ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಫ್ಯಾಬ್ಇಂಡಿಯಾದಿಂದ `ದಿ ಸಾಂಗ್ ಆಫ್ ಸ್ಪ್ರಿಂಗ್’ನ ಎರಡನೇ ಆವೃತ್ತಿ ಮೂಲಕ ಚಿಕನ್ ಕಾರಿ ಸಂಭ್ರಮಾಚರಣೆ

ಆಧುನಿಕ ವಾರ್ಡ್ ರೋಬ್ ಗೆ ಶತಮಾನಗಳ ಹಳೆಯ ಎಂಬ್ರಾಯಿಡರಿ ತಂದಿರುವ ಈ ಸಂಗ್ರಹ ವು ಸಾಂಪ್ರದಾಯಿಕ ಕರಕುಶಲತೆಯನ್ನು ದಿಟ್ಟ ವಸ್ತ್ರದ ಆವಿಷ್ಕಾರದೊಂದಿಗೆ ಸಂಯೋಜಿಸು ತ್ತದೆ. ಕ್ಲಾಸಿಕ್ ಪೇಸ್ಟೆಲ್ ಗಳ ಆಚೆಗೂ ಈ ಶ್ರೇಣಿಯು ಉಜ್ವಲವಾದ ಪ್ಲಮ್, ಬೆರ್ರಿ ಮತ್ತು ಫುಷಿಯಾಗಳನ್ನು ಹತ್ತಿ, ಕ್ರೇಪ್ ಮತ್ತು ಯಾರ್ನ್-ಡೈಯ್ಡ್ ಟೆಕ್ಸ್ ಚರ್ ಗಳಲ್ಲಿ ತಂದಿದೆ.

ಫ್ಯಾಬ್ಇಂಡಿಯಾದಿಂದ `ದಿ ಸಾಂಗ್ ಆಫ್ ಸ್ಪ್ರಿಂಗ್’

-

Ashok Nayak
Ashok Nayak Mar 9, 2026 3:39 PM

ಬೆಂಗಳೂರು: ಭಾರತದ ಮುಂಚೂಣಿಯ ಲೈಫ್ ಸ್ಟೈಲ್ ಬ್ರಾಂಡ್ ಫ್ಯಾಬ್ಇಂಡಿಯಾ ಸ್ಪ್ರಿಂಗ್ 2026 ಅಭಿಯಾನ `ದಿ ಸಾಂಗ್ ಆಫ್ ಸ್ಪ್ರಿಂಗ್’ ಅನ್ನು ಪ್ರಕಟಿಸಿದ್ದು ಇದರಲ್ಲಿ ಹೊಸ ಚಿಕನ್ ಕಾರಿ ಸಂಗ್ರಹ ಹೊಂದಿದೆ. ಇದು ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಎಥ್ನಿಕ್ ಮತ್ತು ವೆಸ್ಟ್ರನ್ ಶೈಲಿಗಳ ವಿಸ್ತಾರ ವಿಭಾಗಗಳನ್ನು ಹೊಂದಿದೆ.

ಆಧುನಿಕ ವಾರ್ಡ್ ರೋಬ್ ಗೆ ಶತಮಾನಗಳ ಹಳೆಯ ಎಂಬ್ರಾಯಿಡರಿ ತಂದಿರುವ ಈ ಸಂಗ್ರಹವು ಸಾಂಪ್ರದಾಯಿಕ ಕರಕುಶಲತೆಯನ್ನು ದಿಟ್ಟ ವಸ್ತ್ರದ ಆವಿಷ್ಕಾರದೊಂದಿಗೆ ಸಂಯೋಜಿಸುತ್ತದೆ. ಕ್ಲಾಸಿಕ್ ಪೇಸ್ಟೆಲ್ ಗಳ ಆಚೆಗೂ ಈ ಶ್ರೇಣಿಯು ಉಜ್ವಲವಾದ ಪ್ಲಮ್, ಬೆರ್ರಿ ಮತ್ತು ಫುಷಿಯಾಗಳನ್ನು ಹತ್ತಿ, ಕ್ರೇಪ್ ಮತ್ತು ಯಾರ್ನ್-ಡೈಯ್ಡ್ ಟೆಕ್ಸ್ ಚರ್ ಗಳಲ್ಲಿ ತಂದಿದೆ.

