ಯು.ಕೆ.ಯ ಪ್ರಮುಖ ಬ್ರಾಂಡ್ ನೆಕ್ಸ್ಟ್ ಅಂತಾರಾಷ್ಟ್ರೀಯ ಫ್ಯಾಷನ್ ಗೆ ಬೆಂಗಳೂರಿನ ಬೇಡಿಕೆಗೆ ಸ್ಪಂದನೆ, ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಹೊಸ ಮಳಿಗೆಗಳ ಪ್ರಾರಂಭ
ಯು.ಕೆ. ಪ್ರಮುಖ ಫ್ಯಾಷನ್ ಬ್ರಾಂಡ್ ನೆಕ್ಸ್ಟ್ ಬೆಂಗಳೂರಿನ ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ಹೊಸ ಮಳಿಗೆಗಳ ಪ್ರಾರಂಭವನ್ನು ಪ್ರಕಟಿಸಿದ್ದು ಇದು ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿದೆ. ಈ ಹೊಸ ಮಳಿಗೆಗಳ ಮೂಲಕ ಬೆಂಗಳೂರಿನಲ್ಲಿ ಗ್ರಾಹಕರು ಈ ಪ್ರಮುಖ ಬ್ರಿಟಿಷ್ ಬ್ರಾಂಡ್ ಅನುಭವ ಪಡೆದುಕೊಳ್ಳುವ ಅವಕಾಶ ಪಡೆಯುತ್ತಾರೆ.
-
ಹೊಸ 4500 ಚದರ ಅಡಿ ಮಾದರಿಯು ನಗರಕ್ಕೆ ನೆಕ್ಸ್ಟ್ ನ ಬ್ರಿಟಿಷ್ ಫ್ಯಾಷನ್ ಮತ್ತು ಜಾಗತಿಕ ಅನುಭವವನ್ನು ತಂದಿದೆ
500ಕ್ಕೂ ಹೆಚ್ಚು ಪುರುಷರು ಹಾಗೂ ಮಹಿಳೆಯರ ಸಂಗ್ರಹ ಮತ್ತು ಮಳಿಗೆಯಲ್ಲಿನ =ಅನುಭವ ಹೆಚ್ಚಿಸುವ ವಿಶಿಷ್ಟ ಉಡುಗೆಗಳು
ಇದರೊಂದಿಗೆ ನೆಕ್ಸ್ಟ್ 180ಕ್ಕೂ ಹೆಚ್ಚುಸ್ಟೈಲ್ ಗಳನ್ನು ಒದಗಿಸುವ ಹೊಸ ಮಕ್ಕಳ ಉಡುಪಿನ ಮಳಿಗೆಯನ್ನೂ ತೆರೆದಿದೆ
ದೆಹಲಿ ಮತ್ತು ಮುಂಬೈಗಳು ಹೊಸ ಮಳಿಗೆ ಪ್ರಾರಂಭವಾಗಲಿರುವ ಇತರೆ ಪ್ರಮುಖ ನಗರಗಳು
ಬೆಂಗಳೂರು: ಯು.ಕೆ. ಪ್ರಮುಖ ಫ್ಯಾಷನ್ ಬ್ರಾಂಡ್ ನೆಕ್ಸ್ಟ್ ಬೆಂಗಳೂರಿನ ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ಹೊಸ ಮಳಿಗೆಗಳ ಪ್ರಾರಂಭವನ್ನು ಪ್ರಕಟಿಸಿದ್ದು ಇದು ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿದೆ. ಈ ಹೊಸ ಮಳಿಗೆಗಳ ಮೂಲಕ ಬೆಂಗಳೂರಿನಲ್ಲಿ ಗ್ರಾಹಕರು ಈ ಪ್ರಮುಖ ಬ್ರಿಟಿಷ್ ಬ್ರಾಂಡ್ ಅನುಭವ ಪಡೆದುಕೊಳ್ಳುವ ಅವಕಾಶ ಪಡೆಯುತ್ತಾರೆ.
