IND vs SA: ಭಾರತ ತಂಡವನ್ನು ಗೆಲ್ಲಿಸಬಲ್ಲ ಇಬ್ಬರು ಬೌಲರ್‌ಗಳನ್ನು ಆರಿಸಿದ ಶಾನ್ ಪೊಲಾಕ್!
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಶಾನ್ ಪೊಲಾಕ್, ಭಾರತ ತಂಡದ ಹಿರಿಯ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ಅವರನ್ನು ಶ್ಲಾಘಿಸಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯದಲ್ಲಿ ಇವರಿಬ್ಬರೂ ದೊಡ್ಡ ವ್ಯತ್ಯಾಸವನ್ನು ತಂದುಕೊಡಬಲ್ಲರು ಎಂದು ಹೇಳಿದ್ದಾರೆ.
ಭಾರತ ತಂಡಕ್ಕೆ ಕೀ ಬೌಲರ್ಸ್ ಆರಿಸಿದ ಶಾನ್ ಪೊಲಾಕ್. -
ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ (IND vs SA) ತಂಡಗಳ ನಡುವಣ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಸೂಪರ್-8ರ ಪಂದ್ಯ ಫೆಬ್ರವರಿ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ನಿಮಿತ್ತ ಉಭಯ ತಂಡಗಳು ಅಭ್ಯಾಸ ನಡೆಸುತ್ತಿವೆ. ಅಂದ ಹಾಗೆ ಈ ಪಂದ್ಯದ ನಿಮಿತ್ತ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಶಾನ್ ಪೊಲಾಕ್ (Shaun Pollock) ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ಹೆಚ್ಚಿನ ಪ್ರಭಾವವನ್ನು ಬೀರಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಸೂಪರ್‌ಸ್ಪೋರ್ಟ್‌ನ ಐಸಿಸಿ ಪುರುಷರ ಟಿ20 ವಿಶ್ವಕಪ್ ರೌಂಡ್ ಟೇಬಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಾನ್ ಪೊಲಾಕ್, ಎರಡೂ ತಂಡಗಳಲ್ಲಿ ಯಾವ ದಿನವಾದರೂ ಪರಸ್ಪರ ಸಮಬಲ ನೀಡುವ ಸಾಮರ್ಥ್ಯವಿರುವ ಆಟಗಾರರು ಇದ್ದಾರೆ ಎಂದು ಹೇಳಿದರು. ಆದರೆ ತಂಡಗಳ ಪಟ್ಟಿ ಪರಿಶೀಲಿಸಿದಾಗ ಭಾರತ ತಂಡದ ವೇಗ-ಸ್ಪಿನ್ ವಿಭಾಗಗಳು ವಿಶೇಷವಾಗಿ ಗಮನ ಸೆಳೆಯುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ದಕ್ಷಿಣ ಆಫ್ರಿಕಾ ಮತ್ತು ಭಾರತ ಎರಡೂ ತಂಡಗಳಲ್ಲಿ ಒಂದೇ ದಿನದಲ್ಲಿ ಪಂದ್ಯವನ್ನು ತಿರುಗಿಸಬಲ್ಲ ಸಾಮರ್ಥ್ಯವಿರುವ ಆಟಗಾರರು ಇದ್ದಾರೆ. ಕ್ವಿಂಟನ್ ಡಿ ಕಾಕ್ ಉತ್ತಮ ಪ್ರದರ್ಶನ ನೀಡಬಹುದು; ಅಭಿಷೇಕ್ ಶರ್ಮಾ ಆಡುವ ಆಟವನ್ನು ಡಿ ಕಾಕ್ ಸಮನಾಗಿ ಆಡಬಹುದು. ಏಡನ್ ಮಾರ್ಕ್ರಮ್ ಕೂಡ ಅದೇ ರೀತಿ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ,” ಎಂದು ಪೊಲಾಕ್ ಹೇಳಿದರು.
SL vs ZIM: ಅರ್ಧಶತಕ ಸಿಡಿಸಿ ವಿರಾಟ್ ಕೊಹ್ಲಿ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರಿದ ಪಥುಮ್ ನಿಸಾಂಕ!
