ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಂತರರಾಷ್ಟ್ರೀಯ ಮಹಿಳಾ ದಿನ: ಸಾಧಕಿಯರ ಸನ್ಮಾನಿಸಿದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ

ಮಹಿಳೆಯರ ಕೊಡುಗೆಗೆ ವಿಶೇಷ ಗೌರವ ಸಲ್ಲಿಸುವುದು ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನದ ಮುಖ್ಯ ಆಶಯವಾಗಿದೆ. ಈ ಕಾರಣಕ್ಕೆ ಸಮುದಾಯವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುವ ಮಹಿಳೆಯರ ಸಾಧನೆ ಗುರುತಿಸಿ ಸನ್ಮಾನಿಸಲು ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಾಧಕಿಯರ ಸನ್ಮಾನಿಸಿದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ

-

Ashok Nayak
Ashok Nayak Mar 9, 2026 11:05 AM

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯು, ಸಮುದಾಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಮಹಿಳೆಯರ ಕೊಡುಗೆಗಳನ್ನು ಗೌರವಿಸುವ ಉದ್ದೇಶದಿಂದ "ಗೆಲುವಿಗೆ ಕೊಡುಗೆ (Give to Gain) ಆಶಯ ಕೇಂದ್ರಿತ ವಿಶೇಷ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು.

ಮಹಿಳೆಯರ ಕೊಡುಗೆಗೆ ವಿಶೇಷ ಗೌರವ ಸಲ್ಲಿಸುವುದು ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನದ ಮುಖ್ಯ ಆಶಯವಾಗಿದೆ. ಈ ಕಾರಣಕ್ಕೆ ಸಮುದಾಯವನ್ನು ಬಲಪಡಿಸು ವಲ್ಲಿ ಪ್ರಮುಖ ಪಾತ್ರವಹಿಸುವ ಮಹಿಳೆಯರ ಸಾಧನೆ ಗುರುತಿಸಿ ಸನ್ಮಾನಿಸಲು ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವಿಶಿಷ್ಟ ಬಗೆಯಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ಆಸ್ಪತ್ರೆ ಸಿಬ್ಬಂದಿ, ಅವರ ಕುಟುಂಬಗಳ ಸದಸ್ಯರು ಮತ್ತು ಸಮುದಾಯದ ಸದಸ್ಯರನ್ನು ಒಂದೆಡೆ ಸೇರಿಸಿತ್ತು. ಸಬಲೀಕರಣ ಮತ್ತು ಸಾಮೂಹಿಕ ಜವಾಬ್ದಾರಿಯ ಮನೋಭಾವ ಬಲಪಡಿಸುವಾಗ ನಾಯಕತ್ವ, ಕರುಣೆ ಮತ್ತು ಸೇವೆಯ ಗುಣಗಳು ಮಹತ್ವದ ಪಾತ್ರ ನಿರ್ವಹಿಸುತ್ತಿರುವುದಕ್ಕೆ ಈ ಸಮಾರಂಭವು ನಿದರ್ಶನವಾಗಿತ್ತು.

ಇದನ್ನೂ ಓದಿ: International WomensDay: ಮಾರ್ಚ್‌ 8 ಮಹಿಳಾ ದಿನಾಚರಣೆ: ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್ ಇಲ್ಲಿದೆ

ಸಂಭ್ರಮಾಚರಣೆಯ ಭಾಗವಾಗಿ, ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಹಿರಿಯ ನಿರ್ವಹಣಾ ತಂಡದ ನೇತೃತ್ವದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸಮುದಾಯ ಕಲ್ಯಾಣ ಬಲಪಡಿಸುವ, ನೆರೆಹೊರೆಯ ಒಡನಾಟ ಹೆಚ್ಚಿಸುವ ಮತ್ತು ನಾಗರಿಕ ಸಮಸ್ಯೆ ಗಳನ್ನು ಪರಿಹರಿಸಲು ತಳಮಟ್ಟದ ಪ್ರಯತ್ನಗಳಿಗಾಗಿ ಮಹಿಳಾ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ (ಆರ್‌ಡಬ್ಲ್ಯುಎ) ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.

ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವುದು, ಸಮುದಾಯದ ಉಪಕ್ರಮಗಳನ್ನು ಸಂಘಟಿಸುವುದು ಮತ್ತು ನಿವಾಸಿಗಳನ್ನು ಬೆಂಬಲಿಸುವ ಬಗ್ಗೆ ಈ ಮಹಿಳೆಯರ ಸಮರ್ಪಣಾ ಮನೋಭಾವವು ಅವರ ನೆರೆಹೊರೆಯಲ್ಲಿ ಜೀವನದ ಗುಣಮಟ್ಟ ಸುಧಾರಿಸುವಲ್ಲಿ ಅರ್ಥಪೂರ್ಣ ವ್ಯತ್ಯಾಸ ತಂದಿದೆ.

ಮಹಿಳೆಯರಲ್ಲಿ ಕಾಯಿಲೆಗಳು ಬರದಂತೆ ತಡೆಗಟ್ಟುವ ಆರೋಗ್ಯ ರಕ್ಷಣೆ ಉತ್ತೇಜಿಸಲು ಮತ್ತು ಮೆಚ್ಚುಗೆಯ ಸಂಕೇತವಾಗಿ ಪ್ರತಿಯೊಬ್ಬ ಸನ್ಮಾನಿತ ಮಹಿಳೆಗೆ ವಿಶೇಷ ಉಡುಗೊರೆ ಜೊತೆಗೆ ಉಚಿತ ಮಹಿಳಾ ಆರೋಗ್ಯ ತಪಾಸಣೆ ಕೂಪನ್ ಸಹ ನೀಡಲಾಯಿತು.

ಸನ್ಮಾನಿತರಾದವರು ತಮ್ಮ ಅನುಭವಗಳನ್ನು ಹಾಗೂ ತಾವು ನಡೆದುಬಂದ ಹಾದಿಯ ವಿವರಗಳನ್ನು ಸಭಿಕರ ಜೊತೆ ಹಂಚಿಕೊಂಡು ಸಮಾರಂಭವನ್ನು ಸ್ಪೂರ್ತಿದಾಯಕ ವನ್ನಾಗಿಸಿದರು.

Fortis BG Celebrates International Women's Day Pic 1 ok

ಶ್ಲಾಘನೆಯ ಸಂಕೇತವಾಗಿ, ರೋಗಿಗಳ ಸೇವೆಗೆ ನಿಯೋಜಿತರಾಗಿದ್ದ ಸಿಬ್ಬಂದಿಯು ಗುಲಾಬಿ ಮತ್ತು ನೇರಳೆ ಬಣ್ಣದ ಉಡುಪು ಧರಿಸಿದ್ದರು. ಮಹಿಳಾ ರೋಗಿಗಳು ಮತ್ತು ಅವರ ಸಹಾಯಕರಿಗೆ ಗುಲಾಬಿ ವಿತರಿಸಿ, ಕೃತಜ್ಞತೆ ಮತ್ತು ಮನ್ನಣೆಯ ಸಂದೇಶ ಹರಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಹಿರಿಯ ವೈದ್ಯರು ಮತ್ತು ಉನ್ನತ ಅಧಿಕಾರಿಗಳು ಮಹಿಳೆಯರ ಕೊಡುಗೆಗಳನ್ನು ಶ್ಲಾಘಿಸಿದರು. ಕುಟುಂಬಗಳನ್ನು ಪೋಷಿಸುವುದರ ಜೊತೆಗೆ, ಸಮುದಾಯಗಳನ್ನು ಬಲಪಡಿಸುವವರೆಗೆ ಮಹಿಳೆಯರು ನೀಡುತ್ತಿರುವ ಕೊಡುಗೆಗಳನ್ನು ಸ್ಮರಿಸಿದರು. ತಡೆಗಟ್ಟುವ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವುದರ ಮತ್ತು ಮಹಿಳೆಯರಿಗೆ ಹೆಚ್ಚು ಬೆಂಬಲ ನೀಡುವ ಮತ್ತು ಅಂತರ್ಗತ ವಾತಾವರಣ ಸೃಷ್ಟಿಸುವ ಅಗತ್ಯ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮಾತನಾಡಿದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಫ್ಯಾಸಿಲಿಟಿ ಡೈರೆಕ್ಟರ್‌ ಗೌತಮ್ ಸಿ.ಬಿ ಅವರು, "ಮಹಿಳೆಯರು ತಮ್ಮ ಸಮರ್ಪಣೆ, ಸಹಾನುಭೂತಿ ಮತ್ತು ನಾಯಕತ್ವದ ಗುಣಗಳ ಮೂಲಕ ನಮ್ಮ ಸಮುದಾಯಗಳನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಸಂಭ್ರಮಾಚರಣೆಯ ಮೂಲಕ, ನೆರೆಹೊರೆಗಳನ್ನು ಬಲಪಡಿಸಲು ಮತ್ತು ಸಮುದಾಯದ ಯೋಗಕ್ಷೇಮವನ್ನು ಬೆಂಬಲಿ ಸಲು ತಳಮಟ್ಟದಲ್ಲಿ ಅವಿಶ್ರಾಂತವಾಗಿ ಶ್ರಮಿಸುತ್ತಿರುವ ಮಹಿಳೆಯರನ್ನು ಗುರುತಿಸಲು ನಾವು ಬಯಸಿದ್ದೇವೆ. ಈ ಸ್ಫೂರ್ತಿದಾಯಕ ಮಹಿಳೆಯರನ್ನು ಗೌರವಿಸುವುದು ಎಂದರೆ, ಕೃತಜ್ಞತೆ ವ್ಯಕ್ತಪಡಿಸುವ, ಕಾಳಜಿ ಮತ್ತು ಸಾಮೂಹಿಕ ಜವಾಬ್ದಾರಿಯ ಸಂಸ್ಕೃತಿ ಪ್ರೋತ್ಸಾ ಹಿಸುವ ನಮ್ಮ ವಿಧಾನವಾಗಿದೆ" ಎಂದು ಹೇಳಿದರು.

ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್ಸ್‌ನ ಉಪಾಧ್ಯಕ್ಷ ಮತ್ತು ವಹಿವಾಟು ಮುಖ್ಯಸ್ಥ ಡಾ. ಅನಂತ್ ರಾವ್ ಅವರು ಮಾತನಾಡಿ, "ಆರೋಗ್ಯಕರ ಕುಟುಂಬಗಳು, ಸದೃಢ ಸಮುದಾಯಗಳು ಮತ್ತು ಹೆಚ್ಚು ಸಹಾನುಭೂತಿಯ ಸಮಾಜ ರೂಪಿಸುವಲ್ಲಿ ಮಹಿಳೆ ಯರು ವಹಿಸುವ ಪ್ರಮುಖ ಪಾತ್ರವನ್ನು ಅಂತರರಾಷ್ಟ್ರೀಯ ಮಹಿಳಾ ದಿನವು ನೆನಪಿಸು ತ್ತದೆ. ಮಹಿಳೆಯರ ಕೊಡುಗೆಗೆ ವಿಶೇಷ ಗೌರವ ಸಲ್ಲಿಸುವ ಆಶಯವು- ಮಹಿಳೆಯರು ಪ್ರತಿದಿನ ಸಾಕಾರಗೊಳಿಸುವ ಚೇತರಿಕೆ ಸಾಮರ್ಥ್ಯ, ಸೇವೆ ಮತ್ತು ಕಾಳಜಿಯ ಮನೋಭಾ ವವನ್ನು ಪ್ರತಿಬಿಂಬಿಸುತ್ತದೆ. ಇಂತಹ ಪ್ರೇರಣೆದಾಯಕ ವ್ಯಕ್ತಿಗಳ ಸಾಧನೆಯ ಸಂಭ್ರಮಾ ಚರಿಸುವುದು ಸಬಲೀಕರಣ, ಯೋಗಕ್ಷೇಮ ಮತ್ತು ಸಮುದಾಯವಾಗಿ ಪರಸ್ಪರ ಬೆಂಬಲಿ ಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ" ಎಂದು ಹೇಳಿದರು.

ಸನ್ಮಾನ ಸಮಾರಂಭವು ಕೇಕ್ ಕತ್ತರಿಸುವ ಸಮಾರಂಭ ಮತ್ತು ಆಸ್ಪತ್ರೆ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಗಳೊಂದಿಗೆ ಸಮಾರೋಪಗೊಂಡಿತು.