ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Chennamma's Funeral: ಹೊಳೆನರಸೀಪುರದ ಮಾವಿನಕೆರೆಯಲ್ಲಿ ನೆರವೇರಿದ ಚೆನ್ನಮ್ಮ ಅಂತ್ಯಸಂಸ್ಕಾರ; ತಾಯಿ ಕೆನ್ನೆಗೆ ಮುತ್ತಿಟ್ಟು ಕಣ್ಣೀರಿಟ್ಟ ಎಚ್‌ಡಿಕೆ, ರೇವಣ್ಣ

ಹೊಳೆನರಸೀಪುರದ ಮಾವಿನಕೆರೆಯಲ್ಲಿ ಚೆನ್ನಮ್ಮ ನೆರವೇರಿದ ಅಂತ್ಯಸಂಸ್ಕಾರ

ಹೊಳೆನರಸೀಪುರದ ಹರದನಹಳ್ಳಿ ಸಮೀಪದ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಚೆನ್ನಮ್ಮ ಅವರ ಅಂತಿಮ ವಿಧಿವಿಧಾನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಸೇರಿ ರಾಜ್ಯ, ಕೇಂದ್ರದ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಮಗುಗೆ ಎಚ್ಚರವಾಗಬಹುದೆಂದು ಡೈಪರ್ ಆರ್ಡರ್ ಮಾಡಿದ ಮಹಿಳೆಯ ಮನೆಯ ಡೋರ್ ಬೆಲ್ ಮಾಡದ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

ಮಗುವಿನ ಬಗ್ಗೆ ಕಾಳಜಿ ತೋರಿದ ಡೆಲಿವರಿ ಬಾಯ್: ಮಹಿಳೆಯ ವಿಡಿಯೊ ವೈರಲ್‌

Viral Video: ಯಾವುದೇ ಕಾರಣ ಇಲ್ಲದೆ ಅಪರಿಚಿತರು ಕಾಳಜಿ ವಹಿಸುತ್ತಾರೆ ಅಂದಾಗ ನಮಗಾಗುವ ತೃಪ್ತಿ ಭಾವನೆಯೇ ಬೇರೆ. ಯಾವುದೇ ಸಣ್ಣ ಪುಟ್ಟ ಘಟನೆಯೇ ಆಗಿರಲಿ ಅದು ನಮ್ಮನ್ನು ಇಡೀ ದಿನವನ್ನು ಖುಷಿಯಾಗಿ ಇರಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಒಬ್ಬ ತೋರಿಸಿದ ಕಾಳಜಿಗೆ ಮಹಿಳೆಯೊಬ್ಬರು ಫಿದಾ ಆಗಿದ್ದಾರೆ. ತಡರಾತ್ರಿ ಮಗುವಿನ ಡೈಪರ್ ಆರ್ಡರ್ ತಲುಪಿಸಲು ಬಂದ ಡೆಲಿವರಿ ಏಜೆಂಟ್‌ನ ಹೃದಯವಂತಿಕೆ ಎಲ್ಲರ ಹೃದಯ ಗೆದ್ದಿದೆ. ಈ ಘಟನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಮಹಿಳೆ, ಇದನ್ನು "ಅತ್ಯಂತ ಸಿಹಿ ಅನುಭವ" ಎಂದು ಕರೆದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ...

ಪ್ರವಾಸಕ್ಕೆ ತೆರಳಿದ್ದಾಗ ಪುರಾತನ ಬಾವಿಗೆ ಬಿದ್ದು ಬಾಲಕ ಸಾವು

ಪ್ರವಾಸಕ್ಕೆ ತೆರಳಿದ್ದಾಗ ಪುರಾತನ ಬಾವಿಗೆ ಬಿದ್ದು ಬಾಲಕ ಸಾವು

Vijayanagara News: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿಯ ಶ್ರೀ ಕಲ್ಲೇಶ್ವರ ದೇಗುಲದ ಬಳಿ ಘಟನೆ ನಡೆದಿದೆ. ಹರಪನಹಳ್ಳಿಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನ ಮೃತದೇಹ ಹೊರ ತೆಗೆದಿದ್ದಾರೆ. ಘಟನೆ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bengaluru Power Cut: ಜುಲೈ 21ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ನಾಳೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cut: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11 ಕೆ.ವಿ ಹೆಬ್ಬಾಳ ಉಪ-ಕೇಂದ್ರ ವ್ಯಾಪ್ತಿಯ ಹಲವೆಡೆ ಜುಲೈ 21ರಂದು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಮನೆ ಮನೆಗೆ ತೆರಳಿ ಜಾತಿ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆ ಸೇವೆಗೆ ಸಿಎಂ ಚಾಲನೆ

