ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂದಿನಿಂದಲೇ ನಂದಿನಿ ಹಾಲು- ಮೊಸರಿನ ಬೆಲೆ ಏರಿಕೆ; ಹೊಸ ದರಪಟ್ಟಿ ಇಲ್ಲಿದೆ ನೋಡಿ

ರಾಜ್ಯದ ಜನತೆಗೆ ಇಂದಿನಿಂದಲೇ ದರ ಏರಿಕೆ ಬಿಸಿ ಮುಟ್ಟಲಿದ್ದು, ನವೆಂಬರ್ 1, 2026 ರಿಂದ ಜಾರಿಗೆ ಬರುವಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಟೋಲ್ಡ್‌ ಹಾಲು ಒಂದು ಲೀಟರ್‌ಗೆ ಸದ್ಯ 46 ರೂಪಾಯಿ ದರ ಇದೆ. ಆದ್ರೆ ಇಂದಿನಿಂದ 54 ರೂಪಾಯಿ ಆಗಲಿದೆ.

ಇಂದಿನಿಂದಲೇ ನಂದಿನಿ ಹಾಲು- ಮೊಸರಿನ ಬೆಲೆ ಏರಿಕೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 1, 2026 9:17 AM

ಬೆಂಗಳೂರು: ರಾಜ್ಯದ ಜನತೆಗೆ ಇಂದಿನಿಂದಲೇ ದರ ಏರಿಕೆ ಬಿಸಿ ಮುಟ್ಟಲಿದ್ದು, ನವೆಂಬರ್ 1, 2026 ರಿಂದ ಜಾರಿಗೆ ಬರುವಂತೆ (Nandini milk and curd Price) ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಕರ್ನಾಟಕ ಹಾಲು ಮಹಾಮಂಡಳಿ (KMF) ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ, ಸಾಮಾನ್ಯ ಟೋನ್ಡ್ ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಳವಾಗಿದ್ದರೆ, ಮೊಸರಿನ ದರ ಲೀಟರ್‌ಗೆ 14 ರೂ. ರಷ್ಟು ದುಬಾರಿಯಾಗಿದೆ.

ಅರ್ಧ ಕೆಜಿ ಮೊಸರು ಪಾಕೆಟ್ ಬೆಲೆ ಈ ಹಿಂದೆ 28 ರೂ ಇತ್ತು. ಆದರೆ ಇಂದಿನಿಂದ 34 ರೂ. ಆಗಲಿದೆ. 1 ಕೆಜಿ ಮೊಸರು ಪ್ಯಾಕೆಟ್ ಬೆಲೆ ಸದ್ಯ 54 ರೂಪಾಯಿ ಇದೆ. ಆದ್ರೆ ಇಂದಿನಿಂದ ಬರೋಬ್ಬರಿ 68 ರೂಪಾಯಿ ಆಗಲಿದೆ. ಅಂದರೆ 14 ರೂಪಾಯಿ ಏರಿಕೆ ಆಗಲಿದೆ. ಇನ್ನು ಹಾಲಿನ ಬೆಲೆ 8 ರೂ. ಹೆಚ್ಚಳವಾಗಿದ್ದು, ಫ್ಯಾಟ್ ಅಂಶ ಹೆಚ್ಚಿರುವ ಉಳಿದ ಹಾಲಿನ ಪ್ಯಾಕೆಟ್‌ಗಳ ಮೇಲೆ ಬರೋಬ್ಬರಿ 12 ರೂಪಾಯಿವರೆಗೂ ದರ ಹೆಚ್ಚಳವಾಗಲಿದೆ.

ಟೋಲ್ಡ್‌ ಹಾಲು ಒಂದು ಲೀಟರ್‌ಗೆ ಸದ್ಯ 46 ರೂಪಾಯಿ ದರ ಇದೆ. ಆದ್ರೆ ಇಂದಿನಿಂದ 54 ರೂಪಾಯಿ ಆಗಲಿದೆ. ಅಂದ್ರೆ 8 ರೂಪಾಯಿ ಏರಿಕೆಯಾಗಿದೆ. ಇನ್ನು ಹೋಮೋಜಿನೈಜ್ಡ್‌ ಟೋನ್ಡ್‌ ಹಾಲು 47 ರೂಪಾಯಿ ಇದ್ದಿದ್ದು 56 ಆಗಲಿದೆ. ಇಲ್ಲಿ 9 ಏರಿಕೆ. ಹೋಮೋಜಿನೈಜ್ಡ್‌ ಹಸುವಿನ ಹಾಲು ಸದ್ಯ50 ರೂಪಾಯಿ ಇದ್ದು ಇಂದಿನಿಂದ 58 ರೂಪಾಯಿ ಆಗಿದೆ. ಅಂದ್ರೆ 8 ರೂಪಾಯಿ ಏರಿಕೆ. ಆದ್ರೆ ಸ್ಪೆಷಲ್ ಟೋನ್ಡ್‌ ಹಾಲು ಸದ್ಯ 52 ರೂಪಾಯಿ ದರ ಇದ್ದು, ಇಂದಿನಿಂದ 64 ರೂಪಾಯಿಗೆ ಏರಿಕೆಯಾಗಿದೆ.

ನಂದಿನಿ ಹಾಲಿನ ಹೊಸ ದರ ಪಟ್ಟಿ

  • ಟೋನ್ಡ್ ಹಾಲು (ಟಿಎಮ್‌): ಹೊಸ ದರ ₹54
  • ಹೋಮೋಜಿನೈಸ್ಡ್ ಟೋನ್ಡ್ ಹಾಲು: ಹೊಸ ದರ ₹55
  • ಹೋಮೋಜಿನೈಸ್ಡ್ ಹಸುವಿನ ಹಾಲು: ಹೊಸ ದರ ₹58
  • ಸ್ಪೆಷಲ್ ಟೋನ್ಡ್ ಹಾಲು: ಹಳೆಯ ದರ ₹64 (₹12 ಏರಿಕೆ)
  • ಶುಭಂ ಹಾಲು: ಹೊಸ ದರ ₹64 (₹12 ಏರಿಕೆ)
  • ಹೋಮೋಜಿನೈಸ್ಡ್ ಶುಭಂ ಹಾಲು: ಹೊಸ ದರ ₹65