ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆಜಾನ್ ಇಂಡಿಯಾದಿಂದ ರೂ. 2800 ಕೋಟಿ ಮೀರಿ ಹೂಡಿಕೆ: ಅಸೋಸಿಯೇಟ್ ಸುರಕ್ಷತೆ ಮತ್ತು ಸ್ವಾಸ್ಥ್ಯದ ಸುಧಾರಣೆ ಮತ್ತು ತನ್ನ ಅಖಿಲ-ಭಾರತ ಕಾರ್ಯಾಚರಣೆಗಳ ಜಾಲದ ಸದೃಢತೆ

2013ರಲ್ಲಿ ಅಮೆಜಾನ್.ಇನ್ ಪ್ರಾರಂಭವಾದ ದಿನದಿಂದಲೂ ನಾವು ಭಾರತದ ಅತ್ಯಂತ ಸುರಕ್ಷಿತ, ವೇಗದ ಮತ್ತು ಅತ್ಯಂತ ವಿಶ್ವಾಸಾರ್ಹ ಕಾರ್ಯಾಚರಣೆಗಳ ಜಾಲವನ್ನು ನಿರ್ಮಿಸಿದ್ದು ದೇಶದ ಪ್ರತಿ ಸೇವೆ ಒದಗಿಸಬಲ್ಲ ಪಿನ್ ಕೋಡ್ ಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಈ ಜಾಲದ ಕೇಂದ್ರದಲ್ಲಿ ನಮ್ಮ ಜನರಿದ್ದಾರೆ ಮತ್ತು ನಾವು ಸುರಕ್ಷತೆ, ಆರೋಗ್ಯ ಮತ್ತು ಹಣಕಾಸು ಸ್ವಾಸ್ಥ್ಯದ ಮಾನದಂಡ ವಿಸ್ತರಿಸಲು ಬದ್ಧರಾಗಿದ್ದೇವೆ

ಅಮೆಜಾನ್ ಇಂಡಿಯಾದಿಂದ ರೂ. 2800 ಕೋಟಿ ಮೀರಿ ಹೂಡಿಕೆ

-

Profile
Ashok Nayak Apr 23, 2026 10:02 PM

ಬೆಂಗಳೂರು: ಅಮೆಜಾನ್ ಇಂಡಿಯಾ ರೂ. 2800 ಕೋಟಿ ಹೂಡಿಕೆ ಪ್ರಕಟಿಸಿದ್ದು, ತನ್ನ ಸುರಕ್ಷತೆ, ಆರೋಗ್ಯ ಮತ್ತು ಹಣಕಾಸು ಸ್ವಾಸ್ಥ್ಯದ ಕ್ರಮಗಳನ್ನು ಸದೃಢಗೊಳಿಸುವುದಲ್ಲದೆ ಭಾರತದ ಅತ್ಯಂತ ಸುರಕ್ಷಿತ, ವೇಗದ ಮತ್ತು ಅತ್ಯಂತ ವಿಶ್ವಾಸಾರ್ಹ ಕಾರ್ಯಾಚರಣೆಗಳ ಜಾಲವನ್ನು ಸದೃಢ ಗೊಳಿಸಲಿದೆ. ಈ ಹೂಡಿಕೆಯು ಭಾರತದಲ್ಲಿ 2030ರ ವೇಳೆಗೆ 35 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಕಂಪನಿಯ ವಿಸ್ತಾರ ಯೋಜನೆಯ ಭಾಗವಾಗಿದ್ದು ಇದು ಉದ್ಯಮ ವಿಸ್ತರಣೆ ಹಾಗೂ ಎಐ-ಪ್ರೇರಿತ ಡಿಜಿಟಲೀಕರಣ, ರಫ್ತು ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯ ಮೂರು ಸ್ತಂಭಗಳಿಗೆ ಆದ್ಯತೆ ನೀಡಲಿದೆ.

