ಪ್ರವಾಸಿ ತಾಣಗಳ ಕುರಿತು ಉಪಯುಕ್ತ ಮಾಹಿತಿ, ಸೊಗಸಾದ ಲೇಖನಗಳು: ಪ್ರವಾಸಿ ಪ್ರಪಂಚದ ಬಗ್ಗೆ ಬಸವರಾಜ ಹೊರಟ್ಟಿ ಮೆಚ್ಚುಗೆ
ನಿಮ್ಮ ಸಂಪಾದಕತ್ವದಲ್ಲಿ ಮೂಡಿಬರುತ್ತಿರುವ 'ಪ್ರವಾಸಿ ಪ್ರಪಂಚ' ವಾರಪತ್ರಿಕೆಯನ್ನು ನಾನು ಕಳೆದ ಕೆಲವು ತಿಂಗಳುಗಳಿಂದ ನಿಯಮಿತವಾಗಿ ಓದುತ್ತಿದ್ದೇನೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಅತ್ಯಂತ ಉಪಯುಕ್ತ ಮಾಹಿತಿ ಮತ್ತು ಸೊಗಸಾದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿ, ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಅವರು ʼಅಭಿನಂದನಾ ಪತ್ರʼ ಬರೆದಿದ್ದಾರೆ.
ಪ್ರವಾಸಿ ಪ್ರಪಂಚ ಪತ್ರಿಕೆ ಓದುತ್ತಿರುವ ಬಸವರಾಜ ಹೊರಟ್ಟಿ. -
ಬೆಂಗಳೂರು: ಕನ್ನಡದಲ್ಲಿ ಪ್ರವಾಸ, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಮೀಸಲಾದ ವಿಶಿಷ್ಟ ಪತ್ರಿಕೆ ʼಪ್ರವಾಸಿ ಪ್ರಪಂಚʼದ (Pravasi Prapancha) ಬಗ್ಗೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ (Basavaraj Horatti) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಶ್ವವಾಣಿ ಹಾಗೂ ಪ್ರವಾಸಿ ಪ್ರಪಂಚ ಪತ್ರಿಕೆ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರಿಗೆ ʼಅಭಿನಂದನಾ ಪತ್ರʼ ಬರೆದಿರುವ ಹೊರಟ್ಟಿ ಅವರು, ಕನ್ನಡದಲ್ಲಿ ಪ್ರವಾಸೋದ್ಯಮಕ್ಕೆ ಮಾತ್ರ ಮೀಸಲಾದ ಇಂತಹ ವಿಶಿಷ್ಟ ಪತ್ರಿಕೆಯನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.
ನಿಮ್ಮ ಸಂಪಾದಕತ್ವದಲ್ಲಿ ಮೂಡಿಬರುತ್ತಿರುವ 'ಪ್ರವಾಸಿ ಪ್ರಪಂಚ' ವಾರಪತ್ರಿಕೆಯನ್ನು ನಾನು ಕಳೆದ ಕೆಲವು ತಿಂಗಳುಗಳಿಂದ ನಿಯಮಿತವಾಗಿ ಓದುತ್ತಿದ್ದೇನೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಅತ್ಯಂತ ಉಪಯುಕ್ತ ಮಾಹಿತಿ ಮತ್ತು ಸೊಗಸಾದ ಲೇಖನಗಳನ್ನು ನೀಡುತ್ತಿರುವ ಹಾಗೂ ಪ್ರವಾಸಿ ತಾಣಗಳ ಐತಿಹಾಸಿಕ ಹಿನ್ನೆಲೆ, ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ಆಹಾರ ಪದ್ಧತಿಗಳ ಮೇಲೆ ಬೆಳಕು ಚೆಲ್ಲುವ ನಿಮ್ಮ ತಂಡದ ಪ್ರಯತ್ನಕ್ಕೆ ನನ್ನ ಹೃತ್ತೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.
ಕರ್ನಾಟಕದ ಅಪರಿಚಿತ ಪ್ರವಾಸಿ ತಾಣಗಳು, ಐತಿಹಾಸಿಕ ದೇವಾಲಯಗಳ ಹಿನ್ನೆಲೆ ಹಾಗೂ ವಿದೇಶಿ ಪ್ರವಾಸಕ್ಕೆ ಸಂಬಂಧಿಸಿದ ನಿಮ್ಮ ಲೇಖನಗಳು ಅತ್ಯಂತ ಆಕರ್ಷಕವಾಗಿರುತ್ತವೆ. ಪತ್ರಿಕೆಯಲ್ಲಿ ಬಳಸುವ ಗುಣಮಟ್ಟದ ಛಾಯಾಚಿತ್ರಗಳು ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತವೆ. ಪ್ರವಾಸ ಹೋಗಲು ಇಚ್ಛಿಸುವವರಿಗೆ ಪತ್ರಿಕೆಯು ನೀಡುವ ಮಾರ್ಗಸೂಚಿಗಳು ಮತ್ತು ಸಾರಿಗೆ ವ್ಯವಸ್ಥೆಯ ವಿವರಗಳು ತುಂಬಾನೇ ಸಹಕಾರಿಯಾಗಿವೆ.
