ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಜೆಪಿ ಹೋರಾಟಗಾರರಿಗೆ ಬೆದರುವ ಸರ್ಕಾರ ಅಧಃಪತನದತ್ತ ಸಾಗುವುದು ನಿಶ್ಚಿತ: ಡಾ.ಆನಂದ ಕುಮಾರ್

ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮುಂದಾಗುವ ಮೂಲಕ ಕೇಂದ್ರ ಸರ್ಕಾರ ಜೇನು ಗೂಡಿಗೆ ಕಲ್ಲು ಹೊಡೆದಿದೆ. ಹೋರಾಟಕ್ಕೆ ಸಹಸ್ರಾರು ಹಾದಿಗಳು. ಜನಪರ ಇರುವವರನ್ನು ಬಂಧಿಸುವ ಮೂಲಕ ಆಕ್ರೋಶವನ್ನು ನಂದಿಸುತ್ತೇವೆ ಎಂಬುದು ಕೇವಲ ಭ್ರಮೆ. ಹೋರಾಟದ ಕಿಚ್ಚಿಗೆ ಸರ್ಕಾರ ತುಪ್ಪು ಸುರಿಯುವ ಕೆಲಸ ಮಾಡುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಜ್ವಾಲಾಮುಖಿ ಸ್ವರೂಪ ಪಡೆಯ ಲಿದೆ ಎಂದು ಎಚ್ಚರಿಸಿದ್ದಾರೆ.

ಸಿಜೆಪಿ ಹೋರಾಟಗಾರರಿಗೆ ಬೆದರುವ ಸರ್ಕಾರ ಅಧಃಪತನದತ್ತ ಸಾಗುವುದು ನಿಶ್ಚಿತ

-

Profile
Ashok Nayak Oct 10, 2026 8:29 PM

ಬೆಂಗಳೂರು: ಎಸ್.ಐ.ಆರ್‌(SIR) ರದ್ದು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ (Gyanesh Kumar)ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ(CJP), ಪ್ರತಿಪಕ್ಷಗಳ ಉಗ್ರ ಹೋರಾಟಕ್ಕೆ ಆಡಳಿತಾರೂಢ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದ್ದು, ಹೋರಾಟಕ್ಕೆ ಹೆದರುವ ಯಾವುದೇ ಸರ್ಕಾರ ಅಧ:ಪತನದತ್ತ ಸಾಗುವುದು ನಿಶ್ಚಿತ ಎಂದು ಎಐಸಿಸಿ(AICC) ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಹೇಳಿದ್ದಾರೆ.

ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮುಂದಾಗುವ ಮೂಲಕ ಕೇಂದ್ರ ಸರ್ಕಾರ ಜೇನು ಗೂಡಿಗೆ ಕಲ್ಲು ಹೊಡೆದಿದೆ. ಹೋರಾಟಕ್ಕೆ ಸಹಸ್ರಾರು ಹಾದಿಗಳು. ಜನಪರ ಇರುವವರನ್ನು ಬಂಧಿಸುವ ಮೂಲಕ ಆಕ್ರೋಶವನ್ನು ನಂದಿಸುತ್ತೇವೆ ಎಂಬುದು ಕೇವಲ ಭ್ರಮೆ. ಹೋರಾಟದ ಕಿಚ್ಚಿಗೆ ಸರ್ಕಾರ ತುಪ್ಪು ಸುರಿಯುವ ಕೆಲಸ ಮಾಡುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಜ್ವಾಲಾಮುಖಿ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೆಹಲಿಯ ಜಂತರ್‌ ಮಂತರ್‌ ಅಷ್ಟೇ ಅಲ್ಲ, ಇಡೀ ದೆಹಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಿಸಲಾಗಿದೆ. ಪ್ರತಿಭಟನೆಗೆ ಹೆದರುವ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಪಾಠ ಅರ್ಥವಾಗುವುದಿಲ್ಲ. ಪ್ರಶ್ನೆ ಕೇಳುವವರನ್ನು ವಶಕ್ಕೆ ಪಡೆಯುವುದರಿಂದ ಪ್ರಶ್ನೆಗಳು ಸಾಯುವುದಿಲ್ಲ. ಜನರ ಧ್ವನಿಯನ್ನು ಅಡಗಿಸುವುದರಿಂದ ಜನರ ಆಕ್ರೋಶವೂ ತಣ್ಣಗಾಗುವುದಿಲ್ಲ. ದೆಹಲಿಯ ಬೀದಿಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಹೋರಾಟಗಾರರನ್ನು ಎಲ್ಲೆಡೆ ವಶಕ್ಕೆ ಪಡೆಯಲಾಗುತ್ತಿದ್ದು, ಇದು ಸರ್ಕಾರದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: AICC: ಸಂಘಟನೆ ಸೃಜನ್ ಅಭಿಯಾನಕ್ಕೆ ವೇಗ; ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಜನರ ಸಮಸ್ಯೆಗಳಿಗೆ ಉತ್ತರ ನೀಡಬೇಕಾದ ಸರ್ಕಾರವೇ ಪ್ರತಿಭಟನೆಯ ಧ್ವನಿಯನ್ನು ನಿಯಂತ್ರಿ ಸುವ ಹಾದಿ ಹಿಡಿದರೆ, ಆಡಳಿತದ ಹೊಣೆಗಾರಿಕೆಯ ಕುರಿತು ಆತಂಕ ಮೂಡಿಸುತ್ತದೆ. ಪ್ರತಿಭಟನೆ ಅಪರಾಧವಲ್ಲ. ಸರ್ಕಾರವನ್ನು ಪ್ರಶ್ನಿಸುವುದು ದೇಶದ್ರೋಹವಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ವ್ಯವಸ್ಥೆಗೆ ಎಸಗುವ ಅಪಚಾರವಲ್ಲ. ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾ ಗಿಸುವುದು ಪ್ರಜಾಪ್ರಭುತ್ವದ ಜೀವಾಳ ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಜನರ ಪ್ರಶ್ನೆಗಳು ಇಷ್ಟವಿಲ್ಲ ಎಂದ ಮಾತ್ರಕ್ಕೆ ಪ್ರಶ್ನೆಗಳ ಮಹತ್ವ ಕಡಿಮೆಯಾಗುವು ದಿಲ್ಲ. ಅಧಿಕಾರ ಸಿಕ್ಕ ತಕ್ಷಣ ಜನರ ಧ್ವನಿಯೇ ಅನಗತ್ಯವೆಂದು ಭಾವಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧ. ಜನರು ತಮ್ಮ ಬೇಡಿಕೆಗಳನ್ನು ಮುಂದಿಡುವಾಗ ಅವುಗಳನ್ನು ಆಲಿಸುವುದು ಸರ್ಕಾರದ ಕರ್ತವ್ಯ. ಸಮಸ್ಯೆಗಳಿಗೆ ಪರಿಹಾರ ಹುಡುಕಿ ತನ್ನ ಕ್ರಮಗಳಿಗೆ ಸಮಂಜಸವಾದ ವಿವರಣೆ ನೀಡಬೇಕು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವುದರಿಂದ ಸಮಸ್ಯೆ ಬಗೆಹರಿಸುವುದಿಲ್ಲ. ಪ್ರತಿಭಟನಾಕಾರರನ್ನು ನಿಗ್ರಹಿಸುವುದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಒಳ್ಳೆಯ ದಲ್ಲ. ಕ್ರಮ ಕೈಗೊಂಡಿದ್ದರೆ, ಅದರ ಕಾನೂನುಬದ್ಧತೆ, ಅಗತ್ಯತೆ ಮತ್ತು ಬದ್ಧತೆಯ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.

ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಶಾಂತಿಯುತ ಪ್ರತಿಭಟನೆಯ ಹಕ್ಕು ಅನಗತ್ಯವಾಗಿ ಕುಂಠಿತವಾಗಬಾರದು. ಅದು ಅಧಿಕಾರವನ್ನು ಪ್ರಶ್ನಿಸುವವರ ವಿರುದ್ಧದ ಆಯುಧ ವಾಗಬಾರದು. ಪ್ರತಿಭಟನೆಯ ಹಕ್ಕು ದುರ್ಬಲಗೊಂಡರೆ, ನಾಳೆ ನಮ್ಮೆಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯ ವೇ ಪರೀಕ್ಷೆಗೆ ಒಳಗಾಗಬಹುದು. ಆದ್ದರಿಂದ ಇದು ಕೇವಲ ಪ್ರತಿಭಟನಾಕಾರರ ಸಮಸ್ಯೆಯಲ್ಲ; ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ನಾಗರಿಕನ ಪ್ರಶ್ನೆಯಾಗಿದೆ.

ಟೀಕೆಗಳನ್ನು ಸಹಿಸಿಕೊಳ್ಳುವುದು ದೌರ್ಬಲ್ಯವಲ್ಲ. ಅದು ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸದ ಸಂಕೇತ. ಭಿನ್ನಮತವನ್ನು ಆಲಿಸುವುದು ಆಡಳಿತದ ಸೋಲಲ್ಲ; ಅದು ಹೊಣೆಗಾರಿಕೆಯ ಗುರುತು. ಪ್ರತಿಭಟನೆಯನ್ನು ಹತ್ತಿಕ್ಕುವ ಬದಲು ಅದರ ಹಿಂದಿರುವ ನೋವನ್ನು ಅರ್ಥಮಾಡಿಕೊಳ್ಳಿ. ಪ್ರಶ್ನೆ ಕೇಳುವವರನ್ನು ಮೌನಗೊಳಿಸುವ ಬದಲು ಅವರ ಪ್ರಶ್ನೆಗಳಿಗೆ ಉತ್ತರ ನೀಡಿ. ಹೋರಾಟಗಾರರನ್ನು ಎದುರಾಳಿಗಳೆಂದು ನೋಡುವ ಬದಲು, ಅವರು ಎತ್ತುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ ಎಂದು ಡಾ.ಆನಂದ ಕುಮಾರ್‌ ಹೇಳಿದ್ದಾರೆ.

ದೆಹಲಿಯ ಬೀದಿಗಳಲ್ಲಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಬೇಕು. ವಶಕ್ಕೆ ಪಡೆಯುವ ಕ್ರಮಗಳು ನಡೆದಿದ್ದರೆ ಅವುಗಳ ಕಾನೂನುಬದ್ಧತೆಯ ಬಗ್ಗೆ ಪಾರದರ್ಶಕತೆ ಬೇಕು. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿಗೆ ರಕ್ಷಣೆ ಬೇಕು. ಸರ್ಕಾರದ ಪ್ರತಿಯೊಂದು ಕ್ರಮವೂ ಕಾನೂನು, ನ್ಯಾಯ ಮತ್ತು ನಾಗರಿಕ ಸ್ವಾತಂತ್ರ್ಯದ ಮಾನದಂಡಗಳಿಗೆ ಒಳಪಟ್ಟಿರಬೇಕು. ಜನರ ಧ್ವನಿಯನ್ನು ಬಲವಂತವಾಗಿ ಮೌನಗೊಳಿಸಲು ಸಾಧ್ಯವಿಲ್ಲ. ಜನರ ಧ್ವನಿಯನ್ನು ಆಲಿಸಿ. ಭಿನ್ನಮತವನ್ನು ಗೌರವಿಸಿ. ಹಕ್ಕು ಗಳನ್ನು ರಕ್ಷಿಸುವುದೇ ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಎಂದಿದ್ದಾರೆ.