President's medal: ಕರ್ನಾಟಕದ 21 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ
President's medal: ಪೊಲೀಸ್ ಇಲಾಖೆಯ ಉತ್ತಮ ಸೇವೆಗಾಗಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಮತ್ತು 19 ಜನ ಪೊಲೀಸರು ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಲಭಿಸಿದೆ.


ಬೆಂಗಳೂರು: 76ನೇ ಗಣರಾಜ್ಯೋತ್ಸವ (Republic day 2025) ಹಿನ್ನೆಲೆಯಲ್ಲಿ ಕೊಡಲಾಗುವ ರಾಷ್ಟ್ರಪತಿಗಳ ಪದಕ ಗೌರವಕ್ಕೆ ರಾಜ್ಯದ 21 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಭಾಜನರಾಗಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಮತ್ತು 19 ಜನ ಪೊಲೀಸರು ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ವಿಶಿಷ್ಟ ಸೇವಾ ಪದಕ ಪುರಸ್ಕೃತರು
- ಬಸವರಾಜು ಶರಣಪ್ಪ ಜಿಳ್ಳೆ- ಡಿಐಜಿಪಿ, ಕೆಎಸ್ಆರ್ಪಿ, ಬೆಂಗಳೂರು
- ಹಂಜಾ ಹುಸೇನ್, ಕಮಾಂಡೆಂಟ್, ಕೆಎಸ್ಆರ್ಪಿ, ತುಮಕೂರು
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
- ರೇಣುಕಾ ಕೆ ಸುಕುಮಾರ, ಡಿಐಜಿಪಿ, ಡಿಸಿಆರ್ಇ, ಬೆಂಗಳೂರು
- ಸಂಜೀವ ಎಂ ಪಾಟೀಲ್, ಎಐಜಿಪಿ, ಜನರಲ್, ಪೊಲೀಸ್ ಪ್ರಧಾನ ಕೇಂದ್ರ ಕಚೇರಿ
- ಬಿಎಂ ಪ್ರಸಾದ್, ಕಮಾಂಡೆಂಟ್, ಐಆರ್ಬಿ, ಕೊಪ್ಪಳ
- ಗೋಪಾಲ್ ಡಿ ಜೋಗಿನ್, ಎಸಿಪಿ, ಸಿಸಿಬಿ ಬೆಂಗಳೂರು
- ವೀರೆಂದ್ರ ನಾಯಕ್ ಎನ್, ಡೆಪ್ಯೂಟಿ ಕಮಾಂಡೆಂಟ್, ಕೆಎಸ್ಆರ್ಪಿ, ಬೆಂಗಳೂರು
- ಗೋಪಾಲಕೃಷ್ಣ ಬಿ ಗೌಡರ್, ಡಿವೈಎಸ್ಪಿ, ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ
- ಎಚ್. ಗುರುಬಸವರಾಜ, ಪೊಲೀಸ್ ಇನ್ಸ್ಪೆಕ್ಟರ್, ಲೋಕಾಯುಕ್ತ, ಚಿತ್ರದುರ್ಗ
- ಜಯರಾಜ್ ಎಚ್, ಪೊಲೀಸ್ ಇನ್ಸ್ಪೆಕ್ಟರ್, ಗೋವಿಂದಪುರ ಪೊಲೀಸ್ ಠಾಣೆ, ಬೆಂಗಳೂರು
- ಪ್ರದೀಪ್ .ಬಿ.ಆರ್, ಸಿಪಿಐ, ಹೊಳೆನರಸಿಪುರ ವೃತ್ತ, ಹಾಸನ
- ಮೊಹಮದ್ ಮುಕರಮ್, ಪೊಲೀಸ್ ಇನ್ಸ್ಪೆಕ್ಟರ್ ಸಿಸಿಬಿ, ಬೆಂಗಳೂರು
- ವಸಂತ್ ಕುಮಾರ್ ಎಂಎ, ಪೊಲೀಸ್ ಇನ್ಸ್ಪೆಕ್ಟರ್, ಬ್ಯುರೋ ಆಫ್ ಇಮಿಗ್ರೇಷನ್
- ಮಂಜುನಾಥ ವಿ.ಜಿ, ಎಎಸ್ಐ ಸಿಐಡಿ, ಬೆಂಗಳೂರು
- ಅಲ್ತಾಪ್ ಹುಸೇನ್ ಎನ್ ದಖನಿ, ಎಎಸ್ಐ, ಬೆಂಗಳೂರು
- ಬಲೇಂದ್ರನ್ ಸ್ಟೇಷನ್ ಆರ್ಎಚ್ಸಿ, ಕೆಎಸ್ಆರ್ಪಿ, ಬೆಂಗಳೂರು
- ಅರುಣಕುಮಾರ, ಸಿಎಚ್ಸಿ, ಡಿಐಜಿಪಿ ಕಚೇರಿ, ಕಲಬುರಗಿ
- ನಯಾಜ್ ಅಂಜುಮ್ ಎಎಚ್ಸಿ ಡಿಪಿಒ, ಚಿಕ್ಕಮಗಳೂರು
- ಶ್ರೀನಿವಾಸ ಎಂ, ಸಿಎಚ್ಸಿ, ಡಿಸಿಪಿ ಪಶ್ಚಿಮ ವಿಭಾಗ ಕಚೇರಿ, ಬೆಂಗಳೂರು
- ಅಶ್ರಪ್ ಪಿ. ಎಂ, ಹಿರಿಯ ಗುಪ್ತ ಸಹಾಯಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು
- ಶಿವಾನಂದ ಬಿ, ಸಿಎಚ್ಸಿ ಕುಂದಾಪುರ ಪೊಲೀಸ್ ಠಾಣೆ, ಉಡುಪಿ
ಈ ಸುದ್ದಿಯನ್ನೂ ಓದಿ | Republic Day Interesting Facts: ಗಣರಾಜ್ಯೋತ್ಸವ; ಭಾರತದ ಗಣರಾಜ್ಯ ಮತ್ತು ಸಂವಿಧಾನದ ಬಗ್ಗೆ ಗೊತ್ತಿರದ ವಿಚಾರಗಳು ಇಲ್ಲಿವೆ
ಗಣರಾಜ್ಯೋತ್ಸವ 2025ರ ಅಂಗವಾಗಿ ದೇಶದ ಒಟ್ಟು 942 ಪೊಲೀಸ್, ಅಗ್ನಿ ಶಾಮಕ, ಗೃಹ ರಕ್ಷಕ ಇನ್ನಿತರ ಸಿಬ್ಬಂದಿ, ಶೌರ್ಯ ಮತ್ತು ಸೇವಾ ಪದಕ ಗೌರವಕ್ಕೆ ಆಯ್ಕೆಯಾಗಿದ್ದಾರೆ.