ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಿ.ಕೆ ಶಿವಕುಮಾರ್‌ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ; ಇಲ್ಲಿದೆ ನೋಡಿ ವಿವರ

Karnataka Cabinet Ministers List: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದ ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಆಗಿದೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಯಾರ್ಯಾರಿಗೆ ಯಾವ ಖಾತೆ ನೀಡಲಾಗಿದೆ ಎನ್ನುವ ಡಿಟೇಲ್ಸ್‌ ಇಲ್ಲಿದೆ ನೋಡಿ.

ಡಿ.ಕೆ ಶಿವಕುಮಾರ್‌ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ; ಇಲ್ಲಿದೆ ನೋಡಿ ವಿವರ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 12, 2026 11:09 AM

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K Shivakumar) ನೇತೃತ್ವದ ಸಂಪುಟದ ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಆಗಿದೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಖಾತೆ ಹಂಚಿಕೆಗಾಗಿ ಸಚಿವ ಆಕಾಂಕ್ಷಿಗಳು ಹಾಗೂ ಹಿರಿಯ ನಾಯಕರು ನಡೆಸುತ್ತಿದ್ದ ಕಸರತ್ತು, ದೆಹಲಿ ಮಟ್ಟದ ಸಭೆಗಳು ಹಾಗೂ (Karnataka Cabinet Ministers List) ಮುಖ್ಯಮಂತ್ರಿಗಳ ಜೊತೆಗಿನ ಸುದೀರ್ಘ ಚರ್ಚೆಗಳ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಯಾರ್ಯಾರಿಗೆ ಯಾವ ಖಾತೆ ನೀಡಲಾಗಿದೆ ಎನ್ನುವ ಡಿಟೇಲ್ಸ್‌ ಇಲ್ಲಿದೆ ನೋಡಿ.

  1. ಎಚ್.ಸಿ. ಬಾಲಕೃಷ್ಣ – ಸಣ್ಣ ನೀರಾವರಿ ಇಲಾಖೆ
  2. ಕೆ. ಎಚ್. ಮುನಿಯಪ್ಪ – ಸಾಮಾಜಿಕ ಕಲ್ಯಾಣ ಇಲಾಖೆ
  3. ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
  4. ಚಲುವರಾಯಸ್ವಾಮಿ – ಕೃಷಿ ಇಲಾಖೆ
  5. ಬಸವಂತಪ್ಪ – ಬಂದರು ಮತ್ತು ಮೀನುಗಾರಿಕೆ ಇಲಾಖೆ
  6. ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ ಇಲಾಖೆ
  7. ಜಮೀರ್ ಅಹ್ಮದ್ ಖಾನ್ – ವಸತಿ ಇಲಾಖೆ
  8. ಯು. ಟಿ. ಖಾದರ್ – ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್ ಇಲಾಖೆ
  9. ರಿಜ್ವಾನ್‌ ಅರ್ಷದ್ - ಆಹಾರ ಇಲಾಖೆ
  10. ಲಕ್ಷ್ಮಣ್ ಸವದಿ – ಸಹಕಾರ ಇಲಾಖೆ
  11. ಡಾ. ಅಜಯ್ ಸಿಂಗ್ – ಅರಣ್ಯ ಇಲಾಖೆ
  12. ಎಸ್. ಎಸ್. ಮಲ್ಲಿಕಾರ್ಜುನ – ಗಣಿ ಮತ್ತು ಭೂವಿಜ್ಞಾನ ಇಲಾಖೆ
  13. ಕೆ. ಸಿ. ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
  14. ಪುಟ್ಟರಂಗಶೆಟ್ಟಿ - ಪಶುಸಂಗೋಪನೆ ಇಲಾಖೆ

ಇನ್ನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ. ನಾಗೇಂದ್ರ, ರುದ್ರಪ್ಪ ಲಮಾಣಿ, ಶಿವರಾಜ್‌ ತಂಗಡಗಿ, ವಿಜಯಪ್ಪ ಕಾಶಪ್ಪನವರ್‌, ನರೇಂದ್ರ ಸ್ವಾಮಿ, ಟಿ. ರಘುಮೂರ್ತಿ ಅವರಿಗೆ ಯಾವುದೇ ಖಾತೆ ಹಂಚಿಕೆಯಾಗಿಲ್ಲ. ಇಂದು 12 ಗಂಟೆ ಸುಮಾರಿಗೆ ಅವರಿಗೂ ಖಾತೆ ಹಂಚಿಕೆಯಾಬಹುದು ಎಂದು ನಿರೀಕ್ಷಿಸಲಾಗಿದೆ.