ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Foxconn tax issue: ಫಾಕ್ಸ್‌ಕಾನ್ ಕಂಪನಿಗೆ ನೀಡಿದ್ದ ಗ್ರಾಪಂ ತೆರಿಗೆ ನೋಟೀಸ್ ರದ್ದು: ಜಿಪಂ ಸಿಇಒ ಸ್ಪಷ್ಟನೆ

ಫಾಕ್ಸ್‌ಕಾನ್ ಕಂಪನಿಗೆ ತೆರಿಗೆ ಪಾವತಿಸಲು ಸೂಚಿಸಿ ಎಂಟು ಸಲ ನೋಟಿಸ್ ನೀಡಲಾಗಿತ್ತು. ಆದರೆ ಅದು ಯಾವುದಕ್ಕೂ ಉತ್ತರಿಸಿಲ್ಲ. ಈಗ ಆ ಪ್ರದೇಶವನ್ನು ಎಸ್ಐಆರ್ ಎಂದು ಘೋಷಿಸಿರುವುದರಿಂದ ಗ್ರಾಪಂ ಕಡೆಯಿಂದ ನೋಟೀಸ್ ನೀಡುವ ಪ್ರಮೇಯವೇ ಉದ್ಭವಿಸದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸಿಇಒ ಕೆ.ಎನ್ ಅನುರಾಧ ತಿಳಿಸಿದ್ದಾರೆ.

ಫಾಕ್ಸ್‌ಕಾನ್ ಕಂಪನಿಗೆ ನೀಡಿದ್ದ ಗ್ರಾಪಂ ತೆರಿಗೆ ನೋಟೀಸ್ ರದ್ದು

ಫಾಕ್ಸ್‌ಕಾನ್ ಕಂಪನಿ. -

Prabhakara R
Prabhakara R Feb 3, 2026 10:52 PM

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಮತ್ತು ಕೊಯಿರಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತೈವಾನ್ ಮೂಲದ ಫಾಕ್ಸ್‌ಕಾನ್ ಕಂಪನಿಗೆ (Foxconn tax issue) ನೀಡಿರುವ 300 ಎಕರೆ ಜಮೀನನ್ನು ಜ. 29ರಂದು ವಿಶೇಷ ಹೂಡಿಕೆ ವಲಯ (SER) ಎಂದು ಘೋಷಿಸಲಾಗಿದೆ. ಹೀಗಾಗಿ ತೆರಿಗೆ ಪಾವತಿಸಬೇಕು ಎಂದು ಸೂಚಿಸಿ ಈ ಹಿಂದೆ ನೀಡಿದ್ದ ನೋಟೀಸನ್ನು ರದ್ದು ಪಡಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸಿಇಒ ಕೆ.ಎನ್ ಅನುರಾಧ ಮಂಗಳವಾರ ಹೇಳಿದ್ದಾರೆ.

ಈ ಸಂಬಂಧವಾಗಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿರಾಜ್ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಫಾಕ್ಸ್‌ಕಾನ್ ಕಂಪನಿಗೆ ನೀಡಿರುವ ಪ್ರದೇಶವು ಇದುವರೆಗೂ ಎರಡು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲೇ ಇತ್ತು. ಇದುವರೆಗೂ ಆ ಕಂಪನಿಗೆ ತೆರಿಗೆ ಪಾವತಿಸಲು ಸೂಚಿಸಿ ಎಂಟು ಸಲ ನೋಟಿಸ್ ನೀಡಲಾಗಿತ್ತು. ಆದರೆ ಅದು ಯಾವುದಕ್ಕೂ ಉತ್ತರಿಸಿಲ್ಲ. ಈಗ ಈ ಪ್ರದೇಶವನ್ನು ಎಸ್ಐಆರ್ ಎಂದು ಘೋಷಿಸಿರುವುದರಿಂದ ಗ್ರಾಪಂ ಕಡೆಯಿಂದ ನೋಟೀಸ್ ನೀಡುವ ಪ್ರಮೇಯವೇ ಉದ್ಭವಿಸದು ಎಂದು ಅವರು ಹೇಳಿದ್ದಾರೆ.

