ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prakash Hegde Column: ಅಮೆರಿಕಕ್ಕೆ ಗ್ರೀನ್‌ಲ್ಯಾಂಡ್‌ನ ಉಸಾಬರಿ ಏಕೆ?

ಗ್ರೀನ್‌ಲ್ಯಾಂಡ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಅಮೆರಿಕದ ಅವಶ್ಯಕತೆಗೆ ಅನೇಕ ಕಾರಣ ಗಳಿವೆ. ಗ್ರೀನ್‌ಲ್ಯಾಂಡ್‌ನ ಹೆಚ್ಚಿನ ಭಾಗವೂ ಆರ್ಕ್ಟಿಕ್ ಸರ್ಕಲ್‌ನ ಒಳಗಿರುವುದರಿಂದ, ಇದು ನೌಕಾಪಡೆ ಯ ಮಹತ್ವದ ದ್ವಾರವಾಗಬಲ್ಲದು. ಈ ದ್ವೀಪವನ್ನು ನಿಯಂತ್ರಿಸುವುದರಿಂದ ಅಟ್ಲಾಂಟಿಕ್ ಸಮುದ್ರ ಮತ್ತು ಆರ್ಕ್ಟಿಕ್‌ನ ನಡುವೆ ಇರುವ ಪ್ರಮುಖ ನೌಕಾಮಾರ್ಗದಲ್ಲಿ ಅಮೆರಿಕಕ್ಕೆ ವ್ಯೂಹಾತ್ಮಕ ನೆಲೆ ಒದಗಿದಂತಾಗುತ್ತದೆ.

Prakash Hegde Column: ಅಮೆರಿಕಕ್ಕೆ ಗ್ರೀನ್‌ಲ್ಯಾಂಡ್‌ನ ಉಸಾಬರಿ ಏಕೆ?

-

Ashok Nayak
Ashok Nayak Jan 10, 2026 3:36 PM

ಪ್ರತಿಧ್ವನಿ

ಪ್ರಕಾಶ ಹೆಗಡೆ

ಗ್ರೀನ್‌ಲ್ಯಾಂಡ್ ಕುರಿತಾದ ನನ್ನ ವಿಶೇಷ ಒಲವು, 3 ತಿಂಗಳ ಹಿಂದೆ ನಾನು ಕೈಗೊಂಡ ಆ ದೇಶದ ಪರ್ಯಟನೆಯಿಂದ ದ್ವಿಗುಣವಾಗಿರುವುದಂತೂ ಸತ್ಯ. ಆದ್ದರಿಂದ, ಗ್ರೀನ್‌ಲ್ಯಾಂಡ್ ಅನ್ನು ತಮ್ಮ ದೇಶಕ್ಕೆ ಸೇರಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತವಕದ ತರ್ಕವೂ ಸ್ವಾಭಾ ವಿಕವಾಗಿ ನನ್ನಲ್ಲಿ ಕುತೂಹಲವನ್ನು ಕೆರಳಿಸಿತು. ಇದರ ಒಳಮರ್ಮ ತಿಳಿಯಲು ಅಂತರ್ಜಾಲದ ಜೇನುಗೂಡನ್ನು ಕೆದಕಿದಾಗ ಬಹಳಷ್ಟು ವಿಚಾರಗಳು ಬಹಿರಂಗಗೊಂಡವು.

ಗ್ರೀನ್‌ಲ್ಯಾಂಡ್ ಜಗತ್ತಿನ ಅತಿದೊಡ್ಡ ದ್ವೀಪದೇಶ. ಭಾರತದ ಮೂರನೇ ಎರಡರಷ್ಟು ವಿಶಾಲ ವಾದದ್ದು. 80 ಪ್ರತಿಶತ ಪ್ರದೇಶಗಳು ಎಂದೆಂದೂ ಬ-ದಿಂದ ಮುಚ್ಚಿರುತ್ತವೆ. ಸ್ಥಳೀಯ ಇನ್ಯುಟ್ ಜನಾಂಗದವರೇ ಹೆಚ್ಚಾಗಿರುವ, ಸುಮಾರು 56000 ವಿರಳ ಜನವಸತಿಯ ಶಾಂತಿಯುತ ದೇಶ. ಮೀನುಗಾರಿಕೆಯೇ ಇಲ್ಲಿನವರ ಮುಖ್ಯ ಕಸುಬು.

