Sankranti Jewel Fashion 2025: ಸಂಕ್ರಾಂತಿ ಹಬ್ಬಕ್ಕೆ ಬೇಡಿಕೆ ಹೆಚ್ಚಿಸಿಕೊಂಡ ಇಮಿಟೇಷನ್ ಆಭರಣಗಳು!

ಲಕ್ಷಗಟ್ಟಲೇ ಹಣ ಖರ್ಚು ಮಾಡದೇ, ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದಾದ ಟ್ರೆಡಿಷನಲ್ ಲುಕ್ ನೀಡುವ ಇಮಿಟೇಷನ್ ಆಭರಣಗಳು ಈ ಸಂಕ್ರಾಂತಿ ಫೆಸ್ಟಿವ್ ಸೀಸನ್‌ನಲ್ಲಿ (Sankranti Jewel Fashion 2025) ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

image-45c8073d-302c-46de-8a87-3cd233a9a1e1.jpg
Profile Vishwavani News January 12, 2025
-ಶೀಲಾ ಸಿ. ಶೆಟ್ಟಿ, ಬೆಂಗಳೂರು ವಜ್ರಾಭರಣಗಳನ್ನು ನಾಚಿಸುವಂತಹ ಟ್ರೆಡಿಷನಲ್ ಇಮಿಟೇಷನ್ ಆಭರಣಗಳು ಸಂಕ್ರಾಂತಿ ಹಬ್ಬದ ಸೀಸನ್‌ನಲ್ಲಿ (Sankranti Jewel Fashion 2025) ಬೇಡಿಕೆ ಹೆಚ್ಚಿಸಿಕೊಂಡಿವೆ. ಹೌದು, ಲಕ್ಷಗಟ್ಟಲೇ ಹಣ ಸುರಿಯದೇ ಕಡಿಮೆ ಬೆಲೆಯಲ್ಲಿ ಕೈಗೆಟಕುವ ಈ ಆಭರಣಗಳನ್ನು, ಪ್ರತಿ ಸೀರೆ ಅಥವಾ ಡಿಸೈನವೇರ್‌ಗೆ ತಕ್ಕಂತೆ ಖರೀದಿಸಬಹುದಾಗಿರುವುದು,ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್. image-53e55f7c-d811-4dc5-b868-d90e5ee18405.jpg ಚಿತ್ರಗಳು: ಮಿಂಚು ಟ್ರೆಡಿಷನಲ್ ಇಮಿಟೇಷನ್‌ ಜುವೆಲರಿಗಳು ಟ್ರೆಡಿಷನಲ್ ಡಿಸೈನ್‌ನ ಬಂಗಾರದ ಆಭರಣಗಳಂತೆ ಕಾಣುವ ಈ ಇಮಿಟೇಷನ್‌ ಜುವೆಲರಿಗಳು, ಧರಿಸಿದಾಗ ಥೇಟ್ ಬಂಗಾರದ ಒಡವೆಗಳಂತೆಯೇ ಕಾಣುತ್ತವೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ. ಅಲ್ಲದೇ, ಸಾಮಾನ್ಯ ಮಾನಿನಿಯರು ಹೆಚ್ಚು ಹಣ ವೆಚ್ಚ ಮಾಡದೇ ಗ್ರ್ಯಾಂಡ್ ಆಗಿ ಕಾಣಿಸಬಹುದು ಎನ್ನುತ್ತಾರೆ. image-47383ad5-bcad-486b-a69b-6cd74591914b.jpg ಬೇಡಿಕೆ ಪಡೆದುಕೊಂಡಿರುವ ಇಮಿಟೇಷನ್ ಆಭರಣಗಳು ಈ ಸಂಕ್ರಾಂತಿ ಫೆಸ್ಟಿವ್ ಸೀಸನ್‌ನಲ್ಲಿ, ಲೆಕ್ಕವಿಲ್ಲದಷ್ಟು ವಿನ್ಯಾಸದ ಇಮಿಟೇಷನ್‌ ಜುವೆಲರಿಗಳು ಜ್ಯುವೆಲರಿ ಲೋಕಕ್ಕೆ ಬಂದಿವೆ. ಕಿವಿಗೆ ಹಾಕುವ ಹ್ಯಾಂಗಿಂಗ್ಸ್, ಓಲೆ, ಇಯರಿಂಗ್‌ ಗಳಿಂದಿಡಿದು, ದೊಡ್ಡ –ಚಿಕ್ಕ ಚೋಕರ್, ಹಾರ, ಬಾಜುಬಂಧ್, ಕಮರ್ಬಾಂದ್, ಜುಮಕಿ, ಮಾಟಿ ಹೀಗೆ ಸಾವಿರಾರು ವಿನ್ಯಾಸದವು ಮಾರುಕಟ್ಟೆಗೆ ಆಗಮಿಸಿವೆ. ಅಂದಹಾಗೆ, ನೂರು ರೂ.