ಅಮೆಜಾನ್ ಭಾರತದಾದ್ಯಂತ ಕೆಲವೇ ಕ್ಷಣಗಳು, ಗಂಟೆಗಳು ಮತ್ತು ದಿನಗಳಲ್ಲಿ ಸೇವೆ ಒದಗಿಸಲು ತನ್ನ ಕೇಂದ್ರ ಮತ್ತು ಕ್ವಿಕ್ ಕಾಮರ್ಸ್ ಹೆಜ್ಜೆ ಗುರುತನ್ನು ವಿಸ್ತರಿಸುವುದನ್ನು ಮುಂದುವರಿಸಲಿದೆ. ಈ ಹೂಡಿಕೆಯು ಕಂಪನಿಯು 2025ರಲ್ಲಿ ಮಾಡಿರುವ ರೂ.2000 ಕೋಟಿ (233 ಮಿಲಿಯನ್ ಯು.ಎಸ್. ಡಾಲರ್) ಹೂಡಿಕೆಯೊಂದಿಗೆ ಸೇರ್ಪಡೆಯಾಗಿದ್ದು ಇದು 17 ಹೊಸ ಫುಲ್ ಫಿಲ್ಮೆಂಟ್ ಸೆಂಟರ್ ಗಳು, ಆರು ಸಾರ್ಟೇಷನ್ ಕೇಂದ್ರಗಳು ಮತ್ತು 75 ಕೊನೆಯ ಹಂತದ ಡೆಲಿವರಿ ಸ್ಟೇಷನ್ ಗಳನ್ನು ಭಾರತದಾದ್ಯಂತ ಪ್ರಾರಂಭಿಸಲು ಅವಕಾಶ ಕಲ್ಪಿಸಿದೆ.

2025ರಲ್ಲಿ ಅಮೆಜಾನ್ ತನ್ನ ಕ್ವಿಕ್ ಕಾಮರ್ಸ್ ಕೊಡುಗೆ ಅಮೆಜಾನ್ ನೌ ಪ್ರಾರಂಭಿಸಿದೆ ಮತ್ತು ಅಂದಿನಿಂದಲೂ ಪ್ರಮುಖ ನಗರಗಳಲ್ಲಿ ಸುರಕ್ಷಿತ, ವೇಗದ ಪೂರೈಕೆಗಳನ್ನು ಸಾಧ್ಯವಾಗಿಸಲು 300ಕ್ಕೂ ಹೆಚ್ಚಯ ಮೈಕ್ರೊ-ಫುಲ್ ಫಿಲ್ಮೆಂಟ್ ಕೇಂದ್ರಗಳಿಗೆ ವಿಸ್ತರಿಸಿದೆ.

ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್‌ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ

“2013ರಲ್ಲಿ ಅಮೆಜಾನ್.ಇನ್ ಪ್ರಾರಂಭವಾದ ದಿನದಿಂದಲೂ ನಾವು ಭಾರತದ ಅತ್ಯಂತ ಸುರಕ್ಷಿತ, ವೇಗದ ಮತ್ತು ಅತ್ಯಂತ ವಿಶ್ವಾಸಾರ್ಹ ಕಾರ್ಯಾಚರಣೆಗಳ ಜಾಲವನ್ನು ನಿರ್ಮಿಸಿದ್ದು ದೇಶದ ಪ್ರತಿ ಸೇವೆ ಒದಗಿಸಬಲ್ಲ ಪಿನ್ ಕೋಡ್ ಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಈ ಜಾಲದ ಕೇಂದ್ರದಲ್ಲಿ ನಮ್ಮ ಜನರಿದ್ದಾರೆ ಮತ್ತು ನಾವು ಸುರಕ್ಷತೆ, ಆರೋಗ್ಯ ಮತ್ತು ಹಣಕಾಸು ಸ್ವಾಸ್ಥ್ಯದ ಮಾನದಂಡ ವಿಸ್ತರಿಸಲು ಬದ್ಧರಾಗಿದ್ದೇವೆ.

