ಗ್ರೋವರ್ ಝಾಂಪಾ ವೈನ್ ವ್ಯೀನರ್ಡ್ಸ್ ನಿಂದ ಹೊಸ ವೈನ್ – ಗ್ರೋವರ್ ಎಸೆನ್ಸ್ ಡಿ ಕೇಬರ್ನೆಟ್ ಸವಿಗ್ನೊನ್
ಹೊಸ ವೈನ್ ಕೆಬರ್ನೆಟ್ ಸವಿಗೊನ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 36 ತಿಂಗಳ ಕಾಲ ಓಕ್ ಬ್ಯಾರಲಿನಲ್ಲಿಟ್ಟು ಬಾಟಲಿಗೆ ತುಂಬಲಾಗುತ್ತದೆ. ಈ ವೈನ್ ಅನ್ನು ಜಗತ್ತಿಗೆ ನೀಡಲು ನಾವು ಉತ್ಸುಕರಾಗಿದ್ದೇವೆ ಎಂದರು
ಬೆಂಗಳೂರು: ಕೇಬರ್ನೆಟ್ ಸವಿಗ್ನೊನ್ ವೈನ್ ಅನ್ನು ನಂದಿ ಬೆಟ್ಟದ ಸುತ್ತಲು ಬೆಳೆದ ಕೇಬರ್ನೆಟ್ ಸವಿಗ್ನೊನ್ ದ್ರಾಕ್ಷಿ ತಳಿಯಿಂದ ಬೆಳೆಯಲಾಗಿದೆ ಎಂದು ಗ್ರೋವರ್ ಝಾಂಪಾ ವೈನ್ ವ್ಯೀನರ್ಡ್ಸ್ನ ಸಿಒಒ ಶ್ರೀ ಸುಮಿತ್ ಜೈಸ್ವಾಲ್ ಹೇಳಿದರು.
ಹೊಸ ವೈನ್ ಕೆಬರ್ನೆಟ್ ಸವಿಗೊನ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 36 ತಿಂಗಳ ಕಾಲ ಓಕ್ ಬ್ಯಾರಲಿನಲ್ಲಿಟ್ಟು ಬಾಟಲಿಗೆ ತುಂಬಲಾಗುತ್ತದೆ. ಈ ವೈನ್ ಅನ್ನು ಜಗತ್ತಿಗೆ ನೀಡಲು ನಾವು ಉತ್ಸುಕರಾಗಿದ್ದೇವೆ ಎಂದರು.
ಕೇಬರ್ನೆಟ್ ಸವಿಗೊನ್ ಕೊಕೊವ ಮತ್ತು ಹಲವು ಹಣ್ಣುಗಳ ಪರಿಮಳವನ್ನು ನೀಡುವುದರ ಜೊತೆಗೆ ವಿಶಿಷ್ಟ ಅನುಭವ ನೀಡುತ್ತದೆ ಎಂದರು.
ಮಾಸ್ಟರ್‌ಕ್ಲಾಸ್ ಮತ್ತು ಸುಯೆರೆನಲ್ಲಿ ಆನಂದ್ ನಿಚಾನಿ, ಚೇತನ್ ಕಮಾನಿ ಮತ್ತು ರೂಬಿ ಚಕ್ರ ವರ್ತಿಯಂತಹ ವೈನ್ ಸಂಗ್ರಹಕಾರರು ಭಾಗವಹಿಸಿದ್ದರು. ಸದ್ಯಕ್ಕೆ ಈ ವೈನ್ ಸಿಲರ್ ಡೋರ್ನಲ್ಲಿ ಲಭ್ಯವಿದ್ದು ಇದರ ಬೆಲೆ ರೂ. 5000/-ಆಗಿದೆ.
ಸದ್ಯಕ್ಕೆ ಸಿಗ್ನೆಟ್, ವೆಂಡಂಗೆಸ್ ಟಾರ್ಡಿವ್ಸ್, ಚೆನೆ, ಔರಿಗಾ, ವಿಜಯ್ ಅಮೃತರಾಜ್, ಝಂಪಾ ಸೋರೀ, ಲಾ ರಿಸರ್ವ್, ಆರ್ಟ್ ಕಲೆಕ್ಷನ್, ಒನ್ ಟ್ರೀ ಹಿಲ್ (ಒಟಿಎಚ್) ಮತ್ತು ಸಂತೆ ಸೇರಿದಂತೆ ಹತ್ತು ಬಗೆಯ ವೈನ್‌ಗಳನ್ನು ಈ ಕಂಪನಿಯು ಒಳಗೊಂಡಿದೆ.
ವೈನ್ ಕಂಪನಿಯು ಹತ್ತು ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅವಾರ್ಡ್‌ಗಳನ್ನು ಹೊಂದಿದ್ದು ಭಾರತೀಯರಿಗೆ ವಿಶಿಷ್ಟವಾದ ವೈನ್‌ಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ.
ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಹೊಂದಿರುವ ಈ ಕಂಪನಿಯು ಭಾರತವನ್ನೂ ಸೇರಿ ದಂತೆ ಹದಿನೆಂಠು ದೇಶಗಳಿಗೆ ವೈನ್ ಅನ್ನು ರಫ್ತು ಮಾಡುತ್ತದೆ. ಹೆಚ್ಚಾಗಿ ಈ ವೈನ್‌ಗೆ ಬಳಸ ಲಾಗುವ ದ್ರಾಕ್ಷಿ ಹಣ್ಣುಗಳನ್ನು ನಂದಿಬೆಟ್ಟದ ತಪ್ಪಲಿನಲ್ಲಿ ಹಾಗೂ ನಾಶಿಕ್ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
ಈ ವೈನ್‌ನ ಜೊತೆ ಖಾರವಾದ ಮಂಚೂರಿಯನ್‌ಗಳು, ಟಿಕ್ಕಾಗಳು ಹೆಚ್ಚು ಸೂಕ್ತವಾಗಿರುತ್ತದೆ. ಕೇವಲ ಖಾರ ಮಾತ್ರವಲ್ಲದೆ ಸಿಹಿಯನ್ನು ಇಷ್ಟ ಪಡುವವರು ಇದರ ಜತೆಗೆ ಚಾಕೋಲೇಟ್‌ಗಳನ್ನೂ ಸವಿಯಬಹುದು.