈಫಲ್ಯದಿಂದ ಬಳಲುತ್ತಿದ್ದೀರಾ? ದಾಳಿಂಬೆ ಹಣ್ಣು ಸೇವಿಸಿ!
Health Tips: ದಾಳಿಂಬೆ ಹಣ್ಣಿನ ಪ್ರಯೋಜನ ನೀವು ತಿಳಿದರಲೇ ಬೇಕು. ಇದರಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ಅದರಲ್ಲೂ ಇದೀಗ ಲಂಡನ್‌ನ 'ಕಿಂಗ್ಸ್ ಕಾಲೇಜ್' ವಿಜ್ಞಾನಿಗಳು ಹೃದಯದ ಕಾಯಿಲೆಗೆ ಸಂಬಂಧಿಸಿದಂತೆ ಹೊಸದಾದ ಸಂಶೋಧನೆ ಕಂಡು ಹಿಡಿದಿದ್ದಾರೆ.
ಇಂಟರ್ ನೆಟ್ ಚಿತ್ರ -
ನವದೆಹಲಿ: ನಮ್ಮ ದೇಹಕ್ಕೆ ಹಣ್ಣುಗಳ ಅಗತ್ಯ ಹೆಚ್ಚಿದೆ. ಮುಖ್ಯವಾಗಿ ದಾಳಿಂಬೆ ಹಣ್ಣಿನ ಪ್ರಯೋಜನ (Health Benifits) ನೀವು ತಿಳಿದರಲೇ ಬೇಕು. ಇದರಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ಅದರಲ್ಲೂ ಇದೀಗ ಲಂಡನ್‌ನ 'ಕಿಂಗ್ಸ್ ಕಾಲೇಜ್' ವಿಜ್ಞಾನಿಗಳು ಹೃದಯದ ಕಾಯಿಲೆಗೆ ಸಂಬಂಧಿಸಿದಂತೆ ಹೊಸದಾದ ಸಂಶೋಧನೆ ಕಂಡು ಹಿಡಿದಿದ್ದಾರೆ. ದಾಳಿಂಬೆ, ಆಕ್ರೋಟ್ ನಂತಹ ಹಣ್ಣು ಸೇವನೆ ಮಾಡಿದರೆ ಇದರಲ್ಲಿ ಯುರೊಲಿಥಿಮ್ ಎ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದರಲ್ಲಿ ಇರುವ ಈ ಕಣ ಹೃದಯದ ಆರೋಗ್ಯಕ್ಕೆ ಬಹಳಷ್ಟು ಉಪಯೋಗಕಾರಿ ಅಂದಿದ್ದಾರೆ.
ಈ ಹಣ್ಣುಗಳನ್ನು ತಿಂದಾಗ ನಮ್ಮ ದೇಹದಲ್ಲಿ 'ಯುರೊಲಿಥಿನ್ ಎ' ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ. ಈ ರಾಸಾಯನಿಕವು ಹೃದಯದ ಸ್ನಾಯುಗಳು ಸಡಿಲಗೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.
Vishwavani Health: ಆಹಾರ ಸೇವನೆಯ ವಿಧಾನದಲ್ಲಿದೆ ಆರೋಗ್ಯದ ಗುಟ್ಟು: ವಿಜ್ಞಾನ ಹೇಳೋದೇನು?
ಯಾವ ಕಾಯಿಲೆಗೆ ಪ್ರಯೋಜನಕಾರಿ?
ಕೆಲವರಿಗೆ ಹೃದಯವು ರಕ್ತವನ್ನು ಪಂಪ್ ಮಾಡಿದರೂ, ಸರಿಯಾಗಿ ಚಲನೆಗೊಳ್ಳುವುದಿಲ್ಲ. ಈ ಸಮಸ್ಯೆಗೆ ಪ್ರಾಣಿಗಳಲ್ಲಿ ಮತ್ತು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ, ಹೃದಯದ ಕೆಲಸ ಮಾಡುವ ಸಾಮರ್ಥ್ಯ ಹೆಚ್ಚಾಗಿದೆ ಎಂದು ಸಾಬೀತು ಪಡಿಸಿದ್ದಾರೆ. ಆದರೆ ರಾಸಾಯನಿಕ ನೇರವಾಗಿ ಹಣ್ಣಿನಲ್ಲಿ ಇರುವುದಿಲ್ಲ. ನಾವು ದಾಳಿಂಬೆ ಅಥವಾ ಆಕ್ರೋಟ್ ತಿಂದಾಗ, ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಜೀರ್ಣಿಸಿ ಈ 'ಯುರೊಲಿಥಿನ್ ಎ' ಅನ್ನು ಬಿಡುಗಡೆ ಮಾಡುತ್ತದೆ.
ಆದರೆ ದಾಳಿಂಬೆ ತಿಂದರೆ ಗುಣಪಡಿಸುತ್ತದೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಪ್ರತಿಯೊಬ್ಬರ ಹೊಟ್ಟೆ ಯಲ್ಲಿರುವ ಬ್ಯಾಕ್ಟೀರಿಯಾ ಗಳು ಬೇರೆ ಬೇರೆಯಾಗಿರುತ್ತವೆ. ಹಾಗಾಗಿ ಬರಿ ದಾಳಿಂಬೆ ತಿಂದ ಕೂಡಲೇ ಪರಿಹಾರ ಸಿಗುವುದಿಲ್ಲ. ಈ ಮಧ್ಯೆ, ಆರೋಗ್ಯಕರ ಮತ್ತು ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸುವುದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ.