ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ತಾಯಿಯನ್ನೇ ಮನೆಯಿಂದ ಹೊರ ಹಾಕಿದ ಮಗ; ಕೇಡಿ ಜೇಡಿಯ ಅಟ್ಟಹಾಸ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಕೆಡಿ ಜೈದೇವ್‌ ಅಟ್ಟಹಾಸ ಮೀತಿ ಮೀರಿ ಹೋಗಿದೆ. ಮಗ ಮಗ ಅಂತ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದ ಶಕುಂತಲಾ ಪತನ ಶುರು ಆಗಿದ್ದಾಗಿದೆ. ಹೆತ್ತ ತಾಯಿಯನ್ನೇ ಮನೆಯಿಂದ ಆಚೆ ಹಾಕಿದ್ದಾನೆ ಜೈದೇವ್‌ . ಕೆಡಿ ವರ್ತನೆಗೆ ಶಕುಂತಲಾ ವಿಲ ವಿಲ ಒದ್ದಾಡಿದ್ದಾಳೆ.

ತಾಯಿಯನ್ನೇ ಮನೆಯಿಂದ ಹೊರ ಹಾಕಿದ ಮಗ; ಕೇಡಿ ಜೇಡಿಯ ಅಟ್ಟಹಾಸ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Apr 16, 2026 10:52 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಕೆಡಿ ಜೈದೇವ್‌ ಅಟ್ಟಹಾಸ ಮೀತಿ ಮೀರಿ ಹೋಗಿದೆ. ಮಗ ಮಗ ಅಂತ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದ ಶಕುಂತಲಾ ಪತನ ಶುರು ಆಗಿದ್ದಾಗಿದೆ. ಹೆತ್ತ ತಾಯಿಯನ್ನೇ ಮನೆಯಿಂದ ಆಚೆ ಹಾಕಿದ್ದಾನೆ ಜೈದೇವ್‌ (Jaidev). ಕೆಡಿ ವರ್ತನೆಗೆ ಶಕುಂತಲಾ (Shankuntala) ವಿಲ ವಿಲ ಒದ್ದಾಡಿದ್ದಾಳೆ.

ಜೈದೇವ್‌ ಅಟ್ಟಹಾಸ

ಈಗಾಗಲೇ ಲೋಗೋ ವಿಚಾರಕ್ಕೆ ತತ್ತರಿಸಿ ಹೋದ ಜೈದೇವ್‌ಗೆ ಅಮ್ಮ ಹೇಳಿದ ಒಂದು ಮಾತು ಕೋಪ ಬರಿಸಿದೆ. ಶಕುಂತಲಾ ಜೈದೇವ್‌ ಬಳಿ ಬಂದು ಚೆಕ್‌ಗೆ ಸಹಿ ಹಾಕಲು ಹೇಳಿದ್ದಾಳೆ. ಹಣವನ್ನು ಕಳೆದುಕೊಂಡೆ. ಮೂರು ಕೋಟಿ ಬೇಕು ಅಂತ ಹೇಳಿದ್ದಾಳೆ. ಅದಕ್ಕೆ ಜೈದೇವ್‌ ಶಾಕ್‌ ಆಗಿದ್ದಾನೆ. ಮೂರು ಕೋಟಿಯನ್ನ ಮೂರು ಸಾವಿರ ತರ ಕೇಳುತ್ತೀಯಲ್ಲ ಅಂತ ಹೇಳಿದ್ದಾನೆ. ಇದರಿಂದ ಕೋಪಗೊಂಡ ಶಕುಂತಲಾ, ಗೌತಮ್‌ಗೂ ನಿನಗೂ ಎಷ್ಟು ವ್ಯತ್ಯಾಸ ಇದೆ ನೋಡೋ ಅಂತ ಹೇಳಿದ್ದಾಳೆ.

ಇದನ್ನೂ ಓದಿ: Karna Serial: ಅರ್ಜುನ ಎದುರು ನಿಧಿ; ಕರ್ಣನ ಮನದಲ್ಲಿ ಎನೋ ತಳಮಳ!