ಈ ವರ್ಷ ನಾವು ರೂ. 2800 ಕೋಟಿ (300 ಮಿಲಿಯನ್ ಯು.ಎಸ್.ಡಾಲರ್ ) ಹೂಡಿಕೆ ಮಾಡುವ ಮೂಲಕ ಈ ಪ್ರಯತ್ನಗಳನ್ನು ಮತ್ತಷ್ಟು ಸದೃಢಗೊಳಿಸುತ್ತಿದ್ದು ನಮ್ಮ ಕಾರ್ಯಾಚರಣೆಗಳ ಜಾಲ ವನ್ನು ವಿಸ್ತರಿಸುವುದನ್ನು ಮುಂದುವರಿಸುತ್ತಿದ್ದೇವೆ ಮತ್ತು ವೇಗ, ಸುರಕ್ಷಿತ ಮತ್ತು ಹೆಚ್ಚು ವಿಶ್ವಾಸಾರ್ಹ ಡೆಲಿವರಿಗಳನ್ನು ಗ್ರಾಹಕರಿಗೆ ನೀಡುವುದನ್ನು ಸಾಧ್ಯವಾಗಿಸುತ್ತಿದ್ದೇವೆ.

ನಮ್ಮ ಉಪಕ್ರಮಗಳು ಆಯುಷ್ಮಾನ್ ಭಾರತ್ ಮತ್ತು ಪ್ರಧಾನಮಂತ್ರಿ ಜನ ಧನ ಯೋಜನೆ ಯಂತಹ ರಾಷ್ಟ್ರೀಯ ಆದ್ಯತೆಗಳಿಗೆ ಪೂರಕವಾಗಿದ್ದು ನಮ್ಮ ಅಸೋಸಿಯೇಟ್ ಗಳಿಗೆ ಆರೋಗ್ಯ ಸೇವೆಯ ಲಭ್ಯತೆ ಮತ್ತು ಹಣಕಾಸು ಒಳಗೊಳ್ಳುವಿಕೆಯ ಲಭ್ಯತೆ ವಿಸ್ತರಿಸಲು ನೆರವಾಗುತ್ತಿದ್ದೇವೆ” ಎಂದು ಅಮೆಜಾನ್ ಇಂಡಿಯಾ ಮತ್ತು ಆಸ್ಟ್ರೇಲಿಯಾದ ವಿಪಿ-ಆಪರೇಷನ್ಸ್ ಅಭಿನವ್ ಸಿಂಗ್ ಹೇಳಿದರು.

ಅಸೋಸಿಯೇಟ್ ಸುರಕ್ಷತೆ, ಆರೋಗ್ಯ ಮತ್ತು ಹಣಕಾಸು ಸ್ವಾಸ್ಥ್ಯದ ಸದೃಢತೆ

ಜಾಲದಾದ್ಯಂತ ಕೆಲಸ ಮಾಡುವ ಅಸೋಸಿಯೇಟ್ ಗಳಿಗೆ ಅಮೆಜಾನ್ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಸೂಚಿಸಲಾದ ಮಾನದಂಡಗಳಿಗೆ ಅನುಗುಣ ವಾಗಿವೆ. ಈ ಹೊಚ್ಚಹೊಸ ಹೂಡಿಕೆಯು ಹತ್ತಾರು ಸಾವಿರ ಅಸೋಸಿಯೇಟ್ ಗಳು ಮತ್ತು ಪಾಲುದಾರರ ಆರೋಗ್ಯಸೇವೆ ಮತ್ತು ಹಣಕಾಸು ಭದ್ರತೆಯನ್ನು ಮತ್ತಷ್ಟು ಸದೃಢಗೊಳಿಸಲಿವೆ. 2026ರಲ್ಲಿ ಈ ಪ್ರಯತ್ನಗಳಲ್ಲಿ ಪ್ರಾಜೆಕ್ಟ್ ಆಶ್ರಯ್ ಡೆಲಿವರಿ ಅಸೋಸಿಯೇಟ್ ಗಳಿಗೆ ವಿಶ್ರಾಂತಿಯ ಸೌಲಭ್ಯಗಳನ್ನು ಒದಗಿಸಿತು, ಸುಶ್ರುತಾದಂತಹ ಕಾರ್ಯಕ್ರಮದ ಮೂಲಕ ದೂರ ಪ್ರಯಾಣದ ಟ್ರಕ್ ಚಾಲಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ಮತ್ತು ಸ್ವಾಸ್ಥ್ಯದ ಕಾರ್ಯಕ್ರಮ ವಾಗಿದ್ದು ದೇಶವ್ಯಾಪಿ ಆರೋಗ್ಯ ಶಿಬಿರಗಳ ಮೂಲಕ ರೋಗತಡೆಯ ಆರೋಗ್ಯಸೇವೆ ಒದಗಿಸಿದೆ. ಕಂಪನಿಯು ಸಮೃದ್ಧಿ ಕಾರ್ಯಕ್ರಮದ ಮೂಲಕ ವೈದ್ಯಕೀಯ ಮತ್ತು ಅಪಘಾತ ವಿಮೆ ಹೆಚ್ಚಿಸಿ ರುವುದಲ್ಲದೆ ಹಣಕಾಸು ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಭದ್ರತೆಯ ಲಭ್ಯತೆ ಒದಗಿಸಿದ್ದು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಮತ್ತು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯನ್ನು ಅಮೆಜಾನ್ ಅಸೋಸಿಯೇಟ್ ಗಳು ಮತ್ತು ಸಮುದಾಯ ಸದಸ್ಯರಿಗೆ ನೋಂದಣಿ ಮಾಡಿದೆ. ಇದರೊಂದಿಗೆ ಅಮೆಜಾನ್ ಅಸೋಸಿಯೇಟ್ ಗಳ ಮಕ್ಕಳಿಗೆ ಪ್ರತಿಧಿ ಶಿಷ್ಯವೇತನ ಮತ್ತು ಮಾರ್ಗ ದರ್ಶನ ಕಾರ್ಯಕ್ರಮದ ಮೂಲಕ ಶಿಕ್ಷಣಕ್ಕೆ ಬೆಂಬಲಿಸುತ್ತಿದ್ದು ತನ್ನ ಕಾರ್ಯಾಚರಣೆಗಳ ಜಾಲದಲ್ಲಿ ಸಮಗ್ರ ಸ್ವಾಸ್ಥ್ಯಕ್ಕೆ ತನ್ನ ಬದ್ಧತೆಯನ್ನು ಮರು ದೃಢೀಕರಿಸಿದೆ.