ಈ ಪ್ರಾರಂಭವು ಪುಣೆ ಮತ್ತು ಹೈದರಾಬಾದ್ ಗಳಲ್ಲಿ ತನ್ನ ಮಳಿಗೆಗಳ ಉದ್ಘಾಟನೆಯ ನಂತರ ಬಂದಿದ್ದು ಮಿಂತ್ರಾದ ಬಿ2ಬಿ ಸಗಟು ಮಾರಾಟ ಸಂಸ್ಥೆ ಮಿಂತ್ರಾ ಜಬಾಂಗ್ ಇಂಡಿಯಾ ಪ್ರೈ.ಲಿ. (ಎಂ.ಜೆ.ಐ.ಪಿ.ಎಲ್.) ಮತ್ತು ಅದರ ಅನುಮತಿ ಪಡೆದ ಫ್ರಾಂಚೈಸಿ ಪಾಲುದಾರರ ಸಹಯೋಗದಿಂದ ಭಾರತದಲ್ಲಿ ದೀರ್ಘಾವಧಿ ವಿಸ್ತರಣೆಯಲ್ಲಿ ನೆಕ್ಸ್ಟ್ ನ ಮತ್ತೊಂದು ಗಮನಾರ್ಹ ಹೆಜ್ಜೆಯಾಗಿದೆ.
ಇದನ್ನೂ ಓದಿ:Bangalore News: ನಟ ವಿಜಯ ದಳಪತಿ ನಾಯಕತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಕ್ರಾಂತಿ: ಎಸ್.ಸಂಗಮೇಶ್
ಈ ಕಾರ್ಯತಂತ್ರೀಯ ಸಹಯೋಗದ ಭಾಗವಾಗಿ ಎಂಜೆಐಪಿಎಲ್ ಭಾರತದಲ್ಲಿ ಫ್ರಾಂಚೈಸಿ ಮಾದರಿ ಮೂಲಕ ನೆಕ್ಸ್ಟ್ ನ ಉತ್ಪನ್ನಗಳ ಪೋರ್ಟ್ ಫೋಲಿಯೊವನ್ನು ವಿತರಿಸಲು ಅನುಮತಿಯ ಹಕ್ಕುಗಳನ್ನು ಹೊಂದಿದ್ದು ದೇಶಾದ್ಯಂತ ಬ್ರಾಂಡ್ ನ ಆಮ್ನಿ-ಚಾನೆಲ್ ಉಪಸ್ಥಿತಿಯನ್ನು ಸದೃಢಗೊಳಿಸಲಿದೆ. 1982ರಲ್ಲಿ ಪ್ರಾರಂಭವಾದ ನೆಕ್ಸ್ಟ್ ತನ್ನ ಸಮಕಾ ಲೀನ ಬ್ರಿಟಿಷ್ ಸೌಂದರ್ಯಪ್ರಜ್ಞೆ, ಗುಣಮಟ್ಟಕ್ಕೆ ಆದ್ಯತೆ ಮತ್ತು ಕೈಗೆಟುವ ದರಕ್ಕೆ ಜಾಗತಿಕ ಮಾನ್ಯತೆ ಪಡೆದಿದೆ. ಈ ಬ್ರಾಂಡ್ ಯು.ಕೆ.ಯಲ್ಲಿ 460ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು 265 ಅಂತಾರಾಷ್ಟ್ರೀಯ ಫ್ರಾಂಚೈಸಿ ತಾಣಗಳು ಮತ್ತು 80ಕ್ಕೂ ಹೆಚ್ಚು ದೇಶಗಳಲ್ಲಿ ಆನ್ಲೈನ್ ಉಪಸ್ಥಿತಿ ಹೊಂದಿದೆ.
