ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಐಡಿ ವಶದಲ್ಲಿರುವ ಒಎಂಆರ್ ಶೀಟ್‌ಗಳೇ ಇ.ಡಿ ತನಿಖೆಗೆ ಆಧಾರ: ಸಾಹುಕಾರ್‌ಗೆ ಬಂಧನ ಭೀತಿ?

ಹಗರಣದ ಹಣಕಾಸಿನ ವ್ಯವಹಾರಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ. ಇದೀಗ ಮತ್ತೊಮ್ಮೆ ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಿಐಡಿ ವಶದಲ್ಲಿ ಒಎಂಆರ್ ಶೀಟುಗಳು: ತನಿಖೆಯ ವೇಳೆ ಇ.ಡಿ. ಅಧಿಕಾರಿಗಳು ಪಶು ವೈದ್ಯಾಧಿಕಾರಿಗಳ ನೇಮಕಾತಿ ಯ ಸುಮಾರು 400 ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಕೇಳಿದ್ದಾರೆ. ಆದರೆ, ಈ ಶೀಟ್‌ಗಳನ್ನು ಈಗಾಗಲೇ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಕೆಪಿಎಸ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ

ಸಾಹುಕಾರ್‌ಗೆ ಬಂಧನ ಭೀತಿ?

-

Profile
Ashok Nayak Aug 31, 2026 7:50 AM

ಐಎಎಸ್ ಅಧಿಕಾರಿ ಜ್ಞಾನೇಂದ್ರ ಬಂಧನದ ಬೆನ್ನಲ್ಲೇ ಹೆಚ್ಚಿದ ಆತಂಕ

ಬೆಂಗಳೂರು: ಕೆಪಿಎಸ್ʼಸಿ ಭ್ರಷ್ಟಾಚಾರ ಉರುಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶನಿವಾರ ರಾತ್ರಿ ಜ್ಞಾನೇಂದ್ರ ಕುಮಾರ್ ಬಂಧನವಾದ ಬೆನ್ನಲ್ಲೇ ಕೆಪಿಸಿಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸೇರಿ ಆಯೋಗದ ಹಲವು ಅಧಿಕಾರಿಗಳಿಗೆ ಬಂಧನ ಭೀತಿ ಶುರುವಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾ ಗಲೇ ಸಿಐಡಿ ಮತ್ತು ಜಾರಿ ನಿರ್ದೇಶನಾ ಲಯದ ತನಿಖೆ ಎದುರಿಸುತ್ತಿದ್ದು, ಬಂಧನ ಭೀತಿ ಎದುರಾಗಿದೆ.

27ರಂದು ಸಿಐಡಿ ಅಧಿಕಾರಿಗಳು ಶಿವಶಂಕರಪ್ಪ ಸಾಹುಕಾರ್ ಅವರನ್ನು ಸುಮಾರು ಮೂರು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ಸಿಐಡಿ ಕಸ್ಟಡಿಗೆ ನೀಡಲಾಗಿದೆ. ತನಿಖೆ ವೇಳೆ ಪ್ರಕರಣ ದಲ್ಲಿ ಶಿವಶಂಕರಪ್ಪ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಈ ಬೃಹತ್ ನೇಮಕಾತಿ ಹಗರಣಕ್ಕೆ ಸಂಬಂಽಸಿದಂತೆ ಇತ್ತೀಚೆಗೆ ಇ.ಡಿ ಅಧಿಕಾರಿಗಳು ಬೆಂಗಳೂರಿ ನಲ್ಲಿರುವ ಕೆಪಿಎಸ್‌ಸಿ ಪ್ರಧಾನ ಕಚೇರಿ ಹಾಗೂ ಸಾಹುಕಾರ್ ಅವರ ನಿವಾಸ ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ಇದನ್ನೂ ಓದಿ: KPSC: ಒಎಂಆರ್ ಶೀಟ್ ಸ್ಕ್ಯಾನ್ ಮಾಡಿದ್ದ ಡಿಸ್ಕೇ ಇಲ್ಲ, ಕೇಂದ್ರ ಕಚೇರಿಯಲ್ಲೇ ಭಾನಗಡಿ ಪತ್ತೆ