2009ರಿಂದ ಡೆನ್ಮಾರ್ಕ್ ಇಲ್ಲಿನ ವಿದೇಶಾಂಗ, ರಕ್ಷಣಾ ಮತ್ತಿತರ ಮುಖ್ಯ ಅಂಗಗಳನ್ನು ನಿಭಾಯಿಸು ತ್ತಿದೆ. ಅಷ್ಟೇ ಅಲ್ಲದೆ ಶಾಲೆಗಳು, ಅನಿಲ ಮತ್ತು ಸಾಮಾಜಿಕ ಸೇವೆಗಳಿಗೆ ವಾರ್ಷಿಕ ಸಹಾಯಧನ ವನ್ನು ಒದಗಿಸುತ್ತದೆ. ಗ್ರೀನ್‌ಲ್ಯಾಂಡ್‌ನ ಪ್ರತಿ ಪ್ರಜೆಯೂ ತಮ್ಮಿಚ್ಛೆಯಂತೆ, ಡೆನ್ಮಾರ್ಕ್‌ನ ಪೌರತ್ವ ವನ್ನು ಪಡೆಯಬಹುದು.

ಇದನ್ನೂ ಓದಿ: Prakash Hegde Column: ಕತ್ತೆ, ಕತ್ತೆಯೆಂದು ಮೂದಲಿಸದಿರಿ

ಆದರೆ ಭೌಗೋಳಿಕವಾಗಿ ಡೆನ್ಮಾರ್ಕ್‌ಗಿಂತ ಅಮೆರಿಕ ಹತ್ತಿರದಲ್ಲಿ- ಪಶ್ಚಿಮಾರ್ಧ ಗೋಳದಲ್ಲಿದೆ. ಟ್ರಂಪ್ ಹೇಳುವಂತೆ, ಈ ದ್ವೀಪವು ಅಮೆರಿಕದ ಭದ್ರತೆಗೆ ಅತ್ಯಂತ ಅವಶ್ಯಕವೆನಿಸಿದೆ. ವೆನಿಜುವೆಲಾ ಸಂಬಂಧಿತ ಕಾರ್ಯತಂತ್ರದ ನಂತರ ಟ್ರಂಪ್ ರವರ ಕಣ್ಣು ಪುನಃ ಗ್ರೀನ್‌ಲ್ಯಾಂಡ್ ಮೇಲೆ ಬಿದ್ದಿದೆ.

ಗ್ರೀನ್‌ಲ್ಯಾಂಡ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಅಮೆರಿಕದ ಅವಶ್ಯಕತೆಗೆ ಅನೇಕ ಕಾರಣಗಳಿವೆ. ಗ್ರೀನ್‌ಲ್ಯಾಂಡ್‌ನ ಹೆಚ್ಚಿನ ಭಾಗವೂ ಆರ್ಕ್ಟಿಕ್ ಸರ್ಕಲ್‌ನ ಒಳಗಿರುವುದರಿಂದ, ಇದು ನೌಕಾಪಡೆಯ ಮಹತ್ವದ ದ್ವಾರವಾಗಬಲ್ಲದು. ಈ ದ್ವೀಪವನ್ನು ನಿಯಂತ್ರಿಸುವುದರಿಂದ ಅಟ್ಲಾಂ ಟಿಕ್ ಸಮುದ್ರ ಮತ್ತು ಆರ್ಕ್ಟಿಕ್‌ನ ನಡುವೆ ಇರುವ ಪ್ರಮುಖ ನೌಕಾಮಾರ್ಗದಲ್ಲಿ ಅಮೆರಿಕಕ್ಕೆ ವ್ಯೂಹಾತ್ಮಕ ನೆಲೆ ಒದಗಿದಂತಾಗುತ್ತದೆ.