ಗಳಿಂದಿಡಿದು, ಸಾವಿರ ರೂ.ಗಳಿಗೆ ಹಾರ, ನೆಕ್ಲೇಸ್ ಹಾಗೂ ಭಾರಿ ಸೆಟ್ ಆಭರಣಗಳು ದೊರೆಯುತ್ತವೆ. ಒಟ್ಟಿನಲ್ಲಿ, ಬಂಗಾರದ ಆಭರಣಗಳ ವಿನ್ಯಾಸವನ್ನು ಮೀರಿಸುವಂತಹ ಇವುಗಳ ಡಿಸೈನ್‌ಗಳು, ವನ್‌ ಗ್ರಾಂ ಗೋಲ್ಡ್ ಹಾಗೂ ಗೋಲ್ಡ್ ಕೋಟೆಡ್ ವಿನ್ಯಾಸದಲ್ಲಿ ಮಾನಿನಿಯರ ಮನ ಗೆದ್ದಿವೆ ಎನ್ನುತ್ತಾರೆ ಜ್ಯುವೆಲರಿ ಮಾರಾಟಗಾರರಾದ ರಜತ್. image-db969ddb-5dbf-413f-8ba5-e10713fdbc80.jpg image-dbd73727-f118-46dd-a38e-84b99e6ca09f.jpg ಟ್ರೆಂಡಿ ಆಭರಣಗಳು ಬಂಗಾರ ಹಾಗೂ ಡೈಮಂಡ್ ಆಭರಣಗಳ ತದ್ರೂಪದಂತಿರುವ ಈ ಇಮಿಟೇಷನ್ ಆಭರಣಗಳು, ಸೆಮಿ ಪ್ರಿಶಿಯಸ್ಹಾಗೂ ಅಮೆರಿಕನ್‌ ಡೈಮಂಡ್‌ ಸೆಟ್‌ನಂತೆ ಕಾಣಿಸುವ ಡಿಸೈನ್‌ನಲ್ಲೂ ದೊರೆಯುತ್ತಿವೆ. ಟ್ರೆಂಡಿಯಾಗಿವೆ ಎನ್ನುತ್ತಾರೆ ಮಾರಾಟಗಾರರು. ಕೆಲವಕ್ಕೆ ಒಂದು ವರ್ಷ ಗ್ಯಾರಂಟಿ ಕೂಡ ನೀಡಲಾಗುತ್ತದೆ. ಆಯಾ ಡಿಸೈನ್‌ಗೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ. ಹಬ್ಬದ ಸೀಸನ್ನಲ್ಲಿ ಮಾತ್ರವಲ್ಲ, ವೆಡ್ಡಿಂಗ್ ಸೀಸನ್ನಲ್ಲೂ ಇವುಗಳ ಮಾರಾಟ ಹೆಚ್ಚಾಗುತ್ತದೆ ಎನ್ನುತ್ತಾರೆ ಮಾರಾಟಗಾರರಾದ ರಿತೇಶ್ ಹಾಗೂ ಜೈರಾಜ್. ಈ ಸುದ್ದಿಯನ್ನೂ ಓದಿ | Winter Fashion 2025: ಚಳಿಗಾಲದ ಟಾಪ್ ಲಿಸ್ಟ್‌ಗೆ ಸೇರಿದ ಬ್ರೈಟ್ ಬಣ್ಣದ ಫ್ಯಾಷನ್‌ವೇರ್ಸ್! ಇಮಿಟೇಷನ್ ಆಭರಣ ಪ್ರಿಯರಿಗೆ ಒಂದಿಷ್ಟು ಸಲಹೆ ಫಿನಿಶಿಂಗ್ ಇರುವಂತಹ ಇಮಿಟೇಷನ್‌ ಜುವೆಲರಿ ಖರೀದಿಸಿ. ಯಾವುದೇ ಕಳ್ಳ ಕಾಕರ ಭಯವಿರುವುದಿಲ್ಲ. ಟ್ರಯಲ್‌ನೋಡಿ ಪರಿಶೀಲಿಸಿ, ಕೊಳ್ಳಿ. ಕಾಪರ್‌ ಫಿನಿಶಿಂಗ್ ಇರುವಂತವು ಡಲ್ಆಗಿ ಕಾಣಿಸುತ್ತವೆ. ಟ್ರೆಂಡಿ ಡಿಸೈನ್‌ನವನ್ನು ಖರೀದಿಸಿ. ಸೂಕ್ತ ನಿರ್ವಹಣೆ ಮಾಡಿದಲ್ಲಿ ಬಹುಕಾಲ ಧರಿಸಬಹುದು. (ಲೇಖಕಿ: ಫ್ಯಾಷನ್ ಪತ್ರಕರ್ತೆ)
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