ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೂತ್ರ ವಿಸರ್ಜನೆ ತಡೆಗೆ ಬಳಸಿದ ಕನ್ನಡಿ ಅಸ್ತ್ರವೂ ವಿಫಲ; ಮೈಸೂರಲ್ಲಿ ಅಳವಡಿಸಿದ ಕನ್ನಡಿ ಎದುರೇ ಮೂತ್ರ: ಇಂತ ಜನಗಳು ಎಲ್ಲಿ ಸಿಗ್ತಾರೆ ಎಂದು ಕಾಲೆಳೆದ ನೆಟ್ಟಿಗರು

Viral Video: ಸ್ವಚ್ಛ ನಗರ ಮೈಸೂರಿನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸಕ್ಕೆ ಬ್ರೇಕ್ ಹಾಕಲು ಮೈಸೂರು ಮಹಾನಗರ ಪಾಲಿಕೆ ವಿಶಿಷ್ಟ ಪ್ರಯೋಗ ಜಾರಿ ಮಾಡಿದೆ. ಸಾರ್ವಜನಿಕ ಮೂತ್ರ ವಿಸರ್ಜನೆಯನ್ನು ತಡೆಯಲು 9.5 ಲಕ್ಷ ರುಪಾಯಿ ವೆಚ್ಚದಲ್ಲಿ ಬಸ್‌ ನಿಲ್ದಾಣ ಮುಂಭಾಗದ ರಸ್ತೆಗೆ ಸ್ಟೇನ್‌ಲೆಸ್ ಸ್ಟೀಲ್ ಕನ್ನಡಿ ಫಲಕ ಅಳವಡಿಸಿದೆ. ಆದರೆ ಈ ಕ್ರಮ ಜಾರಿಗೆ ಬಂದ ಕೆಲವು ದಿನಗಳಲ್ಲೇ ಕನ್ನಡಿಯ ಮುಂದೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸುತ್ತಿರುವುದು ಕಂಡು ಬಂದಿದೆ.

ಮೂತ್ರ ವಿಸರ್ಜನೆ ತಡೆಗೆ 'ಕನ್ನಡಿ' ಅಸ್ತ್ರ ಬಳಸಿದರೂ ಹಾವಳಿ ನಿಂತಿಲ್ಲ

ಮೈಸೂರಿನಲ್ಲಿ ಮೂತ್ರ ವಿಸರ್ಜನೆ ತಡೆಯಲು 'ಕನ್ನಡಿ' ಅಸ್ತ್ರ -

Profile
Pushpa Kumari May 12, 2026 5:23 PM

ಮೈಸೂರು, ಮೇ 12: ನಾಗರಿಕ ಪ್ರಜ್ಞೆಯ ಕೊರತೆಯು ಇತ್ತೀಚಿಗೆ ಗಂಭೀರ ಸಮಸ್ಯೆಯಾಗಿ ಬೆಳೆದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ಹೀಗೆ ಬೇಕಾ ಬಿಟ್ಟಿಯಾಗಿ ವರ್ತಿಸುವ ದೃಶ್ಯಗಳು ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ಸ್ವಚ್ಛ ನಗರ ಮೈಸೂರಿನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸಕ್ಕೆ ಬ್ರೇಕ್ ಹಾಕಲು ಮಹಾನಗರ ಪಾಲಿಕೆ ವಿಶಿಷ್ಟ ಪ್ರಯೋಗ ಜಾರಿ ಮಾಡಿದೆ. ಸಾರ್ವಜನಿಕ ಮೂತ್ರ ವಿಸರ್ಜನೆಯನ್ನು ತಡೆಯಲು 9.5 ಲಕ್ಷ ರುಪಾಯಿ ವೆಚ್ಚದಲ್ಲಿ ಬಸ್‌ ನಿಲ್ದಾಣ ಸಮೀಪ ಸ್ಟೇನ್‌ಲೆಸ್ ಸ್ಟೀಲ್ ಕನ್ನಡಿ ಫಲಕಗಳನ್ನು ಅಳವಡಿಸಿದೆ. ಆದರೆ ಈ ಕ್ರಮ ಜಾರಿಗೆ ಬಂದ ಕೆಲವು ದಿನಗಳಲ್ಲೇ ಕನ್ನಡಿಯ ಮುಂದೆಯೇ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವುದು ಕಂಡು ಬಂದಿದೆ.

