ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IndiGo flight cancellations: ಬೆಂಗಳೂರಿನಿಂದ ಇಂದು ಮಧ್ಯರಾತ್ರಿವರೆಗೆ ಮುಂಬೈ, ದೆಹಲಿಗೆ ಇಂಡಿಗೋ ವಿಮಾನಗಳ ಹಾರಾಟ ರದ್ದು!

ಇಂಡಿಗೋ ವಿಮಾನಗಳ ಸೇವೆ ವ್ಯತ್ಯಯದ ಬಗ್ಗೆ ಪ್ರಯಾಣಿಕರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್‌) ಮಾಹಿತಿ ಹಂಚಿಕೊಂಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾವ ಯಾವ ನಗರಗಳಿಗೆ ಇಂಡಿಗೋ ವಿಮಾನಗಳು ರದ್ದುಗೊಂಡಿವೆ ಎಂಬ ಕುರಿತು ಮಾಹಿತಿ ನೀಡಿದೆ.

ಇಂದು ಮಧ್ಯರಾತ್ರಿವರೆಗೆ ಮುಂಬೈ, ದೆಹಲಿಗೆ ಇಂಡಿಗೋ ವಿಮಾನ ಹಾರಾಟ ರದ್ದು!

ಇಂಡಿಗೋ ವಿಮಾನ (ಸಂಗ್ರಹ ಚಿತ್ರ) -

Prabhakara R
Prabhakara R Dec 5, 2025 5:28 PM

ಬೆಂಗಳೂರು, ಡಿ.5: ಸಿಬ್ಬಂದಿ ಕೊರತೆ ಸೇರಿ ವಿವಿಧ ಕಾರಣಗಳಿಂದ ಕಳೆದ ನಾಲ್ಕು ದಿನಗಳಿಂದ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಶುಕ್ರವಾರ ಕೂಡ ವಿವಿಧ ಏರ್‌ಪೋರ್ಟ್‌ಗಳಲ್ಲಿ 550ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ (IndiGo Flights Cancellations) ರದ್ದುಗೊಳಿಸಲಾಗಿದೆ. ಈ ನಡುವೆ ಇಂಡಿಗೋ ವಿಮಾನಗಳ ಸೇವೆ ಬಗ್ಗೆ ಪ್ರಯಾಣಿಕರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್‌) ಮಾಹಿತಿ ಹಂಚಿಕೊಂಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಐಎಎಲ್‌ ಮಾಹಿತಿ ನೀಡಿದ್ದು, ಡಿಸೆಂಬರ್ 5ರ ರಾತ್ರಿ 11:59 ಗಂಟೆಯವರೆಗೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಮತ್ತು ದೆಹಲಿಗೆ ತೆರಳುವ ಇಂಡಿಗೋ ವಿಮಾನಗಳು ರದ್ದುಗೊಂಡಿವೆ. ಇಂಡಿಗೋ ವಿಮಾನಗಳ ಮೂಲಕ ಇತರ ಸ್ಥಳಗಳಿಗೆ ಪ್ರಯಾಣಿಸಲಿರುವ ಪ್ರಯಾಣಿಕರು, ದಯವಿಟ್ಟು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ನೇರವಾಗಿ ವಿಮಾನಯಾನ ಸಂಸ್ಥೆಯೊಂದಿಗೆ ತಮ್ಮ ವಿಮಾನದ ಇತ್ತೀಚಿನ ಸ್ಥಿತಿಯನ್ನು ಪರಿಶೀಲಿಸುವಂತೆ ವಿನಂತಿ ಮಾಡುತ್ತೇವೆ.

ಈ ಅಡಚಣೆಯಿಂದಾಗುವ ಅನಾನುಕೂಲತೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣಿಕರಿಗೆ ನೆರವಾಗಲು ಇಂಡಿಗೋ ಹಾಗೂ ಕಾರ್ಯಾಚರಣಾ ಸಹಯೋಗ ಹೊಂದಿರುವ ಇತರ ಸಂಸ್ಥೆಗಳ ಜೊತೆಗೆ ನಮ್ಮ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬಿಐಎಎಲ್‌ ತಿಳಿಸಿದೆ.

ಬಿಐಎಎಲ್‌ ಎಕ್ಸ್‌ ಪೋಸ್ಟ್‌ ಇಲ್ಲಿದೆ



ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ

ಪ್ರವಾಸ, ಬ್ಯುಸಿನೆಸ್ ಸೇರಿದಂತೆ ವಿವಿಧ ಕೆಲಸದ ನಿಮಿತ್ತ ತೆರಳಿದ್ದ ರಾಜ್ಯದಿಂದ ವಿವಿಧ ಸ್ಥಳಗಳಿಗೆ ತೆರಳಿದ್ದವರು ವಾಪಸ್ ಬರಲಾಗದೆ ಪರದಾಡುತ್ತಿದ್ದಾರೆ. ಅಲ್ಲದೆ ಏರ್​ಪೋರ್ಟ್​ಗಳಲ್ಲಿ ಇಂಡಿಗೋ ಪ್ರಯಾಣಿಕರ ಪರದಾಟ ಮುಂದುವರಿದಿದ್ದು, ಟಿಕೆಟ್ ಬುಕ್ ಮಾಡಿದವರು ಫ್ಲೈಟ್ ಸಿಗದೆ ಒದ್ದಾಡಿದ್ದಾರೆ. ಇಂಡಿಗೋ ಕೌಂಟರ್‌ಗಳ ಮುಂದೆ ಟಿಕೆಟ್ ಕ್ಯಾನ್ಸಲ್‌ಗೆ ಉದ್ದದ್ದ ಕ್ಯೂ ಇದೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಸಮರ್ಪಕ ಮಾಹಿತಿ ಕೊಡುತ್ತಿಲ್ಲ ಎಂದು ಜನ ಆಕ್ರೋಶ ತೋರಿಸಿದ್ದಾರೆ.



ಇಂಡಿಗೋ ವಿಮಾನ ರದ್ದತಿ, 550ಕ್ಕೂ ಹೆಚ್ಚು ಫ್ಲೈಟ್‌ ಕ್ಯಾನ್ಸಲ್

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ತೆರಳಬೇಕಿದ್ದ 22 ಜನ ಪ್ರಯಾಣಿಕರು ಇದ್ದಕ್ಕಿದ್ದಂತೆ ಬೆಳಗ್ಗೆ ಪ್ಲೈಟ್ ಕ್ಯಾನ್ಸಲ್ ಮಾಡಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಚಳಿ ಗಾಳಿಯ ನಡುವೆ ಕಾಯುತ್ತಿದ್ದರೂ ಏರ್ ಲೈನ್ಸ್ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಚಂಢಿಗಢದ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ವಿಮಾನಗಳು ಇಲ್ಲದೆ 20 ಜನ ಕನ್ನಡಿಗರು ಪರದಾಡಿದ್ದಾರೆ.