ಬುಮ್ರಾ-ಚಕ್ರವರ್ತಿ ವ್ಯತ್ಯಾಸವನ್ನುಂಟು ಮಾಡುತ್ತಾರೆ: ಪೊಲಾಕ್
“ಆದರೆ ನಾನು ತಂಡಗಳ ಪಟ್ಟಿಯನ್ನು ನೋಡಿದಾಗ, ನನ್ನ ದೃಷ್ಟಿಯಲ್ಲಿ ವ್ಯತ್ಯಾಸ ತರುವ ಅಂಶ ಎಂದರೆ ಬುಮ್ರಾ ಮತ್ತು ಚಕ್ರವರ್ತಿ ಎಂಬ ಇಬ್ಬರು ಬೌಲರ್‌ಗಳು,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ದಕ್ಷಿಣ ಆಫ್ರಿಕಾ ತಂಡದಲ್ಲಿ ಗುಣಮಟ್ಟದ ಕೊರತೆಯಿಲ್ಲ ಎಂಬುದನ್ನು ಪೊಲಾಕ್ ಸ್ಪಷ್ಟಪಡಿಸಿದರು. ಆದರೆ ಭಾರತದ ಇಬ್ಬರು ಪ್ರಮುಖ ಸ್ಟ್ರೈಕ್ ಬೌಲರ್‌ಗಳ ವೈಶಿಷ್ಟ್ಯವೇ ಎರಡೂ ತಂಡಗಳ ನಡುವೆ ಭಿನ್ನತೆ ತರುವ ಪ್ರಮುಖ ಅಂಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
T20 World Cup: ಶಿವಂ ದುಬೆಗೆ ಬೌಲ್ ಮಾಡುವುದು ತಂಬಾ ಕಠಿಣ ಎಂದ ಸುನೀಲ್ ಗವಾಸ್ಕರ್!
“ದಕ್ಷಿಣ ಆಫ್ರಿಕಾ ತಂಡದಲ್ಲಿ ಗುಣಮಟ್ಟದ ಆಟಗಾರರಿಲ್ಲವೆಂದು ನಾನು ಹೇಳುವುದಿಲ್ಲ. ಆದರೆ ಬುಮ್ರಾ ಚೆಂಡು ಎಸೆಯುವ ಅಪರೂಪದ ಶೈಲಿಯೇ ಅವರಿಗೆ ಭಾರತಕ್ಕೆ ಸ್ವಲ್ಪ ಮುನ್ನಡೆ ನೀಡುತ್ತದೆ. ಬುಮ್ರಾ ಬಹಳ ಅಪರೂಪದ ಶೈಲಿಯ ಬೌಲರ್. ಅವರ ಕೈಮಣಿಯ ಸ್ಥಿತಿ ಅತ್ಯುತ್ತಮವಾಗಿದೆ. ಹೊಸ ಚೆಂಡಿನೊಂದಿಗೆ ಪವರ್‌ಪ್ಲೇ ಹಂತದಲ್ಲಿ ಅದ್ಭುತವಾಗಿ ಬೌಲ್ ಮಾಡುತ್ತಾರೆ. ಮಧ್ಯಮ ಓವರ್‌ಗಳಲ್ಲಿ ಬೇಕಾದರೂ ಪರಿಣಾಮಕಾರಿಯಾಗಿ ಬೌಲ್ ಮಾಡಬಲ್ಲರು. ಜೊತೆಗೆ ಡೆತ್ ಓವರ್‌ಗಳಲ್ಲಿ ಅವರ ಬೌಲಿಂಗ್ ಅತ್ಯಂತ ವಿಶಿಷ್ಟ ಮತ್ತು ಪರಿಣಾಮಕಾರಿ,” ಎಂದು ಪೊಲಾಕ್ ಶ್ಲಾಘಿಸಿದರು.
ವರುಣ್ ಚಕ್ರವರ್ತಿ ಯಾವುದೇ ಬ್ಯಾಟ್ಸ್‌ಮನ್ ಅನ್ನು ಕಟ್ಟಿ ಹಾಕಬಲ್ಲರು
"ನಂತರ ಭಾರತ ತಂಡಕ್ಕೆ ಮಧ್ಯಮ ಓವರ್‌ಗಳನ್ನು ಯಾರು ನಿಯಂತ್ರಿಸುತ್ತಾರೆ? ಅವರೇ ವರುಣ್ ಚಕ್ರವರ್ತಿ. ಅವರು ಸಮರ್ಥ ವ್ಯಕ್ತಿ ಹಾಗೂ ಕ್ರೀಸ್‌ನಲ್ಲಿ ಯಾರು ಇದ್ದರೂ ಪರವಾಗಿಲ್ಲ, ಕ್ರೀಸ್‌ಗೆ ಬರುವುದು ಎಡಗೈ ಅಥವಾ ಬಲಗೈ ಆಗಿರಲಿ, ಅವರು ಬ್ಯಾಟ್ಸ್‌ಮನ್ ಅನ್ನು ನಿಯಂತ್ರಿಸಬಲ್ಲ ವ್ಯಕ್ತಿ. ಆದ್ದರಿಂದ, ಆ ವಿಭಾಗದಲ್ಲಿ ಅವರು ನಮ್ಮ ಮೇಲೆ ಸ್ವಲ್ಪ ಮೇಲುಗೈ ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ," ಎಂದು ಅವರು ತಿಳಿಸಿದ್ದಾರೆ.