ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಪತಿಗಿಂತ ಪತ್ನಿ ಆರ್ಥಿಕವಾಗಿ ಸಬಲವಾಗಿದ್ದರೆ ಡಿವೋರ್ಸ್‌ ಬಳಿಕ ಜೀವನಾಂಶ ನೀಡಬೇಕಾಗಿಲ್ಲ"; ಹೈಕೋರ್ಟ್‌

ಪತಿಗಿಂತ ಹೆಚ್ಚು ಸಂಪಾದಿಸುವ ಪತ್ನಿಗೆ ಜೀವನಾಂಶ ನೀಡಬೇಕಾದ ಅಗತ್ಯ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ. ಪತ್ನಿ ತನಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದರೂ ಆಕೆಗೆ ಜೀವನಾಂಶ ನೀಡುವಂತೆ ಆದೇಶಿಸಿದ ಕೆಳಹಂತಕದ ಕೋರ್ಟ್ ತೀರ್ಪು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಈ ಆದೇಶವನ್ನು ನೀಡಿದೆ.

ಪತ್ನಿ ಆರ್ಥಿಕವಾಗಿ ಸಬಲವಾಗಿದ್ದರೆ ಜೀವನಾಂಶ ನೀಡಬೇಕಾಗಿಲ್ಲ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 30, 2026 7:59 AM

ಬೆಂಗಳೂರು: ಪತಿಗಿಂತ ಹೆಚ್ಚು ಸಂಪಾದಿಸುವ ಪತ್ನಿಗೆ ಜೀವನಾಂಶ ನೀಡಬೇಕಾದ ಅಗತ್ಯ ಇಲ್ಲ ಎಂದು ಕರ್ನಾಟಕ (Karnataka High Court) ಹೈಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ. ಪತ್ನಿ ತನಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದರೂ ಆಕೆಗೆ ಜೀವನಾಂಶ ನೀಡುವಂತೆ ಆದೇಶಿಸಿದ ಕೆಳಹಂತಕದ ಕೋರ್ಟ್ ತೀರ್ಪು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪತ್ನಿ, ಪತಿಗಿಂತ ಹೆಚ್ಚು ಸಂಪಾದಿಸಿದಾಗ, ವಿಚಾರಣಾ ನ್ಯಾಯಾಲಯಗಳು ತಕ್ಷಣ ಜೀವನಾಂಶ ನೀಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪತಿ ಸಂಬಳವೇ ಪತ್ನಿಗಿಂತ ಕಡಿಮೆಯಿದ್ದಾಗ ಜೀವನಾಂಶಕ್ಕೆ ಬಾದ್ಯಸ್ಥಳಲ್ಲ ಎಂದು ನ್ಯಾಯಮೂರ್ತಿ ಡಾ.ಚಿಲ್ಲಕೂರ್ ಸುಮಲತಾರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದ್ದು, ಜೀವನಾಂಶ ನೀಡಲು ಸೂಚಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ. ಪತಿಯು ಪತ್ನಿಗೆ ಮಾಸಿಕ 20 ಸಾವಿರ ರೂ. ಜೀವನಾಂಶ ನೀಡಬೇಕೆಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವವನ್ನು ನ್ಯಾಯಾಲಯ ರದ್ದು ಮಾಡಿದೆ.

ಪ್ರಕರಣದ ವಿವರಗಳನ್ನು ಅಲೋಕಿಸಿದ ಬಳಿಕ ನ್ಯಾಯಪೀಠ, “ಮಹಿಳೆಯರಿಗೆ ಪುರುಷರು ಜೀವನಾಂಶ ನೀಡಬೇಕೆಂಬ ಕೇವಲ ಲಿಂಗ ಆಧಾರಿತ ಊಹೆಗಳ ಮೇಲೆ ನ್ಯಾಯಾಲಯಗಳು ಜೀವನಾಂಶ ನೀಡಲು ಒಲವು ತೋರಬಾರದು. ವಿಶೇಷವಾಗಿ ಮಹಿಳೆಗೆ ಅಂತಹ ಆರ್ಥಿಕ ನೆರವು ಅಗತ್ಯವಿಲ್ಲದಿದ್ದಾಗ ನ್ಯಾಯಾಲಯಗಳು ಪರಿಸ್ಥಿತಿ ಅವಲೋಕಿಸಿ ಜೀವನಾಂಶ ಆದೇಶಗಳನ್ನು ಹೊರಡಿಸಬೇಕಾಗುತ್ತದೆ,'' ಎಂದು ಆದೇಶಿಸಿದೆ.

ಕಣ್ಣಿನ ಚಿಕಿತ್ಸೆಗಾಗಿ ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ; ತುರ್ತು ಪರಿಶೀಲಿಸಲು ಹೈಕೋರ್ಟ್‌ ನಕಾರ

ಆ ಮೂಲಕ ಹೈಕೋರ್ಟ್ ಇತ್ತೀಚೆಗೆ ಆರ್ಥಿಕ ಸಹಾಯದ ಅಗತ್ಯವಿಲ್ಲದ ಪತ್ನಿಯರಿಗೆ ಗಂಡಂದಿರು ಜೀವನಾಂಶ ನೀಡಬೇಕೆಂಬ ಆದೇಶಗಳನ್ನು ಹೊರಡಿಸುವುದರ ವಿರುದ್ಧ ಎಚ್ಚರಿಕೆ ನೀಡಿದೆ. ಈ ಕುರಿತು "ಪತ್ನಿ ಆರ್ಥಿಕವಾಗಿ ಸದೃಢಳಾಗಿದ್ದಾಗ ಮತ್ತು ಆಕೆಯ ಆದಾಯವು ಗಂಡನ ಆದಾಯಕ್ಕಿಂತ ಹೆಚ್ಚಿದ್ದಾಗ ಮತ್ತು ಮಕ್ಕಳನ್ನು ನೋಡಿಕೊಳ್ಳುವಂತಹ ಯಾವುದೇ ಇತರ ಹೊಣೆಗಾರಿಕೆಗಳು ಹೆಂಡತಿಯ ಕಡೆಯಿಂದ ಕಂಡು ಬರದಿದ್ದರೆ, ಮಹಿಳೆಯರನ್ನು ಪುರುಷರೇ ಸಲಹಬೇಕು ಅಥವಾ ಹೆಂಡತಿಯನ್ನು ಆಕೆಯ ಗಂಡನೇ ಸಾಕಬೇಕು ಎಂಬ ಆಧಾರದ ಮೇಲೆ ನ್ಯಾಯಾಲಯಗಳು ಜೀವನಾಂಶ ನೀಡುವ ಆದೇಶವನ್ನು ಹೊರಡಿಸಬಾರದು," ಎಂದು ಅಭಿಪ್ರಾಯಪಟ್ಟಿದೆ.