ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICEA: ಏರ್ ಕಂಡೀಷನರ್ ಗಳು ಮತ್ತು ದೂರದರ್ಶನಗಳ ಮೇಲಿನ ಜಿಎಸ್‍ಟಿ ಸಕಾರಣವಾಗಿರಲಿ

ಏರ್ ಕಂಡೀಷನರ್ ಗಳು ಮತ್ತು ದೂರದರ್ಶನಗಳ ಮೇಲಿನ ಜಿಎಸ್‍ಟಿ ಸಕಾರಣವಾಗಿರಲಿ - ಪ್ರಮಾಣ ವನ್ನು ಅನಾವರಣಗೊಳಿಸಲು, ಕೈಗೆಟುಕುವ ದರವನ್ನು ನೀಡಲು ಮತ್ತು ರಫ್ತು ಮತ್ತು 500 ಬಿಲಿಯನ್ ಡಾಲರ್ ಎಲೆಕ್ಟ್ರಾನಿಕ್ಸ್ ದೂರದೃಷ್ಟಿಗೆ ಅನುಗುಣವಾಗಿರಲು 28% ರಿಂದ 18% ಕ್ಕೆ ಇಳಿಸಲು ಐಸಿಇಎ ಕರೆ ನೀಡಿದೆ

ಏರ್ ಕಂಡೀಷನರ್, ದೂರದರ್ಶನಗಳ ಮೇಲಿನ ಜಿಎಸ್‍ಟಿ ಸಕಾರಣವಾಗಿರಲಿ

-

Ashok Nayak Ashok Nayak Sep 1, 2025 8:27 PM

ಬೆಂಗಳೂರು: ಏರ್ ಕಂಡೀಷನರ್ ಮತ್ತು ದೂರದರ್ಶನಗಳ ಮೇಲಿನ ಜಿಎಸ್‍ಟಿಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಸುವಂತೆ ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ತಯಾರಕರನ್ನು ಪ್ರತಿನಿಧಿಸುವ ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ-ICEA) ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ದೇಶೀಯ ಬೇಡಿಕೆ, ಕೈಗೆಟುಕುವಿಕೆ ಮತ್ತು ಜಾಗತಿಕ ಸ್ಪರ್ಧಾ ತ್ಮಕತೆಯನ್ನು ಉತ್ತೇಜಿಸಲು ಈ ವರ್ಗಗಳಲ್ಲಿ ಐಸಿಇಎ ಜಿಎಸ್‍ಟಿ ತಿದ್ದುಪಡಿ ಅತ್ಯಗತ್ಯ ವಾಗಿದೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಸಕಾರಣವಾಗಿ ದರ ವಿಧಿಸುವಿಕೆ ಮತ್ತು ದೈನಂದಿನ ವಸ್ತುಗಳ ಪರಿಹಾರದ ಮೇಲೆ ಒತ್ತು ನೀಡುವ ಮುಂದಿನ ಪೀಳಿಗೆಯ ಜಿಎಸ್‍ಟಿ ಸುಧಾರಣೆಗಳನ್ನು ಘೋಷಿಸಿದರು. ಈ ಪ್ರಕ್ರಿಯೆ ಯಲ್ಲಿ ಎಸಿ ಮತ್ತು ಟೆಲಿವಿಷನ್ ಗಳನ್ನು ಅಗತ್ಯವಾದ ಬಾಳಿಕೆ ಬರುವ ವಸ್ತುಗಳಾಗಿ (ಸಾಮಾನ್ಯ ಮಾನವ ವಸ್ತುಗಳು) ಪರಿಗಣಿಸಬೇಕೆಂದು ಐಸಿಇಎ ಒತ್ತಾಯಿಸಿದೆ.

ಇದನ್ನೂ ಓದಿ: Egg Health Benefits: ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್‌ ದೊರೆಯುತ್ತದೆ?

