Breast cancer: ಇತ್ತೀಚಿನ ವರ್ಷದಲ್ಲಿ ಅವಿವಾಹಿತರಿಗೆ ಸ್ತನ ಕ್ಯಾನ್ಸರ್ ಹೆಚ್ಚಾಗಲು ಕಾರಣ ಏನು ಗೊತ್ತಾ?
ಇತ್ತೀಚಿನ ಜನರ ಜೀವನ ಶೈಲಿಯು ಸ್ತನ ಕ್ಯಾನ್ಸರ್ ಉಂಟಾಗಲು ಕಾರಣವಾಗುತ್ತಿದ್ದು ಈ ಬಗ್ಗೆ ಮೊದಲೇ ಎಚ್ಚೆತ್ತುಕೊಂಡರೆ ಮುಂದಾಗುವ ಸಮಸ್ಯೆ ತಡೆಗಟ್ಟಬಹುದಾಗಿದೆ. ಕ್ಯಾನ್ಸರ್ ಗುಣಪಡಿಸಲು ಇರುವ ವಿವಿಧ ಚಿಕಿತ್ಸಾ ವಿಧಾನಗಳ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯು ರ್ವೇದದ ವೈದ್ಯರಾದ ಡಾ. ಮಾಲಿನಿ ಎಸ್. ಸುತ್ತೂರು ಅವರು ತಿಳಿಸಿಕೊಟ್ಟಿದ್ದಾರೆ. ಮಹಿಳೆಯರಲ್ಲಿ ಕ್ಯಾನ್ಸರ್ ಉಂಟಾಗಲು ಕಾರಣ ಏನು? ಇದರ ಬಗ್ಗೆ ವೈದ್ಯರು ನೀಡುವ ಸಲಹೆ ಏನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ
ಸಂಗ್ರಹ ಚಿತ್ರ -
ಬೆಂಗಳೂರು, ಡಿ. 11: ಇತ್ತೀಚಿನ ವರ್ಷದಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ (Breast cancer) ಕಂಡು ಬರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಎನ್ನುವುದು ಸಾವಿನ ಭಯ ಹುಟ್ಟಿ ಸುವ ಒಂದು ಖಾಯಿಲೆಯಾಗಿದೆ. ಅದರಲ್ಲೂ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಮರಣ ಹೊಂದುವ ಪ್ರಮಾಣ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ತಿಳಿದು ಬಂದಿದೆ. ಇತ್ತೀಚಿನ ಜನರ ಜೀವನ ಶೈಲಿಯು ಸ್ತನ ಕ್ಯಾನ್ಸರ್ ಉಂಟಾಗಲು ಕಾರಣವಾಗುತ್ತಿದ್ದು ಈ ಬಗ್ಗೆ ಮೊದಲೇ ಎಚ್ಚೆತ್ತುಕೊಂಡರೆ ಮುಂದಾಗುವ ಸಮಸ್ಯೆ ತಡೆಗಟ್ಟಬಹುದಾಗಿದೆ. ಕ್ಯಾನ್ಸರ್ ಗುಣ ಪಡಿಸಲು ಇರುವ ವಿವಿಧ ಚಿಕಿತ್ಸಾ ವಿಧಾನಗಳ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯುರ್ವೇದದ ವೈದ್ಯರಾದ ಡಾ. ಮಾಲಿನಿ ಎಸ್. ಸುತ್ತೂರು (Dr. Malini S. Suttur) ಅವರು ತಿಳಿಸಿಕೊಟ್ಟಿದ್ದಾರೆ. ಮಹಿಳೆಯರಲ್ಲಿ ಕ್ಯಾನ್ಸರ್ ಉಂಟಾಗಲು ಕಾರಣ ಏನು? ಇದರ ಬಗ್ಗೆ ವೈದ್ಯರು ನೀಡುವ ಸಲಹೆ ಏನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಇತ್ತೀಚಿನ ಯುವ ಸಮುದಾಯವು ಕೆಲಸ, ಲೈಫ್ ಸೆಟೆಲ್ ಮೆಂಟ್ ಗೆ ಅಧಿಕ ಆಧ್ಯತೆ ನೀಡುತ್ತಿದ್ದು ಹಣ ಸಂಪಾದನೆಯೊಂದೆ ಪ್ರಮುಖ ಗುರಿಯಂತೆ ಬದುಕುತ್ತಿದ್ದಾರೆ. ಈ ತರಹದ ಜೀವನ ಶೈಲಿಯು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದೆ. ಅಂತಹ ಸಂದರ್ಭದಲ್ಲಿ ಒತ್ತಡ, ಮೈಗ್ರೇನ್, ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ಖಾಯಿಲೆ ಬರುವ ಸಾಧ್ಯತೆ ಇದೆ. ಹೀಗಾಗಿ ಸ್ತನ ಕ್ಯಾನ್ಸರ್ ಬಗ್ಗೆ ಅರಿವಿದ್ದರೆ ಸಮಸ್ಯೆ ಇರಲಾರದು ಎಂದು ವೈದ್ಯರಾದ ಮಾಲಿನಿ ಅವರು ತಿಳಿಸಿದ್ದಾರೆ.
