ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದುಬಾರೆ ದುರಂತದ ಬಳಿಕ ಆನೆ ಶಿಬಿರಗಳಿಗೆ ಹೊಸ ರೂಲ್ಸ್‌; ಪ್ರವಾಸಕ್ಕೆ ತೆರಳುವವರಿಗೆ ಇಲ್ಲಿದೆ ಮಾಹಿತಿ

ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ನಿರ್ವಹಣಾ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಕೇಂದ್ರಗಳಿಗಾಗಿ ಕರ್ನಾಟಕ ಅರಣ್ಯ ಇಲಾಖೆ ಕರ್ನಾಟಕ ಆನೆ ಶಿಬಿರ ಸುರಕ್ಷತಾ ನಿಯಮಾವಳಿ (Karnataka Elephant Camp Safety Protocol) ಜಾರಿಗೊಳಿಸಿದೆ. ಜಾರಿಯಾದ ನಿಯಮದ ಪ್ರಕಾರ ಪ್ರವಾಸಿಗರು ಇನ್ನು ಮುಂದೆ ಆನೆಗಳನ್ನು ವೀಕ್ಷಿಸಲು ಕನಿಷ್ಠ 30 ಅಡಿ ಅಂತರ ಕಾಯ್ದುಕೊಳ್ಳಬೇಕು.

ದುಬಾರೆ ದುರಂತ ಬಳಿಕ ಆನೆ ಶಿಬಿರಗಳಿಗೆ ಹೊಸ ರೂಲ್ಸ್‌ ಜಾರಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 17, 2026 12:15 PM

ಬೆಂಗಳೂರು: ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ನಿರ್ವಹಣಾ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಕೇಂದ್ರಗಳಿಗಾಗಿ ಕರ್ನಾಟಕ ಅರಣ್ಯ ಇಲಾಖೆ ಕರ್ನಾಟಕ ಆನೆ ಶಿಬಿರ ಸುರಕ್ಷತಾ ನಿಯಮಾವಳಿ (Karnataka Elephant Camp Safety Protocol) ಜಾರಿಗೊಳಿಸಿದೆ. ಕೊಡಗಿನ ದುಬಾರೆ ಆನೆ (Dubare Elephant Camp) ಶಿಬಿರದಲ್ಲಿ ತಮಿಳುನಾಡಿನ ಪ್ರವಾಸಿಗರೊಬ್ಬರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸುರಕ್ಷತೆಯನ್ನು ಬಲಪಡಿಸಲು ಈ ಕ್ರಮ ಕೈಗೊಂಡಿದೆ.

ಜಾರಿಯಾದ ನಿಯಮದ ಪ್ರಕಾರ ಪ್ರವಾಸಿಗರು ಇನ್ನು ಮುಂದೆ ಆನೆಗಳನ್ನು ವೀಕ್ಷಿಸಲು ಕನಿಷ್ಠ 30 ಅಡಿ ಅಂತರ ಕಾಯ್ದುಕೊಳ್ಳಬೇಕು. ಆನೆಗಳಿಗೆ ಸ್ನಾನ ಮಾಡಿಸುವುದು, ಮುಟ್ಟುವುದು ಅಥವಾ ಆಹಾರ ನೀಡುವುದು ಸಂಪೂರ್ಣ ನಿಷೇಧವಾಗಿರಲಿದೆ. ಗ್ರೀನ್ ಝೋನ್ (ವೀಕ್ಷಣಾ ಪ್ರದೇಶ) ಅಲ್ಲಿ ನಿಂತು ಆನೆಗಳನ್ನು ವೀಕ್ಷಿಸಬೇಕು. ಪ್ರವಾಸಿಗರ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಿ ದಾಖಲಿಸಲಾಗುತ್ತದೆ.ಸಾರ್ವಜನಿಕ ವೀಕ್ಷಣೆಗಾಗಿ ಯಾವುದೇ ಶಿಬಿರದಲ್ಲಿ 10ಕ್ಕಿಂತ ಹೆಚ್ಚು ಆನೆಗಳನ್ನು ಪ್ರದರ್ಶಿಸಲು ಅವಕಾಶ ಇರುವುದಿಲ್ಲ.

ಸಾರ್ವಜನಿಕ ವೀಕ್ಷಣೆಗೆ ಒಂದು ಶಿಬಿರದಲ್ಲಿ ಗರಿಷ್ಠ 10 ಆನೆಗಳನ್ನು ಮಾತ್ರ ಇರಿಸಲು ಅವಕಾಶ ನೀಡಲಾಗಿದೆ.ಪ್ರೋಟೋಕಾಲ್‌ಗೆ ಜೂನ್ 11ರಂದು ಸಹಿ ಹಾಕಲಾಗಿದ್ದು, ಶಿಬಿರಗಳಿಗೆ ನಿಯಮಗಳನ್ನು ಅನುಸರಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಶಿಬಿರದ ಸಾಮರ್ಥ್ಯ, ಆನೆಗಳ ಸಂಖ್ಯೆ ಮತ್ತು ಪ್ರವಾಸಿಗರ ದಟ್ಟಣೆಯನ್ನು ಆಧರಿಸಿ ಪ್ರವಾಸಿಗರ ಬ್ಯಾಚ್‌ಗಳು ಹಾಗೂ ವೀಕ್ಷಣಾ ಸಮಯವನ್ನು ನಿಗದಿಪಡಿಸಲಾಗುತ್ತದೆ. ಒಂದು ವೇಳೆ ಹಸಿರು ವಲಯದಲ್ಲಿ ಗರಿಷ್ಠ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಅವಕಾಶ ಇರಲಿದೆ. ಆನೆಗಳನ್ನು ವೀಕ್ಷಿಸಲು 20 ರಿಂದ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿದ್ದು, ಅದಕ್ಕೂ ಮೊದಲು 10 ನಿಮಿಷಗಳ ಬ್ರೀಫಿಂಗ್ ಸಮಯ ಹಾಗೂ 10 ನಿಮಿಷಗಳ ಬಫರ್ ಸಮಯ ಇರಲಿದೆ.

ದುಬಾರೆ ಆನೆ ಶಿಬಿರ ದುರಂತ; ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ನಿಷೇಧ

ಹೊಸ ನಿಯಮಗಳ ಪ್ರಕಾರ ಮದಾವಸ್ಥೆಯಲ್ಲಿರುವ ಗಾಯಗೊಂಡ, ಅಸ್ವಸ್ಥ, ಒತ್ತಡದಲ್ಲಿರುವ, ಹೊಸದಾಗಿ ಸೆರೆ ಹಿಡಿದ, ಇತ್ತೀಚೆಗೆ ಕಾಳಗಕ್ಕಿಳಿದ ಅಥವಾ ನಿಯಂತ್ರಣಕ್ಕೆ ಬಾರದ ಆನೆಗಳನ್ನು ಸಾರ್ವಜನಿಕರ ಮುಂದೆ ತರುವಂತಿಲ್ಲ. ಅದೇ ರೀತಿ ಆರು ತಿಂಗಳೊಳಗಿನ ಮರಿಯೊಂದಿಗೆ ಇರುವ ತಾಯಿ ಆನೆಗಳನ್ನೂ ಸಾರ್ವಜನಿಕ ವೀಕ್ಷಣೆಗೆ ಒಳಪಡಿಸಬಾರದು ಎಂದು ಸೂಚಿಸಲಾಗಿದೆ. ಆನೆಗಳ ನಡವಳಿಕೆ ಹಾಗೂ ದೈನಂದಿನ ಕಾರ್ಯಾಚರಣೆಯ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.