Sankranti Sambhrama: ಮಾಗಡಿಯಲ್ಲಿ ಜ. 8ಕ್ಕೆ ಝೀ ಕನ್ನಡದ 'ಪುಟ್ಟಕ್ಕನ ಮಕ್ಕಳು-ಅಣ್ಣಯ್ಯʼ ಧಾರಾವಾಹಿ ಕುಟುಂಬದಿಂದ ಸಂಕ್ರಾಂತಿ ಸಂಭ್ರಮ!
ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಾದ 'ಪುಟ್ಟಕ್ಕನ ಮಕ್ಕಳು' ಮತ್ತು ʼಅಣ್ಣಯ್ಯʼ ಕುಟುಂಬಗಳ ಕಲಾವಿದರು ಇದೇ ಜ.8 ರಂದು ಮಾಗಡಿಗೆ ಆಗಮಿಸಲಿದ್ದು, ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ (Sankranti Sambhrama) ಜರುಗಲಿದೆ. ಈ ಕುರಿತ ವಿವರ ಇಲ್ಲಿದೆ.
Vishwavani News
Jan 6, 2025 8:59 PM
ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಝೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಾದ 'ಪುಟ್ಟಕ್ಕನ ಮಕ್ಕಳು' ಮತ್ತು ʼಅಣ್ಣಯ್ಯʼ ಕುಟುಂಬಗಳ ಕಲಾವಿದರು ಇದೇ ಜ.8 ರಂದು ಮಾಗಡಿಗೆ ಆಗಮಿಸಲಿದ್ದು, ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ (Sankranti Sambhrama) ಜರುಗಲಿದೆ.
'ಪುಟ್ಟಕ್ಕನ ಮಕ್ಕಳು' ಕುಟುಂಬದಿಂದ ಪುಟ್ಟಕ್ಕ, ಕಂಠಿ, ಸ್ನೇಹ, ಸಹನಾ, ರಾಜಿ, ಗೋಪಾಲ ಮತ್ತು ‘ಅಣ್ಣಯ್ಯʼ ಕುಟುಂಬದಿಂದ ಶಿವು, ಪಾರು, ರತ್ನ, ರಾಣಿ, ರಮ್ಯಾ, ರಶ್ಮಿ, ವೀರಭದ್ರ, ಪರಶು ಇನ್ನಿತರ ಕಲಾವಿದರು ನಿಮ್ಮನ್ನು ಮನರಂಜಿಸಲಿದ್ದಾರೆ. ಕಾರ್ಯಕ್ರಮವನ್ನು ನಿರೂಪಕಿ ಶಾಲಿನಿ ಅವರು ನಿರ್ವಹಿಸಲಿದ್ದಾರೆ. ಹಾಡು, ನೃತ್ಯ ಮತ್ತು ಮನರಂಜನೆಯೊಂದಿಗೆ ಮನರಂಜಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ | Shri Raghavendra Chitravani Awards 2024: ಶ್ರೀ ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಪ್ರಶಸ್ತಿ ಪ್ರಕಟ
ಕಾರ್ಯಕ್ರಮವು ಮಾಗಡಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆಯ ಮಾಗಡಿ ಕೋಟೆ ಮೈದಾನದಲ್ಲಿ ಜರುಗಲಿದ್ದು, ನಿಮ್ಮ ನೆಚ್ಚಿನ ತಾರೆಗಳನ್ನು ಭೇಟಿಯಾಗಲು, ಸಂಕ್ರಾಂತಿಯನ್ನು ಜತೆಯಾಗಿ ಆಚರಿಸಲು 'ಅಣ್ಣಯ್ಯ-ಪುಟ್ಟಕ್ಕನ ಮಕ್ಕಳು' ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಪಾಸ್‌ಗಳು ಉಚಿತವಾಗಿದ್ದು, ಝೀ ಕನ್ನಡ ವಾಹಿನಿಯು ಯಾವುದೇ ಶುಲ್ಕವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.