MLA S N Subbareddy: ಶಾಸಕ ಸುಬ್ಬಾರೆಡ್ಡಿ ವಿರುದ್ಧ ಸುಳ್ಳು ಆರೋಪ: ಸಂದೇಶ್ ವಿರುದ್ಧ ಎಫ್‌ಐಆರ್‌ಗೆ ಕಾಂಗ್ರೆಸ್ ಆಗ್ರಹ
ಕೃಷ್ಣೇಗೌಡ ಮಾತನಾಡಿ, ಜು.25ರಂದು ಸಂದೇಶ್ ಹಾಗೂ ಅವರ ಬೆಂಬಲಿಗರು ಸೋಮಲಾಪುರ ಜಮೀನಿನ ಬಳಿ ತೆರಳಿ ಸ್ಥಳೀಯ ನಿವಾಸಿ ಗಂಗಾಧರಪ್ಪ ಅವರನ್ನು ಪ್ರಶ್ನಿಸಿದ್ದು, ಆ ವೇಳೆ ಶಾಸಕರಿಗೆ ಅಲ್ಲಿ ಯಾವುದೇ ಜಮೀನು ಇಲ್ಲ ಎಂದು ಗಂಗಾಧರಪ್ಪ ಸ್ಪಷ್ಟಪಡಿಸಿದ್ದಾರೆ. ಇದರಿಂದ ಆಕ್ರೋಶ ಗೊಂಡ ಸಂದೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು.
-
ಗುಡಿಬಂಡೆ: ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(MLA S N Subbareddy) ಅವರ ವಿರುದ್ಧ ಜಮೀನು ಕಬಳಿಕೆ ಕುರಿತು ಆಧಾರರಹಿತ ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವ ಕೋಲಾರದ ಸಂದೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಹೆಚ್.ಪಿ.ಲಕ್ಷ್ಮೀನಾರಾಯಣ, ಮಾತನಾಡಿ ಸೋಮಲಾಪುರ ಗ್ರಾಮದ ಸರ್ವೆ ನಂ.1ರ 162 ಎಕರೆ ಜಮೀನನ್ನು ಶಾಸಕರು ಕಬಳಿಸಿ ಬೇಲಿ ಹಾಕಿದ್ದಾರೆ ಎಂದು ಸಂದೇಶ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕ ಸುಬ್ಬಾರೆಡ್ಡಿ ಅವರನ್ನು ಸಚಿವರನ್ನಾಗಿ ಮಾಡಿದರೆ ಸಿಎಂ ನಿವಾಸದ ಮುಂದೆ ಧರಣಿ ನಡೆಸುವುದಾಗಿ ಬೆದರಿಕೆ ಹಾಕುವ ಮೂಲಕ ಬ್ಲ್ಯಾಕ್‌ಮೇಲ್ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: MLA S N Subbareddy: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಸುಳ್ಳು ಆರೋಪ: ಕೋಲಾರದ ಸಂದೇಶ್ ವಿರುದ್ಧ ದೂರು
ಗುಡಿಬಂಡೆ ಮತ್ತು ಬಾಗೇಪಲ್ಲಿ ಭಾಗದಲ್ಲಿ ಜನರು ಜಾತಿ-ಭೇದವಿಲ್ಲದೆ ಸೌಹಾರ್ದದಿಂದ ಬದುಕು ತ್ತಿದ್ದಾರೆ. ಆದರೆ ಹೊರಗಿನಿಂದ ಬಂದು ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಈ ರೀತಿಯ ಚಟುವಟಿಕೆ ಮುಂದುವರಿದರೆ ಉಗ್ರ ಹೋರಾಟ ಹಮ್ಮಿಕೊಳ್ಳು ವುದಾಗಿ ಎಚ್ಚರಿಕೆ ನೀಡಿದರು.
ಕೃಷ್ಣೇಗೌಡ ಮಾತನಾಡಿ, ಜು.25ರಂದು ಸಂದೇಶ್ ಹಾಗೂ ಅವರ ಬೆಂಬಲಿಗರು ಸೋಮಲಾಪುರ ಜಮೀನಿನ ಬಳಿ ತೆರಳಿ ಸ್ಥಳೀಯ ನಿವಾಸಿ ಗಂಗಾಧರಪ್ಪ ಅವರನ್ನು ಪ್ರಶ್ನಿಸಿದ್ದು, ಆ ವೇಳೆ ಶಾಸಕರಿಗೆ ಅಲ್ಲಿ ಯಾವುದೇ ಜಮೀನು ಇಲ್ಲ ಎಂದು ಗಂಗಾಧರಪ್ಪ ಸ್ಪಷ್ಟಪಡಿಸಿದ್ದಾರೆ. ಇದರಿಂದ ಆಕ್ರೋಶ ಗೊಂಡ ಸಂದೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು.
ಶಾಸಕರು ಜಮೀನು ಖರೀದಿಸಿರುವುದನ್ನು ಯಾರಾದರೂ ಸಾಬೀತುಪಡಿಸಿದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧರಿದ್ದಾರೆ ಎಂದು ಹೇಳಿದರು.
ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರ ವಿರುದ್ಧ ಸುಳ್ಳು ಆರೋಪಗಳ ಮೂಲಕ ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಅಲ್ಲದೆ ತಾಲೂಕಿನಲ್ಲಿ ಶಾಂತಿ ಕದಡುವ ಯತ್ನ ನಡೆಯುತ್ತಿದ್ದು, ಸಂದೇಶ್ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಿಯಾಜ್ ಪಾಷಾ, ಪ್ರಕಾಶ್, ರಮೇಶ್, ಇಸ್ಮಾಯಿಲ್, ಆಜಾದ್ ಬಾಬು, ಯುವ ಕಾಂಗ್ರೆಸ್ ಮುಖಂಡ ನವೀನ್, ಅಂಬರೀಶ್, ಯರಲಕ್ಕೇನಹಳ್ಳಿ ಮಂಜುನಾಥ್, ದಲಿತ ಮುಖಂಡರಾದ ನಂಜುಂಡ, ನಾರಾಯಣಸ್ವಾಮಿ, ಗಂಗಪ್ಪ, ರಮಣ, ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.