ಚಿಲ್ಲರೆ ಹಣ ಇಲ್ಲವೆಂದು ಪ್ರಯಾಣ ನಿರಾಕರಣೆ ಬೇಡ
ಇತ್ತೀಚೆಗೆ ಮಾಸ್ಕ್ ಧರಿಸಿ ಸಾಮಾನ್ಯ ಪ್ರಯಾಣಿಕನಂತೆ ನಗರದ ವಿವಿಧ ಮಾರ್ಗಗಳ ಬಿಎಂಟಿಸಿ ಬಸ್ʼಗಳಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದ್ದರು. ಈ ವೇಳೆ ಕೆಲ ನಿರ್ವಾಹಕರು ಚಿಲ್ಲರೆ ಇಲ್ಲ ಎಂಬ ಕಾರಣ ನೀಡಿ ಸಚಿವರನ್ನೇ ಬಸ್‌ನಿಂದ ಇಳಿಯುವಂತೆ ಒತ್ತಾಯಿಸಿದ ಘಟನೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಹೊಸ ಸುತ್ತೋಲೆ ಹೊರಡಿಸಿದೆ.
-
ಬೆಂಗಳೂರು: ಚಿಲ್ಲರೆ ಹಣದ ಕೊರತೆಯನ್ನು ನೆಪವನ್ನಾಗಿ ಮಾಡಿಕೊಂಡು ಯಾವುದೇ ಪ್ರಯಾಣಿಕರಿಗೆ ಪ್ರಯಾಣದ ಅವಕಾಶವನ್ನು ನಿರಾಕರಿಸಬಾರದು ಹಾಗೂ ಬಸ್‌ನಿಂದ ಇಳಿಯುವಂತೆ ಒತ್ತಾಯಿಸಬಾರದು ಎಂದು ಬಿಎಂಟಿಸಿ ತನ್ನ ಚಾಲಕರು ಮತ್ತು ನಿರ್ವಾಹಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಬಿಎಂಟಿಸಿ, ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಇತ್ತೀಚೆಗೆ ಮಾಸ್ಕ್ ಧರಿಸಿ ಸಾಮಾನ್ಯ ಪ್ರಯಾಣಿಕನಂತೆ ನಗರದ ವಿವಿಧ ಮಾರ್ಗಗಳ ಬಿಎಂಟಿಸಿ ಬಸ್ʼಗಳಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದ್ದರು. ಈ ವೇಳೆ ಕೆಲ ನಿರ್ವಾಹಕರು ಚಿಲ್ಲರೆ ಇಲ್ಲ ಎಂಬ ಕಾರಣ ನೀಡಿ ಸಚಿವರನ್ನೇ ಬಸ್‌ನಿಂದ ಇಳಿಯುವಂತೆ ಒತ್ತಾಯಿಸಿದ ಘಟನೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಹೊಸ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ: BMTC reality check: ಬಿಎಂಟಿಸಿಯಲ್ಲಿ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್; ಬಸ್ ನಿಲ್ಲಿಸದ ಡ್ರೈವರ್, ಕಂಡಕ್ಟರ್ ಅಮಾನತು
ಪರಿಶೀಲನೆ ವೇಳೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಒಬ್ಬ ಚಾಲಕ ಹಾಗೂ ಒಬ್ಬ ನಿರ್ವಾಹಕರ ವಿರುದ್ಧ ಅಮಾನತು ಕ್ರಮ ಕೈಗೊಳ್ಳುವಂತೆ ಸಚಿವರು ಶಿಫಾರಸು ಮಾಡಿದ್ದಾರೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಬಸ್‌ಗಳನ್ನು ನಿಗದಿತ ಬಸ್ ನಿಲ್ದಾಣಗಳ ನಿಲ್ಲಿಸಬೇಕು. ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯ ಹಾಗೂ ಗೌರವದಿಂದ ವರ್ತಿಸುವುದು ಕಡ್ಡಾಯವಾಗಿದೆ.
ಇನ್ನು ನಿರ್ವಾಹಕರು ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರದಲ್ಲಿ ಲಭ್ಯವಿರುವ ಡೈನಾಮಿಕ್ ಕ್ಯೂಆರ್ ಕೋಡ್ ಆಧಾರಿತ ಯುಪಿಐ ಪಾವತಿ ವ್ಯವಸ್ಥೆ ಹೆಚ್ಚು ಬಳಸುವಂತೆ ಪ್ರಯಾ ಣಿಕರನ್ನು ಉತ್ತೇಜಿಸಬೇಕು. ಚಿಲ್ಲರೆ ಹಣದ ಕೊರತೆಯನ್ನು ಯಾವುದೇ ಕಾರಣಕ್ಕೂ ಪ್ರಯಾಣ ನಿರಾಕರಣೆಗೆ ನೆಪವಾಗಿಸಬಾರದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಇಟಿಎಂ ವ್ಯವಸ್ಥೆಯಲ್ಲಿ ಇನ್ನೂ ದಾಖಲಾಗದ ಬಸ್ ಶೆಲ್ಟರ್‌ಗಳನ್ನು ಗುರುತಿಸಿ ಅವುಗಳನ್ನು ವ್ಯವಸ್ಥೆಗೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರಿಂದ ಪದೇ ಪದೆ ದೂರುಗಳು ಬರುತ್ತಿರುವ ಚಾಲಕರು ಮತ್ತು ನಿರ್ವಾಹಕರಿಗೆ ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲಿ ಸಾಫ್ಟ್ ಸ್ಕಿಲ್ಸ್ ಹಾಗೂ ಸಾರ್ವಜನಿಕ ಸ್ನೇಹಿ ಸೇವೆ ಕುರಿತು ವಿಶೇಷ ತರಬೇತಿ ನೀಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.