ಬೆಂಗಳೂರಿನ ಪ್ರಮುಖ ರೀಟೇಲ್ ತಾಣಗಳಲ್ಲಿ ಒಂದಾಗಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿರುವ ~4,500 ಚದರ ಅಡಿ ವಿಸ್ತೀರ್ಣದ ಪುರುಷರು ಹಾಗೂ ಮಹಿಳೆಯರ ಮಳಿಗೆಯು ತಲ್ಲೀನಗೊಳಿಸುವ ಬ್ರಾಂಡ್ ಅನುಭವ ನೀಡುತ್ತದೆ ಮತ್ತು ನೆಕ್ಸ್ಟ್ ನ ಜಾಗತಿಕ ವಾಗಿ ಮಾನ್ಯತೆ ಪಡೆದ ಫ್ಯಾಷನ್ ಆಯ್ಕೆಯನ್ನು ಸ್ಟೈಲ್ ಪ್ರಿಯ ಭಾರತೀಯ ಗ್ರಾಹಕರಿಗೆ ವಿಸ್ತರಿಸುತ್ತಿದೆ. ಬ್ರಾಂಡ್ ನ ಸಿಗ್ನೇಚರ್ ತತ್ವಕ್ಕೆ ಪೂರಕವಾಗಿ ವಿನ್ಯಾಸಗೊಳಿಸ ಲಾದ ಈ ಮಳಿಗೆಯು ಜಾಗತಿಕ ಲೇಔಟ್, ಸ್ಪಷ್ಟವಾಗಿ ವ್ಯಾಖ್ಯಾನಿಸಿದ ಕ್ಯಾಟಗರಿ ಝೋನ್ ಗಳು ಮತ್ತು ಅಂತರ್ಬೋಧೆಯ ಶಾಪಿಂಗ್ ಪ್ರಯಾಣವನ್ನು ನೀಡುತ್ತದೆ. ಗ್ರಾಹಕರು ಪುರುಷರು ಹಾಗೂ ಮಹಿಳೆಯರ ಉಡುಪುಗಳ ಸುಮಾರು 500 ಸ್ಟೈಲ್ ಗಳನ್ನು ಕೊಳ್ಳ ಬಹುದಾಗಿದ್ದು ಅದು ನೆಕ್ಸ್ಟ್ ನ ಬ್ರಿಟಿಷ್ ವಿನ್ಯಾಸ ಮತ್ತು ಸಂಸ್ಕೃತಿ ಹಾಗೂ ಗುಣಮಟ್ಟವನ್ನು ಬಿಂಬಿಸುತ್ತದೆ.
ಇದರೊಂದಿಗೆ ನೆಕ್ಸ್ಟ್ ವಿಶೇಷ ಮಕ್ಕಳ ಉಡುಪುಗಳ ಮಳಿಗೆಯನ್ನು ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಪರಿಚಯಿಸಿದ್ದು ಎಲ್ಲ ವಯೋಮಾನದ 180 ಸ್ಟೈಲ್ ಗಳನ್ನು ಹೊಂದಿದೆ. ಈ ಸಂಗ್ರಹದಲ್ಲಿ ಬೇಸಿಗೆಯ ಅಗತ್ಯಗಳಾದ ಟಿ-ಶರ್ಟ್ ಗಳು, ಉಡುಪುಗಳು, ಶಾರ್ಟ್ಸ್, ಟ್ರೌಷರ್ಸ್, ಡೆನಿಮ್ಸ್ ಮತ್ತು ಸ್ವಿಮ್ ವೇರ್ ಒಳಗೊಂಡಿದ್ದು ಅದು ದೀರ್ಘಬಾಳಿಕೆ, ಸೌಖ್ಯ ಮತ್ತು ಸ್ಟೈಲ್ ನೀಡುತ್ತದೆ. ಈ ಸಂಗ್ರಹದ ಮೂಲಕ ನೆಕ್ಸ್ಟ್ ಭಾರತದ ಹೆಚ್ಚು ತಲುಪದ ಮಕ್ಕಳ ಉಡುಪುಗಳ ಮಾರುಕಟ್ಟೆಯಲ್ಲಿ ಇರುವ ಅಂತರ ತುಂಬುವ ಗುರಿ ಹೊಂದಿದೆ.
ಈ ಮಳಿಗೆಯಲ್ಲಿನ ಸಂಗ್ರಹವನ್ನು ಬೆಂಗಳೂರಿನ ಕಾಸ್ಮೊಪಾಲಿಟನ್ ಜೀವನಶೈಲಿ ಮತ್ತು ವಿಶಿಷ್ಟ ವಾತಾವರಣಕ್ಕೆ ತಕ್ಕಂತೆ ರೂಪಿಸಲಾಗಿದೆ. ಇದು ಸ್ಮಾರ್ಟ್-ಕ್ಯಾಶುಯಲ್ ಡ್ರೆಸ್ಟಿಂಗ್, ವೈವಿಧ್ಯಮಯ ಲೇಯರಿಂಗ್ ಪೀಸ್ ಗಳು ಮತ್ತು ಪ್ರತಿನಿತ್ಯದ ಅಗತ್ಯಗಳು ಮತ್ತು ವಿಶೇಷ ಸಂದರ್ಭಗಳ ಸ್ಟೈಲ್ ಗಳ ನಡುವೆ ಸಮತೋಲನ ತಂದಿದೆ. ಸೀಸನಲ್ ರೆಸಾರ್ಟ್ ಮತ್ತು ಬೀಚ್ ವೇರ್ ಸಂಗ್ರಹವನ್ನು ಆಯ್ದ ಮಳಿಗೆಯೊಳಗಿನ ವಿಶಿಷ್ಟ ಉಡುಪುಗಳೊಂದಿಗೆ ಬೇಸಿಗೆಗೆ ಪರಿಚಯಿಸಲಾಗಿದೆ.