ಕನ್ನಡದಲ್ಲಿ ಪ್ರವಾಸೋದ್ಯಮಕ್ಕೆ ಮಾತ್ರ ಮೀಸಲಾದ ಇಂತಹ ವಿಶಿಷ್ಟ ಪತ್ರಿಕೆಯನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ. ನಿಮ್ಮ ಈ ಸಾಹಿತ್ಯಕ ಸೇವೆ ನಿರಂತರವಾಗಿರಲಿ ಮತ್ತು ಪತ್ರಿಕೆಯು ಇನ್ನಷ್ಟು ಜನಪ್ರಿಯತೆಯನ್ನು ಗಳಿಸಲಿ ಎಂದು ಶುಭ ಹಾರೈಸುತ್ತೇನೆ ಎಂದು ಬಸವರಾಜ ಎಸ್. ಹೊರಟ್ಟಿ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ, ನಮ್ಮ “ಪ್ರವಾಸಿ ಪ್ರಪಂಚ”ದ ಪ್ರಸಾರಂಗ ವಿಭಾಗದವರು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿಯವರನ್ನು ಭೇಟಿ ಮಾಡಿ ಅವರಿಗೆ, ಅಲ್ಲಿ ತನಕ ಮೂಡಿ ಬಂದ ಪತ್ರಿಕೆಯ ಸಂಚಿಕೆಗಳನ್ನೆಲ್ಲ ನೀಡಿ ಬಂದರು.
— Vishweshwar Bhat (@VishweshwarBhat) January 6, 2026
ಅದಾಗಿ ಮುಂದಿನ ಎರಡೂವರೆ ಗಂಟೆಗಳ ಕಾಲ ಶ್ರೀ ಹೊರಟ್ಟಿಯವರು ”ಪ್ರವಾಸಿ ಪ್ರಪಂಚ” ಓದುವುದರಲ್ಲಿ… pic.twitter.com/GsesYvwfnc
ಬಸವರಾಜ ಹೊರಟ್ಟಿ ಅವರಿಗೆ ವಿಶ್ವೇಶ್ವರ ಭಟ್ ಧನ್ಯವಾದ
ಪ್ರವಾಸಿ ಪ್ರಪಂಚ ಪತ್ರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಸವರಾಜ ಹೊರಟ್ಟಿ ಅವರಿಗೆ ವಿಶ್ವೇಶ್ವರ ಭಟ್ ಅವರು ಧನ್ಯವಾದ ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆ, ನಮ್ಮ ʼಪ್ರವಾಸಿ ಪ್ರಪಂಚʼದ ಪ್ರಸಾರಂಗ ವಿಭಾಗದವರು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಭೇಟಿ ಮಾಡಿ ಅವರಿಗೆ, ಅಲ್ಲಿ ತನಕ ಮೂಡಿ ಬಂದ ಪತ್ರಿಕೆಯ ಸಂಚಿಕೆಗಳನ್ನೆಲ್ಲ ನೀಡಿ ಬಂದರು. ಅದಾಗಿ ಮುಂದಿನ ಎರಡೂವರೆ ಗಂಟೆಗಳ ಕಾಲ ಶ್ರೀ ಹೊರಟ್ಟಿಯವರು ʼಪ್ರವಾಸಿ ಪ್ರಪಂಚʼ ಓದುವುದರಲ್ಲಿ ತಲ್ಲೀನರಾಗಿಬಿಟ್ಟಿದ್ದರು.
ನಂತರ ನನಗೆ ಫೋನ್ ಮಾಡಿದ ಸಭಾಪತಿಗಳು, ‘ಏನ್ ಮಾಡಿದಿಯಪ್ಪ? ಭೇಷ್. ಪ್ರವಾಸಿ ಪ್ರಪಂಚ ಅದ್ಭುತವಾಗಿದೆ. ನಾನು ಇಂಥದ್ದೊಂದು ಪತ್ರಿಕೆಯನ್ನು ಮಾಡಬಹುದು ಎಂದು ಕನಸು-ಮನಸಿನಲ್ಲೂ ಯೋಚಿಸಿರಲಿಲ್ಲ. ಪತ್ರಿಕೆ ಬಹಳ ಸುಂದರವಾಗಿದೆ. ಕಲ್ಪನೆಯೇ ಚೆಂದವಾಗಿದೆ. ಕನ್ನಡದಲ್ಲಿ ಇಂಥ ಪತ್ರಿಕೆಯಿಲ್ಲ ಬಿಡಪ್ಪ... ಪತ್ರಿಕೆ ಓದಲಾರಂಭಿಸಿದರೆ, ಕೆಳಗಿಡಬೇಕು ಅಂತ ಅನಿಸುವುದೇ ಇಲ್ಲ. ಪೇಪರ್ ಕ್ವಾಲಿಟಿ, ವಿನ್ಯಾಸ ಮತ್ತು ಲೇಖನಗಳೆಲ್ಲ ಭಾಳ ಚೆಂದದ’ ಎಂದು ಹೊರಟ್ಟಿಯವರು ಹೇಳಿದ್ದರು.
