ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಾವಣಗೆರೆಯಲ್ಲಿ ಅಲ್ಪ ಸಂಖ್ಯಾತರೇ "ಕೈ" ಕೊಟ್ಟರಾ? ಐದನೇ ಸುತ್ತಿನಲ್ಲಿಯೂ ಸಮರ್ಥ್‌ಗೆ ಹಿನ್ನಡೆ; ಬಾಗಲಕೋಟೆಯಲ್ಲಿ ಮೇಟಿ ಮುನ್ನಡೆ

Davanagere Byelection: ರಾಜ್ಯದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬೈ ಎಲೆಕ್ಷನ್‌ ನಡೆದಿದ್ದು, ಇಂದು ಫಲಿತಾಂಶ ಹೊರ ಬೀಳಲಿದೆ. ದಾವಣಗೆರೆ ಕ್ಷೇತ್ರದ ಫಲಿತಾಂಶ ಇದೀಗ ಭಾರೀ ಕುತೂಹಲ ಮೂಡಿಸಿದೆ. ದಾವಣಗೆರೆಯಲ್ಲಿ ಸಮರ್ಥ ಐದನೇ ಸುತ್ತನಲ್ಲಿಯೂ ಹಿನ್ನಡೆಯಲ್ಲಿದ್ದಾರೆ.

ಐದನೇ ಸುತ್ತಿನಲ್ಲಿಯೂ ಸಮರ್ಥ್‌ಗೆ ಹಿನ್ನಡೆ; ಬಾಗಲಕೋಟೆಯಲ್ಲಿ ಮೇಟಿ ಮುನ್ನಡೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 4, 2026 10:36 AM

ಬೆಂಗಳೂರು: ರಾಜ್ಯದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬೈ ಎಲೆಕ್ಷನ್‌ ನಡೆದಿದ್ದು, ಇಂದು ಫಲಿತಾಂಶ ಹೊರ (Samarth Shamanooru) ಬೀಳಲಿದೆ. ದಾವಣಗೆರೆ ಕ್ಷೇತ್ರದ (Davanagere Byelection) ಫಲಿತಾಂಶ ಇದೀಗ ಭಾರೀ ಕುತೂಹಲ ಮೂಡಿಸಿದೆ. ಟಿಕೆಟ್‌ ಸಲುವಾಗಿ ಅಲ್ಪ ಸಂಖ್ಯಾತ ನಾಯಕರು ಹಾಗೂ ಶಾಮನೂರು ಕುಟುಂಬದ ನಡುವೆ ಬಿರುಕು ಮೂಡಿತ್ತು. ಅಲ್ಪಸಂಖ್ಯಾತ ನಾಯಕರು ಯಾವುದೇ ಪ್ರಚಾರ ಕಾರ್ಯದಲ್ಲಿ ಭಾಗವಹಿಸದೆ ಇದ್ದದ್ದು ಬಹಿರಂಗ ಅಸಮಾಧಾನ ಹೊರ ಹಾಕಿದ್ದರು.

ಇದೀಗ ನಾಲ್ಕು ಸುತ್ತಿನ ಮತ ಎಣಿಕೆ ಮುಗಿದಿದ್ದು, 5071 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಮುನ್ನಡೆಯಿದ್ದು, ಶಾಮನೂರು ಸಮರ್ಥ್‌ ಹಿನ್ನಡೆಯಲ್ಲಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತ ಮತ ಹೆಚ್ಚಿದೆ. ಆದರೆ ಬಂಡಾಯದಿಂದಾಗಿ ಸಮರ್ಥ್‌ಗೆ ಹಿನ್ನಡೆಯಾಗುತ್ತಿದೆ. ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅವರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಿಲ್ಲಾ ವಿಭಾಗದ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದರು. ದಾವಣಗೆರೆ ದಕ್ಷಿಣ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗದವರ ತಲೆತಂಡಕ್ಕೆ ಕಾಂಗ್ರೆಸ್​ ಹೈಕಮಾಂಡ್ ಮಣೆ ಹಾಕಿತ್ತು. ಇದೀಗ ಸಮರ್ಥ್‌ ಸೋತರೆ ಇನ್ನಷ್ಟು ತಲೆ ದಂಡವಾಗುವ ಸಾಧ್ಯತೆ ಹೆಚ್ಚಿದೆ.

ಈ ಬಾರಿ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ 2,31,072 ಮತದಾರರಲ್ಲಿ 1,58,131 ಮತದಾರರು ಮತ ಚಲಾಯಿಸಿದ್ದು, ಈ ಬಾರಿ ಶೇಕಡವಾರು 68.43% ರಷ್ಟು ಮತದಾನವಾಗಿದೆ. ಆದರೆ ಗ್ರಾಮಾಂತರ ಭಾಗದಲ್ಲಿ ಉತ್ತಮ ಮತದಾನವಾಗಿದ್ದು, ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗಿದೆ.

Assembly Election 2026 LIVE Counting and Results: ಪಂಚ ರಾಜ್ಯ ಚುನಾವಣಾ ಫಲಿತಾಂಶ; ತಮಿಳುನಾಡಿನಲ್ಲಿ ಟಿವಿಕೆ ಕಮಾಲ್‌, ಚುಕ್ಕಾಣಿ ಹಿಡೀತಾರಾ ವಿಜಯ್?‌

ಇನ್ನು ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಕತ್ತಿ ಮುನ್ನಡೆಯಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಬಾಗಲಕೋಟೆ ಪ್ರತಿಷ್ಠೆಯ ಕ್ಷೇತ್ರವಾಗಿದ್ದು, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ನೋಡಿ ಸಿಎಂ ನಿರಾಳರಾಗಿದ್ದಾರೆ. ಎಚ್‌.ವೈ.ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಗೆ ಕಾಂಗ್ರೆಸ್‌ನಿಂದ ಉಮೇಶ ಮೇಟಿ, ಬಿಜೆಪಿಯಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಸ್ಪರ್ಧಿಸಿದ್ದರು. ಐದನೇ ಸುತ್ತಿನಲ್ಲಿಯೂ ಉಮೇಶ್‌ ಮೇಟಿ ಮುಂದಿದ್ದಾರೆ.