ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Beauty Tips: ಕೂದಲು ಉದುರುವ ಸಮಸ್ಯೆಯಿಂದ ಬೇಸತ್ತಿದ್ದೀರಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ ನೋಡಿ

Hair Care Tips: ಕೂದಲು ಉದುರುವ ಸಮಸ್ಯೆ ಇಂದು ಬಹುತೇಕ ಎಲ್ಲರಿಗೂ ಸಾಮಾನ್ಯವಾಗಿದ್ದು, ಇದಕ್ಕೆ ಸರಿಯಾದ ಪರಿಹಾರ ಹುಡುಕುವುದು ಹಲವು ಬಾರಿ ಸವಾಲಾಗುತ್ತದೆ. ಜೊತೆಗೆ, ರಾಸಾಯನಿಕ ಅಂಶಗಳಿಂದ ತಯಾರಿಸಿದ ಹೇರ್ ಕಲರ್ ಹಾಗೂ ಬಣ್ಣಗಳನ್ನು ಬಳಸುವುದರಿಂದ ಕೂದಲಿನ ಆರೋಗ್ಯ ಮತ್ತಷ್ಟು ಹದೆಗೆಡುತ್ತಿದ್ದು, ಕೂದಲು ಉದುರುವಿಕೆ ಸಮಸ್ಯೆಗೂ ದಾರಿ ಮಾಡಿಕೊಡುತ್ತದೆ. ಹಾಗಾದ್ರೆ ಇದನ್ನು ನಿಯಂತ್ರಿಸುವುದೇಗೆ ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಸಿಂಪಲ್ ಟಿಪ್ಸ್..

ಕೂದಲು ಉದುರುವುದನ್ನು ನಿಯಂತ್ರಿಸಲು ಇಲ್ಲಿದೆ ಮನೆಮದ್ದು

ಸಾಂಧರ್ಬಿಕ ಚಿತ್ರ -

Profile
Sushmitha Jain Dec 6, 2025 2:05 PM

ಬೆಂಗಳೂರು: ನಮ್ಮ ಚರ್ಮಕ್ಕೆ ಹೇಗೆ ಆರೈಕೆ(Skin Care) ಮತ್ತು ಪೋಷಣೆ ಮುಖ್ಯವೋ, ಹಾಗೆಯೇ ನಮ್ಮ ಕೂದಲಿನ ಪೋಷಣೆಯೂ(Hair Care) ಅತ್ಯಂತ ಅಗತ್ಯ. ಆರೋಗ್ಯಕರ ಕೂದಲು ಪಡೆಯಲು ಪ್ರತೀ ಬಾರಿ ಈ ಬ್ಯೂಟಿ ಪ್ರಾಡಕ್ಟ್ ಗಳಿಗೆ ದುಡ್ಡು ಸುರಿಯಲು ಆಗುವುದಿಲ್ಲ.. ಗಂಟೆ ಗಟ್ಟಲ್ಲೇ ಬ್ಯೂಟಿ ಪಾರ್ಲರ್ ಗೆ ಹೋಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಜೊತೆಗೆ ಇಂದಿನ ಜೀವನಶೈಲಿಯಲ್ಲಿ ಕೂದಲು ಉದುರುವಿಕೆ ಸಾಮಾನ್ಯ ಸಮಸ್ಯೆಯಾದರೂ, ಇದಕ್ಕೆ ಸರಿಯಾದ ಪರಿಹಾರ ಹುಡುಕುವುದು ಹಲವರಿಗೆ ಕಷ್ಟಕರವಾಗಿದೆ. ಅಲ್ಲದೇ ನಿರಂತರವಾಗಿ ಕೂದಲು ಉದುರತೊಡಗಿದ್ದಾಗ, ಅದು ಕೂದಲಿನ ಬೆಳವಣಿಗೆಯ ವೇಗವನ್ನು ಕುಗ್ಗಿಸುವುದಷ್ಟೇ ಅಲ್ಲ, ದೈಹಿಕ-ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಈ ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆ ತುಸು ಜಾಸ್ತಿಯೇ ಇರಲಿದ್ದು, ಈ ಸಮಸ್ಯೆಗೆ ಇಂದು ನಾವು ಪರಿಹಾರವನ್ನು ಹೊತ್ತು ತಂದಿದ್ದೇವೆ. ನಿಮ್ಮ ಮನೆಯಲ್ಲಿರುವ ಕೆಲವೊಂದು ವಸ್ತುಗಳನ್ನು(Home Remedies) ಬಳಸಿ ಹೇರ್ ಫಾಲ್ ಗೆ ಟಾಟಾ ಬೈ ಹೇಳಬಹುದಾಗಿದ್ದು, ಆ ಮನೆ ಮದ್ದುಗಳು ಯಾವುದು..? ಬಳಸುವುದೇಗೆ...? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಹೌದು ಮನೆಯಲ್ಲಿಯೇ ಇರುವ ಈ ನೈಸರ್ಗಿಕ ವಸ್ತುಗಳಿಂದ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ನೀಡಬಹುದಾಗಿದ್ದು,ಇದರಿಂದ ಬಲಿಷ್ಠ ಕೇಶರಾಶಿಯನ್ನು ಪಡೆಯುವುದರ ಜೊತೆ ವೆಚ್ಚವೂ ಕಡಿಮೆಯಾಗುತ್ತದೆ.