ಹಗರಣದ ಹಣಕಾಸಿನ ವ್ಯವಹಾರಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ. ಇದೀಗ ಮತ್ತೊಮ್ಮೆ ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಿಐಡಿ ವಶದಲ್ಲಿ ಒಎಂಆರ್ ಶೀಟುಗಳು: ತನಿಖೆಯ ವೇಳೆ ಇ.ಡಿ. ಅಧಿಕಾರಿಗಳು ಪಶು ವೈದ್ಯಾಧಿಕಾರಿಗಳ ನೇಮಕಾತಿ ಯ ಸುಮಾರು 400 ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಕೇಳಿದ್ದಾರೆ. ಆದರೆ, ಈ ಶೀಟ್‌ಗಳನ್ನು ಈಗಾಗಲೇ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಕೆಪಿಎಸ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಸಿಐಡಿ ಮತ್ತು ಇ.ಡಿ. ನಡುವಿನ ಸಮನ್ವಯದ ಮೂಲಕ ಹಗರಣದ ಆಳವನ್ನು ಅಗೆಯಲು ಅಧಿಕಾರಿಗಳು ಸಜ್ಜಾಗಿದ್ದಾರೆ.

ಅಕ್ರಮಕ್ಕೆ ಕಾರಣವಾದ ಸಾಫ್ಟ್‌ʼವೇರ್, ಅಂಕಗಳ ಬದಲಾವಣೆ ಮತ್ತು ಮಧ್ಯವರ್ತಿಗಳ ಪಾತ್ರದ ಬಗ್ಗೆ ಸಿಐಡಿ ಸಂಗ್ರಹಿಸಿರುವ ಪ್ರಾಥಮಿಕ ವರದಿಯನ್ನು ಇ.ಡಿ. ತನ್ನ ಅಕ್ರಮ ಹಣ ವರ್ಗಾವಣೆ ತನಿಖೆಗೆ ಆಧಾರವಾಗಿಟ್ಟುಕೊಳ್ಳಲಿದೆ.

ಪ್ರಕರಣದ ಹಿನ್ನೆಲೆ

ಪಶು ವೈದ್ಯಾಧಿಕಾರಿ ಡಾ.ಮಂಜುನಾಥ್ ಅವರು 2026ರ ಜು.25ರಂದು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೆಪಿಎಸ್‌ಸಿ ನಡೆಸಿರುವ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ 2026ರ ಜು.17ರಂದು ಪ್ರಕಟವಾಗಿದೆ. ಅದರಲ್ಲಿ ಉನ್ನತ ಶ್ರೇಣಿ ಪಡೆದಿರುವ ಹಲವು ಅಭ್ಯರ್ಥಿಗಳು ಕೆಪಿಎಸ್‌ಸಿಯ ಹಾಲಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಯ ಸಂಬಂಧಿಕರಾಗಿದ್ದಾರೆ. ಅವರು ಪರೀಕ್ಷೆ ನಡೆಯುವ ಎರಡು ದಿನ ಮುನ್ನ ಫೋನ್‌ ಗಳನ್ನು ಸ್ವಿಚ್ ಆಫ್ ಮಾಡಿದ್ದರು. ಅವರನ್ನು ರೆಸಾರ್ಟ್‌ಗೆ ಕರೆದೊಯ್ದು ಪ್ರಶ್ನೆಗಳನ್ನು ನೀಡಿ ತರಬೇತಿ ನೀಡಲಾಗಿದೆ. ಈ ಹಗರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕೋರಿದ್ದರು. ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ವಹಿಸಿತ್ತು.

