ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Belagavi News: 4ನೇ ಮಗು ಕೂಡ ಹೆಣ್ಣಾಗಿದ್ದಕ್ಕೆ ಕತ್ತು ಹಿಸುಕಿ ಕೊಂದ ತಾಯಿ!

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮಲಂಗಿ ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ. ಹೆಣ್ಣು ಮಗಳನ್ನು ಕೊಂದ ಬಳಿಕ ತಾಯಿ ಡ್ರಾಮಾ ಮಾಡಿದ್ದು, ಮಗುವಿಗೆ ಉಸಿರಾಡುತ್ತಿಲ್ಲ ಎಂದು ಮನೆಯವರಿಗೆ ಹೇಳಿದ್ದಾಳೆ. ಇದರಿಂದ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ತೆಗೆದುಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ.

4ನೇ ಮಗು ಕೂಡ ಹೆಣ್ಣಾಗಿದ್ದಕ್ಕೆ ಕತ್ತು ಹಿಸುಕಿ ಕೊಂದ ತಾಯಿ!

ರಾಮದುರ್ಗದಲ್ಲಿ ಹೆಣ್ಣುಮಗುವನ್ನು ಕೊಂದ ತಾಯಿ ಅಶ್ವಿನಿ ಹಳಕಟ್ಟಿ. -

Prabhakara R
Prabhakara R Nov 25, 2025 6:56 PM

ಬೆಳಗಾವಿ, ನ.25: ಬೆಳಗಾವಿಯಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ನಾಲ್ಕನೇ ಮಗು ಕೂಡ ಹೆಣ್ಣಾಗಿದ್ದಕ್ಕೆ ಮೂರು ದಿನದ ಕಂದಮ್ಮಳನ್ನು ಕತ್ತು ಹಿಸುಕಿ ತಾಯಿಯೇ ಕೊಂದಿರುವ ಘಟನೆ ಜಿಲ್ಲೆಯ (Belagavi News) ರಾಮದುರ್ಗ ತಾಲೂಕಿನ ಹಿರೇಮಲಂಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ತಾಯಿ ಅಶ್ವಿನಿ ಹಳಕಟ್ಟಿ(28) ಹಸುಗೂಸು ಕೊಂದ ಪಾಪಿ. ಈ ಹಿಂದೆ ಮೂರು ಹೆಣ್ಣು ಮಕ್ಕಳು ಹುಟ್ಟಿದ್ದರಿಂದ ಅಶ್ವಿನಿ ಗಂಡು ಮಗು ನಿರೀಕ್ಷೆಯಲ್ಲಿದ್ದಳು. ನ. 23ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿತ್ತು. ಮಾರನೇ ದಿನ ತಾಯಿ ಮನೆ ಹಿರೇಮುಲಂಗಿಗೆ ಬಂದಿದ್ದ ಅಶ್ವಿನಿ, ಇಂದು ಬೆಳಗ್ಗೆ ತಾಯಿ ಹೊರ ಹೋದಾಗ, ಮಗಳ ಕತ್ತು ಹಿಸುಕಿ ಕೊಂದಿದ್ದಾಳೆ.

ಮಗಳನ್ನು ಕೊಂದ ಬಳಿಕ ಡ್ರಾಮಾ ಮಾಡಿರುವ ಅಶ್ವಿನಿ, ಮಗುವಿಗೆ ಉಸಿರಾಡುತ್ತಿಲ್ಲ ಎಂದು ಮನೆಯವರಿಗೆ ಹೇಳಿದ್ದಾಳೆ. ಹೀಗಾಗಿ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಮಗು ತೆಗೆದುಕೊಂಡು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಕತ್ತು ಹಿಸುಕಿದ್ದರಿಂದ ಉಸಿರು ಗಟ್ಟಿ ಮಗು ಸಾವಾಗಿದೆ ಎಂದ ವೈದ್ಯರು ದೃಢಪಡಿಸಿದ್ದಾರೆ. ತಾಯಿ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರೇಬಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಶಿಕ್ಷಕರಿಂದ ಅವಮಾನ ಸಿಸಿಟಿವಿಯಲ್ಲಿ ದಾಖಲು

ಕಾಳಗಿಯಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಕಾಳಗಿ: ಸಾಲದಿಂದ ಮನನೊಂದು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಕಲಬುರಗಿ ಜಿಲ್ಲೆ(Kalaburagi News) ಕಾಳಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕರಿಕಲ್ ತಾಂಡಾ ನಿವಾಸಿ ಪ್ರಕಾಶ್‌ ಸೇವು ಜಾಧವ (57) ಮೃತ ರೈತ. ಎರಡು ಎಕರೆ ಜಮೀನು ಹೊಂದಿದ್ದ ಪ್ರಕಾಶ ಜಾಧವ ಅವರು, ಜಮೀನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದರು. ಇವರು ಸುಮಾರು 10 ಲಕ್ಷಕ್ಕೂ ಅಧಿಕ ಖಾಸಗಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಕಾಳಗಿ ಪಟ್ಟಣದ ರೈತ ಸೇವಾ ಸಹಕಾರ ಸಂಘದಲ್ಲಿ 25,000 ಸಾಲ ಮಾಡಿದ್ದರು. ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ಇವರು ಬೆಳೆದಿದ್ದ ಎಲ್ಲಾ ತೊಗರಿ ಬೆಳೆಯು ಸಂಪೂರ್ಣ ನಾಶವಾಗಿತ್ತು. ಬೆಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ದಿಕ್ಕೆಟ್ಟ ರೈತ, ಅಲ್ಪಸ್ವಲ್ಪ ಉಳಿದ ಬೆಳೆಗೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನು ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಕ್ರಮ ಸಂಬಂಧದ ಸಂಶಯದಲ್ಲಿ ಯುವಕನ ಹೊಡೆದು ಕೊಲೆ

ವಿಷ ಸೇವಿಸಿದ ತಕ್ಷಣವೇ ಅವರನ್ನು ಕಾಳಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಶನಿವಾರ ತಡರಾತ್ರಿ ರಾತ್ರಿ 12:15ರ ಸುಮಾರಿಗೆ ಪ್ರಕಾಶ ಜಾಧವ ಅವರು ಕೊನೆಯುಸಿರೆಳೆದಿದ್ದಾರೆ.