ಹನೂರು ಪ್ರಕರಣ: ಅರಣ್ಯ ಅಧಿಕಾರಿಗಳ ತನಿಖೆಯಲ್ಲಿ ಸಾಬೀತು: ಸತ್ತಿದ್ದು ʼಕಳ್ಳʼ ಬೇಟೆಗಾರರು ?
ವರದಿಯಲ್ಲಿ ಏನಿದೆ ಎನ್ನುವ ಬಗ್ಗೆ ಸೋಮವಾರದ ಬಳಿಕವೇ ಬಹಿರಂಗವಾಗಲಿದೆಯಾದರೂ, ಘಟನೆ ಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿಗೆ ಮೃತಪಟ್ಟಿದ್ದು ಕಳ್ಳಬೇಟೆಗಾರರು ಎನ್ನುವುದು ಸ್ಪಷ್ಟ ವಾಗಿದೆ. ಸೋಮವಾರ ಸರಕಾರಕ್ಕೆ ಸಲ್ಲಿಕೆಯಾಗಿರುವ ವರದಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕು ಮಾರ್ ಹಾಗೂ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ವರದಿಯನ್ನು ಹಸ್ತಾಂತರಿಸುವ ಸಾಧ್ಯತೆಯಿದೆ
-
ಶೂಟೌಟ್ ಬಳಿಕ ಅರಣ್ಯಕ್ಕೆ ಬೆಂಕಿಯಿಟ್ಟಿದ್ದು ಬೇಬಿ ವೀರಪ್ಪನ್?
ಸೋಮವಾರ ಅಧಿಕೃತವಾಗಿ ಸದನದಲ್ಲಿ ಸರಕಾರದಿಂದ ಹೇಳಿಕೆ
ಬೆಂಗಳೂರು: ರಾಜ್ಯಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ ಹನೂರು ಎನ್‌ಕೌಂಟರ್‌ನಲ್ಲಿ ಬಲಿಯಾದವರು ಕಳ್ಳಬೇಟೆಗಾರರು ಎನ್ನುವುದು ಬಹುತೇಕ ಖಚಿತ ವಾಗಿದ್ದು, ಸರಕಾರದಿಂದ ಅಧಿಕೃತ ಹೇಳಿಕೆ ಯೊಂದೇ ಬಾಕಿಯಿದೆ. ಆ.15ರಂದು ನಡೆದ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆಗೆ ಸರಕಾರ ಆದೇಶಿಸಿತ್ತು. ಶನಿವಾರ ಸಂಜೆ ಎಸಿ ನೇತೃತ್ವದಲ್ಲಿ ವರದಿಯನ್ನು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಸ್ತಾಂತರಿಸ ಲಾಗಿದೆ.
ವರದಿಯಲ್ಲಿ ಏನಿದೆ ಎನ್ನುವ ಬಗ್ಗೆ ಸೋಮವಾರದ ಬಳಿಕವೇ ಬಹಿರಂಗವಾಗಲಿದೆಯಾದರೂ, ಘಟನೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿಗೆ ಮೃತಪಟ್ಟಿದ್ದು ಕಳ್ಳಬೇಟೆಗಾರರು ಎನ್ನುವುದು ಸ್ಪಷ್ಟವಾಗಿದೆ. ಸೋಮವಾರ ಸರಕಾರಕ್ಕೆ ಸಲ್ಲಿಕೆಯಾಗಿರುವ ವರದಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕು ಮಾರ್ ಹಾಗೂ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ವರದಿಯನ್ನು ಹಸ್ತಾಂತರಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: BWF World Championships: ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿದ ಸಾತ್ವಿಕ್-ಚಿರಾಗ್ ಜೋಡಿ!
ಕಾಡುಗಳ್ಳರು ಎನ್ನುವುದು ಈಗಾಗಲೇ ಸ್ಪಷ್ಟವಾಗಿದ್ದರೂ, ವರದಿಯಲ್ಲಿ ಏನಿದೆ? ಇದಕ್ಕೆ ಪೂರಕ ಅಂಶಗಳೇನು ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಮೂಲಗಳ ಪ್ರಕಾರ, ಈ ಎಲ್ಲ ಅಂಶಗಳ ಬಗ್ಗೆ ಸ್ಪಷ್ಟನೆ ಪಡೆದ ಬಳಿಕ, ಮುಂದೆ ಈ ಪ್ರಕರಣದಲ್ಲಿ ಯಾವ ರೀತಿಯಲ್ಲಿ ತನಿಖೆ ನಡೆಸಬೇಕು? ಪೊಲೀಸರು ಅಥವಾ ಸಿಐಡಿಯಿಂದ ಮತ್ತೊಮ್ಮೆ ತನಿಖೆ ನಡೆಸಬೇಕೇ ಅಥವಾ ಈ ತನಿಖಾ ವರದಿಯ ಆಧಾರದಲ್ಲಿಯೇ ಕ್ರಮವಹಿಸಬೇಕೇ ಎನ್ನುವುದನ್ನು ಸರಕಾರ ತೀರ್ಮಾನಿಸಲಿದೆ ಎಂದು ಮೂಲಗಳು ತಿಳಿಸಿವೆ.
