ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Social Empowerment: ಸಾಮಾಜಿಕ ಸಬಲೀಕರಣ ಕೇಂದ್ರದ ಉದ್ಘಾಟನೆ: ಸಾಮಾಜಿಕ ಜವಾಬ್ದಾರಿಯುತ ಶಿಕ್ಷಣದತ್ತ ʼಟಿಎಪಿಎಂಐ ಬೆಂಗಳೂರುʼ ಮಹತ್ವದ ಹೆಜ್ಜೆ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತ ವಾದ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆ ಟಿ.ಎ.ಪೈ ಮ್ಯಾನೇಂಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟಿಎಪಿಎಂಐ) ಮಾಹೆ ಬೆಂಗಳೂರು ಕ್ಯಾಂಪಸ್‌ನ ರಾಮದಾಸ್ ಪೈ ಸಭಾಂಗಣ ದಲ್ಲಿ ಶುಕ್ರವಾ zರ ತನ್ನ ವಾರ್ಷಿಕ ‘ಸಂಸ್ಥಾಪಕರ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಾಮಾಜಿಕ ಜವಾಬ್ದಾರಿಯುತ ಶಿಕ್ಷಣದತ್ತ ʼಟಿಎಪಿಎಂಐ ಬೆಂಗಳೂರುʼ ಮಹತ್ವದ ಹೆಜ್ಜೆ

-

Ashok Nayak
Ashok Nayak Jan 17, 2026 12:17 PM

ಬೆಂಗಳೂರು: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆ ಟಿ.ಎ.ಪೈ ಮ್ಯಾನೇಂಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟಿಎಪಿಎಂಐ) ಮಾಹೆ ಬೆಂಗಳೂರು ಕ್ಯಾಂಪಸ್‌ನ ರಾಮದಾಸ್ ಪೈ ಸಭಾಂಗಣ ದಲ್ಲಿ ಶುಕ್ರವಾ zರ ತನ್ನ ವಾರ್ಷಿಕ ‘ಸಂಸ್ಥಾಪಕರ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾ ಯಿತು. ಪದ್ಮಭೂಷಣ ಶ್ರೀ ಟೋನ್ಸೆ ಅನಂತ ಪೈ ಅವರ 104ನೇ ಜನ್ಮದಿನದ ಅಂಗವಾಗಿ ಆಯೋಜಿಸ ಲಾಗಿದ್ದ ಈ ಕಾರ್ಯಕ್ರಮದಲ್ಲಿ ಶಿಕ್ಷಣ, ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.

ಶ್ರೀ ಟಿ. ಎ. ಪೈ (ಜನನ: 17 ಜನವರಿ 1922) ಅವರು ಭಾರತದ ಆರ್ಥಿಕ ಮತ್ತು ಸಾರ್ವಜನಿಕ ವಲಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷರಾಗಿ, ಭಾರತೀಯ ಆಹಾರ ನಿಗಮದ ಮೊದಲ ಅಧ್ಯಕ್ಷರಾಗಿ ಹಾಗೂ ಎಲ್‌ಐಸಿ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. 1980-81ರಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ನಂತರ ಟಿಎಪಿಎಂಐ ಎಂದು ಮರುನಾಮಕರಣಗೊಂಡಿತು) ಅನ್ನು ಸ್ಥಾಪಿಸುವ ಮೂಲಕ ಮ್ಯಾನೇಜ್‌ ಮೆಂಟ್‌ ಶಿಕ್ಷಣದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಬೆರೆಸುವಲ್ಲಿ ಅವರು ಪ್ರವರ್ತಕರಾಗಿದ್ದರು.