ಸಾರ್ವಜನಿಕ ಸ್ಥಳದಲ್ಲಿ ಕೆಲವರು ಅಶಿಸ್ತಿನಿಂದ ವರ್ತಿಸುತ್ತಾರೆ. ಅದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆ. ಮೈಸೂರಿನ‌ ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಯಲು 9.5 ಲಕ್ಷ ರುಪಾಯಿ ವೆಚ್ಚದಲ್ಲಿ ಅಳವಡಿಸಿದ ಸ್ಟೇನ್‌ಲೆಸ್ ಸ್ಟೀಲ್ ಪ್ರತಿಫಲಿತ ಫಲಕವೂ ವಿಫಲವಾಗಿದೆ. ಗೋಡೆಗೆ ಹಾಕಲಾಗಿದ್ದ ಕನ್ನಡಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಬಂದವರಿಗೆ ಅವರದೇ ಪ್ರತಿಬಿಂಬಗಳು ಕಾಣುತ್ತವೆ‌. ಇದರಿಂದ ಜನ ಮುಜುಗರಕ್ಕೆ ಒಳಗಾಗುತ್ತವೆ ಎಂದು ಈ ನಿಯಮ ಜಾರಿ ಮಾಡಲಾಗಿತ್ತು.

ವಿಡಿಯೊ ನೋಡಿ:



ರಾತ್ರಿಯೂ ಕನ್ನಡಿ ಕೆಲಸ ಮಾಡುವಂತೆ ಕೆಳಗೆ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ. ಆದರೆ ಇದನ್ನು ಅಳವಡಿಸಿದ ಕೆಲವೇ ದಿನಗಳಲ್ಲಿ ಅದೇ ಕನ್ನಡಿಗಳ ಮುಂದೆ ವ್ಯಕ್ತಿ ಮೂತ್ರ ವಿಸರ್ಜಿಸುತ್ತಿರುವುದನ್ನು ಕಂಡು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಆತನಿಗೆ ಬೈದು ಬುದ್ದಿ ಮಾತು‌ ಹೇಳಿದ್ದಾರೆ..

ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ

ಮೈಸೂರು ಉಪನಗರ ಬಸ್ ನಿಲ್ದಾಣದ ಎದುರಿನ 80 ಮೀಟರ್ ಖಾಲಿ ಕಾಂಪೌಂಡ್ ಗೋಡೆಯ ಉದ್ದಕ್ಕೂ ಕನ್ನಡಿಗಳನ್ನು ಅಳವಡಿಸಲಾಗಿದೆ. ಆದರೂ ಜನರ ವರ್ತನೆಮಾತ್ರ ಬದಲಾಗಿಲ್ಲ.. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು "ಭಾರತವು ಅಭಿವೃದ್ಧಿ ಹೊಂದುವುದಿಲ್ಲ, ನಾಗರಿಕ ಪ್ರಜ್ಞೆ, ನಾಚಿಕೆ, ಜವಾಬ್ದಾರಿ ಯಾವುದೂ ಇಲ್ಲʼʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬರು, ʼʼಕನ್ನಡಿ ಹಾಕಿ ಹಣ ಮೇಲೆ ವ್ಯರ್ಥ ಮಾಡುವ ಬದಲು ಇಂತಹ ಸ್ಥಳಗಳಲ್ಲಿ ಉಚಿತ ಶೌಚಾಲಯಗಳನ್ನು ನಿರ್ಮಿಸಬಹುದಿತ್ತುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.