ವಿಡಿಯೋ ನೋಡಿ:
ಕಾರಣ ಏನು?
*ಬೇಗ ಋತುಮತಿಯಾಗುವ ಕಾರಣಕ್ಕೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
*ಕೆಲವೊಂದು ಆಹಾರದಲ್ಲಿರುವ ಅಂಶದಿಂದ ಕೂಡ ಸ್ತನ ಕ್ಯಾನ್ಸರ್ ಬರಬಹುದು.
*ಅವಿವಾಹಿತರಾಗಿ ಉಳಿದು ಬಿಡುವುದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
*ವಿವಾಹಿತರಾಗಿಯೂ ಮಕ್ಕಳಾಗದೆ ಇದ್ದವರಿಗೆ ಬ್ರೆಸ್ಟ್ ಕ್ಯಾನ್ಸರ್ ಬರಬಹುದು.
*ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಆಗಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
*ಮುಟ್ಟಾದ ಸಂದರ್ಭದಲ್ಲಿ ಓವರ್ ಬ್ಲೀಡಿಂಗ್ ಆದಂತಹ ಸಂದರ್ಭದಲ್ಲಿ ಮುಟ್ಟಿನ ಲೇಯರ್ ಕಳಚಿಹೋದರೆ ಆಗ ದೇಹದಲ್ಲಿ ಇನ್ ಫ್ಲನೇಶನ್ ಆಗಲಿದೆ. ಯಾವಾಗ ದೇಹದಲ್ಲಿ ಇನ್ ಫ್ಲಾನೇಶನ್ ಹೆಚ್ಚಾಗಲಿದೆ ಆಗ ದೇಹದಲ್ಲಿ ಎಂಡೊ ಮೆಟ್ರಿಯಲ್ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಇದೆ.
*ಬ್ರೆಸ್ಟ್ ಕ್ಯಾನ್ಸರ್ ಮತ್ತು ಎಂಡ್ರೋ ಮೆಟ್ರಲ್ ಕ್ಯಾನ್ಸರ್ ಗೆ ಮುಖ್ಯವಾಗಿ ಮಕ್ಕಳಾಗದಿರುವುದು ಕಾರಣವಾಗಿದೆ.
Health Tips: ಚಳಿಗಾಲದಲ್ಲಿ ಸಪೋಟ ಹಣ್ಣಿನ ಆರೋಗ್ಯ ಪ್ರಯೋಜನಗಳು: ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹೃದಯವನ್ನು ಕಾಪಾಡಿ
*ಇನ್ನು ಕೆಲವು ಸಂದರ್ಭಗಳಲ್ಲಿ ಮನೆಯಲ್ಲಿ ಹೆರಿಡ್ರಿಟಿಯಾಗಿ ಈ ಬ್ರೆಸ್ಟ್ ಕ್ಯಾನ್ಸರ್ ಕಂಡು ಬರುವ ಸಾಧ್ಯತೆ ಇದೆ. ಅಜ್ಜಿ, ತಾಯಿ ಅವರಿಗೆ ಸ್ತನ ಕ್ಯಾನ್ಸರ್ ಇದ್ದರೆ ಅದು ಮಕ್ಕಳಿಗೂ ಬರುವ ಸಾಧ್ಯತೆ ಇದೆ.
