ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Revolution in ESI hospitals : ಹಾಸಿಗೆ ಸಾಮರ್ಥ್ಯ ಹೆಚ್ಚಳ, ಐಸಿಯು, ಮಾಡ್ಯುಲರ್ ಒಟಿ ಅಳವಡಿಕೆ: ರಾಜ್ಯದಲ್ಲಿ ಸರ್ಜರಿ ಕ್ರಾಂತಿ ಮಾಡುತ್ತಿರುವ ಇಎಸ್‌ಐ ಆಸ್ಪತ್ರೆಗಳು

ಬೆಂಗಳೂರಿನ ಇಂದಿರಾನಗರ, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಬೆಳಗಾವಿ ಮತ್ತು ದಾಂಡೇಲಿ ಇಎಸ್‌ಐ ಆಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಳ, ತೀವ್ರ ನಿಗಾ ಘಟಕ (ಐಸಿಯು), ಮಾಡ್ಯುಲರ್ ಆಪರೇಷನ್ ಥಿಯೇಟರ್ (ಒಟಿ) ಉಪಕರಣ ಅಳವಡಿಕೆ, ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ, ಡಯಾಲಿಸಿಸ್, ಸಿಬ್ಬಂದಿ ನೇಮಕ ಸೇರಿ ಇತರ ವೈದ್ಯಕೀಯ ಸೌಕರ್ಯ ಕಲ್ಪಿಸಲಾಗುತ್ತಿದೆ.

ಮೇಲ್ದರ್ಜೆಗೇರಿದ ರಾಜ್ಯದ 7 ಇಎಸ್‌ʼಐ ಆಸ್ಪತ್ರೆಗಳು

-

Profile
Ashok Nayak Sep 7, 2026 9:45 PM

ಬೆಂಗಳೂರು ಕಾರ್ಮಿಕ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ವಿಮಾ ಯೋಜನೆಗಳ ವೈದ್ಯ ಕೀಯ ಸೇವೆಗಳ ಆಯುಕ್ತಾಲಯ (ಇಎಸ್‌ಐಎಸ್‌ಎಂಎಸ್) ಅಡಿ ಬರುವ 7 ಇಎಸ್‌ಐ ಆಸ್ಪತ್ರೆಗಳ ವೈದ್ಯಕೀಯ ಮೂಲಸೌಕರ್ಯ ಮೇಲ್ದರ್ಜೆ ಗೇರಿಸಲಾಗುತ್ತಿದೆ.

ರಾಜ್ಯದಲ್ಲಿ 7 ಇಎಸ್‌ಐ, 125ಕ್ಕೂ ಅಧಿಕ ಡಿಸ್ಪೆನ್ಸರಿಗಳಿವೆ. ನವಜಾತ ಶಿಶುಗಳಿಗೆ ಬರುವ ಸೂಕ್ಷ್ಮ ಕಾಯಿಲೆಗಳಿಂದ ಹಿಡಿದು ಎಲ್ಲ ತರಹದ ಚಿಕಿತ್ಸೆಗಳು ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರ ಕುಟುಂಬಗಳಿಗೆ ಈ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸೌಲಭ್ಯ ನೀಡಲಾಗುತ್ತದೆ.

ಬೆಂಗಳೂರಿನ ಇಂದಿರಾನಗರ, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಬೆಳಗಾವಿ ಮತ್ತು ದಾಂಡೇಲಿ ಇಎಸ್‌ಐ ಆಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಳ, ತೀವ್ರ ನಿಗಾ ಘಟಕ (ಐಸಿಯು), ಮಾಡ್ಯುಲರ್ ಆಪರೇಷನ್ ಥಿಯೇಟರ್ (ಒಟಿ) ಉಪಕರಣ ಅಳವಡಿಕೆ, ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ, ಡಯಾ ಲಿಸಿಸ್, ಸಿಬ್ಬಂದಿ ನೇಮಕ ಸೇರಿ ಇತರ ವೈದ್ಯಕೀಯ ಸೌಕರ್ಯ ಕಲ್ಪಿಸಲಾಗುತ್ತಿದೆ.

ಇದನ್ನೂ ಓದಿ: ESIC Hospital Doddaballapur: ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆ ಉದ್ಘಾಟಿಸಿದ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ

ಇದರಿಂದ ಲಕ್ಷಾಂತರ ರೋಗಿಗಳಿಗೆ ಉತ್ಕೃಷ್ಟ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗಲಿದೆ. 300 ಹಾಸಿಗೆಯುಳ್ಳ ಇಂದಿರಾನಗರ ಇಎಸ್‌ಐ ಆಸ್ಪತ್ರೆಯಲ್ಲಿ ಪ್ರಸ್ತುತ 210 ಬೆಡ್ ಅಳವಡಿಸಲಾಗಿದೆ. 2024 ರಲ್ಲಿದ್ದ ಶೇ.32 ಬೆಡ್ ಅಕ್ಯುಪೆನ್ಸಿ ರೇಟ್(ಬಿಒಆರ್), 2026ರಲ್ಲಿ ಶೇ.44ಕ್ಕೆ ಏರಿಕೆಯಾಗಿದೆ. 15 ಐಸಿಯು ಬೆಡ್, 2 ಮಾಡ್ಯುಲರ್ ಒಟಿ ವೈದ್ಯಕೀಯ ಉಪಕರಣ ಅಳವಡಿಸಲಾಗಿದೆ.