ಜ್ಞಾನೇಂದ್ರಗೆ ನ್ಯಾಯಾಂಗ ಬಂಧನ

ಕೆಪಿಎಸ್‌ಸಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪಶು ವೈದ್ಯಕೀಯ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಕೆಪಿಎಸ್‌ಸಿಯಲ್ಲಿ ಪರೀಕ್ಷಾ ಕಂಟ್ರೋಲರ್ ಆಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ಸಿಐಡಿ ಪೊಲೀಸರು ಶನಿವಾರ ಬಂಧಿಸಿ, ಭಾನುವಾರ ನಾಲ್ಕು ಗಂಟೆಗೆ ಕೋರಮಂಗಲದ ಎನ್‌ಜಿವಿಯಲ್ಲಿರುವ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದರು.

1ನೇ ಎಸಿಜೆಎಂ ನ್ಯಾಯಾಧೀಶ ಮಂಜುನಾಥ್ ಅವರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಮಾಡಿದರು. ಸಿಐಡಿ ಪೊಲೀಸರು ಕೋರ್ಟ್ ಆದೇಶದಂತೆ ಆರೋಪಿ ಜ್ಞಾನೇಂದ್ರರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದು, ಸೋಮವಾರ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಕಸ್ಟಡಿಗೆ ಪಡೆಯಲು ತಯಾರಿ ಮಾಡಿಕೊಂಡಿದ್ದಾರೆ. ಈ ನಡುವೆ ಆರೋಪಿ ಜ್ಞಾನೇಂದ್ರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

400 ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ

ಉನ್ನತ ಶ್ರೇಣಿ ಪಡೆದ ಹಲವು ಅಭ್ಯರ್ಥಿಗಳು ಕೆಪಿಎಸ್‌ಸಿ ಅಧಿಕಾರಿಗಳ ಸಂಬಂಧಿಕರು

ಅಭ್ಯರ್ಥಿಗಳಿಂದ 70-80 ಲಕ್ಷದವರೆಗೆ ಲಂಚಕ್ಕೆ ಬೇಡಿಕೆ, ಒಎಂಆರ್ ಶೀಟ್ ತಿದ್ದುಪಡಿ

image

ಐಎಎಸ್ ಅಧಿಕಾರಿ ಜ್ಞಾನೇಂದ್ರ ದಿಲ್ಲಿಗೆ ಹೋಗಿದ್ದು ಹೇಗೆ? ಅಲ್ಲಿ ಯಾವ ಮಹಿಳೆ ಯೊಂದಿಗೆ ಗಲಾಟೆ ಮಾಡಿಕೊಂಡರು? ಕೊನೆಗೆ ಚೆನ್ನೈಗೆ ಬಿಟ್ಟಿದ್ದು ಯಾರು? ಅಲ್ಲಿಂದ ಬಂದವರನ್ನು 3 ದಿನ ದೇವನಹಳ್ಳಿ ಬಳಿ ರೆಸಾರ್ಟ್‌ನಲ್ಲಿಟ್ಟಿದ್ದು ಯಾರು? ಎಂಬುದನ್ನು ಗೃಹ ಸಚಿವರು ಹೇಳಬೇಕು.

-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
image

ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರನ್ನು ಕೆಪಿಎಸ್‌ಸಿಗೆ ನೇಮಿಸಿದ್ದು ಯಾರು? ಇಂಥವರನ್ನು ನೇಮಕ ಮಾಡಿದ್ದೆ ಬಿಜೆಪಿ ನಾಯಕರು. ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ 20 ಕೋಟಿ ಲಂಚ ಹಗರಣದಲ್ಲಿ ಸ್ವಂತ ತಂದೆಯನ್ನೇ ಜೈಲಿಗೆ ಕಳುಹಿಸಿದರು. ಇವರು ನಮಗೆ ನೈತಿಕತೆ ಪಾಠ ಹೇಳು ತ್ತಾರಾ?

-ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