ಸರಕಾರದಲ್ಲಿ ಶೇ.67ರಷ್ಟು ಪಾಲು ಅಹಿಂದಕ್ಕೆ ಮೀಸಲು
ಆರ್.ಬಿ.ತಿಮ್ಮಾಪೂರ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಹೈ ಕಮಾಂಡ್ ಅಂತಿಮವಾಗಿ ಬಸಂತಪ್ಪಗೆ ಅವಕಾಶ ನೀಡಿದೆ. ಇನ್ನು ದಲಿತ ಬಲ ಸಮುದಾಯದ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿಗೆ ವಿಸ್ತರಿತ ಮಂತ್ರಿಮಂಡಲದಲ್ಲಿ ಅವಕಾಶ ಸಿಕ್ಕಿದೆ. ಅದೇ ರೀತಿ ಉಪಸಭಾಧ್ಯಕ್ಷ ರಾಗಿದ್ದ ರುದ್ರಪ್ಪ ಲಮಾಣಿಗೂ ಈ ಬಾರಿ ಸಚಿವ ಸ್ಥಾನ ನೀಡಲಾಗಿದೆ.
-
7 ಜಿಲ್ಲೆಗೆ ಶೂನ್ಯ ಪ್ರಾತಿನಿಧ್ಯ
ಬೆಂಗಳೂರು, ಕಲಬುರ್ಗಿಗೆ ಜಾಕ್‌ಪಾಟ್
ಬೆಂಗಳೂರು: ಅಹಿಂದ ಸಮುದಾಯದ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಅಹಿಂದದ ವಿಶ್ವಾಸಗಳಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೀಗ ಸಂಪುಟದ ಬಹುಪಾಲು ಸ್ಥಾನಗಳನ್ನು ಅಹಿಂದಕ್ಕೆ ಮೀಸಲಿಟ್ಟಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸರಕಾರದ ಆಯಕಟ್ಟಿನ ಶೇ.67ರಷ್ಟು ಜಾಗದಲ್ಲಿ ಅಹಿಂದಕ್ಕೆ ಮೀಸಲಿಡ ಲಾಗಿದೆ. ಇನ್ನುಳಿದಂತೆ ಸಂಪುಟ ವಿಸ್ತರಣೆಯಲ್ಲಿ ಏಳು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಸಚಿವ ಸಂಪುಟದಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ತಲಾ ಆರು ಸ್ಥಾನಗಳು, ಪರಿಶಿಷ್ಟ ಜಾತಿಯ ಎಲ್ಲಾ ಪಂಗಡ ಗಳನ್ನೊಳಗೊಂಡು 7 ಸ್ಥಾನಗಳು, ಪರಿಶಿಷ್ಟ ಪಂಗಡ ಮತ್ತು ಮುಸ್ಲಿಂ ಸಮುದಾಯಕ್ಕೆ ತಲಾ ಮೂರು ಸ್ಥಾನಗಳು, ಹಿಂದುಳಿದ ವರ್ಗಗಳ ಪೈಕಿ ಕುರುಬ ಸಮುದಾಯಕ್ಕೆ ಮೂರು, ಈಡಿಗ, ಉಪ್ಪಾರ, ಬೆಸ್ತ, ಕ್ಷತ್ರಿಯ ಮತ್ತು ಮರಾಠ ಸಮುದಾಯಕ್ಕೆ ತಲಾ ಒಂದು ಸ್ಥಾನಗಳನ್ನು ನೀಡಲಾಗಿದೆ.
ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್, ಎಸ್‌ಸಿ ಎಡಬಲದ ಮಧ್ಯೆ ಸಮತೋಲನ ಕಾಪಾಡಿದೆ. ಎಸ್‌ಸಿ ಎಡ ಸಮುದಾಯದಿಂದ ಮಾಯಕೊಂಡ ಶಾಸಕ ಬಸಂತಪ್ಪಗೆ ಮಣೆ ಹಾಕಲಾಗಿದೆ.
ಇದನ್ನೂ ಓದಿ: Ahinda: ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಬುಡ ಅಲುಗಾಡುವ ಆತಂಕ
ಆರ್.ಬಿ.ತಿಮ್ಮಾಪೂರ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಹೈಕಮಾಂಡ್ ಅಂತಿಮವಾಗಿ ಬಸಂತಪ್ಪಗೆ ಅವಕಾಶ ನೀಡಿದೆ. ಇನ್ನು ದಲಿತ ಬಲ ಸಮುದಾಯದ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿಗೆ ವಿಸ್ತರಿತ ಮಂತ್ರಿಮಂಡಲದಲ್ಲಿ ಅವಕಾಶ ಸಿಕ್ಕಿದೆ. ಅದೇ ರೀತಿ ಉಪಸಭಾಧ್ಯಕ್ಷ ರಾಗಿದ್ದ ರುದ್ರಪ್ಪ ಲಮಾಣಿಗೂ ಈ ಬಾರಿ ಸಚಿವ ಸ್ಥಾನ ನೀಡಲಾಗಿದೆ.
ಮುಸ್ಲಿಂ ಕೋಟದಲ್ಲಿ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್‌ಗೆ ಸ್ಥಾನ ನೀಡಲಾಗಿದೆ. ಮುಸ್ಲಿಂ ಸಮುದಾಯದಲ್ಲಿ ಪಕ್ಷ ಯುವ ಮುಖಕ್ಕೆ ಮಣೆ ಹಾಕಿದೆ. ತನ್ವೀರ್ ಸೇಠ್, ಸಲೀಂ ಅಹ್ಮದ್ ಹೆಸರು ಮುಂಚೂಣಿಯಲ್ಲಿದ್ದರೂ ಅವರನ್ನು ಕೈಬಿಟ್ಟು ಜಮೀರ್ ಅಹ್ಮದ್ ಅವರಿಗೆ ಅವಕಾಶ ನೀಡಿರು ವುದು ಅಚ್ಚರಿಗೆ ಕಾರಣವಾಗಿದೆ.
ಬೆಂಗಳೂರಿಗೆ ಸಿಂಹಪಾಲು: ಇನ್ನು ಬೆಂಗಳೂರಿ ನಿಂದ ಆರು ಮಂದಿ ಸಚಿವರಾಗಿರುವುದರಿಂದ ಸಿಂಹಪಾಲು ದೊರೆತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಗೆ ಮೂರು ಸ್ಥಾನಗಳು ದೊರೆತಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆ ಬೆಂಗಳೂರು ದಕ್ಷಿಣಕ್ಕೆ ೨ ಸ್ಥಾನಗಳು ಸಿಕ್ಕಿವೆ.
ಮೊದಲ ಪಟ್ಟಿಯಲ್ಲಿ ದಾವಣಗೆರೆಗೆ ಒಂದು ಮಂತ್ರಿ ಸ್ಥಾನ ಮಾತ್ರ ಸಿಕ್ಕಿತ್ತು. ಆದರೆ ಕೊನೆಯ ಕ್ಷಣದ ಬದಲಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಸೇರ್ಪಡೆಯಿಂದ ಎರಡು ಸ್ಥಾನಗಳು ದೊರೆತಿವೆ. ಮಂಡ್ಯ, ಬೆಳಗಾವಿ, ಕೊಪ್ಪಳ ಜಿಲ್ಲೆಗಳಿಗೆ ತಲಾ 2, ಬಾಗಲಕೋಟೆ, ಹಾಸನ, ವಿಜಯಪುರ, ಬೀದರ್, ತುಮಕೂರು, ಹಾವೇರಿ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಿಗೆ ತಲಾ ಒಂದು ಸ್ಥಾನ ದೊರೆತಿದೆ.