ಕೋಳಿ ಮೊಟ್ಟೆ

ಕೋಳಿ ಮೊಟ್ಟೆ ಕೂದಲ ಆರೈಕೆಯಲ್ಲಿ ಉತ್ತಮ ಪಾತ್ರ ವಹಿಸುತ್ತದೆ. ವಾರಕ್ಕೆ ಒಮ್ಮೆ ಹಸಿ ಕೋಳಿ ಮೊಟ್ಟೆಯ ಲೋಳೆಯನ್ನು ತೆಗೆದುಕೊಂಡು ಪ್ಯಾಕ್ ರೀತಿ ಕೂದಲಿಗೆ ಹಚ್ಚಿಕೊಂಡು 20 ನಿಮಿಷದ ನಂತರ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕೂದಲನ್ನು ಆರೋಗ್ಯಯುತವಾಗಿಸುತ್ತವೆ. ಅಗತ್ಯ ವೆನಿಸಿದರೇ ಆಲಿವ್ ಆಯಿಲ್ ಕೂಡ ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು.

Health Tips: ಕರಿಬೇವಿನ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಇವು!

ಮೆಂತ್ಯಕಾಳು

ಮೆಂತ್ಯಕಾಳುಗಳನ್ನ ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಅದನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ, ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಮಿಕ್ಸಿ ಮಾಡಿ ತಲೆಗೆ ಹಚ್ಚಿಕೊಳ್ಳಿ. ಸುಮಾರು 30 ನಿಮಿಷಗಳ ನಂತರ ಬಿಸಿನೀರಿನಲ್ಲಿ ತೊಳೆಯಿರಿ, ಸತತ ಒಂದು ವಾರದ ಕಾಲ ಹೀಗೆ ಮಾಡಿದರೇ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.

ನೆಲ್ಲಿಕಾಯಿ

ನೆಲ್ಲಿಕಾಯಿ ಕೂದಲ ಆರೈಕೆಯಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸಲಿದ್ದು, ವಿಟಮಿನ್ ಸಿ ಯನ್ನು ಅಧಿಕವಾಗಿ ಹೊಂದಿರುವ ನೆಲ್ಲಿಕಾಯಿ ಪುಡಿಯನ್ನು ನಿಂಬೆ ರಸದ ಜೊತೆಗೆ ಮಿಕ್ಸ್ ಮಾಡಿ ಕೂದಲಿಗೆ ಲೇಪಿಸಿ. ಅರ್ಧ ಗಂಟೆಗಳ ಕಾಲ ಒಣಗಲು ಬಿಡಿ ನಂತರ ಬಿಸಿನೀರಿನಲ್ಲಿ ಶಾಂಪು ಹಾಕದೇ ತೊಳೆಯಿರಿ. ಇದರಿಂದ ತಲೆಹೊಟ್ಟು ನಿವಾರಣೆಯಾಗಿ ಕೂದಲೂ ದಟ್ಟವಾಗಿ ಬೆಳೆಯುತ್ತದೆ.

ತೆಂಗಿನ ಹಾಲಿನ ಪೋಷಣೆ

ಹೆಸರೇ ಸೂಚಿಸುವಂತೆ ತೆಂಗಿನ ಹಾಲು ಕೂದಲಿಗೆ ನೈಸರ್ಗಿಕ ಕನ್ಡೀಷನರ್ ಆಗಿ ಕೆಲಸ ಮಾಡಲಿದ್ದು, ತಾಜಾ ತೆಂಗಿನಕಾಯಿ ಹಾಲಿಗೆ 4–5 ಹನಿ ಲ್ಯಾವೆಂಡರ್ ಎಣ್ಣೆ ಸೇರಿಸಿ ತಲೆಗೆ ಮಸಾಜ್ ಮಾಡಿ. ಅದರಲ್ಲಿರುವ ಪೊಟ್ಯಾಶಿಯಂ ಹಾಗೂ ಉತ್ತಮ ಕೊಬ್ಬುಗಳನ್ನು ತಲೆ ಹೀರಿಕೊಂಡು ಕೂದಲನ್ನು ಮೃದುಗೊಳಿಸಿ ಉದುರುವಿಕೆಯನ್ನ ಕಡಿಮೆ ಮಾಡುತ್ತವೆ.