ಎ.ಸಿ. ನೇತೃತ್ವದಲ್ಲಿ ಸಲ್ಲಿಕೆ ಯಾಗಿರುವ ವರದಿಯನ್ನು ಪರಿಶೀಲಿಸಿದ ಬಳಿಕ ಉಭಯ ಸದನದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ವಿವರಣೆ ನೀಡುವ ಸಾಧ್ಯತೆಯಿದೆ. ಬೇಬಿ ವೀರಪ್ಪನ್ ಕೈವಾಡ?: ಇನ್ನು ಶೂಟೌಟ್ ಘಟನೆ ಬಳಿಕ ಅರಣ್ಯ ಇಲಾಖೆ ಧ್ವಂಸ ಪ್ರಕರಣದಲ್ಲಿ ಇದೀಗ ಬೇಬಿ ವೀರಪ್ಪನ್ ಕೈವಾಡವಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಹನೂರಿನಲ್ಲಿ ಶೂಟೌಟ್ ಆಗುತ್ತಿದ್ದಂತೆ ಗ್ರಾಮಸ್ಥರು ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಆ ವೇಳೆ ಅರಣ್ಯ ಕಚೇರಿ ಧ್ವಂಸ, ತದನಂತರದಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚಿದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಾಗ ಈ ಪ್ರಕರಣದಲ್ಲಿ ಮರಿ ವೀರಪ್ಪನ್ ಎಂದೇ ಕುಖ್ಯಾತನಾಗಿರುವ ಗಂಗನದೊಡ್ಡಿಯ ಗೋವಿಂದನ ಕೈವಾಡವಿರುವುದು ಬಹಿರಂಗ ವಾಗಿದೆ. ಹುಲಿಯನ್ನು 3 ತುಂಡು ಮಾಡಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ ಗೋವಿಂದ ಈಗ ಜಾಮೀನು ಪಡೆದು ಹೊರಗಿದ್ದಾನೆ.
ಏನಿದು ಪ್ರಕರಣ?
ಆ.15ರಂದು ಮುಂಜಾನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಮೂವ ರು ಅರಣ್ಯಾಧಿಕಾರಿಗಳ ಗುಂಡಿಗೆ ಬಲಿಯಾಗಿ ದ್ದರು. ಇದು ಕರ್ನಾಟಕ, ತಮಿಳುನಾಡಿನಲ್ಲಿ ಗಲಾಟೆಗೆ ಕಾರಣವಾಗಿತ್ತು. ಮ್ಯಾಜಿಸ್ಟ್ರೇಟ್ ತನಿಖೆಗೂ ಆದೇಶಿಸಲಾಗಿತ್ತು. ಹನೂರು ಶೂ ಟೌಟ್‌ಗೆ ಪ್ರತಿಕಾರವಾಗಿ ಮಲೆಮಹದೇಶ್ವರ 10 ಎಕರೆ ಕಾಡಿಗೆ ಬೆಂಕಿಯಿಡಲಾಗಿತ್ತು.
16 ವರ್ಷಗಳಲ್ಲಿ 3289 ಅರಣ್ಯ ಅಪರಾಧ ಪ್ರಕರಣ
ಚಾಮರಾಜನಗರ ವನ್ಯವೃತ್ತ ವ್ಯಾಪ್ತಿಯಲ್ಲಿ ಕಳೆದ 16 ವರ್ಷಗಳಲ್ಲಿ ಬರೋಬ್ಬರಿ 3289 (2010-11ರಿಂದ 2026) ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 370 ಬೇಟೆ ಹಾಗೂ 66 ಅಕ್ರಮ ಗನ್ ಪ್ರಕರಣಗಳಿರುವುದು ಬಹಿರಂಗ ವಾಗಿದೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿಯೇ ಅತಿಹೆಚ್ಚು ಅಂದರೆ 2256 ಪ್ರಕರಣಗಳು ದಾಖಲಾಗಿವೆ. ನಂತರ ಬಿಆರ್‌ಟಿ ಹುಲಿರಕ್ಷಿತಾರಣ್ಯ ಪ್ರದೇಶದಲ್ಲಿ 793 ಹಾಗೂ ಕಾವೇರಿ ವನ್ಯಜೀವಿ ವಿಭಾಗದಲ್ಲಿ 240 ಪ್ರಕರಣಗಳು ದಾಖಲಾಗಿವೆ. ಕೊಳ್ಳೆಗಾಲ ಬಫರ್ ರೇಂಜ್ ನಲ್ಲಿ 979 ಪ್ರಕರಣಗಳು ದಾಖಲಾಗಿವೆ.
![]()
ಚಾಮರಾಜ ನಗರದ ಹನೂರಿನಲ್ಲಿ ಅರಣ್ಯಾಧಿರಿಗಳ ಗುಂಡೇಟಿಗೆ ಮೂವರು ಬಲಿಯಾದ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖಾ ತಂಡ ಸರಕಾರಕ್ಕೆ ವರದಿ ಸಲ್ಲಿಸಿದೆ. ವರದಿ ಬಂದ ಮುಖ್ಯಮಂತ್ರಿ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹನೂರಿನ ಕಾವೇರಿ ವನ್ಯಜೀವಿಧಾಮದ ಮೀಸಲು ಅರಣ್ಯಕ್ಕೆ ಭೇಟೆಯಾಡಲು ಮೃತರು ಬಂದಿದ್ದು ನಿಜ. ನಮ್ಮ ಅಧಿಕಾರಿಗಳ ತಪ್ಪಿದ್ದರೆ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸೋಮವಾರ ಸದನದಲ್ಲಿ ಎಲ್ಲ ಮಾಹಿತಿ ನೀಡಲಾಗು ವುದು.
-ರಾಮಲಿಂಗಾರೆಡ್ಡಿ, ಅರಣ್ಯ ಸಚಿವ