"ಹವಾನಿಯಂತ್ರಣಗಳು ಮತ್ತು ದೂರದರ್ಶನಗಳು ಈಗ ಐಷಾರಾಮಿ ವಸ್ತುಗಳಲ್ಲ, ಅವು ಆಧುನಿಕ ಜೀವನದ ಗುಣಮಟ್ಟವನ್ನು ವ್ಯಾಖ್ಯಾನಿಸುವ ಅಗತ್ಯ ಗ್ರಾಹಕ ಬಾಳಿಕೆ ಬರುವ ವಸ್ತುಗಳಾಗಿವೆ. ವೈಭವೋಪೇತ ಸರಕುಗಳ ಜೊತೆಗೆ ಅವುಗಳನ್ನು ಅತ್ಯುನ್ನತ ಜಿಎಸ್‍ಟಿ ಶ್ರೇಣಿಯಲ್ಲಿ ಇಡುವುದು ಅಸಮಂಜಸವಾಗಿದೆ ಮತ್ತು ಪ್ರತಿಕೂಲ ಪರಿಣಾಮ ಬೀರುತ್ತದೆ. ಜಿಎಸ್‍ಟಿಯನ್ನು ಶೇ.18ಕ್ಕೆ ಸಕಾರಣವಾಗಿ ಇಡುವುದು ಅವುಗಳನ್ನು ಲಕ್ಷಾಂತರ ಜನರಿಗೆ ಕೈಗೆಟುಕುವಂತೆ ಮಾಡುತ್ತದೆ, ದೇಶೀಯ ಬೇಡಿಕೆಯನ್ನು ವಿಸ್ತರಿಸುತ್ತದೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗೆ ಅಡಿಪಾಯವನ್ನು ಸೃಷ್ಟಿಸುತ್ತದೆ ಎಂದು ಐಸಿಇಎ ಅಧ್ಯಕ್ಷರಾದ ಪಂಕಜ್ ಮೊಹಿಂದ್ರೂ ಹೇಳಿದ್ದಾರೆ.

ತಿದ್ದುಪಡಿ ಏಕೆ ತುರ್ತು ಅಗತ್ಯವಾಗಿದೆ

  • ಏರ್ ಕಂಡೀಷನರ್‌ಗಳು: ಭಾರತದ ಜನಸಂಖ್ಯೆಗೆ ಹೋಲಿಸಿದರೆ ಎಸಿ ಮಾರಾಟವು ಕೇವಲ ~8% ಆಗಿದ್ದು, ಇದು ಜಾಗತಿಕವಾಗಿ ಅತ್ಯಂತ ಕಡಿಮೆಯಾಗಿದೆ. ಈ ವ್ಯಾಪಕವಾದ ಪೂರೈಕೆಯಿಲ್ಲದ ಬೇಡಿಕೆಯ ಹೊರತಾಗಿಯೂ, ಎಸಿಗಳ ಮೇಲೆ 28% ಜಿಎಸ್‍ಟಿಯನ್ನು ವಿಧಿಸಲಾಗುತ್ತಿದ್ದು - ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಡುಬರುವ 8-15% ಶ್ರೇಣಿಗಿಂತ ಹೆಚ್ಚಾಗಿದೆ. ಇದು ಎಸಿಗಳನ್ನು 8-10% ರಷ್ಟು ದುಬಾರಿಯನ್ನಾಗಿಸಿ, ಅವುಗಳ ಖರೀದಿಯನ್ನು ತಗ್ಗಿಸುತ್ತದೆ. ಜಿಎಸ್‍ಟಿಯನ್ನು 18% ಕ್ಕೆ ಸರಿಪಡಿಸುವುದು ದೇಶೀಯ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತವನ್ನು ಜಾಗತಿಕ ರಫ್ತುಗಳಿಗೆ ಸ್ಪರ್ಧಾತ್ಮಕ ಕೇಂದ್ರವಾಗಿಸುತ್ತದೆ.
  • ದೂರದರ್ಶನಗಳು: 2024 ರಲ್ಲಿ ಭಾರತವು 12.1 ಮಿಲಿಯನ್ ಟಿವಿಗಳನ್ನು ರಫ್ತು ಮಾಡಿದ್ದು, ಸ್ಮಾರ್ಟ್ ಟಿವಿಗಳು ಮಾರಾಟದ 91% ಆಗಿದೆ. ಮನೆಗಳಲ್ಲಿನ ಸರಾಸರಿ ಗಾತ್ರದ ಆದ್ಯತೆಯು 43-50 ಇಂಚುಗಳಿಗೆ ಬದಲಾಗಿದ್ದರೂ ಈ ಗಾತ್ರಗಳಿಗೆ 28% ಜಿಎಸ್‍ಟಿಯ ದಂಡ ವಿಧಿಸಲಾಗುತ್ತದೆ. ಇದು ಕಳ್ಳ ಮಾರುಕಟ್ಟೆಗಳನ್ನು ಉತ್ತೇಜಿಸುತ್ತದೆ, ಭಾರೀ ಪ್ರಮಾಣದ ಉತ್ಪಾದನೆಗೆ ಹೊಡೆತ ನೀಡುತ್ತದೆ ಮತ್ತು ಔಪಚಾರಿಕವಾದ ಟಿವಿ ಖರೀದಿಯನ್ನು ನಿಧಾನಗೊಳಿಸುತ್ತದೆ. ಎಲ್ಲಾ ಟಿವಿಗಳಿಗೆ ಏಕರೂಪದ 18% ದರವು ನೇರವಾಗಿ ಕಳ್ಳ ಮಾರುಕಟ್ಟೆಗಳನ್ನು ನಿಗ್ರಹಿಸುತ್ತದೆ, ಔಪಚಾರಿಕ ಮಾರಾಟವನ್ನು ಹೆಚ್ಚಿಸುತ್ತದೆ ಮತ್ತು ದೇಶೀಯ ಡಿಸ್‍ಪ್ಲೇ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