ಕಾರ್ಯಾಚರಣೆಗಳನ್ನು ಸದೃಢಗೊಳಿಸಲು ಮೂಲಸೌಕರ್ಯ ಮತ್ತು ತಂತ್ರಜ್ಞಾನದ ಸದೃಢತೆಗೆ ಹೂಡಿಕೆ

ಅಮೆಜಾನ್ ಭಾರತದಾದ್ಯಂತ ಕಾರ್ಯಾಚರಣೆಗಳ ಜಾಲ ವಿಸ್ತರಿಸಲು ಮತ್ತು ಅಪ್ ಗ್ರೇಡ್ ಮಾಡಲು ಹೂಡಿಕೆ ಮಾಡಲಿದ್ದು ಅದರಲ್ಲಿ ಫುಲ್ ಫಿಲ್ಮೆಂಟ್ ಸೆಂಟರ್ ಗಳು, ಸಾರ್ಟೇಷನ್ ಸೆಂಟರ್ ಗಳು ಮತ್ತು ಡೆಲಿವರಿ ಸ್ಟೇಷನ್ ಗಳ ಮೂಲಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ ಮತ್ತು ಭಾರತದಾದ್ಯಂತ ಟೈಯರ್ 2 ಮತ್ತು ಟೈಯರ್ 3 ನಗರಗಳಲ್ಲಿ ತನ್ನ ಗ್ರಾಹಕರಿಗೆ ಪೂರೈಕೆಯ ವೇಗ ಸುಧಾರಿಸಲಿದೆ. ಈ ಹೂಡಿಕೆಗಳು ಮಾರಾಟಗಾರರು ಮತ್ತು ಸಣ್ಣ ವ್ಯಾಪಾರಗಳಿಗೆ ಬೆಂಬಲಿಸಲಿದೆ ಮತ್ತು ಸ್ಥಳೀಯ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಲಿದೆ. ಕಂಪನಿಯು ತಾನು ಕಾರ್ಯ ನಿರ್ವಹಿಸು ತ್ತಿರುವ ನಗರಗಳಲ್ಲಿ ತನ್ನ ಹೆಜ್ಜೆ ಗುರುತನ್ನು ದುಪ್ಪಟ್ಟುಗೊಳಿಸಲು ಮತ್ತು ಭಾರತದಾದ್ಯಂತ ಹೆಚ್ಚು ನಗರಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಈ ಹೂಡಿಕೆಗಳು ಅಮೆಜಾನ್ ಗೆ ಗ್ರಾಹಕರಿಗೆ ನಿಮಿಷಗಳಿಂದ, ಗಂಟೆಗಳಿಂದ ದಿನಗಳಿಗೆ ಅವರ ಅಗತ್ಯಗಳನ್ನು ಆಧರಿಸಿ ವಿಸ್ತಾರ ಶ್ರೇಣಿಯ ಡೆಲಿವರಿ ವೇಗಗಳಲ್ಲಿ ಪೂರೈಸುತ್ತದೆ.