ಮೈಸೂರಿನ ಐಎಸ್‌ಐ ಆಸ್ಪತ್ರೆಯಲ್ಲಿ 50 ಬೆಡ್‌ಗಳಿದ್ದು, ಶೇ.66 ಬಿಒಆರ್ ಹೆಚ್ಚಳವಾಗಿದೆ. 10 ಐಸಿಯು ಬೆಡ್‌ಗಳು ಮತ್ತು 2 ಮಾಡ್ಯುಲರ್ ಒಟಿ ಉಪಕರಣಗಳಿವೆ. ಹುಬ್ಬಳ್ಳಿಯ ಇಎಸ್‌ಐ ಹಾಸ್ಪಿಟಲ್ ಶೇ.72 ಬೆಡ್ ಅಕ್ಯುಪೆನ್ಸಿ ರೇಟ್ ಹೊಂದಿದೆ. 10 ಐಸಿಯು ಬೆಡ್ ಮತ್ತು 2 ಮಾಡ್ಯುಲರ್ ಒಟಿ ಉಪ ಕರಣ ಅಳವಡಿಸಲಾಗಿದೆ.

ESI ok1

ದಾವಣಗೆರೆ ಇಎಸ್‌ಐ ಆಸ್ಪತ್ರೆ ಶೇ.92, ಮಂಗಳೂರು ಇಎಸ್‌ಐ ಆಸ್ಪತ್ರೆ ಶೇ.12 ಮತ್ತು ದಾಂಡೇಲಿ ಇಎಸ್‌ಐ ಆಸ್ಪತ್ರೆ ಶೇ.25 ಬೆಡ್ ಅಕ್ಯುಪೆನ್ಸಿ ರೇಟ್ ಹೊಂದಿದೆ. ಮಂಗಳೂರು ಇಎಸ್‌ಐ ಆಸ್ಪತ್ರೆ ಯಲ್ಲಿ ಐಸಿಯು ಬೆಡ್ ಮತ್ತು ಮಾಡ್ಯುಲರ್ ಒಟಿ ಅಳವಡಿಕೆಗೆ ಸದ್ಯ ಟೆಂಡರ್ ಪ್ರಕ್ರಿಯೆ ನಡೆಯು ತ್ತಿದೆ. ಉಳಿದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮೂಲಸೌಕರ್ಯಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. 2024ಕ್ಕೆ ಹೋಲಿಸಿದರೆ 2026ರಲ್ಲಿ ಈ ಮೇಲಿನ ಆಸ್ಪತ್ರೆಗಳು ವೈದ್ಯಕೀಯ ಮೂಲಸೌಕರ್ಯದಲ್ಲಿ ಪ್ರಗತಿ ಕಂಡಿದೆ.

ರೆಫರಲ್ ಪತ್ರಕ್ಕೆ ಕಡಿವಾಣ: ಜ್ವರ, ಶೀತ, ನೆಗಡಿ, ಕೆಮ್ಮು ಮೊದಲಾದ ಸಣ್ಣ ಕಾಯಿಲೆಗಳಿಗೂ ಡಿಸ್ಪೆನ್ಸರಿ ಗಳಲ್ಲಿ ತಪಾಸಣೆ ಮಾಡಿಸಿಕೊಳ್ಳದೆ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ರೆಫರಲ್ ಪತ್ರ ಬರೆಸಿಕೊಂಡು ಹೋಗುತ್ತಿದ್ದರು. ಹಾಗಾಗಿ, ಇಎಸ್‌ಐ ಆಸ್ಪತ್ರೆಗಳು, ಡಿಸ್ಪೆನ್ಸರಿಗಳಿಂದ ಸಣ್ಣಪುಟ್ಟ ಅನಾರೋಗ್ಯ ಗಳಿಗೂ ಖಾಸಗಿ ಆಸ್ಪತ್ರೆಗಳಿಗೆ ಹೊರರೋಗಿ (ಒಪಿಡಿ) ರೆಫರಲ್ ಪತ್ರ ನೀಡುವುದಕ್ಕೆ ಕಡಿವಾಣ ಹಾಕಲಾಗಿದೆ.