ಅಷ್ಟೇ ಅಲ್ಲ, ಗ್ರೀನ್‌ಲ್ಯಾಂಡ್‌ನಲ್ಲಿ ಅಪರೂಪದ ಖನಿಜಗಳ ಮಹಾಸಂಗ್ರಹಗಳಿವೆ. ಬ್ಯಾಟರಿಗಳು, ಮೊಬೈಲ್ ಫೋನ್‌ಗಳು, ಇಲೆಕ್ಟ್ರಿಕ್ ವಾಹನಗಳು, ಕಾರ್ಯತಂತ್ರದ ಶಸ್ತ್ರಾಸ್ತ್ರಗಳು ಮತ್ತು ಉನ್ನತ ತಂತ್ರಜ್ಞಾನದ ಕಂಪ್ಯೂಟರ್ ಹಾಗೂ ಸಂವಹನ ಸಾಧನಗಳ ತಯಾರಿಕೆಗೆ ಅವು ಅವಶ್ಯಕ. ಇದು ಪೂರ್ವ ದೇಶಗಳ ಅಪರೂಪದ ಖನಿಜಗಳ ಮೇಲಿನ ಅಮೆರಿಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಕೆಲವು ವಿಜ್ಞಾನಿಗಳ ಹೇಳಿಕೆಯಂತೆ, ಗ್ರೀನ್ ಲ್ಯಾಂಡ್ ದ್ವೀಪವು ಅತಿ ಹೆಚ್ಚು ಪ್ರಮಾಣದ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಹೊಂದಿದೆ.

ಗ್ರೀನ್‌ಲ್ಯಾಂಡ್ ಮೇಲಿನ ಅಮೆರಿಕದ ಆಸಕ್ತಿಯು, ‘ರಾಷ್ಟ್ರಾಧ್ಯಕ್ಷರ ಮಟ್ಟದಲ್ಲಿ’ 20ನೇ ಶತಮಾನದ ಹ್ಯಾರಿ ಟ್ರೂಮನ್ ಕಾಲದಿಂದಲೇ ಆರಂಭವಾದುದಾಗಿತ್ತು. 1946ರಲ್ಲಿ ಜರ್ಮನಿಯು ಡೆನ್ಮಾರ್ಕ್ ಮೇಲೆ ದಾಳಿ ಮಾಡಿದ ನಂತರ, ಗ್ರೀನ್‌ಲ್ಯಾಂಡ್‌ನ ರಕ್ಷಣೆಯ ಜವಾಬ್ದಾರಿಯನ್ನು ಅಮೆರಿಕವು ಹೊತ್ತುಕೊಂಡು, ಅಲ್ಲಿ ತನ್ನ ಸೇನಾ ಹಾಜರಾತಿಯನ್ನು ಸ್ಥಾಪಿಸಿತು.

trump

ಇದೇ ಸಂದರ್ಭದಲ್ಲಿ ಟ್ರೂಮನ್ ಅವರು ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕವು ಖರೀದಿಸುವಂತಾ ಗಲು ಒಂದು ಮಿಲಿಯನ್ ಡಾಲರ್ ಮೌಲ್ಯದ ಬಂಗಾರದ ಆಫರ್ ನೀಡಿದ್ದರು. ತಾನು ಗ್ರೀನ್‌ ಲ್ಯಾಂಡ್ ಅನ್ನು ಮಾರುವಂತಿಲ್ಲ ವಾದುದರಿಂದ ಡೆನ್ಮಾರ್ಕ್ ಈ ಆಫರ್ ಅನ್ನು ತಿರಸ್ಕರಿಸಿತ್ತು.

ಗ್ರೀನ್ ಲ್ಯಾಂಡ್ ದೇಶಸ್ಥರೂ ತಮ್ಮ ದೇಶವನ್ನು ಮಾರಿಕೊಳ್ಳುವ ಯಾವುದೇ ಇಚ್ಛೆಯನ್ನು ವ್ಯಕ್ತ ಪಡಿಸುತ್ತಿಲ್ಲ. 2025ರ ಜನವರಿಯಲ್ಲಿ ನಡೆದ ದೇಶದ ಚುನಾವಣೆಯಲ್ಲಿ, ಮತದಾರರು ಇದೇ ಇಚ್ಛೆ ಯಂತೆ ಸ್ವತಂತ್ರವಿರಬಯಸುವ ಪಕ್ಷದ ಕೈಹಿಡಿದಿದ್ದರು. ಹಿಂದಿನ ವರ್ಷ ನಡೆದ ಇನ್ನೊಂದು ಸಮೀಕ್ಷೆಯಲ್ಲಿ, ಗ್ರೀನ್‌ಲ್ಯಾಂಡ್ ನಿವಾಸಿಗಳ ಪೈಕಿ ಶೇ.85ರಷ್ಟು ಮಂದಿ, ದ್ವೀಪವನ್ನು ಸ್ವಾಧೀನ ಪಡಿಸಿಕೊಳ್ಳುವ ಅಮೆರಿಕದ ಆಲೋಚನೆಗೆ ವಿರೋಧವನ್ನು ವ್ಯಕ್ತಪಡಿಸಿದ್ದರು.