ಈ ಬಾರಿಯ ಆಚರಣೆಯ ಪ್ರಮುಖ ಆಕರ್ಷಣೆಯೆಂದರೆ 'ಸೆಂಟರ್ ಫಾರ್ ಸೋಷಿಯಲ್ ಎಂಪವರ್‌ಮೆಂಟ್' ಉದ್ಘಾಟನೆ. ಎಂಎಲ್‌ಎಚ್‌ಎಸ್ (MLHS) ಮತ್ತು ಮಾಹೆ ಬೆಂಗಳೂರು ಸಹ ಕುಲಪತಿ ಪ್ರೊ. (ಡಾ.) ಮಧು ವೀರರಾಘವನ್ ಅವರು, ತಮ್ಮ ಅನುಪಸ್ಥಿತಿಯಲ್ಲಿ ಸಂದೇಶದ ಮೂಲಕ ಕೇಂದ್ರದ ಉದ್ಘಾಟನೆಯ ಕುರಿತು ಶುಭ ಹಾರೈಸಿದರು.

ಇದನ್ನೂ ಓದಿ:Bangalore News: ವೆಂಕಟೇಶ ನಾಟ್ಯ ಮಂದಿರದಿಂದ ಜ.16 ರಿಂದ ಮೂರು ದಿನಗಳ ನಾಟ್ಯ ರಸ ಸಂಜೆ ಕಾರ್ಯಕ್ರಮ: ದಿಗ್ಗಜ ಕಲಾವಿದರಿಂದ ಪ್ರದರ್ಶನಕ್ಕೆ ವೇದಿಕೆ ಸಜ್ಜು

ಸಿಎಸ್‌ಇ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮಾಹೆ ಬೆಂಗಳೂರು ಕ್ಯಾಂಪಸ್‌ನ ಹೆಚ್ಚುವರಿ ಕುಲಸಚಿವ ರಾಘವೇಂದ್ರ ಪ್ರಭು, ʼನಮ್ಮ ಸಂಸ್ಥಾಪಕರಾದ ಶ್ರೀ ಟಿ. ಎ. ಪೈ ಅವರ 104ನೇ ಜನ್ಮ ದಿನದ ಮುನ್ನದಿನ 'ಸಾಮಾಜಿಕ ಸಬಲೀಕರಣ ಕೇಂದ್ರ'ದ (CSE) ಉದ್ಘಾಟನೆಯಾಗಿರುವುದು, ಮ್ಯಾನೇಜ್‌ಮೆಂಟ್ ಶಿಕ್ಷಣವು 'ಸಾಮಾಜಿಕ ಸಬಲೀಕರಣ'ದತ್ತ ಗಮನಹರಿಸಬೇಕು ಎಂಬ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತಿದೆ. ಈ ಕೇಂದ್ರವು ಜ್ಞಾನ ಮತ್ತು ಕ್ರಿಯೆಯ ನಡುವೆ ಸೇತುವೆ ಯಾಗಲಿದ್ದು, ವ್ಯವಹಾರದ ಶ್ರೇಷ್ಠತೆಯೊಂದಿಗೆ ಸಾಮಾಜಿಕ ಕಳಕಳಿಯನ್ನೂ ಮೈಗೂಡಿಸಿ ಕೊಂಡಿರುವ ನಾಯಕರನ್ನು ರೂಪಿಸಲಿದೆʼ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಲೋಟಸ್ ಪೆಟಲ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಕುಶಾಲ್ ರಾಜ್ ಚಕ್ರವರ್ತಿ ಅವರು ಟಿ. ಎ. ಪೈ ಸ್ಮಾರಕ ಉಪನ್ಯಾಸದಲ್ಲಿ, ಭಾರತದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಮಾತನಾಡಿ, ʼದೇಶವು ಮೂರು ವಿಭಾಗಗಳಾಗಿ ವಿಂಗಡನೆಯಾಗಿದೆ. ವಾರ್ಷಿಕ ರೂ. 80,000 ಗಿಂತ ಕಡಿಮೆ ಆದಾಯದಲ್ಲಿ ಬದುಕು ತ್ತಿರುವ ಸುಮಾರು 30 ಕೋಟಿ ಜನರನ್ನು ಹೊಂದಿರುವ 'ಇಂಡಿಯಾ 3' ನಮ್ಮ ದೇಶದ ಭವಿಷ್ಯ ವಾಗಿದೆ.