ರಾಷ್ಟ್ರೀಯ ಆದ್ಯತೆ

ಈ ಉತ್ಪನ್ನಗಳ ಮೇಲಿನ ಜಿಎಸ್‍ಟಿಯನ್ನು ಸರಿಪಡಿಸುವುದು ದ್ವಿಗುಣ ಲಾಭವನ್ನು ನೀಡುತ್ತದೆ: ಇದು ಭಾರತದ ಉತ್ಪಾದನಾ ನೆಲೆಗೆ ನೇರವಾಗಿ ಇಂಬು ನೀಡುತ್ತ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಕೈಗೆಟುಕುವ ಎಸಿಗಳು ಮತ್ತು ಟಿವಿಗಳು ಮನೆಗಳು ಮತ್ತು ಗ್ರಾಮೀಣ ಬಳಕೆ ದಾರರಿಗೆ ಲಭ್ಯತೆಯನ್ನು ಹೆಚ್ಚಿಸುತ್ತವೆ, ಹಾಗೂ ಹೆಚ್ಚುತ್ತಿರುವ ದೇಶೀಯ ಬೇಡಿಕೆಯು ಉತ್ಪಾದನೆ ಯ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ ಸುಧಾರಣಾ ಕಾರ್ಯಸೂಚಿಯತ್ತ ಸಾಗಲು, ಹಣಕಾಸು ವರ್ಷ 31 ರ ವೇಳೆಗೆ 500 ಬಿಲಿಯನ್ ಯುಎಸ್‍ಡಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ದೂರದೃಷ್ಟಿಯನ್ನು ಸಾಧಿಸಲು ಮತ್ತು ಆಧುನಿಕ ಗ್ರಾಹಕ ಉಪಕರಣಗಳಿಗೆ ಸಾರ್ವತ್ರಿಕ ಪ್ರವೇಶದ ಮೂಲಕ ಡಿಜಿಟಲ್ ಇಂಡಿಯಾವನ್ನು ಮುನ್ನಡೆಸಲು ಈ ಹೆಜ್ಜೆ ಮಹತ್ವದ್ದಾಗಿದೆ.