ಹಿಂದೆ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಅನ್ನು ಖರೀದಿಸಲು ಬಯಸಿದ್ದಾಗ ಯಶಸ್ಸು ಸಿಗಲಿಲ್ಲ. ಈಗ 1951ರ ಒಪ್ಪಂದದ ಆಧಾರದ ಮೇಲೆ ಅದನ್ನು ಆಕ್ರಮಿಸಲು ಅವರು ಬಯಸುತ್ತಿರುವಂತಿದೆ. ಸೈನಿಕ ಹಸ್ತಕ್ಷೇಪ ಯಾವುದೇ ರೂಪದಲ್ಲಿ ನಡೆಯುವುದಾದರೆ, ಡೆನ್ಮಾರ್ಕ್ ಮತ್ತು ಅಮೆರಿಕ ಎರಡೂ ಸ್ಥಾಪಕ ಸದಸ್ಯರಾಗಿರುವ ನೇಟೋ ಒಕ್ಕೂಟದ ಮೂಲ ಒಪ್ಪಂದವನ್ನೇ ಚೂರುಚೂರು ಮಾಡಿ ದಂತಾಗುತ್ತದೆ.

ಆದರೆ, ಹೆಚ್ಚಿನವರಿಗೆ ತಿಳಿಯದ 1951ರ ಶೀತಲ ಸಮರದ ಒಪ್ಪಂದದಂತೆ, ಅಮೆರಿಕಕ್ಕೆ ಈಗಾಗಲೇ ಗ್ರೀನ್‌ಲ್ಯಾಂಡ್‌ನಲ್ಲಿ ವ್ಯಾಪಕ ಸೈನಿಕ ಹಕ್ಕುಗಳು ದೊರೆತದ್ದಷ್ಟೇ ಅಲ್ಲದೆ, ಇಂದಿಗೂ ಚಾಲ್ತಿಯಲ್ಲಿವೆ. ಗ್ರೀನ್‌ಲ್ಯಾಂಡ್‌ನ ಉತ್ತರದ ಪಿಟುಫಿಕ್ ಸ್ಪೇಸ್‌ನಲ್ಲಿ ಅಮೆರಿಕಕ್ಕೆ ಒಂದು ಪ್ರಮುಖ ರಕ್ಷಣಾ ನೆಲೆ ಯಿದೆ. ಇದು ಅಪಾರ ಕ್ಷಿಪಣಿ ಎಚ್ಚರಿಕೆಯ ವ್ಯವಸ್ಥೆ ಮತ್ತು ಬಾಹ್ಯಾಕಾಶ ನಿಗಾ ವ್ಯವಸ್ಥೆಗಳನ್ನು ಒದಗಿಸುತ್ತದೆ.

ಕಾರಣ, ರಷ್ಯಾ ದೇಶವು ಅಮೆರಿಕದ ಮೇಲೆ ಖಂಡಾಂತರ ಕ್ಷಿಪಣಿಗಳನ್ನು ಹಾರಿಸಿದರೆ, ಅವು ಸಾಮಾನ್ಯವಾಗಿ ಧ್ರುವ ಪ್ರದೇಶಗಳ ಮೂಲಕವೇ ಸಾಗಬಹುದು ಎಂಬ ಅಂದಾಜು. ನೊಬೆಲ್ ಶಾಂತಿ ಪ್ರಶಸ್ತಿ ಋತುವು ಮುಗಿದ ತಕ್ಷಣವೇ, ಟ್ರಂಪ್ ಇದೀಗ ಯುದ್ಧದ ಕಾಲ ಎಂದು ಘೋಷಿಸಿರು ವಂತಿದೆ.

ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು, ಅವರ ಭದ್ರಕೋಟೆಯಿಂದ ಅಮೆರಿಕದ ಡೆಲ್ಟಾ ಫೋರ್ಸ್ ಹೊರ ತೆಗೆದುತಂದಿರುವ ಕ್ರಮವು ಇತ್ತೀಚಿನ ಕಾಲದ ಅತ್ಯಂತ ಧೈರ್ಯಶಾಲಿ ಮತ್ತು ವಿವಾದಾತ್ಮಕ ವಿದೇಶಾಂಗ ನೀತಿ ಸೂಚನೆಗಳಲ್ಲೊಂದು.