ಹೃದಯಾಘಾತ, ರಸ್ತೆ ಅಥವಾ ಕೆಲಸದ ಸ್ಥಳದಲ್ಲಿ ಅಪಘಾತ, ಹಾವಿನ ಕಡಿತ, ಶೇ 30ಕ್ಕಿಂತ ಹೆಚ್ಚು ಸುಟ್ಟ ಗಾಯ, ವಿಷ ಪ್ರಾಶನ, ಪ್ಲೇಟ್ಲೆಟ್ ಕಡಿಮೆಯಾಗುವ ಡೆಂಘೆ, ಹೆರಿಗೆ, ಮಕ್ಕಳ ಶಸ್ತ್ರಚಿಕಿತ್ಸೆ ಹಾಗೂ ಪಾರ್ಶ್ವವಾಯು ಮುಂತಾದ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಈ ವೆಚ್ಚವನ್ನು ವಿಮಾ ಯೋಜನೆಯೇ ಭರಿಸಲಿದೆ. 2024ರಲ್ಲಿ 60,079 ರೋಗಿಗಳಿಗೆ ರೆಫರಲ್ ಪತ್ರ ಕೊಟ್ಟರೆ, 2026ರಲ್ಲಿ 16,068 ಮಂದಿಗೆ ನೀಡಲಾಗಿದೆ. 2024ಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ರೆಫರಲ್ ಪತ್ರ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ.

ಡಯಾಲಿಸಿಸ್ ಘಟಕಗಳ ಸ್ಥಾಪನೆ ಮಂಗಳೂರು ಇಎಸ್‌ಐ ಆಸ್ಪತ್ರೆಯ ವಿವಿಧ ವಿಭಾಗಗಳನ್ನು 9.32 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆರಿಸಲು ಟೆಂಡರ್ ಕರೆಯಲಾಗಿದೆ. ಬೆಳಗಾವಿಯ ಇಎಸ್‌ಐ ಆಸ್ಪತ್ರೆ ಯನ್ನು ‘ಬಿಮ್ಸ್’ ಆಸ್ಪತ್ರೆಯ ಆವರಣಕ್ಕೆ ಸ್ಥಳಾಂತರಿಸಲಾಗುತ್ತಿದೆ. ‌

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಇಎಸ್‌ಐ ಆಸ್ಪತ್ರೆಗಳಲ್ಲಿ 8.90 ಕೋಟಿ ವೆಚ್ಚದಲ್ಲಿ ಡಯಾ ಲಿಸಿಸ್ ಘಟಕಗಳ ಸ್ಥಾಪಿಸಲು ಟೆಂಡರ್ ಕರೆಯಲಾಗಿದೆ. ಇದರಿಂದ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಸೌಲಭ್ಯ ನೀಡಲು ಸಹಾಯವಾಗಲಿದೆ. ಆಧುನಿಕ ವೈದ್ಯಕೀಯ ಉಪಕರಣಗಳನ್ನು ಅಂದಾಜು 20 ಕೋಟಿ ರು. ವೆಚ್ಚದಲ್ಲಿ ಟೆಂಡರ್ ಮೂಲಕ ಖರೀದಿಸಲಾಗಿದೆ.

ಸಿಬ್ಬಂದಿ ಹಾಜರಾತಿ ಮತ್ತು ಕಾರ್ಯ ನಿರ್ವಹಣೆ ಡಿಜಿಟಲೀಕರಣಗೊಳಿಸಲು ಕರ್ನಾಟಕ ಅಟೆಂಡೆ ಮ್ಯಾನೇಜ್ಮೆಂಟ್ ಸಿಸ್ಟಮ್‌ (ಕೆಎಸ್‌ಎಂಎಸ್) ಜಾರಿಗೆ ತರಲಾಗಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ವಿಮಾ ಯೋಜನೆಗಳ ವೈದ್ಯಕೀಯ ಸೇವೆ ಆಯುಕ್ತ ಡಾ.ವೈ.ಕೆ.ದಿನೇಶ್ ಕುಮಾರ್.

image

ಇಎಸ್‌ಐ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿ, ನೇಮಕಾತಿ, ಸಾರ್ವಜನಿಕ ಸೇವೆಗಳ ವಿಸ್ತರಣೆಗೆ ಹಲವು ಪ್ರಮುಖ ನಿರ್ಧಾರ ಕೈಗೊಂಡಿದ್ದೇವೆ. ಹಣಕಾಸು ಇಲಾಖೆಯ ಅನುಮೋದನೆಯೊಂದಿಗೆ 768 ವಿವಿಧ ಹುದ್ದೆಗಳ ಭರ್ತಿಗೆ ಚಾಲನೆ ನೀಡಲಾಗಿದೆ. ತುರ್ತು ಸೇವೆಗಳಿಗಾಗಿ 40 ವೈದ್ಯರು, 35 ತಜ್ಞ ವೈದ್ಯರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

- ಡಾ.ವೈ.ಕೆ.ದಿನೇಶ್ ಕುಮಾರ್, ಕರ್ನಾಟಕ ರಾಜ್ಯ ವಿಮಾ ಯೋಜನೆಗಳ ವೈದ್ಯಕೀಯ ಸೇವೆ ಆಯುಕ್ತ