ಅಮೆಜಾನ್ ನ ಉದ್ಯಮದ ಮುಂಚೂಣಿಯ ಸೌಲಭ್ಯಗಳು ವಾತಾವರಣದ ನಿಯಂತ್ರಣ ಹೊಂದಿವೆ ಮತ್ತು ಶಕ್ತಿಯ ದಕ್ಷತೆ ಸುಧಾರಿಸಲು, ಉದ್ಯೋಗದ ಸ್ಥಳದ ಸುರಕ್ಷತೆ ಹೆಚ್ಚಿಸಲು ಮತ್ತು ಹೆಚ್ಚು ಒಳಗೊಳ್ಳುವ ಪರಿಸರ ಬೆಂಬಲಿಸಲು ಸುಧಾರಿತ ಎಂಜಿನಿಯರಿಂಗ್ ಸಿಸ್ಟಂಗಳೊಂದಿಗೆ ನಿರ್ಮಿಸ ಲಾಗಿದೆ. ಕಂಪನಿಯು ಉನ್ನತೀಕರಿಸಿದ ವೆಂಟಿಲೇಷನ್, ಫ್ಯಾನ್ ಗಳು, ಸ್ಪಾಟ್ ಕೂಲರ್ ಗಳು, ತಣ್ಣನೆಯ ನೀರು ಮತ್ತು ಪಾನೀಯಗಳು, ವಿಶೇಷ ಚೇತನರಿಗೆ ಸುರಕ್ಷತೆ ಮತ್ತು ಲಭ್ಯತೆಯ ವಿಶೇಷತೆ ಗಳು ಮತ್ತು ಸುಧಾರಿಸಿದ ವಿಶ್ರಾಂತಿ ಪ್ರದೇಶಗಳನ್ನು ಒಳಗೊಂಡಿವೆ.

ಅಮೆಜಾನ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲಿದ್ದು ಅದರಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್ ಒಳಗೊಂಡಿದ್ದು ಇದು ತನ್ನ ಕಾರ್ಯಾಚರಣೆಗಳ ಜಾಲವ್ನು ಸುರಕ್ಷಿತ ಮತ್ತು ಹೆಚ್ಚು ದಕ್ಷತೆಯನ್ನಾಗಿಸುತ್ತದೆ. ಇದರಲ್ಲಿ ಡೆಲಿವರಿ ಸರ್ವೀಸ್ ಪಾಲುದಾರರು ಮತ್ತು ಡೆಲಿವರಿ ಅಸೋಸಿಯೇಟ್ ಗಳಿಗೆ ಅಲರ್ಟ್ ಗಳನ್ನು ನೀಡುವ ಮೂಲಕ ರಸ್ತೆಯ ಮೇಲೆ ಸುರಕ್ಷತೆ ಸುಧಾ ರಿಸುವ ಸಾಧನಗಳು ಮತ್ತು ಅಸುರಕ್ಷಿತ ಚಾನೆಯ ವರ್ತನೆಗಳು, ವಿಶ್ರಾಂತಿ ಬಿಡುವಿನ ಕುರಿತು ಪ್ರಾಂಪ್ಟ್ ಗಳು ಅಲ್ಲದೆ ಮಾರ್ಗದ ಸಂಕೀರ್ಣತೆ ಅಂದಾಜಿಸಲು ಎಐ ಮಾಡೆಲ್ ಗಳ ಬಳಕೆ ಮತ್ತು ಹೆಚ್ಚಿನ ಸಮಾನ ಕೆಲಸದ ಒತ್ಡದ ವಿತರಣೆ ಸಾಧ್ಯವಾಗಿಸುತ್ತದೆ. ಇದರಲ್ಲಿ ಡ್ರೈವರ್ ಆಪ್ ಉನ್ನತೀ ಕರಣ ಒಳಗೊಂಡಿದ್ದು ಅದರಲ್ಲಿ ತಿಳಿಯದ ವಿಳಾಸಗಳ ಉತ್ತಮ ನ್ಯಾವಿಗೇಷನ್, ಸುಧಾರಿತ ಗಳಿಕೆಯ ಪಾರದರ್ಶಕತೆ ಮತ್ತು ಸರಳೀಕರಿಸಿದ ವರ್ಕ್ ಫ್ಲೋಗಳಿರುತ್ತವೆ.