ವಿಶಾಲ ಪರಿಣಾಮ

  • ಕೈಗೆಟುಕುವ ಬೆಲೆ ಮತ್ತು ಸೇರ್ಪಡೆ: ಜಿಎಸ್‍ಟಿಯನ್ನು ಕಡಿಮೆ ಮಾಡುವುದು ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ನೇರ ಪ್ರಯೋಜನ ನೀಡುತ್ತದೆ.
  • ಇತರ ಬಾಳಿಕೆ ಬರುವ ವಸ್ತುಗಳೊಂದಿಗೆ ಸಮಾನತೆ: 18% ತೆರಿಗೆ ವಿಧಿಸಲ್ಪಟ್ಟ ರೆಫ್ರಿಜರೇಟರ್ಗಳು, ವಾಷಿಂಗ್ ಮಷಿನ್‍ಗಳು ಮತ್ತು ಮೈಕ್ರೋವೇವ್‍ಗಳೆಲ್ಲವೂ ಹೋಲಿಸಬಹುದಾದ ಅಗತ್ಯ ವಸ್ತುಗಳಾಗಿವೆ.
  • ಉತ್ಪಾದನೆ ಮತ್ತು ರಫ್ತಿಗೆ ಉತ್ತೇಜನ: ಹೆಚ್ಚಿನ ಬೇಡಿಕೆಯು ಜಾಗತಿಕ ಸ್ಪರ್ಧಾತ್ಮಕತೆಯ ಅಡಿಪಾಯವಾದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ.
  • ಸುಧಾರಣೆಗಳೊಂದಿಗೆ ಹೊಂದಾಣಿಕೆ: ಸಕಾರಣವಾದ ಜಿಎಸ್‍ಟಿ ವಿಧಿಸುವಿಕೆಯು, ಸ್ಲ್ಯಾಬ್ ಕಡಿತ ಮತ್ತು ದೀರ್ಘಕಾಲೀನ ಸುಸ್ಥಿರತೆಯನ್ನು ಬೆಂಬಲಿಸುತ್ತದೆ.

"ಕೈಗೆಟುಕುವ ದರವನ್ನು ಉಳಿಸಿಕೊಳ್ಳಲು, ದೇಶೀಯ ಬೇಡಿಕೆಯನ್ನು ಉತ್ತೇಜಿಸಲು ಮತ್ತು ಭಾರತದ ಎಲೆಕ್ಟ್ರಾನಿಕ್ಸ್ ಕ್ರಾಂತಿಯ ಮುಂದಿನ ಹಂತವನ್ನು ಮುನ್ನಡೆಸಲು ಹವಾನಿಯಂತ್ರಣಗಳು ಮತ್ತು ದೂರದರ್ಶನಗಳಿಗೆ ಸಕಾರಣವಾಗಿ ಜಿಎಸ್‍ಟಿ ವಿಧಿಸುವುದು ಅತ್ಯಗತ್ಯವಾಗಿದೆ. ಬೆಂಬಲಿತ ನೀತಿಗಳು ಮೊಬೈಲ್‍ಗಳನ್ನು ಜಾಗತಿಕ ಯಶಸ್ಸಿನ ಕಥೆಯನ್ನಾಗಿ ಮಾಡಿದಂತೆಯೇ, ಈ ಪ್ರಮುಖ ವಿಭಾಗಗಳಲ್ಲಿ ಜಿಎಸ್‍ಟಿಯನ್ನು ಸರಿಪಡಿಸುವುದು 2031 ರ ಹಣಕಾಸು ವರ್ಷದ ವೇಳೆಗೆ ಭಾರತದ 500 ಬಿಲಿಯನ್ ಡಾಲರ್ ಎಲೆಕ್ಟ್ರಾನಿಕ್ಸ್ ಉತ್ಪಾದನಾ ದೂರದೃಷ್ಟಿಗೆ ಲಂಗರು ಹಾಕುತ್ತದೆ ಎಂದು ಮೊಹಿಂದ್ರೂ ಹೇಳಿದರು.