ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Car Accident: ಸಾವಿಗೆ ಹೋಗಿ ಬರುತ್ತಿದ್ದ ವ್ಯಕ್ತಿಗೆ ಆಕ್ಸಿಡೆಂಟ್‌, ಪತ್ನಿಯ ಎದುರೇ ಮರಣ

ಬೆಂಗಳೂರು- ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಲಾಟ್‌ನಲ್ಲಿ ದುರಂತ ಸಂಭವಿಸಿದೆ. ಪಾರ್ಕಿಂಗ್ ಲಾಟ್ ಮೇಲ್ವಿಚಾರಕ ಕಾರು ರಿವರ್ಸ್ ತೆಗೆಯುವಾಗ ಅಲ್ಲೇ ನಿಲ್ಲಿಸಿದ ಬ್ಲಡ್ ಬ್ಯಾಂಕ್ ಬಸ್ ಬಳಿ ಶಾಮ್ ದೊರೆ ನಿಂತಿದ್ದರು. ಕಾರು ಹಾಗೂ ಬಸ್ಸಿನ ನಡುವೆ ಸಿಲುಕಿ ಶ್ಯಾಮ್‌ ಅಪ್ಪಚ್ಚಿಯಾಗಿದ್ದಾರೆ.

ಸಾವಿಗೆ ಹೋಗಿ ಬರುತ್ತಿದ್ದ ವ್ಯಕ್ತಿಗೆ ಆಕ್ಸಿಡೆಂಟ್‌, ಪತ್ನಿಯ ಎದುರೇ ಮರಣ

ಮೃತ ಶಾಮ್‌ ದೊರೆ -

ಹರೀಶ್‌ ಕೇರ
ಹರೀಶ್‌ ಕೇರ Apr 12, 2026 12:57 PM

ಬೆಂಗಳೂರು, ಏ.12 : ಬೆಂಗಳೂರಲ್ಲಿ (bengaluru) ಘೋರ ದುರಂತವೊಂದು ಸಂಭವಿಸಿದೆ. ಬಂಧುಗಳೊಬ್ಬರ ಉತ್ತರಕ್ರಿಯೆಗೆ ಹೋಗಿ ಹಿಂದಿರುಗುತ್ತಿದ್ದ ವ್ಯಕ್ತಿ ಬಸ್‌ ನಿಲ್ದಾಣದಲ್ಲಿ ಅಪಘಾತಕ್ಕೆ (car accident) ತುತ್ತಾಗಿದ್ದು, ಪತ್ನಿಯ ಕಣ್ಣೆದುರೇ ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರು-ಮೈಸೂರು ಸ್ಯಾಟಲೈಟ್ ಬಸ್‌ ನಿಲ್ದಾಣದಲ್ಲಿ (mysore road satelite bus stand) ಈ ಘಟನೆ ಸಂಭವಿಸಿದೆ.

ಮೃತರನ್ನು ಶ್ಯಾಮ್ ದೊರೆ (45) ಎಂದು ಗುರುತಿಸಲಾಗಿದೆ. ಇವರು ತಮಿಳುನಾಡಿಗೆ ಬಂಧುಗಳ ಸಾವಿಗೆ ಹೋಗಿ ಹಿಂದಿರುಗುತ್ತಿದ್ದರು. ಪತ್ನಿ ಜಯಶ್ರೀ ಜೊತೆಗಿದ್ದರು. ಬೆಂಗಳೂರು- ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಲಾಟ್‌ನಲ್ಲಿ ದುರಂತ ಸಂಭವಿಸಿದೆ. ಪಾರ್ಕಿಂಗ್ ಲಾಟ್ ಮೇಲ್ವಿಚಾರಕ ಕಾರು ರಿವರ್ಸ್ ತೆಗೆಯುವಾಗ ಅಲ್ಲೇ ನಿಲ್ಲಿಸಿದ ಬ್ಲಡ್ ಬ್ಯಾಂಕ್ ಬಸ್ ಬಳಿ ಶಾಮ್ ದೊರೆ ನಿಂತಿದ್ದರು. ಕಾರು ಹಾಗೂ ಬಸ್ಸಿನ ನಡುವೆ ಸಿಲುಕಿ ಶ್ಯಾಮ್‌ ಅಪ್ಪಚ್ಚಿಯಾಗಿದ್ದಾರೆ.

ಮೃತರು ಸುಂಕದಕಟ್ಟೆಯ ಸಿದ್ಧಾರ್ಥ ನಗರ ನಿವಾಸಿ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶವ ಸ್ಥಳಾಂತರಿಸಲಾಗಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hippopotamus: ಪಶುವೈದ್ಯೆ ಸಾವಿಗೆ ಕಾರಣವಾದ ತಾವರೆಕೊಪ್ಪದ ನೀರಾನೆ ಮರಿ ಗರ್ಭದಲ್ಲೇ ಸಾವು!