2026ರಲ್ಲಿ ಅಸೋಸಿಯೇಟ್ ‍ಗಳಿಗೆ ಅಮೆಜಾನ್ ಉಪಕ್ರಮಗಳ ಕುರಿತು ತಿಳಿಯಿರಿ:

  • ಡೆಲಿವರಿ ಅಸೋಸಿಯೇಟ್ ಗಳಿಗೆ ವಿಶ್ರಾಂತಿ ಸೌಲಭ್ಯಗಳ ವಿಸ್ತರಣೆ- ಅಮೆಜಾನ್ ತನ್ನ ಏರ್-ಕಂಡೀಷನ್ಡ್ ರೆಸ್ಟ್ ಶಾಪ್ ಗಳಾದ ಪ್ರಾಜೆಕ್ಟ್ ಆಶ್ರಯ್ ಅನ್ನು ವಿಸ್ತರಿಲಿದ್ದು ಪ್ರಸ್ತುತ ದೆಹಲಿ ಎನ್.ಸಿ.ಆರ್., ಬೆಂಗಳೂರು, ಚೆನ್ನೈ, ಮುಂಬೈ ಮತ್ತಿತರೆ100 ತಾಣಗಳ ಆಚೆಗೂ ವಿಸ್ತರಿಸಲಿದೆ. ಈ ಸೌಲಭ್ಯಗಳು ಅನುಕೂಲಕರ ಸೀಟುಗಳು, ಸ್ವಚ್ಛ ವಾಶ್ ರೂಂಗಳು, ಕುಡಿಯುವ ನೀರು, ಚಾರ್ಜಿಂಗ್ ಸ್ಟೇಷನ್ ಗಳು ಮತ್ತು ಪ್ರಥಮ-ಚಿಕಿತ್ಸೆ ಬೆಂಬಲ ಹೊಂದಿದ್ದು ಪ್ರತಿ ತಿಂಗಳೂ 150,000 ಡೆಲಿವರಿ ಅಸೋಸಿಯೇಟ್ ಗಳಿಗೆ ಬೆಂಬಲಿಸುತ್ತಿದ್ದು ಅದರಲ್ಲಿ ಅಮೆಜಾನ್ ಜಾಲದ ಹೊರಗಡೆ ಇರುವವರೂ ಒಳಗೊಂಡಿದ್ದಾರೆ.
  • ಅಸೋಸಿಯೇಟ್ ಗಳು ಮತ್ತು ಚಾಲಕರಿಗೆ ಆರೋಗ್ಯ ಮತ್ತು ಸ್ವಾಸ್ಥ್ಯದ ವಿಸ್ತರಣೆ- ಸುಶ್ರುತಾ ದಂತಹ ಕಾರ್ಯಕ್ರಮಗಳು ದೂರ ಪ್ರಯಾಣದ ಟ್ರಕ್ ಚಾಲಕರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ವಿಸ್ತಾರ ಶ್ರೇಣಿಯ ಆರೋಗ್ಯ ಮತ್ತು ಸ್ವಾಸ್ಥ್ಯದ ಕಾರ್ಯಕ್ರಮವಾಗಿದ್ದು ಅದು ಮಾನಸಿಕ ಆರೋಗ್ಯ ಮತ್ತು ಎರ್ಗೊನಾಮಿಕ್ ಕೇರ್ ಒಳಗೊಂಡ ಹೊಸ ಸ್ವಾಸ್ಥ್ಯದ ಕಾರ್ಯಕ್ರಮಗಳಿಗೆ ವಿಸ್ತರಿಸಲಿದೆ.
  • ರೋಗತಡೆಯ ಆರೋಗ್ಯಸೇವೆಯ ಲಭ್ಯತೆ: ಅಮೆಜಾನ್ ಉಚಿತ ಆರೋಗ್ಯ ಪರೀಕ್ಷೆಗಳನ್ನು ದೇಶವ್ಯಾಪಿ ವೈದ್ಯಕೀಯ ಶಿಬಿರಗಳ ಮೂಲಕ ಆಯೋಜಿಸುತ್ತಿದ್ದು ರೋಗತಡೆಯ ಆರೈಕೆ ಮತ್ತು 2025ರ ಪ್ರಯತ್ನಗಳ ಮೇಲೆ ನಿರ್ಮಾಣ ವಿಸ್ತರಿಸುತ್ತಿದ್ದು ಇದರಲ್ಲಿ ಹತ್ತಾರು ಸಾವಿರ ಅಸೋಸಿಯೇಟ್ ಗಳು ಮತ್ತು ಪಾಲುದಾರರಿಗೆ ಸಮಗ್ರ ಆರೋಗ್ಯ ಮತ್ತು ಸ್ವಾಸ್ಥ್ಯದ ಕಾರ್ಯಕ್ರಮಗಳಿವೆ. ಈ ನಡೆಯುತ್ತಿರುವ ಶಿಬಿರಗಳಲ್ಲಿ ಆರೋಗ್ಯ ಪರೀಕ್ಷೆಗಳು (ಕಣ್ಣು, ಹಲ್ಲು, ಬಿಎಂಐ ಮತ್ತು ವೈದ್ಯರ ಸಲಹೆ), ಹೈಡ್ರೇಷನ್ ಮಾರ್ಗದರ್ಶನ ಮತ್ತು ಪ್ರಾರಂಭಿಕ ರೋಗಪತ್ತೆ ಬೆಂಬಲ ನೀಡುತ್ತದೆ.