ಶಿಕ್ಷಣದ ಮೂಲಕ ಈ ಅಂತರವನ್ನು ನಿವಾರಿಸಬಹುದು. ಆತ್ಮಸಾಕ್ಷಾತ್ಕಾರಕ್ಕೆ ಸೇವೆಯೇ ಅತ್ಯುತ್ತಮ ಮಾರ್ಗ. ಯುವಜನರು ತಮ್ಮ ಆಂತರಿಕ ಧ್ಯೇಯ ಮತ್ತು ಸಮಾಜದ ಮೇಲಾಗುವ ಬಾಹ್ಯ ಪರಿಣಾಮಗಳ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಬದಲಾಗಿ, ಸಮಾಜದ ಮೇಲೆ ರಚನಾತ್ಮಕ ಪ್ರಭಾವ ಬೀರುವತ್ತ ಗಮನಹರಿಸಬೇಕುʼ ಎಂದು ಸಲಹೆ ನೀಡಿದರು.

A 2

ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾದ ಟಿಎಪಿಎಂಐ ಹಳೆಯ ವಿದ್ಯಾರ್ಥಿಗಳಾದ ಒಮ್ನಿಸ್ಸಾದ (Omnissa) ಜಾಗತಿಕ ಮಾನವ ಸಂಪನ್ಮೂಲ ಮುಖ್ಯಸ್ಥ ವಿ. ಪ್ರೇಮ್ ಕುಮಾರ್ ಮತ್ತು ಎಚ್‌ಆರ್ ಬಿಸಿನೆಸ್ ಪಾರ್ಟ್‌ನರ್‌ಶಿಪ್ ನಿರ್ದೇಶಕರು ಮತ್ತು ಕಾರ್ಗಿಲ್‌ನ ಇಂಡಿಯಾ ಕೇಪೆಬಿಲಿಟಿ ಸೆಂಟರ್ನ ಎಚ್‌ಆರ್ ಮುಖ್ಯಸ್ಥರಾದ ಸ್ವಾಮಿನಾಥನ್ ಚಂದ್ರಶೇಖರ್ ಉಪಸ್ಥಿತರಿದ್ದರು.

'ಸೆಂಟರ್ ಫಾರ್ ಸೋಷಿಯಲ್ ಎಂಪವರ್‌ಮೆಂಟ್' ಒಂದು ಬಹುಶಿಸ್ತೀಯ ವೇದಿಕೆಯಾಗಿದ್ದು, ನಿರುದ್ಯೋಗ, ಸಮುದಾಯಗಳ ಒಳಗೊಳ್ಳುವಿಕೆ, ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತೆ, ಉದ್ಯಮ ಶೀಲತೆ ಹಾಗೂ ಮೂಲಭೂತ ಸೌಕರ್ಯ ಮತ್ತು ಆರೋಗ್ಯದಂತಹ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಭಿವೃದ್ಧಿಯಿಂದ ದೂರ ಉಳಿದಿರುವ ಪ್ರದೇಶ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಸಂಘ-ಸಂಸ್ಥೆಗಳ ಜೊತೆಗೂಡಿ ಈ ಕೇಂದ್ರ ಕಾರ್ಯ ನಿರ್ವಹಿಸ ಲಿದೆ.

ಲೋಟಸ್ ಪೆಟಲ್ ಫೌಂಡೇಶನ್ ಜೊತೆಗಿನ ಸಹಯೋಗವು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮತ್ತು ಸಮುದಾಯ ಸೇವೆಯನ್ನು ಹೆಚ್ಚಿಸಲಿದೆ. ಇದಲ್ಲದೆ, ಎನ್‌ಸಿಯುಐ (NCUI) ಮತ್ತು ಯುನೈಟೆಡ್ ವೇ ಬೆಂಗಳೂರು ಜೊತೆ ಒಪ್ಪಂದಗಳಿಗೆ (MoU) ಸಹಿ ಹಾಕಲಾಗಿದ್ದು, ಸೂತ್ರಧಾರ್, ಟಿಂಕರ್ ಲ್ಯಾಬ್ಸ್, ಸೆಲ್ಕೊ (SELCO) ಮುಂತಾದ ಸಂಸ್ಥೆಗಳೊಂದಿಗೆ ಮುಂದಿನ ದಿನಗಳಲ್ಲಿ ಒಪ್ಪಂದ ಆಗಲಿದೆ.