ಈ ಬಿಡುಗಡೆ ಕುರಿತು ಮಿಂತ್ರಾದ ಚೀಫ್ ಆಫ್ ಸ್ಟ್ರಾಟಜಿಕ್ ಪಾರ್ಟ್ನರ್ಶಿಪ್ಸ್ ಅಂಡ್ ಆಮ್ನಿ-ಚಾನೆಲ್ ಮುಖ್ಯಸ್ಥ ವೇಣು ನಾಯರ್, “ಬೆಂಗಳೂರು ಪ್ರಮುಖ ಫ್ಯಾಷನ್-ಪ್ರಿಯ ಮಾರುಕಟ್ಟೆಯಾಗಿದೆ ಮತ್ತು ಇಲ್ಲಿ ವಿಸ್ತರಣೆಯಾಗುತ್ತಿರುವುದು ಭಾರತೀಯ ಗ್ರಾಹಕರನ್ನು ನೆಕ್ಸ್ಟ್ ಸೆಳೆಯುತ್ತಿರುವ ವಿಧಾನವನ್ನು ತೋರುತ್ತದೆ. ಬ್ರಾಂಡ್ ಪ್ರಮುಖ ಮೆಟ್ರೋಗಳಲ್ಲಿ ಹೊಸ ಮಳಿಗೆಗಳೊಂದಿಗೆ ವಿಸ್ತರಿಸುತ್ತಿರುವಾಗ ನಮ್ಮ ಸಹಯೋಗವು ಜಾಗತಿಕವಾಗಿ ಪ್ರೀತಿಪಾತ್ರವಾದ ಬ್ರಿಟಿಷ್ ಫ್ಯಾಷನ್ ಅನ್ನು ತಡೆರಹಿತ ಖರೀದಿ ಅನುಭವದ ಮೂಲಕ ಗ್ರಾಹಕರಿಗೆ ಹತ್ತಿರ ತರುವುದಕ್ಕೆ ಆದ್ಯತೆ ನೀಡಿದೆ” ಎಂದರು.
ಭಾರತದಲ್ಲಿ ಬ್ರಾಂಡ್ 2023ರಲ್ಲಿ ಪ್ರವೇಶ ಮಾಡಿದ ದಿನದಿಂದಲೂ ನೆಕ್ಸ್ಟ್ ಸತತವಾದ ಪ್ರಗತಿಯನ್ನು ಕಾಣುತ್ತಿದ್ದು ಅದು ತನ್ನ ವಿನ್ಯಾಸ-ಪ್ರೇರಿತ, ಪ್ರತಿನಿತ್ಯದ ಫ್ಯಾಷನ್ ಗೆ ಸದೃಢವಾದ ಗ್ರಾಹಕರ ಬಾಂಧವ್ಯ ತೋರುತ್ತದೆ. ಬೆಂಗಳೂರಿನಲ್ಲಿ ಬ್ರಾಂಡ್ ನ ಹೊಸ ಮಳಿಗೆಯ ಪ್ರಾರಂಭವು ವಿಶಿಷ್ಟ ಆಫ್ಲೈನ್ ಫ್ಯಾಷನ್ ಅನುಭವ ಸೃಷ್ಟಿಸುವಲ್ಲಿ ಪ್ರಮುಖ ಮೈಲಿಗಲ್ಲಿನ ಗುರುತಾಗಿದ್ದು ನೆಕ್ಸ್ಟ್ ನ ಸದೃಢ ಆನ್ಲೈನ್ ಉಪಸ್ಥಿತಿಗೆ ಪೂರಕವಾಗಿದೆ ಮತ್ತು ಸ್ಟೈಲ್ ಪ್ರಿಯ ಭಾರತೀಯ ಗ್ರಾಹಕರಿಗೆ ವಿಶ್ವಾಸಾರ್ಹ ತಾಣವಾಗಿ ತನ್ನ ಸ್ಥಾನವನ್ನು ಮರು ದೃಢೀಕರಿಸಿಕೊಂಡಿದೆ.