ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಬ್ಬಿಗರಿಗೆ ಸಿಎಂ ಸಾಥ್‌

ರೈತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕಬ್ಬು ಬೆಳೆಗಾರ(Sugarcane farmer)ರ ಸಮಸ್ಯೆ ಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರದ ಸುವರ್ಣಸೌಧದಲ್ಲಿ ಸಭೆ ನಡೆಸಿ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡುತ್ತೇನೆ. ರೈತರು ತಮ್ಮ ಪ್ರತಿ ಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ ಸಿಎಂ ಭರವಸೆಗೂ ಜಗ್ಗದ ರೈತರು ಪಾದ ಯಾತ್ರೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಕಬ್ಬಿಗರಿಗೆ ಸಿಎಂ ಸಾಥ್‌

-

Profile
Ashok Nayak Oct 18, 2026 9:47 AM

ಬೆಂಗಳೂರು: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡ 4ನೇ ದಿನದ ಹುಬ್ಬಳ್ಳಿ ಚಲೊ ಪಾದಯಾತ್ರೆ(Padayatra)ಯು ಶನಿವಾರ ಚನ್ನಮ್ಮನ ಕಿತ್ತೂರಿಗೆ ತಲುಪಿದ್ದು, ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಅಪಾರ ಸಂಖ್ಯೆಯ ರೈತರು ಕಿಕ್ಕಿರಿದು ಸೇರಿದ್ದರು. ಸ್ಥಳಕ್ಕೆ ಆಗಮಿಸಿದ್ದ ಸಿಎಂ ಡಿ.ಕೆ.ಶಿವಕುಮಾರ್(CM D K Shivakumar) ಅವರು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಹೋರಾಟ ನಿಲ್ಲಿಸಿ ಎಂದು ಮಾಡಿದ ಮನವಿಗೂ ರೈತರು ಓಗೊಡಲಿಲ್ಲ. ಭಾನುವಾರ ಮತ್ತೆ ಪಾದ ಯಾತ್ರೆ ಆರಂಭಿಸುವುದಾಗಿ ಘೋಷಿಸಿದ್ದಾರೆ.

ರೈತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕಬ್ಬು ಬೆಳೆಗಾರ(Sugarcane farmer)ರ ಸಮಸ್ಯೆ ಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರದ ಸುವರ್ಣಸೌಧದಲ್ಲಿ ಸಭೆ ನಡೆಸಿ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡುತ್ತೇನೆ. ರೈತರು ತಮ್ಮ ಪ್ರತಿ ಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ ಸಿಎಂ ಭರವಸೆಗೂ ಜಗ್ಗದ ರೈತರು ಪಾದ ಯಾತ್ರೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ದಸರಾ(Dasara) ಕಳೆದ ನಂತರ ಮುಂದಿನ ವಾರದ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರು, ಕೇಂದ್ರದ ಅಧಿಕಾರಿಗಳ ಸಭೆ ಕರೆಯುತ್ತೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ರಾಜ್ಯ ಸರಕಾರವೊಂದರಿಂದಲೇ ರೈತರ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಇದರಲ್ಲಿ ಕೇಂದ್ರ ಸರಕಾರ, ಬ್ಯಾಂಕುಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಪಾತ್ರವೂ ಇದೆ.

ಇದನ್ನೂ ಓದಿ: SAP for Sugarcane: ಕಬ್ಬಿಗೆ ರಾಜ್ಯ ಸಲಹಾ ಬೆಲೆ ಜಾರಿಗೊಳಿಸಿ; ಸಿಎಂ ಡಿಕೆಶಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರ

ಎಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿದಾಗ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ರೈತರು ಕರೆದಲ್ಲಿಗೆ ಬರಲು ನಾನು ಸಿದ್ಧನಿದ್ದೇನೆ. ನಿಮ್ಮ ಪರವಾಗಿ ನಾನು ಆಲೋಚನೆ ಮಾಡುತ್ತಿದ್ದೇನೆ. ನಿಮ್ಮ ಜತೆಯ ನಾನು ಬೀದಿಯ ಮಲಗಲು ಸಿದ್ಧ. ನೀವು ನೀಡಿದ ಚಾಪೆಯ ಮೇಲೆ ಮಲಗು ತ್ತೇನೆ. ನೀವು ನೀಡಿದ ರೊಟ್ಟಿ ಸ್ವೀಕರಿಸುತ್ತೇನೆ. ರೈತರೇ ನಮ್ಮ ದೇವರುಗಳು. ನಮ್ಮನ್ನು ಸಾಕಿ, ಬೆಳೆಸು ವವರು ನೀವು. ರೈತರಿಗೆ ಸಂಬಳವಿಲ್ಲ, ಪಿಂಚಣಿಯಿಲ್ಲ, ಪ್ರಮೋಷನ್ ಇಲ್ಲ.

