ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೋದರ ಅಳಿಯ ನಾಪತ್ತೆ; ನೆರವಿಗೆ ಮನವಿ
ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೋದರ ಅಳಿಯ ಅನಿರುದ್ಧ್ ರಮೇಶ್ ನಾಪತ್ತೆಯಾಗಿದ್ದಾರೆ. ಅವರು ದಕ್ಷಿಣ ಬೆಂಗಳೂರಿನ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಪತ್ತೆಗೆ ಪೊಲೀಸರರಿಂದ ಹುಡುಕಾಟ ನಡೆಯುತ್ತಿದೆ.
ನಾಪತ್ತೆಯಾದ ಅನಿರುದ್ಧ ರಮೇಶ್ -
ಬೆಂಗಳೂರು: ನಗರದ ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ (Bhaskar Rao) ಅವರ ಸೋದರ ಅಳಿಯ ಅನಿರುದ್ಧ್ ರಮೇಶ್ ನಾಪತ್ತೆಯಾಗಿದ್ದು, ಕಳೆದ 10 ದಿನಗಳಿಂದ ಹುಡುಕಾಟ ನಡೆಸುತ್ತಿದ್ದರೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಅವರ ಪತ್ತೆಗೆ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಭಾಸ್ಕರ್ ರಾವ್ ಅವರು ಮನವಿ ಮಾಡಿದ್ದಾರೆ.
ಅನಿರುದ್ಧ್ ದಕ್ಷಿಣ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹನುಮಂತನಗರದಲ್ಲಿ ನೆಲೆಸಿದ್ದರು. ಅವರು ಸುಮಾರು 6 ಅಡಿ 2 ಇಂಚು ಎತ್ತರವಿದ್ದು, ಶಾಂತ ಸ್ವಭಾವದ ವ್ಯಕ್ತಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ಸೋದರಳಿಯನ ಪತ್ತೆಗಾಗಿ ಬೆಂಗಳೂರು ನಗರ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತ ಅವರ ಮಾರ್ಗದರ್ಶನದಲ್ಲಿ ತಿಲಕ್ ನಗರ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಆತನ ಪತ್ತೆಗಾಗಿ ಸಾಮಾಜಿಕ ಜಾಲತಾಣಗಳ ಬಳಕೆದಾರರು ಸಹಾಯ ಮಾಡಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಮನವಿ ಮಾಡಿದ್ದಾರೆ.
My nephew Aniruddh Ramesh is missing since 15 February, 2026.
— Bhaskar Rao (@Nimmabhaskar22) February 22, 2026
He is Astt Prof of Psychology in a prominent college in South Bengaluru and stays in Hanumanthnagar. He is 32 years, 6, 2 “ inches height and a quiet boy.
The Tilak Nagar Police under guidance of Ms Sujeeta Md, IPS,… pic.twitter.com/1QKQrWylPa
ಅನಿರುದ್ಧ್ ನಾಪತ್ತೆಯಾಗುವ ವೇಳೆ ಖಾತೆಯಿಂದ ರೂ.9,000 ಡ್ರಾ ಆಗಿದೆ. ಅದನ್ನು ಹೊರತುಪಡಿಸಿದರೆ ಆತನ ವಾಹನ, ಕ್ರೆಡಿಟ್ ಕಾರ್ಡ್, ಮೊಬೈಲ್ ಫೋನ್ ಕೂಡ ತೆಗೆದುಕೊಂಡು ಹೋಗಿಲ್ಲ. ಯಾವುದೇ ಪತ್ರ ಕೂಡ ಬರೆದಿಲ್ಲ ಎಂದು ಹೇಳಿದ್ದಾರೆ.
ಇನ್ನು ಅನಿರುದ್ಧ್ ಅವರ ಸಹೋದರಿ ಅಪೂರ್ವ ಅವಿನಾಶ್ ಮಾತನಾಡಿ, ಫೆಬ್ರವರಿ 17 ರಂದು ನಾಪತ್ತೆ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ದೂರಿನ ಪ್ರಕಾರ, ಅನಿರುದ್ಧ್ ಜಯನಗರದ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಫೆಬ್ರವರಿ 16 ರಂದು ಸಂಜೆ 4.45 ರಿಂದ 5 ಗಂಟೆಯ ನಡುವೆ ತಮ್ಮ ಕೆಲಸದ ಸ್ಥಳದಿಂದ ಹೊರಬಂದ ನಂತರ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಾಪತ್ತೆ ಕೇಸ್ ಸುಖಾಂತ್ಯ; ಪ್ರಿಯಕರನನ್ನು ಬಿಟ್ಟು ಗಂಡನ ಮನೆಗೆ ಹೋಗಲು ಒಪ್ಪಿದ ಪ್ರಿಯಾಂಕ
ಅನಿರುದ್ಧ್ ತಮ್ಮ ಲ್ಯಾಪ್‌ಟಾಪ್ ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅನಿರುದ್ಧ ಅವರು ತಮ್ಮ ಕಾಲೇಜು ಬಳಿ ಕಾಣೆಯಾದ ಕಾರಣ ಪ್ರಕರಣವನ್ನು ತಿಲಕ್‌ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.