  • ವಿಮಾ ರಕ್ಷಣೆ ಮತ್ತು ಸ್ವಾಸ್ಥ್ಯದ ಬೆಂಬಲ ಹೆಚ್ಚಳ: ಅಮೆಜಾನ್ ತನ್ನ ಡೆಲಿವರಿ ಅಸೋಸಿಯೇಟ್ ಗಳಿಗೆ ವೈದ್ಯಕೀಯ ಮತ್ತು ಅಪಘಾತ ವಿಮೆಯನ್ನು ಸದೃಢಗೊಳಿಸುವ ಯೋಜನೆ ಹೊಂದಿದ್ದು ಅದಕ್ಕೆ ಉನ್ನತೀಕರಿಸಿದ ಗ್ರೂಪ್ ಮೆಡಿಕ್ಲೈಮ್ ಮತ್ತು ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಗಳ ಮೂಲಕ ಡೆಲಿವರಿ ಸರ್ವೀಸ್ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದು ಈ ಏಕೀಕೃತ ವೆಲ್ ನೆಸ್ ಪ್ಯಾಕೇಜ್ ಈ ವಲಯದಲ್ಲಿ ಅತ್ಯಂತ ಸಮಗ್ರವಾಗಿವೆ.
  • ಹಣಕಾಸು ಮತ್ತು ಸಾಮಾಜಿಕ ಭದ್ರತೆಯ ಅನುಕೂಲಗಳ ಲಭ್ಯತೆ: ಸಮೃದ್ಧಿಯ ಮೂಲಕ ಅಮೆಜಾನ್ ಹತ್ತಾರು ಸಾವಿರ ಅಸೋಸಿಯೇಟ್ ಗಳು ಮತ್ತು 200,000ಕ್ಕೂ ಹೆಚ್ಚು ಸಮುದಾಯ ಸದಸ್ಯರಿಗೆ ಇ-ಶ್ರಮ್ ಕಾರ್ಡ್ ಗಳು, ಆರೋಗ್ಯವಿಮೆ, ನಿವೃತ್ತಿ ವೇತನ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ನೆರವನ್ನು ಗುಜರಾತ್, ಹರಿಯಾಣ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಮತ್ತಿತರೆ ರಾಜ್ಯಗಳಲ್ಲಿ ಒದಗಿಸುತ್ತಿದೆ.
  • ಅಸೋಸಿಯೇಟ್ ಗಳ ಮಕ್ಕಳ ಶಿಕ್ಷಣಕ್ಕೆ ಬೆಂಬಲ: ಪ್ರತಿಧಿ ಕಾರ್ಯಕ್ರಮದ ಅಡಿಯಲ್ಲಿ ಅಮೆಜಾನ್ ಅಸೋಸಿಯೇಟ್ ಗಳ ಮಕ್ಕಳಿಗೆ 3ನೇ ತರಗತಿಯಿಂದ 12ನೇ ತರಗತಿಯವರೆಗೆ ಶಿಷ್ಯವೇತನಗಳನ್ನು ನೀಡುತ್ತಿದ್ದು ಅದರಲ್ಲಿ ವಿಶೇಷ ಚೇತನರ ಮಕ್ಕಳು ಒಳಗೊಂಡಿದ್ದು ಅಮೆಜಾನ್ ಲೀಡರ್ಸ್ ನಿಂದ ಮಾರ್ಗದರ್ಶನ ಪಡೆಯುತ್ತಾರೆ. 2025ರಲ್ಲಿಯೇ 5000 ಶಿಷ್ಯ ವೇತನಗಳನ್ನು ಅಸೋಸಿಯೇಟ್ ಗಳ ಮಕ್ಕಳಿಗೆ ನೀಡಲಾಗಿದೆ.