ಏನಿದು ವಿವಾದ?

ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲೂಕಿನಲ್ಲಿರುವ ಆ್ಯಪಲ್ ಐಪೋನ್ ಉತ್ಪಾದಿಸುವ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪನಿಯು ಸ್ಥಳೀಯ ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟದೇ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಕಟ್ಟಡ ನಿರ್ಮಾಣ, ಪ್ಲ್ಯಾನ್ ಅನುಮೋದನೆ ಸೇರಿದಂತೆ ಯಾವುದಕ್ಕೂ ಒಪ್ಪಿಗೆ ಮತ್ತು ಎನ್‌ಓಸಿ ಕೂಡ ಪಡೆದಿಲ್ಲ ಎನ್ನಲಾಗಿದೆ.

ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 136 ಎಕರೆ ಜಾಗದಲ್ಲಿ ಫ್ಯಾಕ್ಸ್ ಕಾನ್ ಕಂಪನಿಯು ನಿರ್ಮಾಣವಾಗಿದೆ. ಜತೆಗೆ ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 170 ಎಕರೆ ಜಾಗವನ್ನು ಫಾಕ್ಸ್ ಕಾನ್ ಕಂಪನಿ ಪಡೆದುಕೊಂಡಿದೆ. ಇಲ್ಲೇ ಆ್ಯಪಲ್ ಐಫೋನ್ ಅನ್ನು ಉತ್ಪಾದಿಸಿ ಈಗಾಗಲೇ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಕೆಐಎಡಿಬಿಯಿಂದ 300 ಎಕರೆ ಭೂಮಿಯನ್ನು ಫಾಕ್ಸ್ ಕಾನ್ ಕಂಪನಿ ನಿರ್ಮಾಣಕ್ಕಾಗಿ ನೀಡಲಾಗಿತ್ತು. ಫಾಕ್ಸ್ ಕಾನ್ ಕಂಪನಿಯು ಆರಂಭವಾಗಿ 2 ವರ್ಷ ಕಳೆದಿದೆ. ಆದರೇ, ಕಳೆದ 2 ವರ್ಷದ ಅವಧಿಯಲ್ಲಿ ಇದುವರೆಗೂ ಸ್ಥಳೀಯ ಪಂಚಾಯಿತಿಯಲ್ಲಿ ಎನ್‌ಓಸಿ ಪಡೆದಿಲ್ಲ. ಎನ್‌ಓಸಿ ಪಡೆದು ತೆರಿಗೆ ಕಟ್ಟುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹಲವು ಭಾರಿ ನೋಟೀಸ್ ನೀಡಲಾಗಿತ್ತು.

CJ Roy Death: ಸಿಜೆ ರಾಯ್​​​ ಆತ್ಮಹತ್ಯೆ; ತೆರಿಗೆ ಭಯೋತ್ಪಾದನೆ ನಿಲ್ಲಿಸಲು ಮೋಹನ್ ದಾಸ್ ಪೈ ಮನವಿ

ಪಂಚಾಯಿತಿಗೆ ಕಟ್ಟಬೇಕಾದ 5 ಕೋಟಿ ರೂಪಾಯಿ ತೆರಿಗೆಯನ್ನು ಕಟ್ಟುವಂತೆ ಗಡುವು ನೀಡಲಾಗಿತ್ತು. ಫೆಬ್ರವರಿ 7 ರೊಳಗೆ ತೆರಿಗೆ ಕಟ್ಟುವಂತೆ ಫಾಕ್ಸ್ ಕಾನ್ ಕಂಪನಿಗೆ ಪಂಚಾಯಿತಿಯಿಂದ ಡೆಡ್ ಲೈನ್ ನೀಡಲಾಗಿತ್ತು. ತೆರಿಗೆ ಕಟ್ಟದಿದ್ದಲ್ಲಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿ ಜನರು ಹಾಗೂ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳಿಂದ ಕಂಪನಿ ವಿರುದ್ದ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿತ್ತು.