ಉಚಿತ ಜಾತಿ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಗೆ ಸಿಎಂ ಚಾಲನೆ

CM DK Shivakumar: ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತ ಜಾತಿ ಪ್ರಮಾಣ ಪತ್ರ ವಿತರಣೆ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದಾರೆ.

Prajwal Revanna: ಅಜ್ಜಿ ಚೆನ್ನಮ್ಮ ಅಂತ್ಯಕ್ರಿಯೆ ವೀಕ್ಷಿಸಲು ಪ್ರಜ್ವಲ್ ರೇವಣ್ಣಗೆ ಅವಕಾಶ

ಅಜ್ಜಿ ಚೆನ್ನಮ್ಮ ಅಂತ್ಯಕ್ರಿಯೆ ವೀಕ್ಷಿಸಲು ಪ್ರಜ್ವಲ್ ರೇವಣ್ಣಗೆ ಅವಕಾಶ

Chennamma's funeral: ಮೃತ ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹೊಳೆನರಸೀಪುರದಲ್ಲಿ ಸಾರ್ವಜನಿಕರು ಹಾಗೂ ಗಣ್ಯರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದು, ಇಂದು ಸಂಜೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

Gold Price Today On 20th July 2026: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದು ಹೆಚ್ಚಾಗಿದ್ದು ಇಷ್ಟು

ಚಿನ್ನದ ದರದಲ್ಲಿ ಮತ್ತೆ ಏರಿಕೆ

Gold Silver Price Today: ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ದರದಲ್ಲಿ ಸೋಮವಾರ (ಜುಲೈ 20) ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 15 ರುಪಾಯಿ ಹೆಚ್ಚಾಗಿ 13,150 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 17 ರುಪಾಯಿ ಅಧಿಕವಾಗಿ 14,346 ರುಪಾಯಿಗೆ ಬಂದಿದೆ.

147 ರೈತರ ಜೀವ ನುಂಗಿದ ಸಾಲ

147 ರೈತರ ಜೀವ ನುಂಗಿದ ಸಾಲ

ಕೃಷ್ಣಾ-ಭೀಮಾ ನದಿಯ ಬೃಹತ್ ಜಲಾಶಯ ದಿಂದ ಫಲವತ್ತಾದ ಭೂಮಿ ಹೊಂದಿರುವ ಯಾದಗಿರಿ ಜಿಲ್ಲೆಯ ರೈತರು ದುರಾದೃಷ್ಟವಶಾತ್ ಋಣ ಭಾರಕ್ಕೆ ನಲುಗಿ ಹೋಗಿದ್ದಾರೆ. ಕೃಷಿ ಚಟುವಟಿಕೆ, ಕೌಟುಂಬಿಕ ಕಾರ್ಯಕ್ರಮಗಳಿಗೆ ಮಾಡಿಕೊಂಡ ಸಾಲ ತೀರಿಸಲು ಆಗದೆ ಆತ್ಮ ಹತ್ಯೆ ಮೊರೆ ಹೋಗುತ್ತಿದ್ದಾರೆ

ವನ್ಯಜೀವಿ ಚಲನಚಿತ್ರ ನಿರ್ಮಾಪಕ ಸುಹಾಸ್ ಪ್ರೇಮ್ ಕುಮಾರ್ ನಿರ್ದೇಶನದ 'ಲಿಟಲ್ ಪ್ಲಾನೆಟ್: ಎ ಟೇಲ್ ಆಫ್ ಫ್ರಾಗ್ಸ್' ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ನಿರೂಪಕ/ವಾಯ್ಸ್‌ಓವರ್ ಪ್ರಶಸ್ತಿ

'ಲಿಟಲ್ ಪ್ಲಾನೆಟ್: ಎ ಟೇಲ್ ಆಫ್ ಫ್ರಾಗ್ಸ್' ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ

ಸೌಂದರ್ಯ ಜಯಚಂದ್ರನ್ ಅವರು ನಿರೂಪಣೆ ಮಾಡಿರುವ ಈ ಸಾಕ್ಷ್ಯಚಿತ್ರವು ಜಗತ್ತಿನ ಸಮೃದ್ಧ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಕಪ್ಪೆಗಳ ಅಪೂರ್ವ ಲೋಕದ ಸಿಮ್ಯಾಟಿಕ್ ಪಯಣವಾಗಿದೆ. ಒಂಬತ್ತು ವರ್ಷಗಳ ಕಾಲ ಚಿತ್ರೀಕರಿಸಲಾದ ಈ ಸಾಕ್ಷ್ಯಚಿತ್ರವು ಉಭಯಚರಗಳ ಗಮನಾರ್ಹ ವೈವಿಧ್ಯತೆ, ವರ್ತನೆ ಮತ್ತು ಪರಿಸರ ಮಹತ್ವವನ್ನು ಸೆರೆಹಿಡಿಯುವುದರ ಜೊತೆಗೆ ಅವುಗಳ ಸೂಕ್ಷ್ಮ ಆವಾಸಸ್ಥಾನಗಳನ್ನು ಸಂರಕ್ಷಿಸುವುದರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ.

ಕಲಬುರಗಿ: ಸ್ಟಾರ್‌ ಏರ್‌ʼಗೆ ಭರ್ಜರಿ ಸ್ಪಂದನೆ

ಕಲಬುರಗಿ: ಸ್ಟಾರ್‌ ಏರ್‌ʼಗೆ ಭರ್ಜರಿ ಸ್ಪಂದನೆ

ಕಳೆದ ಒಂದು ತಿಂಗಳಲ್ಲಿ ಕಲಬುರಗಿ-ಬೆಂಗಳೂರು ನಡುವೆ ಒಟ್ಟು 60 ವಿಮಾನ ಟ್ರಿಪ್‌ಗಳು ನಡೆದಿವೆ. ಬೆಂಗಳೂರಿನಿಂದ ಕಲಬುರಗಿಗೆ 2596 ಮಂದಿ ಆಗಮಿಸಿದ್ದರೆ, ಕಲಬುರಗಿಯಿಂದ ಬೆಂಗಳೂರಿಗೆ 2774 ಮಂದಿ ಪ್ರಯಾಣಿಸಿದ್ದಾರೆ. ಹಲವು ದಿನಗಳಲ್ಲಿ ವಿಮಾನಗಳು ಶೇ.100ರಷ್ಟು ಭರ್ತಿಯಾಗಿ ಸಂಚರಿಸಿರುವುದು ಈ ಮಾರ್ಗದ ಅಗತ್ಯವನ್ನು ಸಾಬೀತುಪಡಿಸಿದೆ.

ಸಂಪುಟ: ಬದಲಾದ ಕಾಂಗ್ರೆಸ್ ಆಟ

ಸಂಪುಟ: ಬದಲಾದ ಕಾಂಗ್ರೆಸ್ ಆಟ

ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕಳೆದ ಒಂದೂವರೆ ತಿಂಗಳಿನಿಂದಲೂ ವಿಳಂಬವಾಗುತ್ತಿದ್ದು, ಇದರಿಂದ ಆಕಾಂಕ್ಷಿಗಳಲ್ಲಿ ದಿಗಿಲು ಶುರುವಾಗಿದೆ. ಅದರಲ್ಲೂ ಎರಡು ದಿನಗಳ ಹಿಂದೆಯೇ ಪೂರ್ಣ ಗೊಳ್ಳಬೇಕಿದ್ದ ವಿಸ್ತರಣೆ ಪ್ರಕ್ರಿಯೆ ಅಪೂರ್ಣಗೊಂಡಿದ್ದು, ಜತೆಗೆ ಈ ಬಾರಿ ಹೊಸ ಮುಖಗಳಿಗೆ (ಯುವಶಾಸಕರಿಗೆ) ಅವಕಾಶ ನೀಡಬೇಕು ಎನ್ನಲಾಗುವ ಕಾರಣಕ್ಕೆ ಮುಂದೂಡಿದ್ದು ನಿಜಕ್ಕೂ ಆಕಾಂಕ್ಷಿ ಗಳಲ್ಲಿ ಆತಂಕ ತಂದಿದೆ.

ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಲಾಕ್‌ ತುಂಡಾಗಿ 40 ಅಡಿ ಮೇಲಿಂದ ಬಿದ್ದ ಯುವಕ; ಗಂಭೀರ ಗಾಯ! Video

ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ತುಂಡಾಗಿ ಬಿದ್ದ ಯುವಕ! Video

Dandeli Zipline Accident: ದಾಂಡೇಲಿಯ 'ಸ್ಟರ್ಲಿಂಗ್​​ ರಿವರ್​ ರೆಸಾರ್ಟ್'ನಲ್ಲಿ ಜಿಪ್‌ಲೈನ್​ ಲಾಕ್‌ ತುಂಡಾಗಿ ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸುಮಾರು 30 ರಿಂದ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರಿಂದ ಎರಡೂ ಕೈ ಹಾಗೂ ಎರಡೂ ಕಾಲುಗಳ ಎಲುಬುಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ ಎನ್ನಲಾಗಿದೆ. ಗಾಯಾಳುವನ್ನು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Service charge: ಗ್ರಾಹಕರಿಗೆ ಕಡ್ಡಾಯ ಸೇವಾಶುಲ್ಕ ವಿಧಿಸಿದ 41 ರೆಸ್ಟೋರೆಂಟ್‌ಗಳಿಗೆ ದಂಡ

ಗ್ರಾಹಕರಿಗೆ ಕಡ್ಡಾಯ ಸೇವಾಶುಲ್ಕ ವಿಧಿಸಿದ 41 ರೆಸ್ಟೋರೆಂಟ್‌ಗಳಿಗೆ ದಂಡ

ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಕೊಡುವ ಬಿಲ್‌ನಲ್ಲಿ ಮೊದಲೇ ಸೇವಾ ಶುಲ್ಕ ಸೇರಿಸಿಯೇ ಕೊಡುತ್ತಿರುವ ಬಗ್ಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಗೆ ದೂರುಗಳು ಬಂದಿದ್ದವು. ಹೀಗಾಗಿ ಗ್ರಾಹಕರಿಗೆ ಬಿಲ್‌ನಲ್ಲಿ ಪೂರ್ವನಿಯೋಜಿತವಾಗಿ ʼಸೇವಾ ಶುಲ್ಕ (service charge)ʼ ವಿಧಿಸುತ್ತಿದ್ದ 41 ರೆಸ್ಟೋರೆಂಟ್‌ಗಳ ವಿರುದ್ಧ CCPA ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಚೆನ್ನಮ್ಮ ಅಂತ್ಯಕ್ರಿಯೆ ಹಿನ್ನೆಲೆ ಸೋಮವಾರ ಹೊಳೆನರಸೀಪುರ ತಾಲೂಕಿನ ಶಾಲಾ, ಕಾಲೇಜುಗಳಿಗೆ ರಜೆ

ಚೆನ್ನಮ್ಮ ಅಂತ್ಯಕ್ರಿಯೆ ಹಿನ್ನೆಲೆ ಹೊಳೆನರಸೀಪುರ ಶಾಲೆಗಳಿಗೆ ರಜೆ

Chennamma's funeral: ಸೋಮವಾರ ಮಧ್ಯಾಹ್ನ ಹೊಳೆನರಸೀಪುರದ ಹರದನಹಳ್ಳಿ ಸಮೀಪದ ಕ್ಯಾತನಹಳ್ಳಿಯಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಲಿದೆ. ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಹೊಳೆನರಸೀಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂದಣೆ, ಟ್ರಾಫಿಕ್‌ ಜಾಮ್‌ ಹೆಚ್ಚಾಗುವ ಸಾಧ್ಯತೆ ಇದೆ.