ಟಿಎಪಿಎಂಐ ಬೆಂಗಳೂರು ಡೀನ್ ಪ್ರೊ. ನವನೀತ ಕೃಷ್ಣನ್ ಮಾತನಾಡಿ, ‘ಅವಕಾಶ ವಂಚಿತರನ್ನು ಮುಖ್ಯವಾಹಿನಿಗೆ ತಂದು, ರಾಷ್ಟ್ರದ ಬೆಳವಣಿಗೆಯಲ್ಲಿ ಅವರೂ ಪಾಲುದಾರರಾಗುವಂತೆ ಮಾಡಿ ದರೆ, ಯಾವುದೇ ಅಭಿವೃದ್ಧಿಶೀಲ ದೇಶವು ವೇಗವಾಗಿ ಏಳಿಗೆ ಕಾಣುತ್ತದೆ. ವ್ಯವಹಾರ ನಡೆಸುವ ವಿಧಾನದಲ್ಲಿ ಬದಲಾವಣೆ ತರುವ ಮೂಲಕ ಇದನ್ನು ಸಾಧಿಸಬಹುದು. ನಾವು ಜವಾಬ್ದಾರಿಯುತವಾಗಿ ಉದ್ಯಮವನ್ನು ನಡೆಸುವುದನ್ನು ಕಲಿತರೆ, ಅಸಮಾನತೆ ಮತ್ತು ಬಡತನ ವನ್ನು ತಗ್ಗಿಸಿ, ಸುಸ್ಥಿರ ಅಭಿವೃದ್ಧಿ ಹಾಗೂ ಸರ್ವರ ಏಳಿಗೆಗೆ ಭದ್ರ ಬುನಾದಿ ಹಾಕಬಹುದುʼ ಎಂದು ತಿಳಿಸಿದರು.

ಟಿಎಪಿಎಂಐ ಶಿಕ್ಷಣದಲ್ಲಿ ಸಾಮಾಜಿಕ ಜವಾಬ್ದಾರಿ ಹಾಸುಹೊಕ್ಕಾಗಿದೆ. ಇಂಟರ್ನ್‌ಶಿಪ್ ಕಾರ್ಯ ಕ್ರಮದ ಮೂಲಕ ಬಿಬಿಎ (BBA) ವಿದ್ಯಾರ್ಥಿಗಳು 2025ರಲ್ಲೇ 190ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ 280ಕ್ಕೂ ಹೆಚ್ಚು ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಅತ್ಯುತ್ತಮ ಯೋಜನೆಗಳನ್ನು ಗುರುತಿಸ ಲಾಯಿತು ಮತ್ತು ಸಂಶೋಧಕರನ್ನು ಈ ವೇಳೆ ಗೌರವಿಸಲಾಯಿತು.

ಈ ಕಾರ್ಯಕ್ರಮಗಳ ಮೂಲಕ ಟಿಎಪಿಎಂಐ ಸಂಸ್ಥೆಯು, ತನ್ನ ಸ್ಥಾಪಕರಾದ ಟಿ. ಎ. ಪೈ ಅವರ ಕನಸನ್ನು ಕೇವಲ ನೆನಪಿಸಿಕೊಳ್ಳದೆ, ಅದನ್ನು ನಿಜವಾಗಿಯೂ ಪಾಲಿಸುತ್ತಿದೆ. ಬಿಸಿನೆಸ್ ಯಶಸ್ಸು ಮತ್ತು ಸಮಾಜದ ಏಳಿಗೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ನಂಬುವಂತಹ ಹೊಸ ತಲೆಮಾರಿನ ನಾಯಕರನ್ನು ಇಲ್ಲಿ ರೂಪಿಸಲಾಗುತ್ತಿದೆ.