*ದೇಹಕ್ಕೆ ಹಾನಿಯಾಗುವ ಹಾನಿಕಾರಕ ಪ್ಲಾಸ್ಟಿಕ್ ಬಳಕೆ ಹೆಚ್ಚು ಮಾಡಿದ್ದ ಸಂದರ್ಭದಲ್ಲಿ ಕ್ಯಾನ್ಸರ್ ಬರಬಹುದು.
ಪರಿಹಾರ ಏನು?
*ಮಹಿಳೆಯು ಗರ್ಭಿಣಿಯಾಗಿದ್ದಾಗ ಸೆಲ್ಸ್ ಹಾಗೂ ಹಾರ್ಮೋನ್ ಆರೋಗ್ಯಯುತವಾಗಿದ್ದು ಸ್ತನ ಕ್ಯಾನ್ಸರ್ ಬರದಂತೆ ತಡೆಹಿಡಿಯಲಿದೆ.
*ಮಗು ಗರ್ಭಾವಸ್ಥೆಯಲ್ಲಿ ಇರುವಾಗಲೇ ತಾಯಿಗೆ ಎದೆಹಾಲು ಶೇಖರಣೆಗೆ ದೇಹ ಒಗ್ಗೂಡುವ ಕಾರಣಕ್ಕೆ ಸ್ತನ ಕ್ಯಾನ್ಸರ್ ಬರದಂತಾಗಲಿದೆ.
*ಮಗು ಜನಿಸಿದ ಬಳಿಕ ಮಗುವಿನ ಆರೈಕೆ ಮಾಡುವುದು 2 ವರ್ಷ ಎದೆಹಾಲು ಉಣಿಸುವುದರಿಂದ ಸ್ತನ ಕ್ಯಾನ್ಸರ್ ಬರಲಾರದು.
*ವರ್ಷಕ್ಕೊಮ್ಮೆ ಸಂಪೂರ್ಣ ದೇಹದ ಚೆಕಪ್ ಮಾಡಿಸಬೇಕು.
*ನಮ್ಮ ದೇಹದಲ್ಲಿ ಯಾವುದೇ ಸಣ್ಣ ಪುಟ್ಟ ಬದಲಾವಣೆಯಾದರೂ ಅದನ್ನು ನಾವು ಗಮನಿಸಬೇಕು. ಹಾಗೆ ಗಮನಿಸಿದ್ದ ಅಂಶಗಳನ್ನು ಮುಚ್ಚು ಮರೆಯಿಲ್ಲದೆ ವೈದ್ಯರ ಬಳಿ ಹೇಳುದರಿಂದ ಎಲ್ಲ ರೀತಿಯ ಸಮಸ್ಯೆ ಪರಿಹಾರ ಆಗಲಿದೆ.
ಸ್ತನ ಕ್ಯಾನ್ಸರ್ ಬಂದವರು 20-25ವರ್ಷದ ತನಕ ಬದುಕಿದ್ದು ಇದೆ. ಆದರೆ ಇನ್ನು ಕೆಲವು ಮಹಿಳೆಯರು ಕ್ಯಾನ್ಸರ್ ಪತ್ತೆಯಾಗಿದ್ದ ಕೂಡಲೇ ಔಷಧ ಪಡೆಯುತ್ತಾರೆ. ಬಳಿಕ ಅದು ಸರಿಯಾಗಿರ ಬಹುದು ಎಂದು ಔಷಧ ಸೇವನೆ ನಿಲ್ಲಿಸುತ್ತಾರೆ. ಈ ಒಂದು ನಿರ್ಲಕ್ಷ್ಯ ಶಾಶ್ವತವಾಗಿ ಬ್ರೆಸ್ಟ್ ಕ್ಯಾನ್ಸರ್ ವಾಸಿ ಮಾಡದಂತೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸ್ತನ ಕ್ಯಾನ್ಸರ್ ಇದ್ದವರು ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಮೊರೆ ಹೋಗಿ ಅವರು ಹೇಳಿದ ಚಿಕಿತ್ಸೆ , ಔಷಧ ಎಲ್ಲವನ್ನು ಪಾಲಿಸಬೇಕು, ಉತ್ತಮ ಜೀವನ ಶೈಲಿಯಿಂದ ಆರೋಗ್ಯಯುತ ಜೀವನ ಲಭ್ಯವಿದೆ ಎಂದು ಅವರು ಸಲಹೆ ಕೂಡ ನೀಡಿದ್ದಾರೆ.