*

ಅಮೆಜಾನ್ ಅಸೋಸಿಯೇಟ್ ಸ್ವಾಸ್ಥ್ಯ ಕಾರ್ಯಕ್ರಮಗಳ ವಿಸ್ತರಣೆ, ಪ್ರಾಜೆಕ್ಟ್ ಆಶ್ರಯ್ ನಲ್ಲಿ ಮತ್ತಷ್ಟು ಹೂಡಿಕೆ ಮೂಲಕ ವೈದ್ಯಕೀಯ ಮತ್ತು ಅಪಘಾತ ವಿಮೆಯ ವಿಸ್ತರಣೆ ಮತ್ತು ಹತ್ತಾರು ಸಾವಿರ ಅಸೋಸಿಯೇಟ್ ಗಳಿಗೆ ಮತ್ತು 200,000ಕ್ಕೂ ಹೆಚ್ಚು ಸಮುದಾಯ ಸದಸ್ಯರಿಗೆ ಸರ್ಕಾರದ ಸಾಮಾಜಿಕ ಭದ್ರತೆಯ ಅನುಕೂಲಗಳ ಲಭ್ಯತೆ ಹೆಚ್ಚಳ

  • ಅಮೆಜಾನ್ ನಿಂದ ತನ್ನ ಪ್ರಮುಖ ಮತ್ತು ಕ್ವಿಕ್ ಕಾಮರ್ಸ್ ಜಾಲ ವಿಸ್ತರಿಸುವ ಮೂಲಕ ಭಾರತದಾದ್ಯಂತ ನಿಮಿಷಗಳು, ಗಂಟೆಗಳು ಮತ್ತು ದಿನಗಳಲ್ಲಿ ಸುರಕ್ಷಿತ, ವೇಗದ ಮತ್ತು ಹೆಚ್ಚು ವಿಶ್ವಾಸಾರ್ಹ ಡೆಲಿವರಿಗಳನ್ನು ಸಾಧ್ಯವಾಗಿಸುತ್ತಿದೆ
  • ಇದು 2030ರ ವೇಳೆಗೆ 35 ಬಿಲಿಯನ್ ಡಾಲರ್ ಮೀರಿ ಕಂಪನಿಯ ವಿಸ್ತಾರ ಯೋಜನೆಯ ಭಾಗವಾಗಿದ್ದು ಇದು ವಾಣಿಜ್ಯ ವಿಸ್ತರಣೆಯನ್ನು ಎಐ-ಪ್ರೇರಿತ ಡಿಜಿಟಲೀಕರಣ, ರಫ್ತು ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯ ಮೂರು ಸ್ತಂಭಗಳಿಗೆ ಆದ್ಯತೆ ನೀಡುತ್ತದೆ