ಇದನ್ನೂ ಓದಿ: R T Vittalmurthy Column: ದೇವೇಗೌಡ್ರು ಮತ್ತೆ ರಾಜ್ಯಸಭೆಗೆ ಹೋಗುತ್ತಾರೆ

ವೈವಿಧ್ಯಮಯ ಕೋ-ಆರ್ಡ್ ಸೆಟ್ ಗಳು ಮತ್ತು ಟೈಲರ್ಡ್ ವೆಸ್ಟ್ ಗಳಿಂದ ಫ್ಲೂಯಿಡ್ ರೆಸಾರ್ಟ್ ಡ್ರೆಸ್ ಗಳು ಮತ್ತು ಸೀರೆಗಳವರೆಗೆ ಈ ಸಿಲ್ಹೌಟ್ ಗಳು ಅತ್ಯಾಧುನಿಕ ಶ್ರೇಣಿಯ ಪರಂಪರೆ ಮತ್ತು “ಶಾರ್ಪ್” ಸಮಕಾಲೀನ ಶೈಲಿಯ ಸಂಯೋಜನೆ ನೀಡುತ್ತದೆ. ಈ ಸಂಗ್ರಹದ ಕೇಂದ್ರಬಿಂದು ಆಕರ್ಷಕ ಮಾನೋಕ್ರೋಮ್ ಸೀರೀಸ್ ಉನ್ನತ ಕಾಂಟ್ರಾಸ್ಟ್ ನ ಕಪ್ಪು ಮತ್ತು ಬಿಳುಪು ಎಂಬ್ರಾಯಿಡರಿಯನ್ನು ಬಳಸಿ ಈ ಸಾಂಪ್ರದಾಯಿಕ ಕಲೆಯನ್ನು ದಿಟ್ಟ, ಆಧುನಿಕ ಸ್ಟೇಟ್ಮೆಂಟ್ ಆಗಿ ಪರಿವರ್ತಿಸುತ್ತದೆ.

fab India 2

ಈ ಬಿಡುಗಡೆ ಕುರಿತು ಫ್ಯಾಬ್ಇಂಡಿಯಾ ವಕ್ತಾರರು, “ಪ್ರತಿ ಎಳೆಯ ಹಿಂದೆಯೂ ಹೃದಯ ಬಡಿತವಿರುತ್ತದೆ, ಪ್ರತಿ ಪ್ಯಾಟ್ರನ್ ಹಿಂದೆಯೂ ಜೀವಿತಾವಧಿ ಶ್ರದ್ಧೆ ಇರುತ್ತದೆ. ಕರಕುಶಲತೆಗೆ ಆಳವಾದ ಹಿನ್ನೆಲೆ ನೀಡಲು ನಾವು ಕರಕುಶಲಿಗರ ಕ್ಲಸ್ಟರ್ ಗಳ ಒಳಗಡೆ ಶ್ರೇಷ್ಠ ಕರಕುಶಲಿಗ ರನ್ನು ಎತ್ತಿ ತೋರಿಸುವ ಚಲನಚಿತ್ರ ಬಿಡುಗಡೆ ಮಾಡಿದ್ದೇವೆ.

ಇದು ನಮ್ಮ ಕ್ಲಸ್ಟರ್ ಸಮುದಾಯಗಳಿಗೆ ಹತ್ತಿರದ ನೋಟ ನೀಡುತ್ತಿದ್ದು ಅದು ಹೊಲಿಗೆ ಗಳ ಆಚೆಗೂ ಚಿಕನ್ ಕಾರಿ ಯನ್ನು ರೂಪಿಸುವ ತಾಳ್ಮೆ ಮತ್ತು ನಿಖರತೆಯನ್ನು ತೋರು ತ್ತದೆ. ಇದು ಲಯಬದ್ಧ ಸೂಜಿಯಿಂದ ಸಾಂಸ್ಕೃತಿಕ ಪರಂಪರೆಯಾಗಿ ಪರಿವರ್ತಿಸುವ ಕರಕುಶಲಿಗರಿಗೆ ನೀಡುವ ಗೌರವವಾಗಿದೆ” ಎಂದರು.

ಈ ಧ್ಯೇಯವನ್ನು ಇಡೀ ಕುಟುಂಬಕ್ಕೆ ವಿಸ್ತರಿಸುವ ಈ ಸಂಗ್ರಹವು ಉದ್ದದ ಮತ್ತು ಚಿಕ್ಕ ಕುರ್ತಾಗಳು ಮತ್ತು ಶರ್ಟ್ ಗಳಿಗೆ ಸಂಬಂಧಿಸಿದ ಪುರುಷರ ದಿರಿಸನ್ನು ಎತ್ತಿ ತೋರಿಸಿದ್ದು ಅದು ಸೂಕ್ಷ್ಮ ಯೋಕ್ ಎಂಬ್ರಾಯಿಡರಿ ಮತ್ತು ಆಂಬ್ರೆ ಫಿನಿಷ್ ನೊಂದಿಗೆ ಉಜ್ವಲ ಮಕ್ಕಳ ಶ್ರೇಣಿಯು ಎಂಬ್ರಾಯಿಡರಿಯ ಕುರ್ತಾಗಳು ಮತ್ತು ಚೆಕರ್ಡ್ ಶರ್ಟ್ ಗಳು ಸನ್-ವಾಷ್ಡ್ ಯೆಲ್ಲೋಗಳು, ಟೆಂಡರ್ ಪಿಂಕ್ ಗಳು ಮತ್ತು ಬ್ರೀಝ್ ಬ್ಲೂಗಳಲ್ಲಿವೆ. ಈ ಸಂಗ್ರಹದ ಪ್ರತಿ ಉಡುಪನ್ನೂ ಕ್ರಾಫ್ಟ್ ಮಾರ್ಕ್ ಟ್ಯಾಗ್ ಮೂಲಕ ಪರಿಶೀಲಿಸಲಾಗಿದ್ದು ಅದು 350+ ಮಳಿಗೆ ಗಳಲ್ಲಿ ಕರಕುಶಲತೆಯ ವಿಶ್ವಾಸಾರ್ಹತೆ ನೀಡುತ್ತದೆ.