ಇದು ಜೈದೇವ್‌ಗೆ ಕೋಪ ಬರುವಂತೆ ಆಗಿದೆ. ಶಕುಂತಲಾಳಿಗೆ ಏಕವಚನ ಬಳಸಿ, ಗಟ್ಟಿಯಾಗಿ ಹೆಡೆಮುರಿ ಕೊಟ್ಟಿ, ನನ್ನ ಮುಂದೆಯೇ ನನ್ನ ಶತ್ರು ಹೋಗಳುತ್ತೀಯಾ ಅಂತ, ಹೆತ್ತ ತಾಯಿಯನ್ನೇ ಮನೆಯಿಂದ ಆಚೆ ಹಾಕಿದ್ದಾನೆ ಜೈದೇವ್‌. ಕೇಡಿ ಜೇಡಿಯ ಅಟ್ಟಹಾಸಕ್ಕೆ ನಲುಗಿ ಕಣ್ಣೀರಿಟ್ಟಿದ್ದಾಳೆ ಶಕುಂತಲಾ.

ಜೈದೇವ್‌ಗೆ ವಾರ್ನ್‌

ಈಗಾಗಲೇ ಗೌತಮ್‌ ದಿವಾನ್‌ ಹೊಸ ಕಂಪನಿ ಲೋಗೋ ವಿಚಾರವಾಗಿ ಜೈದೇವ್‌ ಹಾಗೂ ಗೌತಮ್‌ ಮಧ್ಯೆ ಲೀಗಲ್‌ ವಾರ್‌ ಆಗೋಗಿದೆ. ಲೋಗೋ ಗೌತಮ್‌ ಹೆಸರನಿಲ್ಲಿದೆ. ಜೈದೇವ್‌ಗೆ ಕ್ಲಾರಿಟಿನೂ ಕೊಟ್ಟಿದ್ದಾನೆ ಗೌತಮ್‌. ತನ್ನ ಕುಟುಂಬದ ಸುದ್ದಿಗೆ ಬರದಂತೆ ಜೈದೇವ್‌ಗೆ ವಾರ್ನ್‌ ಮಾಡಿದ್ದಾನೆ ಗೌತಮ್‌. ಅಷ್ಟೇ ಅಲ್ಲ ಗೌತಮ್‌ ನಡೆಗೂ ಶಾಕ್‌ ಆಗಿದ್ದಾನೆ ಜೈದೇವ್‌.

ಮೂಲ ಲೋಗೋ ಲೀಗಲ್‌ ಡಾಕ್ಯುಮೆಂಟ್‌ನ ಪಾರ್ಥ, ಗೌತಮ್‌ಗೆ ತಂದು ಕೊಟ್ಟಿದ್ದಾನೆ. ಹೀಗಾಗಿ ಗೌತಮ್‌ ಪ್ರೆಸ್‌ ಮೀಟ್‌ ಕರೆದು, ಅದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಹೀಗಾಗಿ ಗೌತಮ್‌, ಜೈದೇವ್‌ ಮುಂದೆ ಮೊದಲ ಹೆಜ್ಜೆಯಲ್ಲೇ ಗೆದ್ದು ಬೀಗಿದ್ದಾನೆ.

ಮುಂದೆ ಗೌತಮ್‌ ದಿವಾನ್‌, ಜೈದೇವ್‌ ಮುಂದೆ ಎತ್ತರಕ್ಕೆ ಬೆಳೆಯುತ್ತಾನಾ? ಜೈದೇವ್‌ ಇದ್ದ ಆಸ್ತಿಯನ್ನೂ ಕಳೆದುಕೊಳ್ತಾನಾ? ಮನೆಯಿಂದ ಹೊರಗೆ ಬಿದ್ದ ಶಕುಂತಲಾ ಗತಿ ಏನು? ಗೌತಮ್‌ ಮುಂದೆಯೇ ಶಕುಂತಲಾ ಸಹಾಯ ಕೇಳಿ ಬರ್ತಾಳಾ? ದಿಶಾ ಹಣೆದ ಬಲೆಗೆ ಜೈದೇವ್‌ ಸಿಕ್ಕಿಕೊಳ್ತಾನಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಕೇಡಿ ಎಷ್ಟೇ ಹಾರಾಡಿದ್ರೂ, ಕೊನೆಗೆ ಗೆಲ್ಲೋದು ಮಾತ್ರ ಗೌತಮ್ ದಿವಾನ್!

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.