ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೀಚ್ ನಲ್ಲಿ ಸಮೋಸಾ ಸವಿದ ಹಸ್ಕಿ ನಾಯಿಯ ಕ್ಯೂಟ್‌ ರಿಯಾಕ್ಷನ್‌ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ

Viral Video: ಮುಂಬೈ ಬೀಚ್‌ನಲ್ಲಿ ಹಸ್ಕಿ ನಾಯಿಯೊಂದು ಸಮೋಸಾವನ್ನು ಆನಂದಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. 'ಆಕ್ಸಲ್' ಎಂಬ ಹೆಸರಿನ ಸೈಬೀರಿಯನ್ ಹಸ್ಕಿ ನಾಯಿಯು ಮುಂಬೈ ಬೀಚ್‌ನಲ್ಲಿ ಅಪರಿಚಿತರೊಂದಿಗೆ ಸೇರಿ ಸಮೋಸವನ್ನು ಸವಿದಿದೆ.‌ ಈ ದೃಶ್ಯ ನೋಡಲು ಬಹಳಷ್ಟು ಮುದ್ದಾಗಿದೆ...

ಮುಂಬೈ ಬೀಚ್‌ನಲ್ಲಿ ಸಮೋಸಾವನ್ನು ಆನಂದಿಸಿದ ಹಸ್ಕಿ ನಾಯಿ

ಮುಂಬೈ ಬೀಚ್ ನಲ್ಲಿ ಸಮೋಸಾ ಸವಿದ ಹಸ್ಕಿ ನಾಯಿ -

Profile
Pushpa Kumari Feb 20, 2026 4:59 PM

ನವದೆಹಲಿ,ಫೆ.20: ಪ್ರಾಣಿಗಳ ಮುದ್ದಾಟದ ಹಲವು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತವೆ. ಕೋಳಿ ಮರಿಯನ್ನು ಮುದ್ದಾಡಿದ ಕೋತಿ, ನಾಯಿಯ ವರ್ಕೌಟ್ ವಿಡಿಯೊ ಹೀಗೆ ಇಂತಹ ದೃಶ್ಯಗಳು ಕಣ್ಮನ ಸೆಳೆಯುತ್ತವೆ. ಇದೀಗ ಮುಂಬೈ ಬೀಚ್‌ನಲ್ಲಿ ಹಸ್ಕಿ ನಾಯಿ ಯೊಂದು ಸಮೋಸಾವನ್ನು ಆನಂದಿಸುತ್ತಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ. 'ಆಕ್ಸಲ್' ಎಂಬ ಹೆಸರಿನ ಸೈಬೀರಿಯನ್ ಹಸ್ಕಿ ನಾಯಿಯು ಮುಂಬೈ ಬೀಚ್‌ನಲ್ಲಿ ಅಪರಿಚಿತರೊಂದಿಗೆ ಸೇರಿ ಸಮೋಸವನ್ನು ಸವಿದಿದೆ.‌ ಈ ದೃಶ್ಯ ನೋಡಲು ಬಹಳಷ್ಟು ಮುದ್ದಾಗಿದೆ.

ಆಕ್ಸಲ್ ತನ್ನ ಮಾಲೀಕನ ಜೊತೆಗೆ ವಾಕಿಂಗ್‌ಗಾಗಿ ಬೀಚ್‌ಗೆ ತೆರಳಿದೆ‌. ಈ ಸಮಯದಲ್ಲಿ ಸಮೋಸಾ ತಿನ್ನುತ್ತಿದ್ದ ಅಪರಿಚಿತರ ಗುಂಪನ್ನು ನಾಯಿಯೂ ಕುತೂಹಲದಿಂದ ನೋಡಿದೆ. ಆಕ್ಸಲ್ ಸಮೋಸಾದ ಘಮ ಕಂಡು ನೇರವಾಗಿ ದಡದಲ್ಲಿ ಕುಳಿತಿರುವ ಅಪರಿಚಿತರ ಬಳಿ ಕಣ್ಣು ಹಾಯಿ ಸುತ್ತಾನೆ. ಇದನ್ನು ಗಮನಿಸಿದ ಆ ಗುಂಪಿನವರು ಆಕ್ಸಲ್‌ಗೆ ಸಮೋಸಾ ನೀಡಲು ಮುಂದಾಗಿದ್ದಾರೆ.

ವಿಡಿಯೋ ನೋಡಿ:

ಜನಪ್ರಿಯ ಇನ್‌ಸ್ಟಾಗ್ರಾಮ್ ಪುಟ @itsaxlthehusky ಇದರಲ್ಲಿ ಈ ವಿಡಿಯೊ ವೈರಲ್ ಆಗಿದೆ. ತನ್ನ ವ್ಯಕ್ತಿತ್ವ ಮತ್ತು ಕ್ಯೂಟ್ ನೆಸ್ ಗೆ ಹೆಸರುವಾಸಿಯಾದ ಆಕ್ಸಲ್, ಈ ಬಾರಿ ಸಮೋಸಾ ಕ್ರಸ್ಟ್‌ಗಳ ಮೇಲೆ ಕಣ್ಣಿಟ್ಟಿದೆ. ಆಕ್ಸಲ್‌ನ ಮಾಲೀಕನನ್ನು ಅಲ್ಲಿದ ಜನರು ಸ್ವಲ್ಪ ಸಮೋಸಾ ತಿನ್ನಿಸಬಹುದೇ ಎಂದು ಕೇಳುತ್ತಾರೆ. ಮಾಲೀಕರು ನಗುತ್ತಾ ಆಕ್ಸಲ್‌ಗೆ ಗರಿಗರಿಯಾದ ಕ್ರಸ್ಟ್‌ಗಳು ತುಂಬಾ ಇಷ್ಟ ಎಂದಿದ್ದಾರೆ‌. ಕೂಡಲೇ ಆ ಪ್ರವಾಸಿಗರು ಪ್ರೀತಿಯಿಂದ ಸಮೋಸಾದ ಹೊರಭಾಗವನ್ನು ನೀಡಿದ್ದು, ಆಕ್ಸಲ್ ಅದನ್ನು ಅತ್ಯಂತ ಮೃದುವಾಗಿ ಮೆಲ್ಲಗೆ ತಿಂದು ಖುಷಿಪಟ್ಟಿದೆ.

Viral Video: ರೈಲ್ವೆ ಹಳಿ ಮೇಲೆ ಉರುಳಿದ ಟ್ರಕ್‌; ತಪ್ಪಿದ ಭಾರೀ ಅನಾಹುತ, ವಿಡಿಯೋ ನೋಡಿ

ಆಕ್ಸಲ್‌ನ ನಡವಳಿಕೆಯನ್ನು ಹೆಚ್ಚಿನವರು ಹೊಗಳಿದ್ದು “ಅವನು ಮನುಷ್ಯರಿಂದ ಆಹಾರವನ್ನು ನಿಧಾನವಾಗಿ ತೆಗೆದುಕೊಳ್ಳುತ್ತಾನೆ" ಎಂದಿದ್ದಾರೆ. ಒಬ್ಬ ಬಳಕೆದಾರರು, “ನಮ್ಮಲ್ಲಿ ಕೆಲವರು ಅವರಿಗೆ ಆಹಾರ ಕಡಿಮೆ ಇದ್ದರೂ ಯಾವಾಗಲೂ‌ ಹಂಚಿಕೊಳ್ಳಲು ಸಂತೋಷಪಡುತ್ತಾರೆ" ಎಂದಿದ್ದಾರೆ.