Gubbi News: ಗ್ರಾಮೀಣ ಶಾಲೆಯಲ್ಲಿ ಕಾನ್ವೆಂಟ್ ಮಾದರಿ ಶಿಕ್ಷಣ : ಡಾ.ನಾಗಭೂಷಣ್

ಗ್ರಾಮೀಣ ಶಾಲೆಯಲ್ಲಿ ಕಾನ್ವೆಂಟ್ ಮಾದರಿ ಶಿಕ್ಷಣ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಭಾಷೆ ಅವಶ್ಯವಿದೆ. ಈ ಹಿಂದೆ ಶಿಶುವಿಹಾರ ಮೂಲಕ ಅಂಗನವಾಡಿ ಆರಂಭವಾಗಿತ್ತು. ಆಂಗ್ಲ ಮಾಧ್ಯಮ ಬಗ್ಗೆ ಅರಿತ ಸರ್ಕಾರ ಕಾನ್ವೆಂಟ್ ಮಾದರಿ ಶಿಕ್ಷಣ ಹಳ್ಳಿಯಲ್ಲಿ ಒದಗಿಸಿ ಸಮಸ್ಯೆ ಮೂಲ ಹುಡುಕಿ ಪರಿಹಾರ ಕಂಡು ಹಿಡಿಯಲು ಸ್ಥಳೀಯ ಸಮುದಾಯದ ಸಹಕಾರ ಅಗತ್ಯವಿದೆ.

ಎಫ್‌ಪಿಒ ಮಾರಾಟ ಕೇಂದ್ರದ ವಿರುದ್ಧ ದೂರು; ಐಸಿಎಲ್ ಕಂಪನಿ ಹೆಸರಿನಲ್ಲಿ ನಕಲಿ ಉತ್ಪನ್ನ ಮಾರಾಟ ಶಂಕೆ

ನಕಲಿ ರಸಗೊಬ್ಬರ ಮಾರಾಟ ಆರೋಪ: ರೈತರ ಆಕ್ರೋಶ

ರೈತರೇ ನಡೆಸುತ್ತಿರುವ ಕೃಷಿ ರೈತ ಉತ್ಪಾದಕರ  ಸಂಸ್ಥೆಯೊಂದರ ರಸಗೊಬ್ಬರ  ಮಾರಾಟ ಕೇಂದ್ರದಲ್ಲೇ ನಕಲಿ ರಸಗೊಬ್ಬರ ಮಾರಾಟವಾಗಿರುವ ಆರೋಪ ಕೇಳಿ ಬಂದಿದ್ದು, ಇದರಿಂದ ಮೋಸಕ್ಕೊಳಗಾದ ರೈತರು ಶನಿವಾರ ಅಂಗಡಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಂದಿ ಕ್ರಾಸ್‌ನಲ್ಲಿ ನಡೆದಿದೆ

Cabinet meeting: ಕೆಪಿಎಸ್‌ಸಿ ಅಧ್ಯಕ್ಷರ ಅಮಾನತಿಗೆ ಸಚಿವ ಸಂಪುಟ ಒಪ್ಪಿಗೆ; ದಿವಂಗತ ಸುಧಾಕರ್ ಕನಸಿನ ಯೋಜನೆಗೆ 244 ಕೋಟಿ

ಕೆಪಿಎಸ್‌ಸಿ ಅಧ್ಯಕ್ಷರ ಅಮಾನತಿಗೆ ಸಚಿವ ಸಂಪುಟ ಒಪ್ಪಿಗೆ

Cabinet meeting: ವಿಧಾನಸೌಧಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಭಾನುವಾರ ಸಚಿವ ಸಂಪುಟ ಸಭೆ ನಡೆದಿದೆ. ವಿವಿಧ ಜಿಲ್ಲೆಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕ್ಯಾಬಿನೆಟ್‌ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳ ಮಾಹಿತಿ ಇಲ್ಲಿದೆ.

Chikkaballapur News: 80 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗವಹಿಸುವಿಕೆ ನಿರೀಕ್ಷೆ 1 ಕೋಟಿಗೂ ಅಧಿಕ ಬಹುಮಾನ, ಸೆಪ್ಟೆಂಬರ್‌ನಲ್ಲಿ ಮಹಾ ಫೈನಲ್