ವಿಪರ್ಯಾಸವೆಂದರೆ, ಅಮೆರಿಕದ ಇಂಥ ದರ್ಪದ, ಸ್ನಾಯುಬದ್ಧ, ಏಕಪಕ್ಷೀಯ, ಆಕ್ರಮಣಕಾರಿ ಕ್ರಮಗಳನ್ನು ಕೆಲವರು ‘ಚೆಸ್ಟ್ ಥಂಪಿಂಗ್’ ಸಾಧನೆಗಳೆಂದು ಕರೆದುಕೊಂಡು ಬೀಗುತ್ತಿದ್ದಾರೆ. ಡೊನಾಲ್ಡ್ ಟ್ರಂಪ್‌ರವರ ಈ ತತ್ವವನ್ನು ‘ಡೋನ್ರೋ ಡಾಕ್ಟ್ರೀನ್’ ಎಂದು ನಾಮಾಂಕಿತ ಮಾಡಿ ದ್ದಾರೆ ಕೆಲ ರಾಜಕೀಯ ಧುರೀಣರು. ‘ಡೋನ್ರೋ ಸಿದ್ಧಾಂತ’ವು, ಪಶ್ಚಿಮಾರ್ಧ ಗೋಳದಲ್ಲಿನ ಅಮೆರಿಕದ ಪಾತ್ರವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವ ದೃಷ್ಟಿಕೋನ.

ಹಿಂದಿನ 1950ರ ಮೋನ್ರೋ ಸಿದ್ಧಾಂತವು ಯುರೋಪಿನ ಹಸ್ತಕ್ಷೇಪವನ್ನು ತಡೆದು ಪ್ರದೇಶದ ರಕ್ಷಣೆ ಯನ್ನು ಒತ್ತಿ ಹೇಳಿದರೆ, ಈಗಿನ ಡೋನ್ರೋ ಸಿದ್ಧಾಂತವು ಅದೇ ನೀತಿಯನ್ನು ಅಮೆರಿಕ ತನ್ನ ರಾಜ ಕೀಯ, ಆರ್ಥಿಕ ಮತ್ತು ಸೈನಿಕ ಪ್ರಾಬಲ್ಯವನ್ನು ಸ್ಥಾಪಿಸಲು ಬಳಸಿದ ಮಾರ್ಗವೆಂದು ಬಿಂಬಿ ಸುತ್ತದೆ. ಅಂದರೆ, ಇದು ಅಮೆರಿಕನ್ ಪ್ರಾಬಲ್ಯ, ಹಸ್ತಕ್ಷೇಪ ಮತ್ತು ವಿಸ್ತರಣಾಶಾಹಿಯ ನಿಜಮುಖದ ವಿವರಣೆ.

ಜಗತ್ತು ಶಾಂತಿಯ ಯುಗಕ್ಕೆ ಪ್ರವೇಶಿಸಿದೆ ಎಂದು ನಾವು ಭಾವಿಸಿದ್ದೆವು, ಆದರೆ ಪುಟಿನ್ ಮತ್ತು ಟ್ರಂಪ್ ಅವರ ಕ್ರಮಗಳು ಆ ಗ್ರಹಿಕೆಯನ್ನು ಧ್ವಂಸ ಮಾಡಿವೆ. ವಾಸ್ತವ ಏನೆಂದರೆ, ನಿಜವಾದ ಕಠಿಣ ಸೈನಿಕ ಶಕ್ತಿಯಿರುವ ದೇಶಗಳು ನೈತಿಕತೆಯನ್ನು ಪಕ್ಕಕ್ಕೆ ಸರಿಸಿ ತಮ್ಮ ಇಚ್ಛೆಯಂತೆ ನಡೆದುಕೊಳ್ಳ ಬಲ್ಲವು. ಇವನ್ನೆಲ್ಲ ನೋಡಿದಾಗ, ತನ್ನ ಸುರಕ್ಷತೆಗೆ ಭಾರತವೂ ಅಂಥ ಶಕ್ತಿಯನ್ನು ಸಂಪಾದಿಸ ಬೇಕಾದ ಅಗತ್ಯವಿದೆ ಎನಿಸಿದರೆ ಅದು ತಪ್ಪಾಗಲಾರದು.

(ಲೇಖಕರು ಚಾರ್ಟರ್ಡ್ ಅಕೌಂಟೆಂಟ್)