ನಿಮ್ಮ ಬದುಕಿನ ಭದ್ರತೆಗೆ ಸರಕಾರ ಕೈಜೋಡಿಸಬೇಕು. ನಿಮ್ಮ ಸಮಸ್ಯೆಗಳನ್ನು ಅರಿತುಕೊಳ್ಳಲು ಬೆಂಗಳೂರಿನಿಂದ ಕಿತ್ತೂರಿಗೆ ಬಂದಿದ್ದೇನೆ. ನಿಮ್ಮ ಹೋರಾಟದ ನೋವು ಮತ್ತು ಸಂಕಷ್ಟಗಳು ನನಗೆ ಅರ್ಥವಾಗಿವೆ. ಪ್ರತಿಭಟನೆ ಕೈ ಬಿಡಬೇಕು ಎಂದು ರೈತರಿಗೆ ಕೈಮುಗಿದು ಕೇಳುತ್ತೇನೆ ಎಂದು ಸಿಎಂ ಪ್ರತಿಭಟನಾ ರೈತರ ಬಳಿ ಮನವಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಕಬ್ಬಿನಿಂದ ರಾಜ್ಯ ಸರಕಾರಕ್ಕೆ ಕೋಟ್ಯಂತರ ರುಪಾಯಿ ತೆರಿಗೆ ಆದಾಯ ಬರುತ್ತಿದ್ದರೂ, ಉಚಿತ ವಿದ್ಯುತ್ ಸೌಲಭ್ಯ ಹೊರತುಪಡಿಸಿ ರೈತರಿಗೆ ನಿರೀಕ್ಷಿತ ನೆರವು ಸಿಗುತ್ತಿಲ್ಲ.

ಕಬ್ಬು ಬೆಳೆಗಾರರ ಸಂಕಷ್ಟ ನಿವಾರಿಸಲು ರಾಜ್ಯ ಸರಕಾರ ಪ್ರತಿ ಟನ್ ಕಬ್ಬಿಗೆ 1000 ರು. ಪ್ರೋತ್ಸಾಹ ಧನ (ಎಸ್‌ಎಪಿ) ಘೋಷಿಸಬೇಕು. ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

image

ಚೂನಪ್ಪ ಪೂಜಾರಿ ಅವರೊಂದಿಗೆ ಮಾತನಾಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ. ಸಹಕಾರ, ಕೃಷಿ ಮತ್ತು ಸಕ್ಕರೆ ಸಚಿವರನ್ನು ದೆಹಲಿಗೆ ಕಳುಹಿಸಿ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗಿದೆ. ಸಕ್ಕರೆ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ರೈತರ ಸಂಕಷ್ಟಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಶೀಘ್ರದಲ್ಲೇ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ.

-ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ
image

ಎಂಎಸ್‌ಪಿ ಕೇಂದ್ರ ಸರಕಾರಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು, ನಮ್ಮ ಹೋರಾಟ ನಿಲ್ಲುವು ದಿಲ್ಲ. ಭಾನುವಾರ ಮಧ್ಯಾಹ್ನ 3 ಗಂಟೆಯವರೆಗೆ ಕಿತ್ತೂರಿನ ಧರಣಿ ಮಾಡುತ್ತೇವೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅಷ್ಟರೊಳಗೇ ಇಲ್ಲಿಗೆ ಬಂದು ಮಾತನಾಡಬೇಕು. ಇಲ್ಲದೇ ಹೋದರೆ ಹುಬ್ಬಳ್ಳಿಗೆ ನುಗ್ಗುತ್ತೇವೆ.

-ಚೂನಪ್ಪ ಪೂಜೇರಿ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ
image

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕೇಂದ್ರ ಸರಕಾರ ಬದ್ಧವಾಗಿದ್ದು, ರೈತರ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಸಮಿತಿಯು ರೈತರ ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಶೀಘ್ರವೇ ಶಿಫಾರಸು ಸಲ್ಲಿಸಲಿದೆ. ಸಮಿತಿಯ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