ಕರ್ನಾಟಕದ ಗ್ರಾಮೀಣ ಕ್ರೀಡಾ ಚೈತನ್ಯಕ್ಕೆ ಹೊಸ ಚೈತನ್ಯ

ಈಶ ಗ್ರಾಮೋತ್ಸವವು ಗ್ರಾಮೀಣ ಪ್ರದೇಶದ ರೈತರು, ಮೀನುಗಾರರು, ದಿನಗೂಲಿ ಕಾರ್ಮಿಕರು, ಕುಶಲಕರ್ಮಿಗಳು, ವಿದ್ಯಾರ್ಥಿಗಳು ಹಾಗೂ ಗೃಹಿಣಿಯರಿಗೆ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಅಪರೂಪದ ಅವಕಾಶ ಕಲ್ಪಿಸಿದೆ. ಪುರುಷರಿಗಾಗಿ ವಾಲಿಬಾಲ್ ಹಾಗೂ ಮಹಿಳೆಯರಿಗಾಗಿ ಥ್ರೋಬಾಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ತಂಡದ ಮನೋಭಾವ, ಆರೋಗ್ಯಕರ ಜೀವನಶೈಲಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಲಾಗಿದೆ.

Dr H C Mahadevappa: ಸ್ವಾಭಿಮಾನದ ಘೋಷಣೆ ಮೊಳಗಿಸಿದ ಬಲಗೈ ಸಮುದಾಯ ಸಮಾವೇಶ : 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

ಸಂವಿಧಾನ ಬದ್ದವಾಗಿ ನಡೆಯಿರಿ "ಮತ ಮಾರಬೇಡಿ, ಹಕ್ಕುಗಳಿಗಾಗಿ ಸಂಘಟಿತರಾಗಿ"

ಧರ್ಮೀಯತೆ ಮತ್ತು ಕೋಮುವಾದ ಸಂವಿಧಾನ ವಿರೋಧಿ ಶಕ್ತಿಗಳಾಗಿದ್ದು, ಅವುಗಳ ವಿರುದ್ಧ ಜನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದ ಅವರು, ಅಂಬೇಡ್ಕರ್ ನೀಡಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಸಂದೇಶವೇ ಶೋಷಿತ ಸಮುದಾಯಗಳ ಪ್ರಗತಿಗೆ ದಾರಿದೀಪ ವಾಗಿದೆ ಎಂದರು

Chikkaballapur News: ಪೆರೇಸಂದ್ರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ; ನೂರಾರು ಮಂದಿಗೆ ತಜ್ಞ ವೈದ್ಯರಿಂದ ಸೇವೆ

ಗ್ರಾಮೀಣ ಜನರ ಆರೋಗ್ಯಕ್ಕೆ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಕಾಳಜಿ

ಶಿಬಿರವನ್ನು ಬಿಜೆಪಿ ಮುಖಂಡ ಹಾಗೂ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ. ರೆಡ್ಡಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಸುಲಭವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ನಿರಂತರವಾಗಿ ಜನಪರ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೇ, ಪ್ರತಿಯೊಬ್ಬರೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯ.

Akshay Mashelkar: ಶೈಕ್ಷಣಿಕ ಸಂಶೋಧನೆ; ಶಿರಸಿಯ ಯುವ ವಿಜ್ಞಾನಿ ಅಕ್ಷಯ್‌ ಮಶೇಲ್ಕರ್‌ ರಾಷ್ಟ್ರಮಟ್ಟದ ಗೌರವಕ್ಕೆ ಆಯ್ಕೆ

ಶಿರಸಿಯ ಅಕ್ಷಯ್‌ ಮಶೇಲ್ಕರ್ ರಾಷ್ಟ್ರಮಟ್ಟದ ಗೌರವಕ್ಕೆ ಆಯ್ಕೆ

ಪ್ರಸ್ತುತ ಬೆಂಗಳೂರಿನ ಆರ್.ವಿ. ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ಅಕ್ಷಯ್ ಮಶೆಲ್ಕರ್ ಅವರು, ಹಲವು ವರ್ಷಗಳಿಂದ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿಜ್ಞಾನ ಮತ್ತು ಗಣಿತ ಶಿಕ್ಷಣವನ್ನು ತಲುಪಿಸುವ ಉದ್ದೇಶದಿಂದ ಸಂಶೋಧನೆ ನಡೆಸುತ್ತಿದ್ದಾರೆ.