ಅದಾದ ಬಳಿಕ, ಅವರು ʼಪ್ರವಾಸಿ ಪ್ರಪಂಚʼದ ಕಟ್ಟಾ ಅಭಿಮಾನಿ. ಶನಿವಾರ ಅವರ ಕೈಗೆ ಪತ್ರಿಕೆ ತಲುಪದಿದ್ದರೆ, ಫೋನ್ ಮಾಡಿ ವಿಚಾರಿಸಿಕೊಳ್ಳುತ್ತಾರೆ. ಪತ್ರಿಕೆ ಕೈಗೆ ಸಿಕ್ಕರೆ, ಪೂರ್ತಿ ಓದಿ ಮುಗಿಸುವ ತನಕ ಕೆಳಗಿಡೊಲ್ಲ. ನಂತರ ಹದಿನೈದು ನಿಮಿಷ ಪತ್ರಿಕೆಯ ಬಗ್ಗೆ ಮಾತು, ವಿಮರ್ಶೆ. ಅನೇಕರಿಗೆ ಗೊತ್ತಿಲ್ಲ, ಹೊರಟ್ಟಿಯವರು voracious reader. ಪ್ರತಿ ದಿನ ಎಲ್ಲ ಪತ್ರಿಕೆಗಳನ್ನು ಎರಡು ಗಂಟೆ ತಪ್ಪದೇ ಓದುತ್ತಾರೆ. ಬಿಡುಗಡೆಯಾದ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಾರೆ. ಅಷ್ಟೇ ಅಲ್ಲ, ಪತ್ರಿಕೆ ಓದಿ ತಪ್ಪದೇ ಫೋನ್ ಮಾಡುತ್ತಾರೆ. ತಮಗೆ ಇಷ್ಟವಾದ, ಆಗದ ವಿಷಯಗಳ ಬಗ್ಗೆ ವಿಮರ್ಶೆ ಮಾಡುತ್ತಾರೆ.
Shashidhara Halady Column: ಪ್ರವಾಸಿ ಪ್ರಪಂಚದಲ್ಲೊಂದು ಸುತ್ತು
ಅವರೊಬ್ಬ ಪಾಂಗಿತ ಓದುಗ!
ಬೆಳಗಿನ ಹೊತ್ತು ಅವರ ಫೋನ್ ಬಂತೆಂದರೆ ಪತ್ರಿಕೆ ಓದಿ ಮುಗಿಸಿದ್ದಾರೆಂದರ್ಥ. ಆ ಹದಿನೈದು ನಿಮಿಷ ಅವರ ಮಾತುಗಳನ್ನು ಕೇಳಿಸಿಕೊಳ್ಳುವುದೇ ಆನಂದ!. ʼಪ್ರವಾಸಿ ಪ್ರಪಂಚʼದ ಬಗ್ಗೆ ತಮ್ಮ ಅಭಿಮಾನದ ಮಾತುಗಳನ್ನು ಹೇಳುವುದಷ್ಟೇ ಅಲ್ಲ, ತಮ್ಮ ಅನಿಸಿಕೆ ಒಂದು ದಾಖಲೆಯಾಗಿರಬೇಕೆಂದು ಹೊರಟ್ಟಿಯವರು ತಮ್ಮ ಅಧಿಕೃತ ಲೆಟರ್ ಹೆಡ್‌ನಲ್ಲಿ ಹಿಂದಿನ ತಿಂಗಳೇ ತಮ್ಮ ಅನಿಸಿಕೆಯನ್ನು ಕಳಿಸಿಕೊಟ್ಟಿದ್ದರು. ಇದು ಅವರ ನೈಜ ಕಳಕಳಿ ಮತ್ತು ಅಭಿಮಾನದ ದ್ಯೋತಕ. ಹೊರಟ್ಟಿ ಅವರಿಗೆ ಧನ್ಯವಾದಗಳು ಎಂದು ವಿಶ್ವೇಶ್ವರ ಭಟ್ ತಿಳಿಸಿದ್ದಾರೆ.