ಹಸಿದವರಿಗೆ ಅನ್ನವೇ ದೇವರ ಸೇವೆ; ಎಪಿಎಂಸಿ ಅನ್ನಸಂತರ್ಪಣೆ ಮೂರನೇ ವರ್ಷಕ್ಕೆ ರೈತರು, ಕೂಲಿ ಕಾರ್ಮಿಕರು, ಹಮಾಲರಿಗೆ ನಿರಂತರ ಉಚಿತ ಊಟ

ಹಮಾಲರಿಗೆ ನಿರಂತರ ಉಚಿತ ಊಟ; ಭಾವುಕರಾದ ಯಲುವಳ್ಳಿ ಎನ್. ರಮೇಶ್

ಮಾರುಕಟ್ಟೆಗೆ ಬರುವ ರೈತರಿಗೆ ಕೆಲವೊಮ್ಮೆ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ.ಕನಿಷ್ಠ ಊಟಕ್ಕೂ ಹಣವಿಲ್ಲದ ಪರಿಸ್ಥಿತಿಯನ್ನು ನಾವು ಕಂಡಿದ್ದೇವೆ. ಕೂಲಿ ಕಾರ್ಮಿಕರು ಮತ್ತು ಹಮಾಲರು ಕೂಡ ತಮ್ಮ ಸಂಪಾದನೆಯಲ್ಲಿ ಊಟಕ್ಕೆ ಖರ್ಚು ಮಾಡುವಷ್ಟು ಆರ್ಥಿಕ ಶಕ್ತಿ ಹೊಂದಿರದ ಸಂದರ್ಭ ಗಳಿವೆ. ಎಲ್ಲರ ಕಷ್ಟವನ್ನು ಅರಿತು ಹಸಿದವರಿಗೆ ಅನ್ನ ನೀಡುವ ಪುಣ್ಯದ ಕಾರ್ಯವನ್ನು ಆರಂಭಿ ಸಿರುವ ಯಲುವಳ್ಳಿ ಎನ್.ರಮೇಶ್ ಅವರಿಗೆ ದೇವರು ಆಯಸ್ಸು, ಆರೋಗ್ಯ ನೀಡಲಿ ಎಂದು ಎಲ್ಲರ ಪರವಾಗಿ ಪ್ರಾರ್ಥಿಸುತ್ತೇನೆ

Chikkaballapur News: ಅಂಬೇಡ್ಕರ್ ಸೇವಾ ಸಮಿತಿ, ಕರ್ನಾಟಕ ಅಂಬೇಡ್ಕರ್ ಸೇನೆ ಪ್ರತಿಭಟನೆ; ಜಿಲ್ಲಾಡಳಿತಕ್ಕೆ ಮನವಿ

ನಕಲಿ ಖಾತೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲು ಆಗ್ರಹ

ನಂದಿ ಹೋಬಳಿಯ ನುಗತಳ್ಳಿ, ಕುಡುವತಿ, ತಿಮ್ಮನಹಳ್ಳಿ, ಚಿಕ್ಕಬಳ್ಳಾಪುರ ಕಸಬಾ ಹೋಬಳಿಯ ಹಾರೋಬಂಡೆ ಹಾಗೂ ಶಿಡ್ಲಘಟ್ಟ ತಾಲೂಕಿನ ಕಡದನಕುಂಟೆ ಸೇರಿದಂತೆ ವಿವಿಧ ಗ್ರಾಮಗಳ ಸರ್ವೆ ನಂಬರುಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೂಲ ಖಾತೆದಾರರಿಗೆ ವಂಚನೆ ಮಾಡಲಾಗಿದೆ

Cabinet meeting: ಬರ ನಿರ್ವಹಣೆಗೆ ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂ. ಅನುದಾನ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ

ಬರ ನಿರ್ವಹಣೆಗೆ ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂ. ಅನುದಾನ; ಸಂಪುಟ ಒಪ್ಪಿಗೆ

Karnataka Drought: ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಭಾನುವಾರ ಸಚಿವ ಸಂಪುಟ ಸಭೆ ನಡೆದಿದೆ. 178 ತಾಲೂಕುಗಳಲ್ಲಿ ಮಳೆ ಕೊರತೆ ಇದೆ. ರಾಜ್ಯದ ಜಲಾಶಯಗಳಲ್ಲಿ ಶೇ.40 ಮಾತ್ರ ನೀರಿದೆ. ಹೀಗಾಗಿ 15 ದಿನಗಳಲ್ಲಿ ಬರ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Loading...